Homeಅಂತರಾಷ್ಟ್ರೀಯಸ್ವಿಸ್‌ ಬ್ಯಾಂಕ್‌: 20,700 ಕೋಟಿಗೆ ಏರಿಕೆಯಾದ ಭಾರತೀಯರ ಹಣ; 13 ವರ್ಷಗಳಲ್ಲೇ ಹೆಚ್ಚು!

ಸ್ವಿಸ್‌ ಬ್ಯಾಂಕ್‌: 20,700 ಕೋಟಿಗೆ ಏರಿಕೆಯಾದ ಭಾರತೀಯರ ಹಣ; 13 ವರ್ಷಗಳಲ್ಲೇ ಹೆಚ್ಚು!

- Advertisement -
- Advertisement -

ಸ್ವಿಟ್ಜರ್ಲ್ಯಾಂಡ್ (ಸ್ವಿಸ್) ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ಮೊತ್ತ 20,700 ಕೋಟಿಗೆ ಏರಿಕೆಯಾಗಿದೆ. ಇದು ಕಳೆದ 13 ವರ್ಷಗಳಲ್ಲೆ ಭಾರತಕ್ಕೆ ಸ್ವಿಸ್‌ ಬ್ಯಾಂಕಿಗೆ ಹರಿದ ಅತಿ ಹೆಚ್ಚಿನ ಮೊತ್ತ ಎಂದು ಸ್ವಿಟ್ಜರ್ಲ್ಯಾಂಡ್‌ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

2014 ರ ಲೋಕಸಭಾ ಚುನಾವಣೆಯ ವೇಳೆ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಹಣದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಬಿಜೆಪಿಯು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತೀಯ ಹಣವನ್ನು ಭಾರತಕ್ಕೆ ತರುವುದಾಗಿ ಭರವಸೆಗಳನ್ನು ನೀಡಿತ್ತು. ಆದರೆ, ಇದೀಗ ಬಿಜೆಪಿಯ ಮೋದಿ ನೇತೃತ್ವವು ಎರಡನೆ ಬಾರಿಗೆ ಆಡಳಿತ ನಡೆಸುತ್ತಿದೆ. ಆದರೂ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯ ಜನರ, ಸಂಘ-ಸಂಸ್ಥೆಗಳು ಇರಿಸಿರುವ ಹಣದ ಮೊತ್ತ 20,700 ಕೋಟಿ ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಫೇಕ್ ಪೈಲ್ವಾನರ ಮತ್ತೊಂದು ಫೇಕ್ ನ್ಯೂಸ್ : ಸ್ವಿಸ್‌ ಬ್ಯಾಂಕ್‌ನ ಪಟ್ಟಿ ಸಿಕ್ತು ಎಂಬ ಅಪ್ಪಟ ಸುಳ್ಳು!

2019 ರ ಅಂತ್ಯದ ವೇಳೆಗೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣದ ಪ್ರಮಾಣದಲ್ಲಿ ಕುಸಿತವಾಗಿತ್ತು. ಆದರೆ 2020ರ ಅಂತ್ಯಕ್ಕೆ ಈ ಪ್ರಮಾಣ 13 ವರ್ಷಗಳಲ್ಲೇ ಗರಿಷ್ಟ ಪ್ರಮಾಣಕ್ಕೆ ಏರಿಕೆಯಾಗಿದೆ. ಎಸ್‌ಎನ್‌ಬಿ ವಿವರಗಳ ಅನ್ವಯ ಸಿಎಚ್‌ಎಫ್ ನಲ್ಲಿ ಪ್ರಸ್ತುತ ಒಟ್ಟು 20,706 ಕೋಟಿ ರೂ. ಭಾರತೀಯರ ಹಣವಿದೆ.

ಸ್ವಿಸ್ ಬ್ಯಾಂಕುಗಳ ‘ಒಟ್ಟು ಹೊಣೆಗಾರಿಕೆಗಳು’ ಅಥವಾ 2020 ರ ಕೊನೆಯಲ್ಲಿ ಅವರ ಭಾರತೀಯ ಗ್ರಾಹಕರ ಕಾರಣದಿಂದಾಗಿ ಸ್ವಿಸ್‌ ಬ್ಯಾಂಕಿಗೆ 4,000 ಕೋಟಿ ರೂ. ಹಣ ಹರಿದಿದೆ. ಅಂತೆಯೇ ಗ್ರಾಹಕರ ಠೇವಣಿಗಳಲ್ಲಿ, ಇತರ ಬ್ಯಾಂಕುಗಳ ಮೂಲಕ 3,100 ಕೋಟಿಗಿಂತ ಹೆಚ್ಚು ಹಣ ಜಮಾವಣೆ ಆಗಿದೆ.

ವಿಶ್ವಾಸಾರ್ಹರು ಅಥವಾ ಟ್ರಸ್ಟ್‌ಗಳ ಮೂಲಕ 16.5 ಕೋಟಿ ರೂ ಮತ್ತು ಸುಮಾರು 13,500 ಕೋಟಿಗೂ ಅಧಿಕ ಹಣ ಗ್ರಾಹಕರ ಬಾಂಡ್‌ಗಳು, ಸೆಕ್ಯುರಿಟೀಸ್ ಮತ್ತು ಇತರ ಹಣಕಾಸು ಸಾಧನಗಳ ರೂಪದಲ್ಲಿ ಬ್ಯಾಂಕ್‌ಗೆ ಸೇರ್ಪಡೆಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...