Homeಮುಖಪುಟತಮಿಳುನಾಡು ಲಾಕಪ್ ಡೆತ್: ಭಾರತದ ಜಾರ್ಜ್ ಫ್ಲಾಯ್ಡ್ ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ವಿಗರು.

ತಮಿಳುನಾಡು ಲಾಕಪ್ ಡೆತ್: ಭಾರತದ ಜಾರ್ಜ್ ಫ್ಲಾಯ್ಡ್ ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ವಿಗರು.

ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ?. ಇದು ನಮ್ಮ “ವಿಕಾಸ” -  ಸಹಾನುಭೂತಿ, ಕಾಳಜಿ ಮತ್ತು ಕೊಲ್ಲಲ್ಪಟ್ಟ ಸಹ ಭಾರತೀಯರೊಂದಿಗೆ ನಿಲ್ಲುವ ಇಚ್ಛಾಶಕ್ತಿಯ ಸಂಪೂರ್ಣ ನಷ್ಟ ಹೊಂದಿದೆ ಎಂದು ಊನಾ ಚಳುವಳಿಯ ನಾಯಕ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕಿಡಿ ಕಾರಿದ್ದಾರೆ.

- Advertisement -
- Advertisement -

ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ತಂದೆ ಮಗನ ಲಾಕಪ್ ಡೆತ್ ಘಟನೆಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯೂ ಭಾರತದ ಜಾರ್ಜ್ ಫ್ಲಾಯ್ಡ್ ಪ್ರಕರಣ ಎಂದು ಹೇಳಿ #GeorgeFloydofIndia ಹಾಗೂ #JusticeForJeyarajAndFenix ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ತಿಂಗಳು ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕರಿಯ ಜನಾಂಗದ ವ್ಯಕ್ತಿಯನ್ನು ಪೊಲೀಸರು ನಡುರಸ್ತೆಯಲ್ಲಿ ಕೊಂದಿರುವುದರ ವಿರುದ್ದ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆದವು. ಅಮೆರಿಕಾದಲ್ಲಂತೂ ವೈಟ್ ಹೌಸ್ ಮುಂದೆ ಭಾರಿ ಪ್ರತಿಭಟನೆ ನಡೆದು ಅಧ್ಯಕ್ಷ ಬಂಕರ್ ನಲ್ಲಿ ಅಡಗಿ ಕುಳಿತ ಘಟನೆ ಕೂಡಾ ನಡೆದಿತ್ತು.

ತೂತುಕುಡಿಯ ಸಾಥನಂಕುಳಂ ಠಾಣೆಯ ಪೊಲೀಸರು ಜಯರಾಜ್ ಹಾಗೂ ಅವರ ಮಗ ಫೆನಿಕ್ಸ್ ಎಂಬವರು ಮೊಬೈಲ್ ಅಂಗಡಿಯನ್ನು ಸಮಯಮೀರಿ ತೆರೆದಿದ್ದಾರೆ ಜೊತೆಗೆ ತಮ್ಮ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂಬ ಆರೋಪದಲ್ಲಿ ಅವರಿಬ್ಬರನ್ನು ಬಂಧಿಸಿ ಮೂರು ದಿನಗಳ ನಂತರ ಪೊಲೀಸ್ ಠಾಣೆಗಿಂತ 100 ಕಿ.ಮೀ. ದೂರದ ಕೋವಿಲ್ಪಟ್ಟಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದ್ದರು.

