Homeಮುಖಪುಟಆಂಧ್ರಪ್ರದೇಶ: ಜೆಸಿಬಿ ಮೂಲಕ ಸಾಗಿಸಿದ ಕೊರೊನಾ ರೋಗಿಯ ಮೃತದೇಹ

ಆಂಧ್ರಪ್ರದೇಶ: ಜೆಸಿಬಿ ಮೂಲಕ ಸಾಗಿಸಿದ ಕೊರೊನಾ ರೋಗಿಯ ಮೃತದೇಹ

- Advertisement -
- Advertisement -

ಕೊರೊನಾ ವೈರಸ್ ನಿಂದಾಗಿ ಸಾವಿಗೀಡಾದ 72 ವರ್ಷದ ರೋಗಿಯ ಮೃತದೇಹವನ್ನು, ಅವರ ಮನೆಯಿಂದ ಶ್ಮಶಾನಕ್ಕೆ ಜೆಸಿಬಿ ಮೂಲಕ ಸಾಗಿಸಿದ ಅಮಾನವೀಯ ಹಾಗೂ ಅಘಾತಗಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಾಲಾಸ ನಗರದಲ್ಲಿ ಘಟನೆ ನಡೆದಿದ್ದು, ಮನೆ-ಮನೆ ಆರೋಗ್ಯ ಸಮೀಕ್ಷೆಯ ಸಂದರ್ಭದಲ್ಲಿ ಇವರಿಗೆ ಕೊರೊನಾ ಇರುವುದು ದೃಡಪಟ್ಟಿದ್ದು ಮನೆಯಲ್ಲೇ ನಿಧನರಾಗಿದ್ದರು.

ಮೃತದೇಹವನ್ನು ಜೆಸಿಬಿ ಮೂಲಕ ಸ್ಥಳಾಂತರಿಸುವ ವಿಡಿಯೊ ವೈರಲ್ ಆಗುತ್ತಿದ್ದಂತೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು ಘಟನೆಗೆ ಸಂಭಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸಿದ ಅಧಿಕಾರಿಗಳು ಶವವನ್ನು ಜೆಸಿಬಿ ಯಂತ್ರದಲ್ಲಿ ಮನೆಯಿಂದ ಶ್ಮಶಾನಕ್ಕೆ ಸಾಗಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದು ನೆಟ್ಟಿಗರು “ಮಾನವೀಯತೆ ಸತ್ತಾಗ ಹೀಗಾಗುತ್ತದೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

 

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಈ ಘಟನೆಯನ್ನು ಖಂಡಿಸಿ, ಇದು ಅಮಾನವೀಯ ಕೃತ್ಯ; ಹೊಣೆಗಾರರ ​​ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಘಟನೆಗಾಗಿ ಪಾಲಾಸ ಪುರಸಭೆ ಆಯುಕ್ತ ನಾಗೇಂದ್ರ ಕುಮಾರ್ ಮತ್ತು ನೈರ್ಮಲ್ಯ ನಿರೀಕ್ಷಕ ಎನ್ ರಾಜೀವ್ ಅವರನ್ನು ಅಮಾನತುಗೊಳಿಸುವಂತೆ ಶ್ರೀಕಾಕುಲಂ ಜಿಲ್ಲಾಧಿಕಾರಿ ಜೆ.ನಿವಾಸ್ ಆದೇಶಿಸಿದ್ದಾರೆ.

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೂಡ ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದು, “ಕೊರೊನಾ ವೈರಸ್ ಸಂತ್ರಸ್ತರ ಮೃತದೇಹಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಜೆಸಿಬಿ ಮತ್ತು ಟ್ರಾಕ್ಟರುಗಳಲ್ಲಿ ಸಾಗಿಸುವುದನ್ನು ನೋಡಿ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ. ಅವರು ಸಾವಿನಲ್ಲೂ ಗೌರವ ಮತ್ತು ಘನತೆಗೆ ಅರ್ಹರು. ಈ ಅಮಾನವೀಯ ನಡವಳಿಕೆಗಾಗಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರಕ್ಕೆ ನಾಚಿಕೆಯಾಗಬೇಕು” ಎಂದು ಕಿಡಿ ಕಾರಿದ್ದಾರೆ.

ಜೂನ್ 24 ರಂದು ಮತ್ತೊಂದು ಘಟನೆ ಕೂಡಾ ಇದೇ ಜಿಲ್ಲೆಯಲ್ಲಿ ನಡೆದಿದ್ದು, ಕೊರೊನಾದಿಂದ ಮೃತಪಟ್ಟ ಮಹಿಳೆಯನ್ನು ಟ್ರ್ಯಾಕ್ಟರ್‌ನಲ್ಲಿ ಸ್ಮಶಾನಕ್ಕೆ ಕರೆದೊಯ್ಯಲಾಗಿದತ್ತು.


ಓದಿ: ತಮಿಳುನಾಡು ಲಾಕಪ್ ಡೆತ್: ಭಾರತದ ಜಾರ್ಜ್ ಫ್ಲಾಯ್ಡ್ ಎಂದು ಆಕ್ರೋಶ ವ್ಯಕ್ತಪಡಿಸಿದ ನೆಟ್ವಿಗರು.


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...