HomeUncategorizedದೆಹಲಿ ಗಲಭೆ ಪ್ರಕರಣ: CAA ವಿರೋಧಿ ಹೋರಾಟಗಾರರ ಬಿಡುಗಡೆಯ ನಿರೀಕ್ಷೆಗಳಿಗೆ ಸುಪ್ರೀಂ ಕೋರ್ಟ್ ತಡೆಗೋಡೆ

ದೆಹಲಿ ಗಲಭೆ ಪ್ರಕರಣ: CAA ವಿರೋಧಿ ಹೋರಾಟಗಾರರ ಬಿಡುಗಡೆಯ ನಿರೀಕ್ಷೆಗಳಿಗೆ ಸುಪ್ರೀಂ ಕೋರ್ಟ್ ತಡೆಗೋಡೆ

- Advertisement -
- Advertisement -

ಜೂನ್ 8 ರಂದು ದೆಹಲಿ ಹೈಕೋರ್ಟ್ ಒಂದು ಮಹತ್ವದ ತೀರ್ಪನ್ನು ನೀಡಿ ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ದೆಹಲಿ ಗಲಭೆ ಪ್ರಕರಣದಲ್ಲಿ UAPA ಕಾಯ್ದೆಯಡಿ ಬಂಧಿತರಾಗಿದ್ದ ದೇವಾಂಗನಾ ಕಾಳಿತ, ನತಾಶಾ ನರ್ವಾಲ್ ಹಾಗೂ ಆಸಿಫ್ ಇಕ್ಬಾಲ್ ತಾನ್ಹಾ  ಈ ಮೂವರು CAA ವಿರೋಧಿ ಹೊರಾಟಗಾರರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ಈ ಆದೇಶ ದೇಶಾದ್ಯಂತ UAPA ಕಾಯ್ದೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿತ್ತು.  ಹಾಗೆಯೇ UAPA ಅಂತಹ ಕಾನೂನುಗಳ ಬಳಕೆಯ ಸಂದರ್ಭದಲ್ಲಿ ಅನುಸರಿಸಬೇಕಾದ ವಿವೇಚನೆಗಳು ಮತ್ತು ಅಗತ್ಯ ಸಂದರ್ಭಗಳನ್ನು ದೆಹಲಿ ಹೈಕೋರ್ಟ್ ಇದೇ ಸಂದರ್ಭದಲ್ಲಿ ವಿಮರ್ಶಿಸಿತ್ತು.

ಮೂವರು ಹೋರಾಟಗಾರರ ವಿರುದ್ಧ ಪ್ರೊಸಿಕ್ಯೂಶನ್ ಯಾವುದೇ ಬಲವಾದ ಸಾಕ್ಷಿಗಳನ್ನು ಪ್ರಸ್ತುಪಡಿಸಿಲ್ಲ. ವಿಡಿಯೋ ಮತ್ತು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳೂ ಕೂಡ ಆರೊಪವನ್ನು ಸಾಬೀತುಪಡಿಸುತ್ತಿಲ್ಲ. ಮೇಲ್ನೋಟದಲ್ಲಿಯೇ 3 ಜನ ಆರೊಪಿಗಳ ವಿರುದ್ಧ ಪೊಲೀಸರ ಬಳಿ ಯಾವುದೇ ಸಾಕ್ಷಿ ಇಲ್ಲವೆಂಬುದು ಕಂಡು ಬಂದಿದೆ ಎಂದು ದೆಹಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಅಭಿಪ್ರಾಯ ಪಟ್ಟಿತ್ತು. ಇದು CAA ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿ ಬಂಧಿತರಾಗಿರುವ ಇತರ ಆರೊಪಿಗಳಲ್ಲಿ ಸಣ್ಣದಾದ ಹೊಸ ಬದುಕಿನ ನಿರೀಕ್ಷೆಯನ್ನು ಹುಟ್ಟಿಹಾಕಿತ್ತು. ಆದರೆ ಈ ನಿರೀಕ್ಷೆ ಬಹಳದಿನ ಉಳಿದಿಲ್ಲ. ಸುಪ್ರೀಂ ಕೋರ್ಟ್ ದೆಹಲಿ ಗಲಭೆ ಆರೋಪದಲ್ಲಿ ಬಂಧಿತರಾಗಿರುವ ಇತರ ಆರೊಪಿಗಳ ಬಿಡುಗಡೆಯ ನಿರೀಕ್ಷೆಯ ಮೆಲೆ ಒಂದು ಅನಿರ್ದಿಷ್ಟತೆಯ ಕಾರ್ಮೋಡ ಕವಿಯುವಂತೆ ಮಾಡಿದೆ.

