ದಲಿತ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಿದ ಆರೋಪದ ಮೇಲೆ ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಗೌಥೋಜಿಗುಡ ಗ್ರಾಮದ ಪಂಚಾಯತ್ ಸದಸ್ಯರು ಸೇರಿದಂತೆ 19 ಜನರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. 35 ವರ್ಷಗಳಿಂದ ಗ್ರಾಮದಲ್ಲಿ ವಾಸಿಸುತ್ತಿರುವ ಕುಟುಂಬವು ತಮಟೆ ಬಡಿಯುವ ಆಚರಣೆಯನ್ನು ನಿಲ್ಲಿಸಲು ನಿರ್ಧರಿಸಿತ್ತು. ಇದಕ್ಕೆ ಗ್ರಾಮದ ಹಿರಿಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸೆಪ್ಟೆಂಬರ್ 10 ರಂದು ದಲಿತ ಕುಟುಂಬದ ಮೇಲೆ ಬಹಿಷ್ಕಾರ ಜಾರಿ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಾಂಪ್ರದಾಯಿಕವಾಗಿ, ತೆಲಂಗಾಣದ ಮಾದಿಗ ಸಮುದಾಯದ ಜನರು ಅಂತ್ಯಕ್ರಿಯೆಗಳು ಮತ್ತು ಇತರ ಹಳ್ಳಿ ಹಬ್ಬಗಳಲ್ಲಿ ತಮಟೆ ಬಡಿಯುವುದನ್ನು ಮಾಡಿಕೊಂಡು ಬರುತ್ತಿದ್ದಾರೆ. ಸಾಮಾನ್ಯವಾಗಿ ಮೇಲ್ಜಾತಿ ಸಮುದಾಯಗಳು ಮುಟ್ಟದ ಸಾಂಪ್ರದಾಯಿಕ ತಮಟೆ ಬಡಿಯುವುದನ್ನು ಈ ಸಮಾರಂಭಗಳ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗುತ್ತದೆ. ಗ್ರಾಮೀಣ ತೆಲಂಗಾಣದ ಕೆಲವು ಭಾಗಗಳಲ್ಲಿ ಈ ಪದ್ಧತಿ ಇನ್ನೂ ಮುಂದುವರಿದಿದ್ದರೂ, ಮಾದಿಗ ಸಮುದಾಯದ ಅನೇಕರು ಈಗ ಹಳೆಯ ಆಚರಣೆಯಿಂದ ಹೊರಬರುತ್ತಿದೆ.
ಇದನ್ನೂಓದಿ: ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ
“ಅವರು ನಮ್ಮನ್ನು ಬಹಿಷ್ಕರಿಸಿದ್ದಲ್ಲದೆ, ನಮ್ಮ ಸಹವಾಸ ಮಾಡದಂತೆ ಗ್ರಾಮದ ಇತರರಿಗೆ ಎಚ್ಚರಿಕೆ ನೀಡಿದರು. ಒಂದು ವೇಳೆ ಸಹವಾಸ ಮಾಡಿದರೆ ಅವರಿಗೆ ರೂ 5,000 ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ” ಎಂಕಾಂ ಪದವಿಯನ್ನು ಹೊಂದಿರುವ, ಮೇಡ್ಚಲ್‌ನ ಪ್ರಮುಖ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಪಂಚಮಿ ಚಂದ್ರಮ್ ಆರೋಪಿಸಿದ್ದಾರೆ.