ಆದರೆ ಜಯರಾಜ್ ಪತ್ನಿ ಸೆಲ್ವಮಣಿ ಪೊಲೀಸರ ದೌರ್ಜನ್ಯದಿಂದ ತನ್ನ ಪತಿ ಹಾಗೂ ಮಗ ಸಾವಿಗೀಡಾಗಿದ್ದಾರೆ ಎಂದು ದೂರು ನೀಡಿದ್ದು, ಈ ಸಾವಿನ ಬಗ್ಗೆ ತಮಿಳುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮದ್ರಾಸ್ ಹೈಕೋರ್ಟಿನ ಮಧುರೈ ನ್ಯಾಯಪೀಠ ಬುಧವಾರ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅಂಬೇಡ್ಕರ್ ವಾದಿ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇಮಾನಿ, “ಆತ್ಮೀಯ ಬಾಲಿವುಡ್ ಸೆಲೆಬ್ರಿಟಿಗಳೇ, ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ಕೇಳಿದ್ದೀರಾ ಅಥವಾ ನಿಮ್ಮ ಇನ್ಸ್ಟಾಗ್ರಾಮ್ ಕ್ರಿಯಾಶೀಲತೆ ಇತರ ದೇಶಗಳಿಗೆ ಮಾತ್ರ ಸೀಮಿತವಾಗಿದೆಯೇ ? ಭಾರತದ ಜಾರ್ಜ್ ಫ್ಲಾಯ್ಡ್ ಗಳು ತುಂಬಾ ಹೆಚ್ಚಿದ್ದಾರೆ. ಇಂತಹ ಪೊಲೀಸ್ ಹಿಂಸೆ ಹಾಗೂ ಲೈಂಗಿಕ ಕಿರುಕುಳದ ಕಥೆ ಹೃದಯ ವಿದ್ರಾವಕವಾಗಿದೆ.” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಲಕ್ಷಗಳನ್ನು ಬಿಡಿ ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ಅಮೆರಿಕದಂತೆಯೇ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆಯೇ ? ಅಮೆರಿಕಾದ ಸಂಸದರು ಮಾಡಿದಂತೆ ನಮ್ಮ ಸರ್ಕಾರ ಹೆಚ್ಚು ಮಾನವೀಯ ಕಾನೂನುಗಳನ್ನು ಮಾಡುತ್ತಾರೆಯೇ ? ಇದು ನಮ್ಮ ‘ವಿಕಾಸ’ –  ಸಹಾನುಭೂತಿ, ಕಾಳಜಿ ಮತ್ತು ಕೊಲ್ಲಲ್ಪಟ್ಟ ಸಹ ಭಾರತೀಯರೊಂದಿಗೆ ನಿಲ್ಲುವ ಇಚ್ಛಾಶಕ್ತಿಯ ಸಂಪೂರ್ಣ ನಷ್ಟ ಹೊಂದಿದೆ” ಎಂದು ಅವರು ಟ್ವಿಟ್ಟರ್ ನಲ್ಲಿ ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ “ಪೊಲೀಸರ ಈ ಕ್ರೌರ್ಯವೂ ಭೀಕರ ಅಪರಾಧವಾಗಿದೆ. ನಮ್ಮ ರಕ್ಷಕರು ದಬ್ಬಾಳಿಕೆಗಾರರಾಗಿ ಬದಲಾದಾ ದುರಂತವಾಗಿದೆ. ಸಂತ್ರಸ್ತರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ” ಎಂದು ಹೇಳಿದ್ದಾರೆ.

ರೇಡಿಯೊ ಜಾಕಿ ಸುಚಿತ್ರ ಟ್ವೀಟ್ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಿದ್ದಾರ್ಥ್ ಕೆಂಗಡರನ್ ಟ್ವೀಟ್ ಮಾಡಿ “ನಾವು ಈ ವ್ಯವಸ್ಥೆಗಳನ್ನು ನಂಬಲು ಪ್ರಾರಂಭಿಸುವ ದಿನವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಪೊಲೀಸರು ದೌರ್ಜನ್ಯ  ಎಸಗುವ ಚಿತ್ರಗಳನ್ನು ಹಾಕಿದ್ದಾರೆ.

ಆಟೊನಿ ಎಂಬವರು ಟ್ವೀಟ್ ಮಾಡಿ “ಭಾರತದ ಜಾರ್ಜ್ ಪ್ಲಾಯ್ಡ್ ಗಳಿಗೆ ನ್ಯಾಯ ಬೇಕು” ಎಂದು ಹೇಳಿದ್ದಾರೆ. ಅಮೆರಿಕಾದ ಪೊಲೀಸರ ವಶದಲ್ಲಿ ಜಾರ್ಜ್ ಫ್ಯಾಯ್ಡ್ ಸಾವಿಗೀಡಾದಂತೆ, ಭಾರತದ ತಂದೆ ಹಾಗೂ ಮಗ ಕೂಡಾ ಸತ್ತಿದ್ದಾರೆ ಎಂದು ಅವರು ಚಿತ್ರದಲ್ಲಿ ಬರೆದಿದ್ದಾರೆ.


ಓದಿ: ತಮಿಳುನಾಡು ಲಾಕಪ್ ಡೆತ್: ಪೊಲೀಸ್ ಹಾಗೂ ಮ್ಯಾಜಿಸ್ಟ್ರೇಟ್ ವಿರುದ್ದ ಹಲವಾರು ಆರೋಪ


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...