ದೆಹಲಿ ಹೈಕೋರ್ಟ್‌ ತೀರ್ಪಿನ ಬೆನ್ನಲ್ಲೇ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ದೆಹಲಿ ಪೊಲೀಸರು ತಡಮಾಡದೇ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೆಲ್ಮನವಿ ಸಲ್ಲಿಸಿದ್ದರು. ಜೂನ್ 18 ರಂದು ದೆಹಲಿ ಪೊಲೀಸರು ಸಲ್ಲಿಸಿದ ಮೆಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ ಆದೇಶದ ಕುರಿತು ತೀವ್ರ ಅಸಮಾಧಾನವನ್ನು ಹೊರಹಾಕಿದೆ. 3 ಅರೋಪಿಗಳಿಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತಾದರೂ ಇತ್ತೀಚೆಗೆ ಹೈಕೋರ್ಟ್‌ಗಳು ಜುಡಿಶಿಯಲ್ ಆಕ್ಟಿವಿಸಮ್‌ ಗೆ ಇಳಿದಿವೆ. ದೇಶದ ಕಾನೂನುಗಳನ್ನೇ ಬದಲಿಸುವ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ಈ ಪ್ರಕರಣದಲ್ಲಿ 100 ಪುಟಗಳ ಅದೇಶವನ್ನು ಹೊರಡಿಸಿದೆ. ಇತರ ಪ್ರಕರಣಗಳಲ್ಲಿ ಈ ದೆಹಲಿ ಹೈಕೋರ್ಟ್ ಅದೇಶವನ್ನು ಪರಿಗಣಿಸಬಾರದು.  ಜೂನ್ 8 ರ ದೆಹಲಿ ಹೈಕೋರ್ಟ್ ತೀರ್ಪನ್ನು ಬೇರೆ ಬೇರೆ UAPA ಪ್ರಕರಣಗಳಿಗೆ ಪೂರ್ವನಿದರ್ಶನ ಆದೇಶವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ 3 ಜನ ಆರೋಪಿಗಳಿಗೆ ಜಾಮೀನು ನೀಡಿದ ಬೆನ್ನಲ್ಲೆ ಪ್ರಕರಣದ ಇತರ ಆರೋಪಿಗಳೂ ಜಾಮೀನಿಗಾಗಿ ನ್ಯಾಯಾಲಯದ ಮೋರೆಹೋಗತೊಡಗಿದ್ದಾರೆ. ದೇಶದ ಬೇರೆ ಬೆರೆ ಕಡೆ UAPA ಕಾಯ್ದೆಯಡಿ ಬಂಧಿತರಾಗಿರುವ ಆನೇಕ ಹೋರಾಟಗಾರರಿಗೆ ದೆಹಲಿ ಹೈಕೋರ್ಟ್ ಆದೇಶ ಕೊನೆಯ ಅಶಾಕಿರಣದಂತೆ ಕಂಡಿತ್ತು. ಅದರೆ ಜೂನ್‌ 18 ರ ಸುಪ್ರೀಂ ಕೋರ್ಟ್ ಆದೇಶ ದೆಹಲಿ ಗಲಭೆಯಲ್ಲಿ ಬಂಧಿತರಾಗಿರುವ ಇತರ ಹೋರಾಟಗಾರರ ಬಿಡುಗಡೆಯ ಕನಸಿಗೆ  ತಡೆಗೋಡೆಯಾಗಿ ಪರಿಣಮಿಸಿದೆ.

