Homeಮುಖಪುಟಸಂತಸ ಅರಳುವ ಸಮಯ; ಬೆಂಗಳೂರು ಮತ್ತು ಟಬೂಬಿಯಾ ಹೂಗಳ ಸಂಭ್ರಮ

ಸಂತಸ ಅರಳುವ ಸಮಯ; ಬೆಂಗಳೂರು ಮತ್ತು ಟಬೂಬಿಯಾ ಹೂಗಳ ಸಂಭ್ರಮ

"ಎಂಬತ್ತರ ದಶಕದವರೆಗೂ ಬೆಂಗಳೂರಿನ ವಿವಿಧ ವೃತ್ತಗಳು, ಉದ್ಯಾನವನ, ಸಾರ್ವಜನಿಕ ಕಟ್ಟಡಗಳ ಬಳಿ ಮಾತ್ರ ಈ ರೀತಿಯ ಮರಗಳನ್ನು ಕಾಣಬಹುದಾಗಿತ್ತು. 70ರ ದಶಕದಲಿ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ತೋಟಗಾರಿಕೆ ಸಲಹೆಗಾರರಾದ ಡಾ.ಮರಿಗೌಡ ಅವರು ಅಲ್ಲಿ ಅಶೋಕ, ಮಂದಾರ, ಟಬೂಬಿಯಾ, ಜಕರಂಡಾ ಮೊದಲಾದ ಅಸಂಖ್ಯ ಹೂಬಿಡುವ ಮರಗಳನ್ನು ನೆಡಿಸಿದರು.

- Advertisement -
- Advertisement -

ಒಂದು ಶತಮಾನಕ್ಕೂ ಮುಂಚೆ ಭಾರತಕ್ಕೆ ಬಂದ ದಕ್ಷಿಣ ಅಮೆರಿಕ ಮೂಲದ ಟಬೂಬಿಯಾ ಜಾತಿಯ ಮರಗಳು ಈಗ ಭಾರತದ್ದೇ ಆಗಿಹೋಗಿವೆ. ಸರಣಿ ಹೂ ಬಿಡುವ ಮರಗಳೆಂದೇ ಇವನ್ನು ಬಣ್ಣಿಸಲಾಗಿದೆ. ಬೆಂಗಳೂರಿನ ಬೀದಿಗಳಿಗೆ ಈ ಹೂ ಬಿಡುವ ಮರಗಳು ನೀಡುವ ಮೆರಗು ಆಕರ್ಷಕ. ತಾರಾಡಿಗರ ತನುಮನಗಳನ್ನು ತಣಿಸುವ ಟಬೂಬಿಯಾ ಮರಗಳು ಹಲವು ಬಗೆಗಳಲ್ಲಿದ್ದು, ಆಯಾ ಬಗೆಯವು ನಿರ್ದಿಷ್ಟ ಕೆಲವು ತಿಂಗಳಿನಲ್ಲಿ ಸುಂದರವಾದ ಬಣ್ಣ ಬಣ್ಣದ ಹೂವನ್ನು ಅರಳಿಸಿ ಸುತ್ತಲಿನ ಪ್ರಕೃತಿಯನ್ನು ಹಾಗೂ ನೋಡುಗರ ಮನಸ್ಸನ್ನೂ ಅರಳಿಸುತ್ತವೆ. ಈ ಹೂಗಳು ಮರಗಳ ಕೆಳಗೆ ಉದುರಿದಾಗ ಸುಂದರವಾದ ಕಾರ್ಪೆಟ್ ಹಾಸಿದಂತೆ ಕಾಣುತ್ತವೆ.

