Homeಮುಖಪುಟಗಾಝಾ ಮೇಲಿನ ಯುದ್ಧ ನಿಲ್ಲಿಸದಿದ್ದರೆ ಮೆಡಿಟರೇನಿಯನ್ ಸಮುದ್ರ ಮಾರ್ಗಗಳನ್ನು ಬಂದ್‌ ಮಾಡುತ್ತೇವೆ: ಇರಾನ್ ಎಚ್ಚರಿಕೆ

ಗಾಝಾ ಮೇಲಿನ ಯುದ್ಧ ನಿಲ್ಲಿಸದಿದ್ದರೆ ಮೆಡಿಟರೇನಿಯನ್ ಸಮುದ್ರ ಮಾರ್ಗಗಳನ್ನು ಬಂದ್‌ ಮಾಡುತ್ತೇವೆ: ಇರಾನ್ ಎಚ್ಚರಿಕೆ

- Advertisement -
- Advertisement -

ಇಸ್ರೇಲ್‌ ಮತ್ತು ಅದರ ಮಿತ್ರರಾಷ್ಟ್ರ ಅಮೆರಿಕ ಗಾಝಾದಲ್ಲಿ ಯುದ್ಧ ಅಪರಾಧಗಳನ್ನು ಮಾಡುವುದನ್ನು ಮುಂದುವರೆಸಿದರೆ ಮೆಡಿಟರೇನಿಯನ್ ಸಮುದ್ರವನ್ನು ಮುಚ್ಚಲಾಗುವುದು ಎಂದು ಇರಾನ್‌ನ ಕಮಾಂಡರ್ ಹೇಳಿದ್ದು, ಅದು ಹೇಗೆ ಸಂಭವಿಸುತ್ತದೆ ಎಂಬುದನ್ನು ವಿವರಿಸಿಲ್ಲ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಇರಾನ್ ಇಸ್ರೇಲ್ ಹತ್ಯಾಕಾಂಡವನ್ನು ವಿರೋಧಿಸುತ್ತದೆ ಮತ್ತು ಗಾಝಾಕ್ಕೆ ಬೆಂಬಲವನ್ನು ಸೂಚಿಸುತ್ತದೆ.  ಗಾಝಾದಲ್ಲಿನ ಇಸ್ರೇಲ್‌ ನಡೆಸುವ ಅಪರಾಧಗಳಿಗೆ ಅಮೆರಿಕ ಬೆಂಬಲಿಸುತ್ತದೆ ಮತ್ತು ಸಾವಿರಾರು ಮಂದಿಯನ್ನು ಕಳೆದ ಒಂದು ವಾರದಿಂದ ಹತ್ಯೆ ಮಾಡಿದೆ. ಹೆಚ್ಚಿನ ಜನರನ್ನು ಮನೆಗಳಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್‌ ಹೇಳಿಕೊಂಡಿದೆ. ಶೀಘ್ರದಲ್ಲೇ ಮೆಡಿಟರೇನಿಯನ್ ಸಮುದ್ರದ ಜಿಬ್ರಾಲ್ಟರ್ ಮತ್ತು ಇತರ ಜಲಮಾರ್ಗಗಳನ್ನು ಮುಚ್ಚುತ್ತೇವೆ ಎಂದು ಗಾರ್ಡ್‌ಗಳ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ನಕ್ದಿ ಹೇಳಿದ್ದಾರೆ.

ಹೌತಿ ಗುಂಪು ಕಳೆದ ತಿಂಗಳು ಗಾಝಾದ ಮೇಲೆ ಇಸ್ರೇಲ್‌ನ ದಾಳಿಗೆ ಪ್ರತೀಕಾರವಾಗಿ ಕೆಂಪು ಸಮುದ್ರದ ಮೂಲಕ ತೆರಳುತ್ತಿದ್ದ ವ್ಯಾಣಿಜ್ಯ ಹಡಗುಗಳ ಮೇಲೆ ದಾಳಿ ಮಾಡಿದೆ. ಈ ದಾಳಿ ಕೆಲವು ಹಡಗುಗಳು ಮಾರ್ಗಗಳನ್ನು ಬದಲಾಯಿಸಲು ಕಾರಣವಾಯಿತು. ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ವಿರುದ್ಧ ದಾಳಿ ನಡೆಸುವಲ್ಲಿ ಇರಾನ್ ಹೆಚ್ಚು ತೊಡಗಿಸಿಕೊಂಡಿದೆ ಎಂದು ಅಮೆರಿಕ ಆರೋಪಿಸಿತ್ತು.

ಮೆಡಿಟರೇನಿಯನ್‌ನಿಂದ ಇರಾನ್‌ಗೆ ನೇರ ಪ್ರವೇಶ ಮಾರ್ಗವಿಲ್ಲ ಆದರೆ ಗಾರ್ಡ್‌ಗಳು ಅದನ್ನು ಹೇಗೆ ಮುಚ್ಚುವುದಾಗಿ ಬೆದರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೂ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಯುದ್ಧ ಅಪರಾಧ ಮುಂದುವರಿಸಿದರೆ ಜಲಮಾರ್ಗಗಳ ಮುಚ್ಚುವುದಾಗಿ ಎಚ್ಚರಿಸಿದ್ದಾರೆ.