2015 ರಲ್ಲಿ ನಿಧನರಾದ ಪಂಚಮಿ ಶಂಕರಯ್ಯ ಅವರ ಪುತ್ರರಾದ ಪಂಚಮಿ ಚಂದ್ರಮ್ ಮತ್ತು ಪಂಚಮಿ ಅರ್ಜುನ್ ಅವರು ತಮಟೆ ಸಂಸ್ಕೃತಿಯಿಂದ ದೂರವಾಗಲು ಪ್ರಾರಂಭಿಸಿದ್ದರು. ಅವರ ಕುಟುಂಬದ ನಾಲ್ವರು ಹೆಣ್ಣು ಮಕ್ಕಳು ಮದುವೆಯಾಗಿ ದೂರರ ಊರಿನಲ್ಲಿ ವಾಸವಾಗಿದ್ದಾರೆ. ಪಂಚಮಿ ಅರ್ಜುನ್ ಅವರು ಜೆಎನ್‌ಟಿಯು ಹೈದರಾಬಾದ್‌ನಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ್ದಾರೆ.
ತಮ್ಮ ಮೇಲೆ ಊರಿನ ಜನರು ಹೇರಿದ ಬಹಿಷ್ಕಾರವನ್ನು ನೆನಪಿಸಿಕೊಂಡ ಅರ್ಜುನ್, ಕುಟುಂಬವು 15 ದಿನಗಳವರೆಗೆ ನೀರಿಲ್ಲದೆ ಪರದಾಡಬೇಕಾಯಿತು. ಸ್ಥಳೀಯ ದಿನಸಿ ಅಂಗಡಿಯವರು ಪಡಿತರ ಖರೀದಿಸಲು ಕೂಡಾ ಅವಕಾಶ ನಿರಾಕರಿಸಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಜಮ್ಮು ಕಾಶ್ಮೀರ ಚುನಾವಣೆ ವೀಕ್ಷಣೆಗೆ ವಿದೇಶಿ ಪ್ರತಿನಿಧಿಗಳು | ಒಮರ್ ಅಬ್ದುಲ್ಲಾ ಆಕ್ರೋಶ
ಅರ್ಜುನ್ ಅವರ ತಾಯಿ ಪಿ ನರಸಮ್ಮ ಮಾತನಾಡಿ, “ನಾವು ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಹತ್ತಿರದ ಪಟ್ಟಣಗಳಿಗೆ ಹೋಗಬೇಕಾಗಿತ್ತು. ಇದು ಕೆಟ್ಟ ವಿಚಾರ, ಕಳೆದ ಮೂರು ದಶಕಗಳಿಂದ ನಮಗೆ ತಿಳಿದಿರುವ ಪ್ರತಿಯೊಬ್ಬರೂ ನಮ್ಮೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡರು” ಎಂದು ಹೇಳಿದ್ದಾರೆ.
ಆದರೆ ಗ್ರಾಮದಲ್ಲಿ ಉದ್ವಿಗ್ನತೆಯ ನಡುವೆಯೂ ಸಹೋದರರು ತಮ್ಮ ಊರಿನಲ್ಲೆ ಉಳಿದಿದ್ದರು. “ಸಮಯದ ಜೊತೆಗೆ ನಾವು ಈ ಆಚರಣೆಯಿಂದ ದೂರ ಸರಿದಿದ್ದೇವೆ. ಯಾಕೆಂದರೆ, ತಮಟೆ ಹೊಡೆಯುವುದು ಕೀಳು ಎಂದು ನಾವು ಭಾವಿಸುತ್ತೇವೆ. ಇಂದಿನ ದಿನ ನಮಗೆ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗಗಳು ಇದ್ದಾಗ, ಇದು ಅತ್ಯಂತ ಅನ್ಯಾಯದ ಕೆಲಸವಾಗಿದೆ” ಎಂದು ಅರ್ಜುನ್ ಹೇಳಿದ್ದಾರೆ. ಅರ್ಜುನ್ ಅವರು ಮೇಡ್ಚಲ್‌ನ ಕಂಪನಿಯೊಂದರಲ್ಲಿ ರಸಾಯನಶಾಸ್ತ್ರಜ್ಞನಾಗಿ ಉದ್ಯೋಗಿಯಾಗಿದ್ದಾರೆ.