ಟಬೂಬಿಯಾ ಅವಲಾನಿಡೇ ಮರಗಳು ನವೆಂಬರ್ ತಿಂಗಳಿನಲ್ಲಿ ಮೊಟ್ಟಮೊದಲು ಗಾಢವಾದ ಗುಲಾಬಿ ಬಣ್ಣದ ಹೂಗಳನ್ನು ಅರಳಿಸಿ ಹೂಗಳ ಋತುವಿನ ಪ್ರಾರಂಭವನ್ನು ಸಾರುತ್ತವೆ. ಬೆಂಗಳೂರಿನ ವಿವಿಧೆಡೆ ಈ ಹೂಗಳ ಮರಗಳಿವೆ. ನವೆಂಬರ್-ಡಿಸೆಂಬರ್ ತಿಂಗಳುಗಳಲ್ಲಿ ಈ ಹೂಗಳ ಮೆರಗನ್ನು ನಾವು ಕಾಣಬಹುದಾಗಿದೆ. ಈ ವರ್ಷ ತೀವ್ರ ಸೈಕ್ಲೋನ್‌ನಿಂದಾಗಿ ಹೂವುಗಳು ಉದುರಿ ನೆಲವನ್ನು ಹೊದ್ದ ದೃಶ್ಯವೂ ಮನಮೋಹಕ.

“1908ರಲ್ಲಿ ಲಾಲ್‌ಬಾಗ್ ಕ್ಯುರೇಟರ್ ಆಗಿ ಬಂದವರು ಕ್ರುಂಬಿಗಲ್. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ವಿವಿಧ ಬಡಾವಣೆಗಳಿಗೆ, ಮನೆಗಳಿಗೆ ಕೊಂಡೊಯ್ದರು. ಅವರು ಈ ಸರಣಿ ಹೂ ಬಿಡುವ ಮರಗಳನ್ನು ನೆಡುವುದನ್ನು ಪ್ರಾರಂಭಿಸಿದರು. ಅಂದರೆ ಒಂದು ಜಾತಿಯ ಮರಗಳು ಹೂವರಳಿಸಿ ಬಾಡುವಷ್ಟರಲ್ಲಿ ಮತ್ತೊಂದು ಜಾತಿಯ ಮರಗಳು ಹೂವರಳಿಸಿರಬೇಕು. ಅವರು ಈ ಟಬೂಬಿಯಾ ಜಾತಿಯ ಮರಗಳನ್ನು ಸಾಕಷ್ಟು ನೆಡಲು ಪ್ರೋತ್ಸಾಹಿಸಿದರು” ಎನ್ನುತ್ತಾರೆ ತೋಟಗಾರಿಕೆ ಸಮಾಲೋಚಕ ಮತ್ತು ತಜ್ಞ ಭಕ್ತರಹಳ್ಳಿಯ ಸಂತೆ ನಾರಾಯಣಸ್ವಾಮಿ.

