ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಜೂನ್ ತಿಂಗಳಿನಲ್ಲಿಯೇ ದೆಹಲಿಯ ಪರ್ವತ ಪ್ರದೇಶದಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ನನಗೆ ತಿಳಿಸಲಾಗಿದೆ ಎಂಬ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ. ಈ ಬಗ್ಗೆ ಅವರ ಹೇಳಿಕೆಯಲ್ಲಿ ಇರುವ ದ್ವಂದ್ವ ಇರುವುದನ್ನು ಕೋರ್ಟ್ ಕಂಡುಕೊಂಡಿದೆ. ಸುಪ್ರೀಂಕೋರ್ಟ್‌ಗೆ ಸುಳ್ಳು ಹೇಳಿದ
ಮರಗಳನ್ನು ಕಡಿಯಲು ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯಬೇಕು ಎಂಬ ಸುಪ್ರಿಂಕೋರ್ಟ್‌ನ ನಿರ್ದೇಶನವನ್ನು ಉಲ್ಲಂಘಿಸಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಮರಗಳನ್ನು ಕಡಿಯಲು ಅನುಮತಿ ನೀಡಿರುವುದು ಬೆಳಕಿಗೆ ಬಂದ ನಂತರ ಸಕ್ಸೇನಾ ವಿರುದ್ಧ ಸುಪ್ರೀಂಕೋರ್ಟ್ ಕಿಡಿ ಕಾರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಫೆಬ್ರವರಿಯಲ್ಲಿ ಮರ ಕಡಿಯುವ ಕಾರ್ಯ ನಡೆದಿತ್ತು. ಫೆಬ್ರುವರಿಯಲ್ಲಿ ಮರ ಕಡಿಯುವ ಕಾರ್ಯ ಆರಂಭವಾದ ನಂತರವೇ ಮಾರ್ಚ್‌ನಲ್ಲಿ ನ್ಯಾಯಾಲಯದ ಒಪ್ಪಿಗೆಯ ಅಗತ್ಯವಿದೆ ಎಂಬುದು ತನಗೆ ಗೊತ್ತಾಯಿತು ಎಂದು ಸಕ್ಸೇನಾ ಹೇಳಿಕೊಂಡಿದ್ದಾರೆ. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಸಕ್ಸೇನಾ ಅವರು ಜೂನ್ ವೇಳೆ ಮರಗಳನ್ನು ಕಡಿಯುವ ಬಗ್ಗೆ ತನಗೆ ತಿಳಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸುಪ್ರೀಂಕೋರ್ಟ್‌ಗೆ ಸುಳ್ಳು ಹೇಳಿದ
ಆದಾಗ್ಯೂ, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರೊಂದಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರ ಪೀಠವು ದಾಖಲೆಯನ್ನು ಪರಿಶೀಲಿಸಿದ್ದು, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಉಪಾಧ್ಯಕ್ಷ ಸುಭಾಶಿಶ್ ಪಾಂಡಾ ಅವರು ಏಪ್ರಿಲ್ ನಲ್ಲಿಯೇ ಮರ ಕಡಿಯುವ ಬಗ್ಗೆ ಸಕ್ಸೇನಾ ಅವರಿಗೆ ಮಾಹಿತಿ ನೀಡಿದ್ದರು ಕಂಡುಕೊಂಡಿದೆ. ಅದರ ನಂತರ ಸುಭಾಶಿಶ್ ಪಾಂಡಾ ಅವರನ್ನು ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ವರ್ಗಾಯಿಸಲಾಗಿದೆ.