ಅಕ್ಟೋಬರ್‌ 7ರಂದು ಗಾಝಾದ ಮೇಲೆ ಇಸ್ರೇಲ್‌ ಯುದ್ಧ ಘೋಷಿಸಿದ ಬಳಿಕ ಈವರೆಗೆ ಇಸ್ರೇಲ್‌ ಸೇನೆ ಪ್ಯಾಲೆಸ್ತೀನ್‌ನ 20,000ಕ್ಕೂ ಅಧಿಕ ನಾಗರಿಕರನ್ನು ಹತ್ಯೆ ಮಾಡಿದೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳ ಹತ್ಯೆ ಹೆಚ್ಚಿನ ಸಂಖ್ಯೆಯಲ್ಲಿ ನಡೆದಿದೆ. ಸಾವನ್ನಪ್ಪಿದವರಲ್ಲಿ ಕನಿಷ್ಠ 8,000 ಮಕ್ಕಳು ಮತ್ತು 6,200 ಮಹಿಳೆಯರು ಸೇರಿದ್ದಾರೆ ಎಂದು ಗಾಝಾದ ಸರ್ಕಾರಿ ಮಾದ್ಯಮ ಕಚೇರಿ ತಿಳಿಸಿದೆ.

ವಿಶ್ವಸಂಸ್ಥೆ ಈ ಮೊದಲು ಹಲವು ಬಾರಿ ಗಾಝಾದಲ್ಲಿ ಕದನ ವಿರಾಮಕ್ಕೆ ನಿರ್ಣಯವನ್ನು ಮಂಡಿಸಿತ್ತು. ಇತ್ತೀಚೆಗೆ ವಿಟೊ ಅಧಿಕಾರ ಬಳಸಿ ಅಮೆರಿಕ ಕದನ ವಿರಾಮವನ್ನು ವಿರೋಧಿಸಿತ್ತು. ಆದರೆ ಯುಎನ್‌ ಮತ್ತೆ ಯುದ್ಧ ಪೀಡಿತ ಗಾಝಾಗೆ ದೊಡ್ಡ ಪ್ರಮಾಣದಲ್ಲಿ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಕುರಿತು ನಿರ್ಣಯವನ್ನು ಮಂಡಿಸಿದೆ. ಇದಕ್ಕೆ ಹಲವು ರಾಷ್ಟ್ರಗಳು ಸಹಿ ಹಾಕಿವೆ.

ಕಳೆದ 2 ತಿಂಗಳಿನಿಂದ ಇಸ್ರೇಲ್‌, ಪ್ಯಾಲೆಸ್ತೀನ್‌ ಮೇಲೆ ನಡೆಸಿದ ನಿರಂತರ ಬಾಂಬ್‌ ದಾಳಿ ಗಾಝಾದಲ್ಲಿ ಯುದ್ಧ ಭೀಕರತೆಯ ಜೊತೆಗೆ ಮಾನವೀಯ ಬಿಕ್ಕಟ್ಟನ್ನು ಕೂಡ ಸೃಷ್ಟಿಸಿದೆ. ಗಾಝಾದ ರಫಾ ಕ್ರಾಸಿಂಗ್‌ನಲ್ಲಿ ಆಹಾರ, ನೀರಿಗಾಗಿ ಜನರು ಟ್ರಕ್‌ಗಳನ್ನು ತಡೆಯುತ್ತಿದ್ದರು. ಹಸಿವಿನಿಂದ ತತ್ತರಿಸಿದ ಜನರು ಪರಿಹಾರ ಸಾಮಾಗ್ರಿ ವಾಹನಗಳನ್ನು ತಡೆದು ಆಹಾರ ಕಸಿದು ತಿನ್ನುತ್ತಿರುವ ಮನಕಲಕುವ ದೃಶ್ಯಗಳು ಕಂಡು ಬಂದಿತ್ತು. ಗಾಝಾದ ನಿರಾಶ್ರಿತರ ಶಿಬಿರಗಳಲ್ಲಿ ಸಾಂಕ್ರಾಮಿಕ ರೋಗದಿಂದ ಜನರು ಬಳಲುತ್ತಿರವ ಬಗ್ಗೆಯೂ ವರದಿಯಾಗಿತ್ತು.

ಇದನ್ನು ಓದಿ: ಗಾಝಾಗೆ ಮಾನವೀಯ ನೆರವು ಮಾತ್ರ, ಕದನ ವಿರಾಮವಿಲ್ಲ: ಯುಎಸ್‌ಗೆ ಬೆದರಿತಾ ವಿಶ್ವಸಂಸ್ಥೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...