ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ) ಅಡಿ ಪ್ರಿವೆಂಟಿವ್ (ಮುಂಜಾಗೃತಿ ಬಂಧನ) ಬಂಧನ ಮಾಡಲಾಗಿರುವ ಕಾನೂನು ವಿದ್ಯಾರ್ಥಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಈ ಬಂಧನ ‘ಸಂಪೂರ್ಣವಾಗಿ ಅಸಮರ್ಥನೀಯ’ ಎಂದು ಕೋರ್ಟ್ ಹೇಳಿದೆ.
ಮಧ್ಯ ಪ್ರದೇಶದ ಬೇತುಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿರುವ ಜುಲೈ 11, 2024ರ ಬಂಧನ ಆದೇಶದಲ್ಲಿ ದೋಷ ಪತ್ತೆ ಹಚ್ಚಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು, ಪ್ರಕರಣದಲ್ಲಿ ವಿವರವಾದ ತಾರ್ಕಿಕ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದೆ.
ಬೆತುಲ್‌ನ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾಧ್ಯಾಪಕರೊಂದಿಗಿನ ಘರ್ಷಣೆಯ ನಂತರ ನಂತರ ಪೊಲೀಸರು ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಕೊಲೆಯತ್ನ ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳನ್ನು ಆತನ ವಿರುದ್ಧ ಹಾಕಿದ್ದರು.
ವಿದ್ಯಾರ್ಥಿ ಜೈಲಿನಲ್ಲಿದ್ದಾಗ ಆತನ ವಿರುದ್ಧ ಎನ್‌ಎಸ್‌ಎ ನಿಬಂಧನೆಗಳ ಅಡಿಯಲ್ಲಿ ಪ್ರಿವೆಂಟಿವ್ ಬಂಧನ ಆದೇಶವನ್ನು ಹೊರಡಿಸಲಾಗಿತ್ತು. ನಂತರ ಈ ಆದೇಶವನ್ನು ದೃಢೀಕರಿಸಲಾಗಿತ್ತು. ಅಂದಿನಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ವಿಸ್ತರಿಸಿಕೊಂಡು ಬರಲಾಗಿತ್ತು.
“ಜುಲೈ 11, 2024ರ ಮೊದಲ ಬಂಧನ ಆದೇಶವನ್ನು ಪರಿಶೀಲಿಸಿದ ನಂತರ, ಮೇಲ್ಮನವಿದಾರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ, 1980ರ ಸೆಕ್ಷನ್ 3(2) ರ ಅಡಿಯಲ್ಲಿ ಪ್ರಿವೆಂಟಿವ್ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದಾಗ್ಯೂ, ಅವರನ್ನು ಪ್ರಿವೆಂಟಿವ್ ಬಂಧನಕ್ಕೆ ಒಳಪಡಿಸಿರುವ ಕಾರಣಗಳು ರಾಷ್ಟ್ರೀಯ ಭದ್ರತಾ ಕಾಯ್ದೆ, 1980ರ ಸೆಕ್ಷನ್ 3 ರ ಉಪವಿಭಾಗ (2) ರ ಅಗತ್ಯವನ್ನು ಪೂರೈಸುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಮೇಲ್ಮನವಿದಾರರ ಪ್ರಿವೆಂಟಿವ್ ಬಂಧನವು ಸಂಪೂರ್ಣವಾಗಿ ಅಸಮರ್ಥನೀಯವಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜೂನ್ 27, 2025) ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸದೆ ಜಿಲ್ಲಾಧಿಕಾರಿಗಳೇ ಸ್ವತಃ ನಿರ್ಧರಿಸಿರುವ ಮೇಲ್ಮನವಿ (ಕಾನೂನು ವಿದ್ಯಾರ್ಥಿ) ಪ್ರಾತಿನಿಧ್ಯವನ್ನು ಮತ್ತು ಇತರ ಕ್ರಿಮಿನಲ್ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಿದವರ ಬಂಧನದ ಸಂಗತಿಯನ್ನು ಮತ್ತು ನಿಯಮಿತ ಕ್ರಿಮಿನಲ್ ವಿಚಾರಣೆಯಲ್ಲಿ ಬಂಧನಕ್ಕೊಳಗಾಗಿದ್ದರೂ ಅವರನ್ನು ತಡೆಗಟ್ಟುವ ಬಂಧನಕ್ಕೆ ಏಕೆ ತೆಗೆದುಕೊಳ್ಳಲಾಯಿತು ಎಂಬುದನ್ನು ಗಣನೆಗೆ ತೆಗೆದುಕೊಳ್ಳದಿರುವುದು ಮುಂತಾದ ಇತರ ಕಾರಣಗಳಿಂದಾಗಿಯೂ ಸಹ ತಡೆಗಟ್ಟುವ ಬಂಧನವು ಅಸಮರ್ಥನೀಯವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಇತರ ಹಲವು ಅಂಶಗಳನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಪ್ರಿವೆಂಟಿವ್ ಬಂಧನ ಅಸಮರ್ಥನೀಯ ಎಂದಿದೆ. ಪ್ರಸ್ತುತ ಭೋಪಾಲ್‌ನ ಕೇಂದ್ರ ಕಾರಾಗೃಹದಲ್ಲಿರುವ ವಿದ್ಯಾರ್ಥಿಯನ್ನು ಬೇರೆ ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆದೇಶಿಸಿದೆ.
ಕಾನೂನು ವಿದ್ಯಾರ್ಥಿಯಾಗಿರುವ ಅನ್ನು ಅಲಿಯಾಸ್ ಅನಿಕೇತ್ ಅವರನ್ನು ಜುಲೈ 11, 2024ರ ಆದೇಶದ ಮೂಲಕ ಮೊದಲು ಪ್ರಿವೆಂಟಿವ್ ಬಂಧನಕ್ಕೆ ಒಳಪಡಿಸಲಾಗಿತ್ತು ಮತ್ತು ಈ ಬಂಧನ ಆದೇಶವನ್ನು ನಾಲ್ಕು ಬಾರಿ ವಿಸ್ತರಿಸಲಾಗಿತ್ತು. ಕೊನೆಯ ವಿಸ್ತರಣಾ ಆದೇಶದ ಪ್ರಕಾರ, ಅವರ ಪ್ರಿವೆಂಟಿವ್ ಬಂಧನ ಅವಧಿಯು ಜುಲೈ 12, 2025 ರವರೆಗೆ ಇರಲಿದೆ.
ರಾಜ್ಯ ಸರ್ಕಾರವು ಪ್ರಸ್ತುತಪಡಿಸಿರುವ ದಾಖಲೆಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಕಾಯ್ದೆ, 1980ರ ನಿಬಂಧನೆಗಳ ಅಡಿಯಲ್ಲಿ ಪ್ರಿವೆಂಟಿವ್ ಬಂಧನವನ್ನು ಸಮರ್ಥಿಸಲು ಕಾನೂನು ವಿದ್ಯಾರ್ಥಿಯ ವಿರುದ್ಧ ಪ್ರಸ್ತುತ ಕ್ರಿಮಿನಲ್ ಪ್ರಕರಣ ಸೇರಿದಂತೆ ಒಂಬತ್ತು ಕ್ರಿಮಿನಲ್ ಪೂರ್ವಾಪರಗಳನ್ನು ಉಲ್ಲೇಖಿಸಲಾಗಿದೆ ಎಂದು ನ್ಯಾಯಾಲಯವು ಕಂಡುಕೊಂಡಿದೆ ಎಂದು ನ್ಯಾಯಪೀಠ ಹೇಳಿದೆ.
ಆದಾಗ್ಯೂ, ವಿದ್ಯಾರ್ಥಿ ಪರ ವಕೀಲರು, ಅವರ ವಿರುದ್ದದ ಹಿಂದಿನ ಎಂಟು ಪ್ರಕರಣಗಳ ಪೈಕಿ ಐದು ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ ಮತ್ತು ಒಂದು ಪ್ರಕರಣದಲ್ಲಿ, ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ. ಆದರೆ ಶಿಕ್ಷೆ ಕೇವಲ ದಂಡ ವಿಧಿಸುವಿಕೆ ಎಂದು ತಿಳಿಸಿದ್ದಾರೆ.
ಉಳಿದ ಎರಡು ಪ್ರಕರಣಗಳು ಪ್ರಸ್ತುತ ಬಾಕಿ ಉಳಿದಿವೆ ಮತ್ತು ಕಾನೂನು ವಿದ್ಯಾರ್ಥಿ ಆ ವಿಷಯಗಳಲ್ಲಿ ಜಾಮೀನಿನ ಮೇಲೆ ಇದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಕಳೆದ ವರ್ಷ ವಿದ್ಯಾರ್ಥಿ ವಿರುದ್ಧ ದಾಖಲಾಗಿದ್ದ ಪ್ರಸ್ತುತ ಕ್ರಿಮಿನಲ್ ಪ್ರಕರಣದಲ್ಲಿ, ಜನವರಿ 28, 2025 ರಂದು ಅವರಿಗೆ ಜಾಮೀನು ನೀಡಲಾಗಿದೆ. ಪ್ರಸ್ತುತ ಅವರು ಪ್ರಿವೆಂಟಿವ್ ಬಂಧನದ ಕಾರಣಕ್ಕೆ ಮಾತ್ರ ಜೈಲಿನಲ್ಲಿದ್ದಾರೆ ಎಂಬುವುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ಫೆಬ್ರವರಿ 25ರಂದು, ಮಧ್ಯಪ್ರದೇಶ ಹೈಕೋರ್ಟ್ ವಿದ್ಯಾರ್ಥಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿತ್ತು. ವಿದ್ಯಾರ್ಥಿ ದೀರ್ಘ ಕ್ರಿಮಿನಲ್ ಪ್ರಕರಣಗಳ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಸಾರ್ವಜನಿಕ ಶಾಂತಿಗೆ ಅಪಾಯವನ್ನುಂಟುಮಾಡುವ ನಿಯಮಿತ ಅಪರಾಧಿ ಎಂದು ಹೇಳಿತ್ತು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ: ನಾಗರಿಕರ ಮತದಾನದ ಹಕ್ಕು ಕಸಿಯುವ ಬಿಜೆಪಿಯ ಹುನ್ನಾರ-ಟಿಎಂಸಿ ಆರೋಪ