“ಅಫಿಡವಿಟ್‌ನಲ್ಲಿ, ಫೆಬ್ರವರಿ 16, 2024 ರ ಮೊದಲು ವಾಸ್ತವದಲ್ಲಿ ಮರ ಕಡಿಯುವಿಕೆ ನಡೆದಿದೆ ಎಂಬ ಅಂಶವನ್ನು ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದು ತೋರಿಸುತ್ತದೆ” ಎಂದು ನ್ಯಾಯಾಲಯವು ಗುರುವಾರ ಆದೇಶದಲ್ಲಿ ಉಲ್ಲೇಖಿಸಿದೆ. ಫೆಬ್ರುವರಿಯಲ್ಲಿ ವಾಸ್ತವವಾಗಿ ಕಡಿಯಲಾಗಿದೆ ಎಂಬ ಅಂಶ ಸಕ್ಸೇನಾ ಅವರಿಗೆ ತಿಳಿದಿದ್ದು ಜೂನ್ 10 ರಂದು ಎಂಬ ಅವರ ಹೇಳಿಕೆಯು ತಪ್ಪಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಹೀಗಾಗಿ ನಾವು ಮೇಲಿನ ವ್ಯತ್ಯಾಸದ ಕುರಿತು ಡಿಡಿಎ ಉಪಾಧ್ಯಕ್ಷರಿಂದ ಹೆಚ್ಚುವರಿ ಅಫಿಡವಿಟ್‌ಗೆ ಕರೆ ನೀಡುತ್ತೇವೆ. ಎಲ್ಲಾ ಮೂಲ ದಾಖಲೆಗಳನ್ನು ಈ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಾವು ನಿರ್ದೇಶಿಸುತ್ತೇವೆ. ವಿಚಾರಣೆಯನ್ನು ಮಂಗಳವಾರ ಪಟ್ಟಿ ಮಾಡಿ… ಮರಗಳನ್ನು ಕಡಿಯುವ ಬಗ್ಗೆ ಅವರಿಗೆ ಯಾವಾಗ ತಿಳಿಯಿತು ಎಂದು ಅವರು ನಿರ್ದಿಷ್ಟ ದಿನಾಂಕವನ್ನು ಅಫಿಡವಿಟ್‌ನಲ್ಲಿ ಹೇಳಲಿ” ಕೋರ್ಟ್ ಆದೇಶಿಸಿದೆ.
ದೆಹಲಿಯ ರಿಡ್ಜ್ ಪ್ರದೇಶದಲ್ಲಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿಯುತ್ತಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಸುಪ್ರೀಂ ಕೋರ್ಟ್‌ನ ಅನುಮತಿಯಿಲ್ಲದೆ ಈ ಪ್ರದೇಶದಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ನ್ಯಾಯಾಲಯವು ಈ ಹಿಂದೆ ನಿರ್ದೇಶನ ನೀಡಿದ್ದರೂ ಸಹ, ಮರಗಳನ್ನು ಹೇಗೆ ಕತ್ತರಿಸಲಾಯಿತು ಎಂಬುದನ್ನು ವಿವರಿಸಲು ಪೀಠವು ಇತ್ತೀಚೆಗೆ ಲೆಫ್ಟಿನೆಂಟ್ ಸಕ್ಸೇನ್ ಅವರನ್ನು ಕೇಳಿದೆ.
ಅಕ್ಟೋಬರ್ 22 ರ ಅಫಿಡವಿಟ್‌ನಲ್ಲಿ, ಎಲ್‌ಜಿ ಸಕ್ಸೇನಾ ಅವರು ಪೂರ್ವಾನುಮತಿ ಅಗತ್ಯದ ಬಗ್ಗೆ ತನಗೆ ತಿಳಿದಿರಲಿಲ್ಲ ಮತ್ತು ತಾನು ಸಾರ್ವಜನಿಕ ಹಿತಾಸಕ್ತಿಯ ಆಧಾರದಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದ್ದರು. 2,200 ಕೋಟಿ ಸಾರ್ವಜನಿಕ ಹಣವನ್ನು ಈಗಾಗಲೇ ಹೂಡಿಕೆ ಮಾಡಿರುವ ಮಹತ್ವದ ಯೋಜನೆಗಾಗಿ ಮರ ಕಡಿಯುವುದಾಗಿ ಅವರು ಒತ್ತಿ ಹೇಳಿದ್ದರು.
ಇದನ್ನೂ ಓದಿ: ಯುಪಿ ಉಪ ಚುನಾವಣೆ | ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದ ಕಾಂಗ್ರೆಸ್!
ಯುಪಿ ಉಪ ಚುನಾವಣೆ | ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದ ಕಾಂಗ್ರೆಸ್!


