Homeಮುಖಪುಟಗರ್ಭಾಶಯವಿಲ್ಲದ ಯಾವ ಸಲಿಂಗ ಕಾಮಿಗೆ ಋತುಚಕ್ರವಿದೆ ಹೇಳಿ? ಸ್ಮೃತಿ ಇರಾನಿ ಹೇಳಿಕೆಗೆ ಪ್ರತಿಪಕ್ಷಗಳ ಟೀಕೆ

ಗರ್ಭಾಶಯವಿಲ್ಲದ ಯಾವ ಸಲಿಂಗ ಕಾಮಿಗೆ ಋತುಚಕ್ರವಿದೆ ಹೇಳಿ? ಸ್ಮೃತಿ ಇರಾನಿ ಹೇಳಿಕೆಗೆ ಪ್ರತಿಪಕ್ಷಗಳ ಟೀಕೆ

- Advertisement -
- Advertisement -

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಂಸತ್ತಿನಲ್ಲಿ ಮಹಿಳೆಯರಿಗೆ  ಮುಟ್ಟಿನ ರಜೆಗೆ ಪಾವತಿ ಪರಿಕಲ್ಪನೆಯನ್ನು ವಿರೋಧಿಸಿದ ನಂತರ ಪ್ರತಿಪಕ್ಷ I.N.D.I.A ಬಣದಿಂದ ಟೀಕೆಗೆ ಗುರಿಯಾಗಿದ್ದಾರೆ.

ಆರ್‌ಜೆಡಿ ಸಂಸದ ಮನೋಜ್ ಝಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವೆ, ಸ್ಮೃತಿ ಇರಾನಿ, ಗರ್ಭಾಶಯವಿಲ್ಲದ ಯಾವ ಸಲಿಂಗ ಕಾಮಿಗೆ ಋತುಚಕ್ರವಿದೆ ಹೇಳಿ ಎಂದು ಪ್ರಶ್ನಿಸಿದ್ದರು. ಕೇಂದ್ರ ಸಚಿವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸ್ಮೃತಿ ಹೇಳಿಕೆಯನ್ನು ವಿರೋಧಿಸಿದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ಮತ್ತು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇರಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾವು ಎಲ್‌ಜಿಬಿಟಿಕ್ಯೂಐಎ ಪ್ಲಸ್ ಸಮುದಾಯದ ಬಗ್ಗೆ ಅರಿವಿಲ್ಲದ ಸಚಿವರನ್ನು ಹೊಂದಿದ್ದೇವೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರಲ್ಲಿ ಅನೇಕರು ಋತುಮತಿಯಾಗುತ್ತಾರೆ. ಅನೇಕರ ಜೀವಂತ ಅನುಭವವಾಗಿರುವ ಈ ಸಮಸ್ಯೆಯ ಬಗ್ಗೆ ಅವರ ಅಹಂಕಾರದ ಪ್ರತಿಕ್ರಿಯೆಯು ಆಘಾತಕಾರಿ ಮತ್ತು ಸಂವೇದನಾಶೀಲವಲ್ಲ ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಪ್ರಿಯಾಂಕಾ ಚತುರ್ವೇದಿ ಅವರು ಹೇಳಿದ್ದಾರೆ. ಈ ವೇಳೆ ಅವರು ಸ್ಮೃತಿ ಇರಾನಿ ಅವರ ಸಂದರ್ಶನದ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರಿಯಾ ಶ್ರೀನೇಟ್, ಈ ವಿಚಾರದಲ್ಲಿ ಸ್ಮೃತಿ ಇರಾನಿ ಅವರ ನಿರಾಸಕ್ತಿ, ದುರಹಂಕಾರ ಮತ್ತು ಅಜ್ಞಾನವು ಭಯಾನಕವಾಗಿದೆ. ಎಲ್‌ಜಿಬಿಟಿಕ್ಯೂಐಎ+ ಕೇವಲ ಸಲಿಂಗಕಾಮಿ ಪುರುಷರಲ್ಲ, ಸಮುದಾಯವು ಪುರುಷರು ಮತ್ತು ಹಲವಾರು ಮುಟ್ಟಿನ ಮಹಿಳೆಯರನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಇದರಲ್ಲಿ ಲೆಸ್ಬಿಯನ್, ಗೇ, ಬೈ ಸೆಕ್ಸುವಲ್, ಟ್ರಾನ್ಸ್‌ಜಂಡರ್‌, ಕ್ವೀರ್‌, ಇಂಟರ್‌ಸೆಕ್ಸ್‌ ಮತ್ತು ಇತರರು ಸೇರಿದ್ದಾರೆ ಎಂದು ಪೋಸ್ಟ್‌ನಲ್ಲಿ ಪಟ್ಟಿಯನ್ನು ಉಲ್ಲೇಖಿಸಿದ್ದಾರೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮುಟ್ಟು ಮತ್ತು ಋತುಚಕ್ರವು ಅಂಗವೈಕಲ್ಯವಲ್ಲ; ಇದು ಮಹಿಳೆಯರ ಜೀವನ ಪಯಣದಲ್ಲಿ ಸಹಜ,  ಪ್ರತಿ ತಿಂಗಳು ವೇತನ ಸಹಿತ ರಜೆ ನೀಡುವುದರ ಮೂಲಕ ಉದ್ಯೋಗದಾತರಿಗೆ ಆಕೆಯ ಮುಟ್ಟಿನ ಕುರಿತು ಯಾಕೆ ತಿಳಿದಿರಬೇಕು? ಸರ್ಕಾರವು ಮಹಿಳಾ ಉದ್ಯೋಗಿಗಳಿಗೆ ಅವರ ಮುಟ್ಟಿನ ಸಮಯದಲ್ಲಿ ಕಡ್ಡಾಯ ವೇತನ ಸಹಿತ ರಜೆ ನೀತಿಯನ್ನು ಅಳವಡಿಸಿಕೊಂಡರೆ ಇದೆಲ್ಲಾ ಉಂಟಾಗುತ್ತದೆ ಎಂದು ಹೇಳಿದ್ದರು.

ಮುಟ್ಟು ಅಂಗವೈಕಲ್ಯವಲ್ಲ ಮತ್ತು ಕಡ್ಡಾಯವಾಗಿ ವೇತನ ಸಹಿತ ರಜೆಗಾಗಿ ಸರ್ಕಾರವು ಯಾವುದೇ ನೀತಿಯನ್ನು ತರುತ್ತಿಲ್ಲ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ ನಂತರ ವಿವಾದ ಸ್ವರೂಪ ಪಡೆದುಕೊಂಡಿತ್ತು.  ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶದಲ್ಲಿ ಅವರು ಮನೋಜ್ ಝಾ ಅವರ ಪ್ರಶ್ನೆಗೆ ಉತ್ತರಿಸಿ ಸ್ಮೃತಿ ಇರಾನಿ, ಗರ್ಭಾಶಯವಿಲ್ಲದ ಯಾವ ಸಲಿಂಗ ಕಾಮಿಗೆ ಋತುಚಕ್ರವಿದೆ ಹೇಳಿ ಎಂದು ಪ್ರಶ್ನಿಸಿದ್ದರು.

ಇದನ್ನು ಓದಿ: ರಾಜಸ್ಥಾನ: ಪ್ರಯಾಣಿಕರ ಮೇಲೆ ಗುಂಪು ಹಲ್ಲೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...