ಇದನ್ನೂ ಓದಿ  :ಶಾಲಾ ಶುಲ್ಕ ವಿಚಾರ: ಸರ್ಕಾರ ನಿಗದಿಪಡಿಸುವ ಶುಲ್ಕಕ್ಕೆ ಬದ್ಧ ಎಂದ ಆಡಳಿತ ಮಂಡಳಿ

ಮೊದಲನೇಯ ಪ್ರಶ್ನೆ ಕೇಂದ್ರ ಸರ್ಕಾರ ಪ್ರತಿ ಸಂದರ್ಭದಲ್ಲಿಯೂ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿರುವುದು ಯಾಕೆ? ಕೇಂದ್ರ ಸರ್ಕಾರ ಹೈಕೋರ್ಟ್‌ಗಳನ್ನು ಸಮರ್ಥ ನ್ಯಾಯಾಲಯಗಳೆಂದು ಪರಿಗಣಿಸುತ್ತಿಲ್ಲವೇ? ಹೈಕೋರ್ಟ್‌ಗಳು ಕೂಡ ಸುಪ್ರೀಂ ಕೋರ್ಟ್‌ನಂತೆಯೇ ಸಂವಿಧಾನಾತ್ಮಕ ನ್ಯಾಯಾಲಯವಾಗಿದ್ದು ಹೈಕೋರ್ಟ್ ಆದೇಶಗಳನ್ನು ದೇಶದ ಇತರ ನ್ಯಾಯಾಲಯಗಳೂ ಪರಿಗಣಿಸಬೇಕು. ಒಂದು ಹೈಕೋರ್ಟ್ ಆದೇಶವನ್ನು ಇತರ ಹೈ ಹೈಕೋರ್ಟ್‌ಗಳೂ ಪಾಲಿಸಿದ ಅನೇಕ ನಿದರ್ಶನಗಳಿವೆ. ಬಹುತೇಕವಾಗಿ ಸುಪ್ರೀಂ ಕೋರ್ಟ್‌ ಹೈಕೋರ್ಟ್‌ ತೀರ್ಪುಗಳನ್ನು ಪರಿಗಣಿಸುತ್ತದೆ ಮತ್ತು ಅಪರೂಪದ ಸಂದರ್ಭದಲ್ಲಿ ಮಾತ್ರ ಹೈಕೋರ್ಟ್ ಆದೇಶಗಳನ್ನು ರದ್ದುಗೊಳಿಸುತ್ತದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಹೈಕೋರ್ಟ್ ತೀರ್ಪುಗಳನ್ನು ವಿಮರ್ಶಿಸುವುದಿಲ್ಲ ಮತ್ತು ನೇರ ಅಸಮಾಧನಗಳನ್ನು ಹೊರಹಾಕುವುದಿಲ್ಲ. ಇದು ಅನೇಕ ದಶಕಗಳಿಂದ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಪಾಲಿಸಿಕೊಂಡು ಬಂದ ಅಲಿಖಿತ ನಿಯಮ ಮತ್ತು ಉಳಿಸಿಕೊಂಡು ಬಂದ ಸೌಹಾರ್ದಯುತ ಸಂಬಂಧ. ಆದರೆ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತಾನು ಇದುವರೆಗೆ ಪಾಲಿಸಿಕೊಂಡು ಬಂದ ರೂಢಿಯನ್ನು ಮುರಿದಿದೆ.

Unlawful Activities Prevention Act (UAPA) ಕಾನೂನಿನ ಕುರಿತು ಹೈಕೋರ್ಟ್‌ ಅಸಮಾಧಾನವನ್ನು ವ್ಯಕ್ತಪಡಿಸಿರುವುದು ಸಕಾರಣವಾಗಿರುವಾಗ ಸುಪ್ರೀಂ ಕೋರ್ಟ್‌ ಯಾಕೆ ಹೈಕೋರ್ಟ್‌ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ದೆಹಲಿ ಹೈಕೋರ್ಟ್ ತೀರ್ಪನ್ನು ಪಾಲಿಸದಂತೆ ಇತರ ನ್ಯಾಯಾಲಯಗಳಿಗೆ ಹೇಳಿತು ಎಂಬುದು ಸ್ಪಷ್ಟವಾಗಿಲ್ಲ.

ವಿಚಾರಣೆ ವೇಳೆ UAPA ಕಾಯ್ದೆಯಡಿ ಬಂಧಿತರಾಗಿ ಜಾಮೀನು ಪಡೆದಿರುವ 3 ಆರೋಪಿಗಳ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ  ಕಪಿಲ್ ಸಿಬಲ್ ಕೂಡ ಸರ್ವೋಚ್ಛ ನ್ಯಾಯಾಲಯದ ಈ ಆದೇಶಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸದಿರುವುದು ಆಶ್ಚರ್ಯವನ್ನು ಹುಟ್ಟಿಸಿದೆ. ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ದೆಹಲಿ ಹೈಕೋರ್ಟ್ ತೀರ್ಪಿಗೆ ತಡೆ ಕೋರುವಂತೆ ಹಾಗೂ UAPA ಕಾಯ್ದೆಯ ಕುರಿತಾಗಿ ದೆಹಲಿ ಹೈಕೋರ್ಟ್‌ ಅಭಿಪ್ರಾಯಗಳನ್ನು ಪುನರ್ವಿಮರ್ಶಿಸುವಂತೆ ಸುಪ್ರೀಂ ಕೋರ್ಟ್‌ ಅನ್ನು ತೀವ್ರವಾಗಿ ಒತ್ತಾಯಿಸುತ್ತಲೇ ಇದ್ದರು.

