“ಬಾಲಕಿ ತೋರಿದ ವರ್ತನೆಯೇ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗಿದೆ” ಎಂದು ಮೂರೂವರೆ ವರ್ಷದ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಮೈಲಾಡುತುರೈ ಜಿಲ್ಲಾಧಿಕಾರಿ ಎ.ಪಿ ಮಹಾಭಾರತಿ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ.
ಫೆಬ್ರವರಿ 28, ಶುಕ್ರವಾರ ನಡೆದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯ ಜಾಗೃತಿ ಸಭೆಯಲ್ಲಿ ಮಾತನಾಡಿದ ಮಹಾಭಾರತಿ, “ನನಗೆ ಬಂದ ವರದಿಯ ಪ್ರಕಾರ, ಮಗು (ಸಂತ್ರಸ್ತೆ) ಆರೋಪಿಯ ಮುಖದ ಮೇಲೆ ಉಗುಳಿದೆ. ಅದು ಆಕೆಯ ಮೇಲೆ ದೌರ್ಜನ್ಯ ನಡೆಸಲು ಪ್ರಚೋದಿಸಿರಬಹುದು. ಆದ್ದರಿಂದ, ನಾವು ಯಾವುದೇ ಪ್ರಕರಣವನ್ನು ಎರಡೂ ಕಡೆಯಿಂದ ನೋಡಬೇಕು. ‘ತಡೆಗಟ್ಟುವಿಕೆ’ ಎಲ್ಲಕ್ಕಿಂತ ಉತ್ತಮವಾದದು. ನಾವು ಮಕ್ಕಳ ಪೋಷಕರನ್ನು ಸಂವೇದನಾಶೀಲಗೊಳಿಸಬೇಕಾಗಿದೆ” ಎಂದು ಹೇಳಿದ್ದರು.
ಫೆಬ್ರವರಿ 24ರಂದು ಮೈಲಾಡುತುರೈನ ಸಿರ್ಕಾಝಿಯಲ್ಲಿರುವ ಅಂಗನವಾಡಿಯ ಹೊರಗೆ ಮೂರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ 17 ವರ್ಷದ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಬಾಲಕಿಯ ತಲೆಗೆ ಗಂಭೀರ ಗಾಯಗಳಾಗಿದ್ದು, ಪುದುಚೇರಿಯ ಜಿಪ್ಮರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಜಿಲ್ಲಾಧಿಕಾರಿ ಮಹಾಭಾರತಿ ಸಂತ್ರಸ್ತೆಯ ಕುರಿತು ನೀಡಿರುವ ಹೇಳಿಕೆ ಭಾರೀ ಟೀಕೆಗೆ ಗುರಿಯಾದ ಬಳಿಕ, ರಾಜ್ಯಪಾಲರ ಕಚೇರಿ ಶುಕ್ರವಾರ (ಫೆ.28) ಈರೋಡ್ ಜಿಲ್ಲಾಧಿಕಾರಿ ಹೆಚ್.ಎಸ್. ಶ್ರೀಕಾಂತ್ ಅವರನ್ನು ಮಹಾಭಾರತಿಯಯ ಜಾಗಕ್ಕೆ, ಅಂದರೆ ಮೈಲಾಡುತುರೈ ಜಿಲ್ಲಾಧಿಕಾರಿ ಆಗಿ ನೇಮಿಸಿ ಆದೇಶಿಸಿದೆ.
In today’s shit news.
Mayiladuthurai’s Collector blames 3.5 year old baby who got sexually abused at an Anganwadi in Seerkazhi. According to this post below he is is reported to have said ‘The baby is also at fault. Because she spat (??!) at the rapist in the morning, he… pic.twitter.com/u3E1ViWefi
— Chinmayi Sripaada (@Chinmayi) February 28, 2025
ಈ ನಡುವೆ ಸಿಪಿಐ(ಎಂ) ಮಾರ್ಚ್ 1 ರ ಶನಿವಾರ ಮೈಲಾಡುತುರೈ ಕಲೆಕ್ಟರೇಟ್ ಹೊರಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
“ಮೈಲಾಡುತುರೈ ಜಿಲ್ಲಾಧಿಕಾರಿ ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ಮಗು ಕೂಡ ತಪ್ಪಿತಸ್ಥೆ ಎಂದು ಹೇಳಿದ್ದಾರೆ. ತಮಿಳುನಾಡು ಬಿಜೆಪಿ ಪರವಾಗಿ ನಾವು ಇದನ್ನು ಖಂಡಿಸುತ್ತಿದ್ದೇವೆ. ತಮಿಳುನಾಡಿನಾದ್ಯಂತ ಮಹಿಳೆಯರು ಮತ್ತು ಶಾಲಾ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು, ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳು ಸಂತ್ರಸ್ತರನ್ನೇ ದೂಷಿಸುವುದು, ಅವರ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸುತ್ತಿರುವು ಮುಂದುವರೆಸುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಮೂರ್ಖತನದ ಭಾಷಣ ಮಾಡಿದ್ದಾರೆ” ಎಂದು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
சீர்காழியில், மூன்றரை வயது குழந்தை பாலியல் வன்முறைக்கு உள்ளாக்கப்பட்ட சம்பவம் குறித்து மயிலாடுதுறை ஆட்சியர், அந்தக் குழந்தையின் மீதும் தவறு இருக்கிறது என்று முற்றிலும் பொறுப்பற்ற முறையில் கூறியிருக்கிறார். அவருக்கு, @BJP4Tamilnadu சார்பில் வன்மையான கண்டனத்தைத் தெரிவித்துக்… pic.twitter.com/OxoZTiEyC4
— K.Annamalai (@annamalai_k) February 28, 2025
ಇನ್ನು, ಬಾಲಕಿಯ ಮೇಲಿನ ಲೈಂಗಿನ ದೌರ್ಜನ್ಯದ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ, ನಂತರ ತಂಜಾವೂರಿನ ಅಪ್ರಾಪ್ತ ವಯಸ್ಕರ ವೀಕ್ಷಣಾ ಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಯುಎಸ್‌ಏಡ್ ವಿದೇಶಿ ನೆರವು ಸ್ಥಗಿತಗೊಳಿಸಿದ ಟ್ರಂಪ್ : ಬಾಗಿಲು ಮುಚ್ಚಿದ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಕ್ಲಿನಿಕ್


