ಪ್ರಬಲ ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಪರಿಶಿಷ್ಟ ಜಾತಿ ಯುವಕನ ಮೇಲೆ ಹಲ್ಲೆ ನಡೆಸಿದ ಮೂವರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ತಮಿಳುನಾಡಿನ ದಿಂಡಿಗಲ್‌ನ ನೀಲಕೊಟ್ಟೈನಲ್ಲಿ ಶನಿವಾರ ನಡೆದಿದೆ.
ನೀಲಕೊಟ್ಟೈನ ಕಂದಪ್ಪಕೊಡೈನ ಕುಲ್ಲಾ ಕುಂಡುವಿನ ಎಸ್. ಶಾಂತನಕೃಷ್ಣನ್ (27) ಕಳೆದ ಎಂಟು ತಿಂಗಳಿನಿಂದ ಸ್ಥಳೀಯ 24 ವರ್ಷದ ಯುವತಿಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಶಾಂತನಕೃಷ್ಣನ್ ಎಸ್‌ಸಿ ಸಮುದಾಯದವರಾಗಿದ್ದರೆ, ಆ ಮಹಿಳೆ ಎಂಬಿಸಿ ಸಮುದಾಯದವರು. ಮಹಿಳೆಯ ಪೋಷಕರ ವಿರೋಧದ ಹೊರತಾಗಿಯೂ ಅವರು ಸಂಬಂಧವನ್ನು ಮುಂದುವರೆಸಿದರು.
ಇದರಿಂದ ಕೋಪಗೊಂಡ ಆಕೆಯ ಸಹೋದರ ಎ. ಮಾಧವನ್, ಶಾಂತನಕೃಷ್ಣನ್ ಮೇಲೆ ದಾಳಿ ಮಾಡಲು ನಿರ್ಧರಿಸಿದರು.
ಮಾಧವನ್ ಮತ್ತು ಆತನ ಸ್ನೇಹಿತರು ಸಿಲುಕ್ಕುವರ್ಪಟ್ಟಿಯಲ್ಲಿರುವ ನೂಲುವ ಗಿರಣಿ ಬಳಿ ಆತನನ್ನು ತಡೆದು ಜಾತಿ ನಿಂದನೆ ಮಾಡಿ ಹೆಲ್ಮೆಟ್‌ನಿಂದ ಹೊಡೆದರು. ಅವರು ಸಂತನಕೃಷ್ಣನ್ ಅವರನ್ನು ಪೊದೆಗಳಿಗೆ ಎಳೆದುಕೊಂಡು ಹೋಗಿ, ಹೊಡೆದ ಬಳಿಕ ಕೊಲ್ಲುವುದಾಗಿ ಬೆದರಿಕೆ ಹಾಕಿದರು.
ಫೆಬ್ರವರಿ 15 ರಂದು ಶಾಂತನಕೃಷ್ಣನ್ ಅವರನ್ನು ನೀಲಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು; ಫೆಬ್ರವರಿ 16 ರಂದು ನೀಲಕೊಟ್ಟೈ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಾಧವನ್ ಮತ್ತು ಅವರ ಸ್ನೇಹಿತ ಇ. ವಿಷ್ಣು ಪರಾರಿಯಾಗಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ಇತರ ಮೂವರಾದ ಬಿ. ಸುಕುಮಾರನ್, ಎಸ್. ಈಶ್ವರನ್ ಮತ್ತು ಎಸ್. ಕಾರ್ತಿಕ್ ಅವರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ.
ಇದನ್ನೂ ಒದಿ; ಕ್ಷುಲ್ಲಕ ವಿಚಾರಕ್ಕೆ ಮುಖದ ಮೇಲೆ ಕೆಸರು ಎರಚಿ ದೌರ್ಜನ್ಯ; ದಲಿತ ಸಹೋದರಿಯರ ವಿವಾಹ ರದ್ದು