ಮುದಿರಾಜ್ ಸಮುದಾಯದ ಇಬ್ಬರ ಅಂತ್ಯಕ್ರಿಯೆಗೆ ತಮಟೆ ಬಾರಿಸಲು ನಿರಾಕರಿಸಿದಾಗ ಅವರ ಮತ್ತು ಗ್ರಾಮದ ಹಿರಿಯರ ನಡುವಿನ ಸಂಬಂಧ ಹಳಸಿದ್ದು, ಅದರ ನಂತರ ಸಮುದಾಯದ ಸದಸ್ಯರು ಸೆಪ್ಟೆಂಬರ್ 10ರಂದು ಪಂಚಾಯತಿ ಕರೆದು ಬಹಿಷ್ಕಾರದ ಬಗ್ಗೆ ಚರ್ಚಿಸಿದ್ದರು’ ಎಂದು ಇಬ್ಬರು ಸಹೋದರು ಹೇಳಿದ್ದಾರೆ.
ಇದನ್ನೂಓದಿ: ಕಾನೂನು ರೀತಿಯ ಹೋರಾಟದ ಜತೆಗೆ ತನಿಖೆ ಎದುರಿಸಲು ನಾನು ಸಿದ್ಧನಾಗಿದ್ದೇನೆ: ಸಿಎಂ ಸಿದ್ದರಾಮಯ್ಯ
ಸಭೆಯಲ್ಲಿ, ಹಿರಿಯರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಹೋದರರಿಬ್ಬರು ಆರೋಪಿಸಿದ್ದಾರೆ. “ನಾವು ಎಷ್ಟೇ ವಿದ್ಯಾವಂತರಾಗಿದ್ದರೂ ಅಥವಾ ಉತ್ತಮ ಉದ್ಯೋಗವನ್ನು ಹೊಂದಿದ್ದರೂ, ನಾವು ಯಾವಾಗಲೂ ಮಾದಿಗರಾಗಿ ಉಳಿಯುತ್ತೇವೆ ಮತ್ತು ಅವರ ಪಾದಗಳ ಕೆಳಗೆ ಇರಬೇಕು ಎಂದು ಅವರು ನಮಗೆ ಹೇಳಿದರು” ಎಂದು ಅರ್ಜುನ್ ಹೇಳಿದ್ದಾರೆ. ಅದೇ ದಿನ ಕುಟುಂಬವನ್ನು ಬಹಿಷ್ಕರಿಸುವ ನಿರ್ಣಯವನ್ನು ಪಂಚಾಯತ್ ಅಂಗೀಕರಿಸಿತು.
ಅಂತಿಮವಾಗಿ, ಅನ್ಯಾಯವನ್ನು ಸಹಿಸಲಾಗದ ಸಹೋದರರು ಕಳೆದ ವಾರ ಪೊಲೀಸರನ್ನು ಸಂಪರ್ಕಿಸಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
“ದೂರಿನ ನಂತರ 19 ವ್ಯಕ್ತಿಗಳನ್ನು ಬಂಧಿಸಿದ್ದೇವೆ ಮತ್ತು ಬಹಿಷ್ಕಾರವನ್ನು ಜಾರಿಗೊಳಿಸುವಲ್ಲಿ ತೊಡಗಿರುವ 14 ಜನರನ್ನು ಇನ್ನೂ ಹುಡುಕುತ್ತಿದ್ದೇವೆ. ಈ ಘಟನೆಯು ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಕಾನೂನುಬಾಹಿರವಾದ ಜಾತಿ ಆಧಾರಿತ ತಾರತಮ್ಯ ಇನ್ನೂ ಇರುವುದನ್ನು ಎತ್ತಿ ತೋರಿಸುತ್ತದೆ. ಪ್ರಕರಣದಲ್ಲಿ ನಮ್ಮ ತನಿಖೆಯು ನಡೆಯುತ್ತಿದೆ” ಎಂದು ಮನೋಹರಾಬಾದ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು
https://www.youtube.com/watch?v=C_rvimhI-9Q