“ಟಬೂಬಿಯಾ ಅವಲಾನಿಡೇ ಜಾತಿಯ ಮರ ನವೆಂಬರ್, ಡಿಸೆಂಬರ್, ಜನವರಿ ತಿಂಗಳಿನಲ್ಲಿ ಗಾಢವಾದ ಗುಲಾಬಿ ಬಣ್ಣದ ಹೂಬಿಡುತ್ತದೆ. ಅದು ಮುಗಿಯುವಷ್ಟರಲ್ಲಿ ಟಬೂಬಿಯಾ ಅರ್ಜೆನ್ಷಿಯಾ ಗಾಢ ಹಳದಿ ಬಣ್ಣದ ಹೂವರಳಿಸಿಕೊಂಡು ಗಮನ ಸೆಳೆದರೆ, ಟಬೂಬಿಯಾ ಸ್ಪೆಕ್ಟಾಬಿಲಿಸ್ ತಿಳಿ ಹಳದಿ ಹೂವರಳಿಸುತ್ತವೆ. ಇವು ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಇರುತ್ತವೆ. ಹಳದಿ ಹೂಗಳು ಉದುರುವ ಸಮಯಕ್ಕೆ ಸರಿಯಾಗಿ ಅಂದರೆ, ಯುಗಾದಿಗೆ ಸ್ವಾಗತ ಕೋರುವುದೇ ಟಬೂಬಿಯಾ ರೋಸಿಯಾ. ಇದರ ಸೊಬಗು ಮತ್ತು ಬೆಡಗನ್ನು ’ತಿಳಿಗುಲಾಬಿ ಸೀರೆಯನ್ನು ಧರಿಸಿರುವ ಸುಂದರಿ’ ಎಂದು ಕರೆದಿದ್ದೇನೆ. ಸುಮಾರು ಏಪ್ರಿಲ್ ತಿಂಗಳವರೆಗೂ ಇರುವ ಈ ಹೂವಿನ ನಂತರ ಕತ್ತಿಕಾಯಿ ಮರ ಅಂದರೆ ಮೇ ಫ್ಲವರ್ ಹೂ ಬಿಡುತ್ತದೆ. ಹೀಗೇ ಟ್ಯುಲಿಪ್ ಮರ ಅಥವಾ ನೀರುಗಾಯಿಮರ ಚಂದದ ಹೂ ಬಿಡುತ್ತದೆ ಹೀಗೇ ಸಾಗಿ ದಸರಾ ಮರಗಳೆಂದು ಕರೆಯುವ ಕಲ್ವಿಲೇ ರೆಸಿಮೋಸಾ ಕೇಸರಿ ಬಣ್ಣದ ಹೂಬಿಡುವವರೆಗೂ ಸಾಗುತ್ತದೆ. ಈ ದಸರಾ ಮರಗಳನ್ನು ಕ್ರುಂಬಿಗಲ್ ಅವರು ಮೈಸೂರಿನಲ್ಲಿ ನೆಟ್ಟಿದ್ದಾರೆ. ಲಿಲ್ಲಿ ಹೂವರಳಿದಾಗ ಲಂಡನ್ನಿಗೆ ಭೇಟಿ ಕೊಡು; ಟಬೂಬಿಯಾ ಹೂಬಿಟ್ಟಾಗ ಬೆಂಗಳೂರಿಗೆ ಭೇಟಿ ನೀಡು ಎಂಬ ಮಾತು ಚಾಲ್ತಿಯಲ್ಲಿದೆ” ಎಂದು ಅವರು ವಿವರಿಸಿದರು.

ಬೆಂಗಳೂರಿನಲ್ಲಿ ಬಲು ಅಪರೂಪದ ಟಬೂಬಿಯಾ ಸ್ಪೆಕ್ಟಾಬಿಲಿಸ್ ಜಾತಿಯ ಮರಗಳಿವೆ. ತಿಳಿ ಹಳದಿ ಹೂವರಳಿಸುವ ಈ ಮರಗಳು ಬೆಂಗಳೂರಿನಲ್ಲಿ ಹೆಚ್ಚೆಂದರೆ ೫೦ ಇರಬಹುದು. ನಮ್ಮ ರಾಜಭವನದಲ್ಲಿ ಟಬೂಬಿಯಾ ದೊನ್ನೆಲ್ ಸ್ಮಿತಿ ಎಂಬ ಜಾತಿಯ ಮರವಿದೆ. ಗಾಢ ಹಳದಿ ಬಣ್ಣದ ಹೂಗಳನ್ನು ಬಿಡುವ ಈ ಮರದ ಕಾಂಡ ಮೃದು. ಬೆಂಗಳೂರಿನಲ್ಲಿ ಈ ಜಾತಿಯವು ಸುಮಾರು ಹತ್ತು ಮರಗಳಿರಬೇಕಷ್ಟೇ.

“ಎಂಬತ್ತರ ದಶಕದವರೆಗೂ ಬೆಂಗಳೂರಿನ ವಿವಿಧ ವೃತ್ತಗಳು, ಉದ್ಯಾನವನ, ಸಾರ್ವಜನಿಕ ಕಟ್ಟಡಗಳ ಬಳಿ ಮಾತ್ರ ಈ ರೀತಿಯ ಮರಗಳನ್ನು ಕಾಣಬಹುದಾಗಿತ್ತು. ೭೦ರ ದಶಕದಲ್ಲಿ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ತೋಟಗಾರಿಕೆ ಸಲಹೆಗಾರರಾದ ಡಾ.ಮರಿಗೌಡ ಅವರು ಅಲ್ಲಿ ಅಶೋಕ, ಮಂದಾರ, ಟಬೂಬಿಯಾ, ಜಕರಂಡಾ ಮೊದಲಾದ ಅಸಂಖ್ಯ ಹೂಬಿಡುವ ಮರಗಳನ್ನು ನೆಡಿಸಿದರು. ಕನಿಷ್ಠ ಒಂದು ಸಾವಿರವಾದರೂ ಅಲ್ಲಿ ಟಬೂಬಿಯಾ ಮರಗಳಿವೆ. ಪ್ರತಿ ವರ್ಷ ನವೆಂಬರ್‌ನಿಂದ ಮೇ ವರೆಗೆ ಅಲ್ಲಿ ಬಣ್ಣಬಣ್ಣದ ಹೂಗಳನ್ನು ನೋಡಲು ಎರಡು ಕಣ್ಣುಗಳು ಸಾಲವು. ಅಲ್ಲಿ ಒಂದು ದಶಕ ಗಾರ್ಡನ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದ ಅದೃಷ್ಟ ನನ್ನದು” ಎನ್ನುತ್ತಾರೆ ಸಂತೆ ನಾರಾಯಣಸ್ವಾಮಿ.

ಹೊರಗೆ ತಾರಾಡುವಾಗ ಈ ಸಂತಸ ಅರಳುವ ಸಮಯವನ್ನು ಕಣ್ಣುತುಂಬಿಸಿಕೊಳ್ಳುವುದನ್ನು ಮರೆಯದಿರಿ.

(ವಿ. ಸೂ: ಟಿ.ಪಿ.ಇಸ್ಸಾರ್ ಅವರು ಬೆಂಗಳೂರಿನ ಎಲ್ಲಾ ಹೂ ಬಿಡುವ ಮರಗಳ ಕುರಿತಾದ ಕಾಫಿ ಟೇಬಲ್ ಪುಸ್ತಕ ’ಬ್ಲಾಸಮ್ಸ್ ಆಫ್ ಬೆಂಗಳೂರು’ ಹೊರತಂದಿದ್ದಾರೆ.)

ಡಿ ಜಿ ಮಲ್ಲಿಕಾರ್ಜುನ

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವರಾದ ಡಿ.ಜಿ. ಮಲ್ಲಿಕಾರ್ಜುನ ಅವರ ನೆಚ್ಚಿನ ಹವ್ಯಾಸ ಫೋಟೋಗ್ರಫಿ. ರಸ್ಕಿನ್ ಬಾಂಡ್ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರಲ್ಲದೆ, ಫೋಟೋಗ್ರಪಿ ವಿಷಯವಾಗಿ ’ಕ್ಲಿಕ್, ’ಅರೆಕ್ಷಣದ ಅದೃಷ್ಟ’ ಪುಸ್ತಕಗಳನ್ನು ರಚಿಸಿದ್ದಾರೆ.

ಫೋಟೋಗಳು: ಸಂತೆ ನಾರಾಯಣಸ್ವಾಮಿ ಮತ್ತು ಮಂಜುನಾಥ ಚಾರ್ವಾಕ


ಇದನ್ನೂ ಓದಿ: ಮುತ್ತು ಸುತ್ತು: ಟಿಪ್ಪುವಿನ ಪ್ರಸ್ತುತ ಸ್ಥಿತಿ ಸಾರುವ ನಂದಿಬೆಟ್ಟಕ್ಕೊಮ್ಮೆ ಹೋಗಿಬನ್ನಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...