ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯು 2026ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆ ನಿಲ್ಲಿಸದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಭೆ ನಿರ್ಧರಿಸಿದೆ.
ಸಭೆಯು ಎಸ್‌ಐಆರ್‌ನ ವಿವಿಧ ಪ್ರಾಯೋಗಿಕ ಸಮಸ್ಯೆಗಳನ್ನು ಉಲ್ಲೇಖಿಸಿದ್ದು, ಸಂವಿಧಾನಾತ್ಮಕವಾಗಿ,ಜವಾಬ್ದಾರಿಯುತವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.
ಬಿಹಾರದ ಎಸ್‌ಐಆರ್‌ಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಯಲ್ಲಿರುವಾಗ, ಅಕ್ಟೋಬರ್ 27ರ ಅಧಿಸೂಚನೆಯ ಪ್ರಕಾರ ತಮಿಳುನಾಡಿನಲ್ಲಿ ಎಸ್‌ಐಆರ್ ಮುಂದುವರಿಸುವ ಚುನಾವಣಾ ಆಯೋಗದ ನಿರ್ಧಾರವು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ತಮಿಳುನಾಡಿನ ಜನರ ಮತದಾನದ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಸಭೆಯ ನಿರ್ಣಯ ಹೇಳಿದೆ.
ಎಸ್‌ಐಆರ್ ಸ್ವೀಕಾರಾರ್ಹವಲ್ಲ ಎಂದು ಹೇಳಿದ ಸರ್ವಪಕ್ಷ ಸಭೆ, ಪ್ರಸ್ತುತ ಘೋಷಣೆ ಮಾಡಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಚುನಾವಣಾ ಆಯೋಗ ತನ್ನ ಅಧಿಸೂಚನೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಪಾಲಿಸಬೇಕು. ಎಸ್‌ಐಆರ್ ಪ್ರಕ್ರಿಯೆಗೆ ಸಾಕಷ್ಟು ಸಮಯವನ್ನು ನೀಡಬೇಕು ಮತ್ತು 2026ರ ಚುನಾವಣೆಗಳ ನಂತರವೇ ಸಂಪೂರ್ಣವಾಗಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ರೀತಿಯಲ್ಲಿ ಎಸ್‌ಐಆರ್ ನಡೆಸಬೇಕು ಸಭೆಯ ಎಂದು ನಿರ್ಣಯವು ಆಗ್ರಹಿಸಿದೆ.
ರಾಜಕೀಯ ಪಕ್ಷಗಳು ಎತ್ತಿದ ಕಳವಳಗಳನ್ನು ಚುನಾವಣಾ ಆಯೋಗ ನಿರಾಕರಿಸಿರುವುದರಿಂದ, ತಮಿಳುನಾಡಿನ ಎಲ್ಲಾ ಮತದಾರರ ಮತದಾನದ ಹಕ್ಕುಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದು ಬಿಟ್ಟು ಬೇರೆ ಪರ್ಯಾಯವಿಲ್ಲ. ಆದ್ದರಿಂದ,ಚುನಾವಣಾ ಪ್ರಜಾಪ್ರಭುತ್ವವನ್ನು ರಕ್ಷಿಸಲು ತಮಿಳುನಾಡಿನ ರಾಜಕೀಯ ಪಕ್ಷಗಳು ಜಂಟಿಯಾಗಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸುತ್ತವೆ ಎಂದು ಸರ್ವಪಕ್ಷ ಸಭೆ ನಿರ್ಧರಿಸಿದೆ.
தமிழ்நாட்டு மக்களின் வாக்குரிமையைப் பறித்து, ஜனநாயகத்தைப் படுகொலை செய்யும் நோக்கோடு அவசரகதியில் மேற்கொள்ளப்படும் #SIR-க்கு எதிராக ஒன்றிணைந்து குரல் கொடுப்பது அனைத்துக் கட்சிகளின் கடமை!
வாக்காளர் பட்டியல் திருத்தத்தைக் குழப்பங்கள் – ஐயங்கள் இல்லாமல் போதிய கால அவகாசத்துடன், 2026… pic.twitter.com/3OYmvB1Czu
— M.K.Stalin – தமிழ்நாட்டை தலைகுனிய விடமாட்டேன் (@mkstalin) November 2, 2025
ಡಿಎಂಕೆ ಕರೆದಿದ್ದ ಈ ಸಭೆಯಲ್ಲಿ ಡಿಎಂಕೆಯ ಮೈತ್ರಿ ಪಕ್ಷಗಳು ಸೇರಿದಂತೆ 49 ರಾಜಕೀಯ ಪಕ್ಷಗಳು ಭಾಗವಹಿಸಿದ್ದವು.
ಪಟ್ಟಾಲಿ ಮಕ್ಕಳ್ ಕಚ್ಚಿ, ತಮಿಳು ಮಾನಿಲ ಕಾಂಗ್ರೆಸ್, ಎಎಂಎಂಕೆ, ನಾಮ್ ತಮಿಳರ್ ಕಚ್ಚಿ, ಪುದಿಯ ತಮಿಳಗಂ, ಇಂಡಿಯಾ ಜನನಯ ಕಚ್ಚಿ, ಮತ್ತು ಪೆರುಂತಲೈವರ್ ಮಕ್ಕಳ್ ಕಚ್ಚಿ ಪಕ್ಷಗಳು ಸಭೆಯನ್ನು ಬಹಿಷ್ಕರಿಸಿತ್ತು.
ಟಿವಿಕೆ ಹೇಳಿಕೆ ಬಿಡುಗೆ ಮಾಡಿ ಎಸ್‌ಐಆರ್ ಅನ್ನು ಬಲವಾಗಿ ವಿರೋಧಿಸಿದೆ. ವಿವಿಧ ನ್ಯೂನತೆಗಳನ್ನು ಉಲ್ಲೇಖಿಸಿ, ಡಿಎಂಕೆ ಉದ್ದೇಶಗಳನ್ನು ಪ್ರಶ್ನಿಸಿ ಮತ್ತು ‘ವಿಳಂಬಿತ ನಡೆ’ ಎಂದು ಕರೆದು ಸಭೆಯಿಂದ ತಪ್ಪಿಸಿಕೊಂಡಿದೆ.
ಕಿರುಕುಳದಿಂದ ಮನನೊಂದು ಮುಸ್ಲಿಂ ವ್ಯಾಪಾರಿ ಆತ್ಮಹತ್ಯೆ ಆರೋಪ : ತನಿಖೆಗೆ ಆದೇಶಿಸಿದ ಅಲ್ಪಸಂಖ್ಯಾತರ ಆಯೋಗ


