ಆಯುಷ್ ಔಷಧಿಗಳೂ ಸೇರಿದಂತೆ ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಗುರಿಯನ್ನು ಹೊಂದಿರುವ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತು) ಕಾಯಿದೆ – 1954ರ ಕರಡು ತಿದ್ದುಪಡಿ ಮಾಡಲು “ಸೂಕ್ತ ಕ್ರಮ” ತೆಗೆದುಕೊಳ್ಳುವಂತೆ ಪ್ರಧಾನ ಮಂತ್ರಿಗಳ ಕಚೇರಿ (PMO) ಆರೋಗ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ಆರೋಗ್ಯ ಸಚಿವಾಲಯವು ತನ್ನ ಕರಡು ಪ್ರತಿಯನ್ನು ನಾಲ್ಕು ವರ್ಷಗಳಿಂದ ತಡೆಹಿಡಿದಿತ್ತು. ಇದನ್ನು ವಿರೋಧಿಸಿ ಕಳೆದ ತಿಂಗಳು ಕೇರಳ ಮೂಲದ ಡಾ.ಕೆ.ವಿ. ಬಾಬು ಅವರು ಸಲ್ಲಿಸಿದ ದೂರಿನ ನಂತರ ಪ್ರಧಾನ ಮಂತ್ರಿ ಕಚೇರಿ ನಿರ್ದೇಶನ ನೀಡಿದೆ. ಕರಡು ತಿದ್ದುಪಡಿಯು 24 ರೋಗಗಳು ಮತ್ತು ಅಸ್ವಸ್ಥತೆಗಳನ್ನು ಪರಿಚಯಿಸುವ ಮೂಲಕ ಕಾಯಿದೆಯ ವ್ಯಾಪ್ತಿಯನ್ನು ವಿಸ್ತರಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಡಿಸೆಂಬರ್ 21 ರಂದು ಪ್ರಧಾನ ಮಂತ್ರಿ ನೀಡಿದ ಪ್ರತಿಕ್ರಿಯೆಯಲ್ಲಿ, “ಡಾ.ಕೆ.ವಿ. ಬಾಬು ಅವರಿಂದ ಸ್ವೀಕರಿಸಿದ ಪತ್ರವನ್ನು ಸೂಕ್ತ ಕ್ರಮಕ್ಕಾಗಿ ಪಿಎಂಒಪಿಜಿ ಪೋರ್ಟಲ್‌ನಲ್ಲಿ ಆನ್‌ಲೈನ್ ಮೋಡ್ ಮೂಲಕ ಇಲ್ಲಿಗೆ ರವಾನಿಸಲಾಗಿದೆ. ಅರ್ಜಿದಾರರಿಗೆ ಉತ್ತರವನ್ನು ಕಳುಹಿಸಬೇಕು ಮತ್ತು ಅದರ ಪ್ರತಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು” ಎಂದು ಹೇಳಿದೆ.
ಡಾ.ಕೆ.ವಿ. ಬಾಬು ಅವರು ನೀಡಿದ ದೂರಿನಲ್ಲಿ, “ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಕಾಯ್ದೆಗಳಿಗೆ ಪ್ರಸ್ತಾವಿತ ತಿದ್ದುಪಡಿಯು 2018ರ ಸಂಸದೀಯ ಸ್ಥಾಯಿ ಸಮಿತಿಯ ಕಟು ಟೀಕೆಗಳ ಫಲವಾಗಿದೆ. ಪ್ರಸ್ತಾವನೆಯು ಸುಮಾರು ಐದು ವರ್ಷಗಳಿಂದ ಸಾರ್ವಜನಿಕ ಡೊಮೇನ್‌ನಲ್ಲಿದ್ದರೂ, ಅದು ಇನ್ನೂ ಜಾರಿಗೆ ಬಂದಿಲ್ಲ” ಎಂದು ಹೇಳಿದ್ದರು.
ಕಣ್ಣಿನ ಪೊರೆ, ಡಬಲ್ ವಿಷನ್, ಕಲರ್ ವಿಷನ್ ಮತ್ತು ರಾತ್ರಿ ಕುರುಡುತನಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳುವ ದೃಷ್ಠಿ ಐ ಡ್ರಾಪ್ ಔಷಧಗಳು ಸೇರಿದಂತೆ ಆಯುಷ್ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಬಾಬಾ ರಾಮ್‌ದೇವ್‌ಗೆ ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಈಗಿರುವ ಔಷಧ ಕಾನೂನುಗಳಲ್ಲಿನ ಲೋಪದೋಷಗಳನ್ನು ತೆರೆದಿಟ್ಟಿದೆ ಅವರು ಹೇಳಿದ್ದಾರೆ.
ಹಾಗಾಗಿ, ಪ್ರಧಾನ ಮಂತ್ರಿ ಕಚೇರಿಯು ಮಧ್ಯ ಪ್ರವೇಶ ಮಾಡಿದರೆ ಕಳೆದ ನಾಲ್ಕು ವರ್ಷಗಳಿಂದ ತಿದ್ದುಪಡಿ ಕಾಯ್ದೆಯನ್ನು ವಿಳಂಬ ಮಾಡುತ್ತಿರುವ ಆರೋಗ್ಯ ಸಚಿವಾಲಯದ ನಿಷ್ರಿಯತೆ ಕೊನೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಡಾ.ಬಾಬು ಹೇಳಿದ್ದಾರೆ. “ಕರಡು ತಿದ್ದುಪಡಿ ಇನ್ನೂ ಬಾಕಿ ಇದೆ.. ಹೆಚ್ಚಿನ ಸೂಚನೆ ಲಭ್ಯವಿಲ್ಲ” ಎಂದು ಆರೋಗ್ಯ ಸಚಿವಾಲಯ ನೀಡಿದ ಆರ್‌ಟಿಐ ಉತ್ತರದ ಹಿನ್ನಲೆ ತಾನು ಪ್ರಧಾನ ಮಂತ್ರಿ ಕಚೇರಿಗೆ ದೂರು ಸಲ್ಲಿಸಿದ್ದೇನೆ ಅವರು ಪತ್ರದಲ್ಲಿ ಹೇಳಿದ್ದಾರೆ.
ಸಚಿವಾಲಯವು ಫೆಬ್ರವರಿ 3, 2020 ರಂದು ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತು) ಕಾಯಿದೆ 1954 ಗೆ ತಿದ್ದುಪಡಿಯನ್ನು ಪ್ರಸ್ತಾಪಿಸಿತ್ತು. ಈ ಕಾಯಿದೆಯು ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿ ಔಷಧಿಗಳು ಸೇರಿದಂತೆ ಎಲ್ಲಾ ಔಷಧಿಗಳಿಗೆ ಅನ್ವಯಿಸುತ್ತದೆ. ಈ ಕಾಯಿದೆ ಮಾಂತ್ರಿಕ ಗುಣಗಳನ್ನು ಹೊಂದಿದೆ ಎಂದು ಪ್ರತಿಪಾದಿಸುವ ಚಿಕಿತ್ಸೆಗಳು ಮತ್ತು ಔಷಧಿಗಳ ಜಾಹೀರಾತನ್ನು ನಿಷೇಧಿಸುತ್ತದೆ.
ಇದನ್ನೂ ಓದಿ: 5, 8ನೇ ತರಗತಿ ವಿದ್ಯಾರ್ಥಿಗಳ ಕಡ್ಡಾಯ ಪಾಸ್ ನಿಯಮ ರದ್ದು : ಅನುತ್ತೀರ್ಣಕ್ಕೆ ಅವಕಾಶ
5, 8ನೇ ತರಗತಿ ವಿದ್ಯಾರ್ಥಿಗಳ ಕಡ್ಡಾಯ ಪಾಸ್ ನಿಯಮ ರದ್ದು : ಅನುತ್ತೀರ್ಣಕ್ಕೆ ಅವಕಾಶ