ಸುಪ್ರೀಂ ಕೋರ್ಟ್ ಜಾಮೀನು ತೀರ್ಪಿಗೆ ತಡೆಯನ್ನು ನೀಡದೇ, ದೆಹಲಿ ಹೈಕೋರ್ಟ್ ಆದೇಶವನ್ನೂ ಸಮರ್ಥಿಸದೇ ಕೇಂದ್ರ ಸರ್ಕಾರ ಮತ್ತು ಹೈಕೋರ್ಟ್ ಎರಡರ ನಡುವೆ ಸಮನ್ವಯ ಸಾಧಿಸುವ ಮಧ್ಯಮ ಮಾರ್ಗವನ್ನು ಆಯ್ದುಕೊಂಡಂತೆ ಮೆಲ್ನೋಟಕ್ಕೆ ಕಾಣಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈಗ ಸುಪ್ರೀಂ ಕೋರ್ಟ್‌ ಆದಷ್ಟು ತ್ವರಿತವಾಗಿ ಕೆಂದ್ರ ಸರ್ಕಾರದ ಮೇಲ್ಮನವಿಯ ವಿಚಾರಣೆಯನ್ನು ಮುಗಿಸಿ ತನ್ನ ನಿಲುವು ಮತ್ತು ತೀರ್ಪನ್ನು ಸ್ಪಷ್ಟಪಡಿಸಬೇಕಿದೆ. ಇಲ್ಲವಾದಲ್ಲಿ ಅತ್ತ ಹೈಕೋರ್ಟ್‌ ಆದೇಶವೂ ಪರಿಗಣಿತವಲ್ಲದೇ ಸುಪ್ರೀಂ ಕೋರ್ಟ್‌ ಅದೇಶ ಹೊರಬಾರದೇ ಒಂದು ರೀತಿಯ ಕಾನೂನಿನ ನಿರ್ವಾತ ಸೃಷ್ಟಿಯಾಗುತ್ತಿದೆ. CAA ಹೋರಾಟದಲ್ಲಿ ಭಾಗವಹಿಸಿ ದೆಹಲಿ ಗಲಭೆಯ ಆರೋಪವನ್ನು ಎದುರಿಸುತ್ತಿರುವ ಅನೇಕ ಹೋರಾಟಗಾರರಿಗೆ ದೆಹಲಿ ಹೈಕೋರ್ಟ್ ತೀರ್ಪು ಜಾಮೀನಿನ ಸಣ್ಣ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಹೋರಾಟಗಾರರಿಗೆ ಸುಪ್ರೀಂ ಕೋರ್ಟ್ ಒಂದು ಸ್ಪಷ್ಟತೆಯನ್ನು ನೀಡಬೇಕಿದೆ. ಅತ್ತ ಹಾವೂ ಸಾಯಬಾರದು ಇತ್ತ ಕೋಲು ಮುರಿಯಬಾರದು ಎಂಬಂತಿರುವ ಸುಪ್ರೀಂ ಕೋರ್ಟ್‌ನ  ಮೊನ್ನೆಯ ಆದೇಶ ದೀರ್ಘ ಕಾಲದಲ್ಲಿ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬಿರಲಿದೆ. ಹಾಗೂ ಸಂವಿಧಾನಾತ್ಮಕ ನ್ಯಾಯಾಲಯಗಳಾದ ಹೈಕೋರ್ಟ್‌ಗಳ ಸ್ವಾಯತ್ತತೆಯ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.

– ರಾಜೆಶ್ ಹೆಬ್ಬಾರ್


ಇದನ್ನೂ ಓದಿ : ಲಕ್ಷದ್ವೀಪ ನ್ಯಾಯಾಂಗ ವ್ಯಾಪ್ತಿ ಬದಲಾವಣೆ ಪ್ರಸ್ತಾಪ – ಆಡಳಿತ ದುರುಪಯೋಗ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...