ಗೋಹತ್ಯೆ ತಡೆ ಕಾನೂನಿನ ದುರ್ಬಳಕೆ: ಪೊಲೀಸರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಗರಂ
PC: indianexpress

ಉತ್ತರ ಪ್ರದೇಶದ ಗೋಹತ್ಯೆ ನಿಷೇಧ ಕಾನೂನಿನ ಅಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ತಪ್ಪಾಗಿ ಅರ್ಜಿದಾರರನ್ನು ಸಿಲುಕಿಸಲಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪ್ರಕರಣ ದಾಖಲಿಸಿದ್ದ ಸೀತಾಪುರ ಪೊಲೀಸರ ಕ್ರಮಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದೆ.

ನ್ಯಾಯಮೂರ್ತಿ ಅಬ್ದುಲ್ ಮೊಯಿನ್ ಅವರ ನ್ಯಾಯಪೀಠವು ಫೆಬ್ರವರಿ 25 ರಂದು ಕಾಯಿದೆಯ ಸೆಕ್ಷನ್ 3 ಮತ್ತು 8 ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಸೂರಜ್ (22) ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿತು. ಇಬ್ರಾಹಿಂ, ಅನೀಶ್ ಮತ್ತು ಶಹ್‌ಜಾದ್‌ ಪ್ರಕರಣದ ಇನ್ನಿತರ ಆರೋಪಿಗಳಾಗಿದ್ದಾರೆ.

ಮೂರು ಹಸುಗಳನ್ನು ಕೊಂದ ಬಗ್ಗೆ ಆರೋಪಿಗಳ ನಡುವೆ ನಡೆದ ಸಂಭಾಷಣೆಯನ್ನು ಪೊಲೀಸ್ ತಂಡ ಕೇಳಿದೆ ಎಂದು ಆರೋಪಿಸಿ ಪೊಲೀಸರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್ ಪ್ರಕಾರ, ಮಾಹಿತಿದಾರರ ಆಧಾರದ ಮೇಲೆ, ಪೊಲೀಸರು ಈ ಆರೋಪಿತರನ್ನು ಹಿಂಬಾಲಿಸಿದೆ. ಇವರು ಮೂರು ಹಸುಗಳನ್ನು ಕೊಂದಿದ್ದಾರೆ ಅದಕ್ಕಾಗಿ ದೊಡ್ಡ ಮೊತ್ತವನ್ನು ಪಡೆದಿದ್ದಾರೆ ಎಂದು ಪೊದೆಗಳಲ್ಲಿ ಪರಸ್ಪರ ಮಾತನಾಡುವುದನ್ನು ಕೇಳಿಸಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಬಳಿ ಇರುವ ಇನ್ನು  2 ಎತ್ತುಗಳನ್ನು ವಧಿಸಲು ಯೋಜಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಸುಪ್ರೀಂ ಚಾಟಿಗೂ ಮೊದಲೇ ಮೋದಿ ಉಚಿತ ಲಸಿಕೆ ನೀತಿ ಸಿದ್ಧ ಮಾಡಿದ್ದರೆ?: ಮೋದಿ ಸರ್ಕಾರದ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಪತ್ರಕರ್ತರು

ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಎರಡು ಎತ್ತುಗಳು, ಒಂದು ಕಟ್ಟು ಹಗ್ಗ, ಒಂದು ಸುತ್ತಿಗೆ, ಒಂದು ಉಗುರು ಮತ್ತು ತಲಾ 5 ಕೆಜಿ ತೂಕದ 12 ಖಾಲಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಹಿರಿಯ ಸಬ್ ಇನ್ಸ್‌ಪೆಕ್ಟರ್ ದೀಪಕ್ ಕುಮಾರ್ ಪಾಂಡೆ ಸಲ್ಲಿಸಿದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಎಫ್‌ಐಆರ್ ಪ್ರಕಾರ ಆರೋಪಿಗಳ ಬಳಿ ವಶಪಡಿಸಿಕೊಂಡ ಎತ್ತುಗಳನ್ನು ಹತ್ಯೆ ಮಾಡಿಲ್ಲ. ಅವು ಅಂಗವಿಕಲರಾಗಿಲ್ಲ ಅಥವಾ ಯಾವುದೇ ರೀತಿಯ ದೈಹಿಕ ಗಾಯಗಳಿಗೆ ಒಳಗಾಗಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದು ಅಲಹಾಬಾದ್ ನ್ಯಾಯಾಲಯ ಹೇಳಿದೆ.

“ಕೇವಲ ಆಪಾದಿತರ ಸಂಭಾಷಣೆಯ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ, ಆರೋಪಿಗಳಿಂದ ವಶ ಪಡೆದ ಎರಡು ಎತ್ತುಗಳನ್ನು ಆರೋಗ್ಯವಾಗಿವೆ. ಇದು ಗೋಹತ್ಯೆ ನಿಷೇಧ ಕಾಯಿದೆಯ ಸೆಕ್ಷನ್ 3 ಮತ್ತು 8 ರ ಅಡಿಯಲ್ಲಿ ಬರುವುದಿಲ್ಲ ಎಂಬುದನ್ನು ಸೂಚಿಸುತ್ತದೆ” ಎಂದು ನ್ಯಾಯಲಯ ಹೇಳಿದೆ.

ಆರೋಪಿಗಳಿಗೆ ಜಾಮೀನು ನೀಡಿದ ಅಲಹಾಬಾದ್ ನ್ಯಾಯಾಲಯ, ಪ್ರಕರಣದ ಕುರಿತು ಅಫಿಡವಿಟ್ ಸಲ್ಲಿಸಲು ಸೀತಾಪುರ ಎಸ್‌ಪಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಜೂನ್ 16 ರಂದು ವಿಚಾರಣೆಯನ್ನು ಮುಂದೂಡಿದೆ.


ಇದನ್ನೂ ಓದಿ: ಕೇರಳದ ಆರ್ಥಿಕತೆ ಮೇಲೆತ್ತಲು 77,350 ಉದ್ಯೋಗ ಸೃಷ್ಟಿಗೆ ಮುಂದಾದ ಪಿಣರಾಯಿ ಸರ್ಕಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here