ಲಿಂಗಾಯತ ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಬಳಸಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದ್ದಾರೆ ಎಂಬ ಕಾರಣಕ್ಕೆ ವಿಜಯಪುರ ಜಿಲ್ಲಾಧಿಕಾರಿ ಅವರು ಸ್ವಾಮೀಜಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು. ಎಂಬ ಆರೋಪದ ಕಾರಣ ಸ್ವಾಮೀಜಿಯವರು ಡಿ. 14ರವರೆಗೆ ವಿಜಯಪುರ ಜಿಲ್ಲೆ ಪ್ರವೇಶಿಸ ಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ಬಿ.ವರಾಳೆ ಪೀಠವು ಸ್ವಾಮೀಜಿ ಅವರನ್ನು ತರಾಟೆಗೆ ತೆಗೆದುಕೊಂಡಿತು.
‘ನೀವು ಜಿಲ್ಲೆಯಿಂದ ದೂರವಿದ್ದು ಆಧ್ಯಾತ್ಮಿಕ ವಿಷಯಗಳಲ್ಲಿ ತೊಡಗಿಸಿ ಕೊಳ್ಳಲು ಇದು ಒಂದು ಅವಕಾಶ. ನೀವು ಬೇರೆ ಯಾವುದಾದರೂ ಮಠದಲ್ಲಿ ಕುಳಿತು ಧ್ಯಾನ ಮಾಡಬೇಕು. ಈ ನಿರ್ದಿಷ್ಟ ಜಿಲ್ಲೆಗೆ ಹೋಗಲೇಬೇಕೆಂದು ನೀವೇಕೆ ಜಿಲ್ಲಾಡಳಿತಕಕ್ಕೆ ಒತ್ತಡ ಹೇರುತ್ತಿದ್ದೀರಿ’ ಎಂದು ಪೀಠವು ಸ್ವಾಮೀಜಿ ಅವರನ್ನು ಪ್ರಶ್ನಿಸಿತು.
‘ಕೀಳು ಮಟ್ಟದ ಹೇಳಿಕೆ ನೀಡಿರುವ ನೀವು ಉತ್ತಮ ನಾಗರಿಕರಲ್ಲ’ ಎಂದು ಕನೇರಿ ಸ್ವಾಮಿಗೆ ಬಹಳ ಕಟುವಾಗಿ ಹೇಳಿತು.
‘ನೀವು ಧಾರ್ಮಿಕ ನಾಯಕ. ಮಾತನಾಡುವಾಗ ಬಹಳ ಜಾಗರೂಕರಾಗಿರ ಬೇಕು. ನಿಮ್ಮ ಇಂತಹ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಇನ್ನು ಮುಂದೆ ಕೋಮು ಭಾವನೆ ಕೆರಳಿಸುವ ಯಾವುದೇ ಹೇಳಿಕೆ ನೀಡಬೇಡಿ. ಹೈಕೋರ್ಟ್ ಆದೇಶದಲ್ಲಿ ತಪ್ಪೇನಿದೆ’ ಎಂದು ಪೀಠ ಪ್ರಶ್ನಿಸಿತು.
‘ಅವಹೇಳನಕಾರಿ ಭಾಷೆ ಬಳಸಿರುವುದು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ. ನೀವು ಹೀಗೆಯೇ ವರ್ತಿಸುತ್ತಿದ್ದರೆ ಎಲ್ಲ ಜಿಲ್ಲಾಧಿಕಾರಿಗಳು ಇಂತಹ ಆದೇಶಗಳನ್ನು ಹೊರಡಿಸುತ್ತಾರೆ’ ಎಂದು ಪೀಠ ಸೂಚ್ಯವಾಗಿ ಹೇಳಿತು. ‘ಪ್ರಕರಣದ ವಾಸ್ತವಾಂಶ ಹಾಗೂ ಸನ್ನಿವೇಶ ಗಳನ್ನು ಗಮನಿಸಿದರೆ, ಹೈಕೋರ್ಟ್ ಆದೇಶವು ಸರಿಯಾಗಿದೆ ಎಂದು ಪೀಠವು ಹೇಳಿದೆ . ಡಿಸೆಂಬರ್ 14ರ ನಂತರ ಸ್ವಾಮೀಜಿ ಅವರು ಜಿಲ್ಲೆ ಪ್ರವೇಶಿಸ ಬಹುದು’ ಎಂದು ಪೀಠ ಸ್ಪಷ್ಟಪಡಿಸಿತು.
‘ನಿಮ್ಮನ್ನು ಗಡಿಪಾರು ಮಾಡಲೂ ಜಿಲ್ಲಾಡಳಿತಕ್ಕೆ ಅಧಿಕಾರ ಇದೆ’- ಸುಪ್ರೀಂ
ಸ್ವಾಮೀಜಿ ಅವರನ್ನು ಎಲ್ಲ ಜಿಲ್ಲೆಗಳಿಂದ ಗಡಿಪಾರು ಮಾಡಲು ರಾಜ್ಯದ ಅಧಿಕಾರಿಗಳು ಬಯಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ‘ನಿಮ್ಮ ಕೃತ್ಯಗಳು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದರೆ, ಜಿಲ್ಲಾಧಿಕಾರಿ ಅಥವಾ ಆಯುಕ್ತರಿಗೆ ನಿಮ್ಮನ್ನು ಗಡಿಪಾರು ಮಾಡಲು ಅಧಿಕಾರವಿದೆ’ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು. ‘ನೀವು ಜಿಲ್ಲೆಯನ್ನು ಪ್ರವೇಶಿಸಬೇಕು ಎಂದು ಏಕೆ ಒತ್ತಾಯಿ ಸುತ್ತೀರಿ? ಭಾರತವು ತುಂಬಾ ದೊಡ್ಡ ದೇಶ. ನೀವು ಬೇರೆಡೆಗೆ ಹೋಗಿ’ ಎಂದು ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಾಘವೇಂದ್ರ ಶ್ರೀವಾಸ್ತವ ಅವರನ್ನು ಪೀಠ ಕೇಳಿತು.
ಕರ್ನಾಟಕ ಸರ್ಕಾರದ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್ ಮತ್ತು ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ನಿಶಾಂತ್ ಪಾಟೀಲ ಮತ್ತು ಅಮನ್ ಪನ್ವಾರ್ ಹಾಜರಾದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್



Muslimara viruddha yenu maadidaroo awarige shikshe illa!!!!!
Kole madidaroo yenu agalla…..