ತಾಂಡವ್ ವೆಬ್ ಸರಣಿ ವಿರುದ್ದ ದಾಖಲಾದ ಎಫ್‌ಐಆರ್‌ಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೊ ಇಂಡಿಯಾದ ಮುಖ್ಯಸ್ಥೆ ಅಪರ್ಣಾ ಪುರೋಹಿತ್‌ಗೆ ಶುಕ್ರವಾರ ಸುಪ್ರೀಂಕೋರ್ಟ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಸಾಮಾಜಿಕ ಜಾಲತಾಣದ ಕೇಂದ್ರದ ನಿಯಮಗಳು ಕೇವಲ ಮಾರ್ಗಸೂಚಿಗಳಾಗಿದ್ದು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ’ತಾಂಡವ್’ ಹಿಂದೂ ಧಾರ್ಮಿಕ ಭಾವನೆಯನ್ನು ನೋಯಿಸಿದೆ, ಕ್ರಮಗಳನ್ನು ಎದುರಿಸಿ: ಯುಪಿ ಸರ್ಕಾರ
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್.ಎಸ್. ರೆಡ್ಡಿ ಅವರನ್ನೊಳಗೊಂಡ ನ್ಯಾಯಪೀಠವು ತಾಂಡವ್ ಸರಣಿಯ ಎಫ್‌ಐಆರ್‌ಗಳಲ್ಲಿ ನಿರೀಕ್ಷಿತ ಜಾಮೀನು ನೀಡುವಂತೆ ಅಪರ್ಣಾ ಅವರ ಅರ್ಜಿಯ ಕುರಿತು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ತಾಂಡವ್ ಒಂಬತ್ತು ಸಂಚಿಕೆಗಳ ರಾಜಕೀಯ ಥ್ರಿಲ್ಲರ್ ವೆಬ್ ಸರಣಿಯಾಗಿದ್ದು, ಇದರಲ್ಲಿ ಬಾಲಿವುಡ್‌ನ ಖ್ಯಾತ ನಟರಾದ ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ ಮತ್ತು ಮೊಹಮ್ಮದ್ ಝೀಶನ್ ಅಯೂಬ್ ನಟಿಸಿದ್ದಾರೆ.
ಅಮೇಝಾನ್ ಪ್ರೈಮ್ ಇಂಡಿಯಾ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ವಿರುದ್ದ, ಉತ್ತರಪ್ರದೇಶದ ಪೊಲೀಸ್ ಸಿಬ್ಬಂದಿ ಮತ್ತು ಹಿಂದೂ ದೇವತೆಗಳನ್ನು ಅನುಚಿತವಾಗಿ ಚಿತ್ರಿಸಲಾಗಿದೆ ಮತ್ತು ವೆಬ್ ಸರಣಿಯಲ್ಲಿ ಪ್ರಧಾನ ಮಂತ್ರಿಯ ಪಾತ್ರವನ್ನು ಅವಮಾನಿಸಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ಹಿಂದೂ ದೇವತೆಗಳಿಗೆ ಅವಮಾನ ಮಾಡಿದ ಆರೋಪ: ‘ತಾಂಡವ್’ ವೆಬ್ ಸೀರೀಸ್ ವಿರುದ್ಧ ದೂರು


