ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಾಂಗಾರ್ಕರ್‌ನ್ನು ಶಿವಸೇನೆ (ಶಿಂದೆ ಬಣ) ಪಕ್ಷದ ಹುದ್ದೆಯಿಂದ ಹೊರಗಿಟ್ಟಿರುವುದು ‘ಚುನಾವಣೆಯ ಕಾರಣಕ್ಕೆ” ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಸೋಮವಾರ ಹೇಳಿದ್ದಾರೆ.
“ಗೌರಿ ಲಂಕೇಶ್ ಅವರ ಹತ್ಯೆ ಆರೋಪಿಯನ್ನು ಪಕ್ಷಕ್ಕೆ ಸೇರಿಸಿಕೊಂಡು, ಈಗ ಹುದ್ದೆಯಿಂದ ತಾತ್ಕಾಲಿಕವಾಗಿ ದೂರ ಇಟ್ಟಿದ್ದಾರೆ. ‘ರಾಜ್ಯದಲ್ಲಿ ಚುನಾವಣೆ ಇದೆ ಎನ್ನುವ ಕಾರಣಕ್ಕೆ ಇಂತಹ ನೈತಿಕತೆಯ ಮುಸುಕು ಹಾಕಿಕೊಳ್ಳಲಾಗುತ್ತಿದೆ’. ಚುನಾವಣೆ ಮುಗಿಯುತ್ತಿದ್ದಂತೆಯೇ ಇಂತಹ ಅಪರಾಧಿಗಳನ್ನು ಮತ್ತೊಮ್ಮೆ ಹತ್ತಿರ ಸೇರಿಸಿಕೊಳ್ಳಲಾಗುತ್ತದೆ” ಎಂದು ಸುಳೆ ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
प्रख्यात पत्रकार गौरी लंकेश यांच्या हत्येच्या आरोपीला पक्षात घेऊन पावन करणाऱ्यांनी आता त्या व्यक्तीला पक्षातून बाहेर काढलेय. अर्थात जो 'बूँद से गयी वह हौद से नहीं आती'. आता जो सोज्ज्वळतेचा बुरखा पांघरला जातोय तो केवळ तात्पुरता म्हणजेच फक्त निवडणूका पार पडेपर्यंत आहे. निवडणूकीनंतर…
— Supriya Sule (@supriya_sule) October 21, 2024
ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದಿರುವ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಪಂಗಾರ್ಕರ್, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ಕಳೆದ ಶುಕ್ರವಾರ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಅರ್ಜುನ್ ಖೋಟ್ಕರ್ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ.
ಪಕ್ಷ ಸೇರ್ಪಡೆ ಬೆನ್ನಲ್ಲೇ ಪಂಗಾರ್ಕರ್ ಅನ್ನು ಜಲ್ನಾ ಜಿಲ್ಲೆಯ ಪ್ರಚಾರ ಸಮಿತಿಯ ಮುಖ್ಯಸ್ಥನನ್ನಾಗಿ ನೇಮಿಸಲಾಗಿತ್ತು. ಇದು ರಾಜ್ಯದಾದ್ಯಂತ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಸಿಎಂ ಏಕನಾಥ ಶಿಂದೆ, ಶ್ರೀಕಾಂತ್ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಅವರಿಗೆ ಯಾವುದೇ ಹುದ್ದೆ ನೀಡದಂತೆ ತಾತ್ಕಾಲಿಕ ಆದೇಶ ನೀಡಿದ್ದಾರೆ.
ಇದನ್ನೂ ಓದಿ : ಬಿಜೆಪಿಯು ಮಹಾರಾಷ್ಟ್ರದ ರೈತರ ದೊಡ್ಡ ಶತ್ರುವಾಗಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ


