ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈ ವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಕೊರೊನಾ ಲಸಿಕೆಗಳನ್ನು ನೀಡುವಂತೆ ಕೋರಲಿದ್ದಾರೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಭಾನುವಾರ ಹೇಳಿದ್ದಾರೆ.
“ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮುಂದಿನ ವಾರ ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದು, ರಾಜ್ಯಕ್ಕೆ ಹೆಚ್ಚಿನ ಲಸಿಕೆ ಪ್ರಮಾಣವನ್ನು ನೀಡುವಂತೆ ಕೋರಲಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೆಹರೂ ನಾಯಕತ್ವದಿಂದಾಗಿ ಭಾರತ ಹಿಂದೂ ರಾಷ್ಟ್ರವಾಗಿಲ್ಲ: ಯುಪಿ ಬಿಜೆಪಿ ಶಾಸಕ
“ಮುಂಬರುವ ದಿನಗಳಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ. ಕೊರೊನಾ ಸೋಂಕನ್ನು ತೊಡೆದುಹಾಕಲು ವ್ಯಾಕ್ಸಿನೇಷನ್ ಮಾತ್ರ ಪರಿಹಾರವಾಗಿದೆ. ಆದ್ದರಿಂದ ಜನರು ವ್ಯಾಕ್ಸಿನೇಷನ್ ಪಡೆಯಲು ಮುಂದೆ ಬರಬೇಕು” ಎಂದು ಅವರು ಹೇಳಿದ್ದಾರೆ.
ಆರೋಗ್ಯ ಸಚಿವ ಮಾ ಸುಬ್ರಮಣಿಯನ್, ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್, ಚೆನ್ನೈ ಕಾರ್ಪೊರೇಷನ್ ಆಯುಕ್ತ ಗಗನ್‌ದೀಪ್ ಸಿಂಗ್ ಬೇಡಿ ಜಂಟಿಯಾಗಿ ಚೆನ್ನೈ ಕೊಯಂಬೇಡಿಯಲ್ಲಿ ತರಕಾರಿ ಅಂಗಡಿ ಮಾರಾಟಗಾರರಿಗೆ ನಡೆಯುತ್ತಿರುವ ವ್ಯಾಕ್ಸಿನೇಷನ್ ಡ್ರೈವ್ ಪರಿಶೀಲಿಸಿದರು.
ಡ್ರೈವ್ ಬಗ್ಗೆ ಮಾತನಾಡಿದ ಸುಬ್ರಮಣಿಯನ್, “ಕೊಯಂಬೇಡು ಮಾರುಕಟ್ಟೆಯು ಮೊದಲ ಅಲೆಯ ಸಮಯದಲ್ಲಿ ಹಾಟ್ ಸ್ಪಾಟ್ ಆಗಿತ್ತು. ಆದ್ದರಿಂದ ಚೆನ್ನೈ ಕಾರ್ಪೊರೇಷನ್, ಸಿಎಂಡಿಎ ಮತ್ತು ಆರೋಗ್ಯ ಇಲಾಖೆ ಇಲ್ಲಿ ವ್ಯಾಕ್ಸಿನೇಷನ್ ಡ್ರೈವ್ ನಡೆಸುತ್ತಿದೆ. ಕೊಯಾಂಬೆಡುನಲ್ಲಿ 9,655 ಜನರಿಗೆ ಲಸಿಕೆ ನೀಡಲಾಗಿದೆ. 10,000 ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರ ‘ಥರ್ಡ್ ಕ್ಲಾಸ್’ ರಾಜಕಾರಣ ಮಾಡುತ್ತಿದೆ: ಶಿವಸೇನೆ


