ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬರಿ ಕೈಗಳಿಂದ ಮಲ ಸ್ವಚ್ಛಗೊಳಿಸಲು ಒತ್ತಾಯಿಸಿದ್ದಾರೆ ಎಂದು ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ನಾಲ್ವರು ದಲಿತ ನೈರ್ಮಲ್ಯ ಕಾರ್ಮಿಕರು ಆರೋಪಿಸಿದ್ದಾರೆ. ಇದರ ನಂತರ, ತಮಿಳುನಾಡು ಸರ್ಕಾರವು ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿದೆ.
ಮೇಲ್ಪತಿ ಪಂಚಾಯತ್ ಅಧ್ಯಕ್ಷರು ಸೇರಿದಂತೆ ಕೆಲವು ಪ್ರಬಲ ಜಾತಿ ನಿವಾಸಿಗಳು ತಮ್ಮನ್ನು ಮತ್ತು ನಮ್ಮ ಮೂವರು ಸಹೋದ್ಯೋಗಿಗಳನ್ನು ಪದೇಪದೆ ಜಾತಿ ನಿಂದಿನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ನಮ್ಮನ್ನು ಅವಮಾನಿಸಿ ಬೆದರಿಸಲಾಗಿದೆ. ನಾವು ಇಲ್ಲಿಗೆ ಸೇರಿದವರಲ್ಲ ಎಂದು ಭಾವಿಸುವಂತೆ ಕೀಳು ಕೆಲಸಗಳನ್ನು ಮಾಡಲು ಒತ್ತಾಯಿಸಲಾಗಿದೆ” ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಕಾರ್ಮಿಕರು ಮಾಡಿದ ದೂರುಗಳನ್ನು ಹಿಂಪಡೆಯಲು ನಂತರ ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ ಎಂದು ಕಾರ್ಮಿಕರು ಹೇಳಿದರು.
ಈ ವರ್ಷದ ಮೇ ತಿಂಗಳಲ್ಲಿ ದೂರು ದಾಖಲಾಗಿತ್ತು. ಕಾರ್ಮಿಕರು ಹೇಳಿದಂತೆ, ಪ್ರಕರಣವನ್ನು ಕೈಬಿಟ್ಟಿದ್ದಾರೆ ಎಂದು ತೋರಿಸಲು ಅಧಿಕಾರಿಗಳು ನಕಲಿ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು. ಪೊಲೀಸರು ಕಾರ್ಮಿಕರಲ್ಲಿ ಒಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಲ್ಲಿ ಒಬ್ಬನಾದ ಮಣಿವ್‌ಗೆ ಬೆಂಬಲ ಮತ್ತು ಸಹಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವಿವಾದದ ಬಳಿಕ ಸ್ವಚ್ಛತಾ ಕಾರ್ಮಿಕರನ್ನು ಪ್ರಬಲ ಜಾತಿ ಪ್ರದೇಶಗಳಲ್ಲಿ ಕೆಲಸ ಮಾಡುವುದರಿಂದ ತೆಗೆದುಹಾಕಲಾಗಿದೆ. ಆರೋಪಿಗಳು ಮತ್ತು ಅವರಿಗೆ ಸಹಾಯ ಮಾಡಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಕೊಲಿಯನೂರ್ ಬ್ಲಾಕ್ ಅಭಿವೃದ್ಧಿ ಅಧಿಕಾರಿಯ ಸಮ್ಮುಖದಲ್ಲಿ ದೂರು ಹಿಂತೆಗೆದುಕೊಂಡಾಗಿನಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಲ್ಲುಪುರಂ ಎಸ್‌ಪಿ ಸರ್ವಣನ್ ಹೇಳಿದ್ದಾರೆ.
ಜಾತಿ ತಾರತಮ್ಯ ಆರೋಪ: ಬೆಂಗಳೂರು ವಿಶ್ವವಿದ್ಯಾಲಯದ 10 ದಲಿತ ಪ್ರಾಧ್ಯಾಪಕರಿಂದ ರಾಜೀನಾಮೆ


