ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಗುರುವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಕಸ ಸುರಿದಿದ್ದಾರೆ. ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಮುನ್ನ ಈ ಪ್ರತಿಭಟನೆ ನಡೆದಿದೆ.
ಸ್ಥಳೀಯ ನಿವಾಸಿಗಳೊಂದಿಗೆ ಮಲಿವಾಲ್ ಮೊದಲು ವಿಕಾಸಪುರಿ ಪ್ರದೇಶದ ಕಸದ ರಾಶಿಗೆ ಭೇಟಿ ನೀಡಿದರು. ಅಲ್ಲಿ ಎಎಪಿ ಮುಖ್ಯಸ್ಥರನ್ನು ಟೀಕಿಸಿ, “ನಾವು ಈ ಕಸವನ್ನು ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿ ದೆಹಲಿಯ ಪ್ರತಿಯೊಂದು ಪ್ರದೇಶಕ್ಕೂ ಅವರು ನೀಡಿರುವ ಈ ಕೊಳಕು ಉಡುಗೊರೆಯನ್ನು ಏನು ಮಾಡಬೇಕೆಂದು ಕೇಳುತ್ತೇವೆ” ಎಂದು ಹೇಳಿದರು.
ದೆಹಲಿಯಲ್ಲಿ ನೈರ್ಮಲ್ಯ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಪರಿಸ್ಥಿತಿ ಹದಗೆಟ್ಟಿದೆ ಎಂದು ಮಲಿವಾಲ್ ಹೇಳಿದ್ದಾರೆ. ಸ್ಥಳೀಯ ಶಾಸಕರಿಗೆ ಹಲವಾರು ದೂರುಗಳ ಹೊರತಾಗಿಯೂ ತಮ್ಮ ರಸ್ತೆಯಲ್ಲಿ ಕಸದ ರಾಶಿ ಉಂಟಾಗುತ್ತಿದೆ ಎಂದು ವರದಿ ಮಾಡಿದ ವಿಕಾಸಪುರಿಯ ಮಹಿಳೆಯರ ದೂರುಗಳನ್ನು ಅವರು ಉಲ್ಲೇಖಿಸಿದ್ದಾರೆ.
Arvind Kejriwal ने पुलिस भेजकर अपने घर के बाहर से स्वाति मालीवल जी को Arrest करवाया – Tweeted by Team pic.twitter.com/1bmOGanS1f
— Swati Maliwal (@SwatiJaiHind) January 30, 2025
“ದೆಹಲಿಯ ಪ್ರತಿಯೊಂದು ಮೂಲೆಮೂಲೆ ಕೊಳಕಾಗಿದೆ, ರಸ್ತೆಗಳು ಹಾಳಾಗಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ” ಎಂದು ಮಲಿವಾಲ್ ಹೇಳಿದರು.
“ಇಲ್ಲಿ ಮಹಿಳೆಯರು ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನಾವು ಈ ಕಸವನ್ನು ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿ ದೆಹಲಿಯ ಪ್ರತಿಯೊಂದು ಪ್ರದೇಶಕ್ಕೂ ಅವರು ನೀಡಿರುವ ಈ ಕೊಳಕು ಉಡುಗೊರೆಯನ್ನು ಏನು ಮಾಡಬೇಕೆಂದು ಕೇಳುತ್ತೇವೆ. ಕೇಜ್ರಿವಾಲ್ ಈಗ ಆಮ್ ಆದ್ಮಿ (ಸಾಮಾನ್ಯ ವ್ಯಕ್ತಿ) ಅಲ್ಲ.. ಅವರಿಗೆ ದೆಹಲಿಯ ವಾಸ್ತವದ ಬಗ್ಗೆ ತಿಳಿದಿಲ್ಲ” ಎಂದು ಅವರು ಹೇಳಿದರು.
ಇದನ್ನೂ ಓದಿ; ಉತ್ತರ ಪ್ರದೇಶ| ಕಾಂಗ್ರೆಸ್ ಸಂಸದನ ಮೇಲೆ ಅತ್ಯಾಚಾರ ಆರೋಪ; ಸುದ್ದಿಗೋಷ್ಠಿ ನಡೆಸುತ್ತಿದ್ದಾಗಲೇ ಬಂಧನ


