Homeಕರ್ನಾಟಕಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

ಪಠ್ಯಪುಸ್ತಕ ಬದಲಿಸಿದವರ ಗುರಿ ’ಕರ್ನಾಟಕ’ವೂ ಆಗಿದೆ!

- Advertisement -
- Advertisement -

’ಹೊಸ ಧರ್ಮಗಳ ಉದಯ’ ಎಂಬ ಪಾಠದಲ್ಲಿ ’ವೈದಿಕ ಧರ್ಮದಲ್ಲಿನ ದಬ್ಬಾಳಿಕೆಯಿಂದ ಬೇಸತ್ತು ಭಾರತದಲ್ಲಿ ಶೋಷಿತ ಜಾತಿಗಳಿಗೆ ಸೇರಿದವರು ಹೊಸ ಧರ್ಮಗಳಿಗೆ ಸೇರಿದರು’ ಎಂದಿದೆ ಎಂಬ ಕಾರಣಕ್ಕೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದರ ಕುರಿತು ಹುಯಿಲೆದ್ದಿತ್ತು. ನಂತರ ಟಿಪ್ಪು ಸುಲ್ತಾನರ ಕುರಿತ ಪಾಠಗಳನ್ನು ಬದಲಿಸುತ್ತೇವೆ ಎಂದರು. ಆನಂತರ ಎಡಪಂಥೀಯರ ಕೆಲವು ಪಠ್ಯಗಳಿದ್ದವು ಎಂದೂ ಹೇಳಿದರು. (ಅಂತಹ ಎಡಪಂಥೀಯರಾದ ಡಾ.ಜಿ.ರಾಮಕೃಷ್ಣ ಅವರು ಬರೆದದ್ದು ಇನ್ನೊಬ್ಬ ಎಡಪಂಥೀಯ ಭಗತ್ ಸಿಂಗ್ ಬಗೆಗೆ ಆಗಿತ್ತು). ಆದರೆ ಮಾಡಿದ್ದು ಮಾತ್ರ ಬೇರೆ. ಈ ಪಠ್ಯಪುಸ್ತಕ ಪರಿಷ್ಕರಣವಾದಿಗಳು ತೆಗೆದ ಹಲವು ಪಾಠಗಳು ಈಗಾಗಲೇ ಚರ್ಚೆಗೆ ಒಳಗಾಗಿವೆ. ಹಾಗಾಗಿ ಅದರ ಬಗ್ಗೆ ಹೆಚ್ಚು ಹೇಳಹೋಗುವುದಿಲ್ಲ. ಸೇರಿಸಿರುವ ಸಂಗತಿಗಳು ನಿಸ್ಸಂದೇಹವಾಗಿ ಅಪಾಯಕಾರಿಯಾದುದಾಗಿವೆ.

ಬಿಜೆಪಿ ಮತ್ತು ಅದರ ಪರಿವಾರವು ನಾರಾಯಣಗುರುಗಳನ್ನು, ಕುವೆಂಪು ಅವರನ್ನು, ಬಾಬಾಸಾಹೇಬ್ ಅಂಬೇಡ್ಕರರನ್ನು, ಮಹಾತ್ಮಾ ಗಾಂಧಿಯವರನ್ನು ತಮ್ಮ ಚಿಂತನೆಯ ಶತ್ರುಗಳೆಂದು ಸಹಜವಾಗಿಯೇ ಭಾವಿಸಿದ್ದಾರೆ. ಹೊರಗೆ ಹೇಳಲಾಗದ್ದನ್ನು ತಮ್ಮ ಶಾಖೆಗಳಲ್ಲಿ ಹೇಳಿಕೊಳ್ಳುತ್ತಾರೆ. ಶಾಖೆಗಳಲ್ಲಿ ಗೋಡ್ಸೆಯ ’ಆರಾಧನೆ’ ಇರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಪಾರ ಪ್ರಮಾಣದ ಸುಳ್ಳುಗಳನ್ನು ಅಲ್ಲಿ ಬಿತ್ತರಿಸಲಾಗುತ್ತದೆ. ಅಂತಹ ಸುಳ್ಳುಗಳನ್ನು ಬೇರೆಬೇರೆ ಪ್ರಮಾಣದಲ್ಲಿ ಸಮಾಜದಲ್ಲೂ ಹರಡಲಾಗಿದೆ. ನಿಧಾನಕ್ಕೆ ಅವುಗಳಿಗೆ ಮಾನ್ಯತೆ ಸಿಕ್ಕಂತೆಲ್ಲಾ ಬಹಿರಂಗವಾಗಿಯೂ ಮಾತನಾಡತೊಡಗುತ್ತಾರೆ. ಇದು ಅವರು ಬಳಸುತ್ತಾ ಬಂದಿರುವ ವಿಧಾನ Modus operandi.

ಅಂತಹದ್ದರಲ್ಲಿ ಒಂದು ಅಂಶ 10ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ಇದೆ. ಅದರ ’ಅಂತಿಮ’ ಪಿಡಿಎಫ್ ಪ್ರತಿ ಈಗ ಲಭ್ಯವಿದ್ದು, ಅದೀಗ ಎಲ್ಲೆಲ್ಲೂ ಓಡಾಡುತ್ತಿದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿನ ವಿವಿಧ ಭಾಷಾವಾರು ಪ್ರಾಂತಗಳ ಹಕ್ಕುಗಳು ಸಾಮಾನ್ಯವಾಗಿ ಬಿಜೆಪಿ ಮತ್ತದರ ಪರಿವಾರಕ್ಕೆ ಯಾವಾಗಲೂ ಅಪಥ್ಯ. ಅದನ್ನು ಹೊಸಕುವ ಕಾರಣಕ್ಕೇ ಜಿಎಸ್‌ಟಿ ಮಾತ್ರವಲ್ಲದೇ ಹಲವು ರೀತಿಯ ನೀತಿಗಳನ್ನು ಬಿಜೆಪಿ ಜಾರಿಗೆ ತಂದಿರುವುದನ್ನು ನಾವು ನೋಡುತ್ತೇವೆ. ಮೊದಲು ಚಿಂತನೆಯನ್ನು ಹರಿಯಬಿಡಬೇಕು, ನಂತರ ಸಾರ್ವಜನಿಕ ಮಾನ್ಯತೆ ಪಡೆದುಕೊಳ್ಳುವುದು ಮತ್ತು ಅಂತಿಮವಾಗಿ ಅದನ್ನೇ ಅಧಿಕೃತ ಸರ್ಕಾರಿ ನೀತಿ ಮಾಡುವುದು ಗುರಿ. ಈಗಾಗಲೇ ರಾಜ್ಯಗಳ ಹಕ್ಕುಗಳನ್ನು ಸಾಕಷ್ಟು ಕಿತ್ತುಕೊಂಡಿದ್ದರೂ, ರಾಜ್ಯಗಳ ಅಸ್ಮಿತೆಯನ್ನು ಅಳಿಸುವುದು ಸುಲಭವಲ್ಲ. ಅದನ್ನು ಮಾಡಲು ಈಗ ಪಠ್ಯಪುಸ್ತಕವನ್ನೂ ಬಳಸಿಕೊಂಡಿರುವುದು ಎದ್ದು ಕಾಣುತ್ತದೆ. ಕರ್ನಾಟಕತ್ವ ಅಥವಾ ಪ್ರಾದೇಶಿಕ ಚಿಂತನೆಯ ವಿರುದ್ಧ ಎಳೆಯ ಮಕ್ಕಳಲ್ಲೇ ಅಭಿಪ್ರಾಯ ಮೂಡಿಸುವುದು ಅವರ ಉದ್ದೇಶವಾಗಿದೆ. ಅದರ ಭಾಗವಾಗಿ 10ನೇ ತರಗತಿಯ ಸಮಾಜಶಾಸ್ತ್ರ ಪುಸ್ತಕದ ರಾಜ್ಯಶಾಸ್ತ್ರ ಅಧ್ಯಾಯ 6ರಲ್ಲಿ (ಪುಟ ಸಂಖ್ಯೆ 56) ಹೀಗೆ ಹೇಳಲಾಗುತ್ತದೆ.

’ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನೇ ಅತ್ಯಂತ ಗಾಢವಾಗಿ ಪ್ರೀತಿಸಿ, ಕೇವಲ ಆ ಭಾಗದ ಬಗ್ಗೆಯೇ ಅತಿಯಾದ ಅಭಿಮಾನವನ್ನು ಬೆಳೆಸಿಕೊಂಡರೆ ಅದನ್ನು ಪ್ರಾದೇಶಿಕವಾದ ಎಂದು ಕರೆಯಬಹುದು. ಭಾರತದಂತಹ ವಿಶಾಲ ರಾಷ್ಟ್ರ ಸಹಜವಾಗಿ ಹಲವಾರು ಪ್ರಾದೇಶಿಕ ವಿಭಿನ್ನತೆಯನ್ನು ಹೊಂದಿದ ದೇಶ. ಒಂದು ನಿರ್ದಿಷ್ಟ ಹಂತದವರೆಗೆ ಈ ಪ್ರಾದೇಶಿಕವಾದ ಸಹನೆಗೆ ಯೋಗ್ಯ ಎನಿಸುತ್ತದೆ. ತಮ್ಮದೇ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸಲು ಈ ಭಾವನೆ ಪ್ರೇರಣೆ ನೀಡುತ್ತದೆ. ಆದರೆ ಈ ಪ್ರಾದೇಶಿಕ ಮನೋಭಾವ ತೀರಾ ಹೆಚ್ಚು ಎನಿಸಿದರೆ ಅದು ರಾಷ್ಟ್ರದ ಏಕತೆ ಹಾಗೂ ಹಿತಾಸಕ್ತಿಗಳಿಗೆ ಧಕ್ಕೆ ಒದಗಿಸುತ್ತದೆ. ಆದುದರಿಂದ ಆಯಾಯಾ ಪ್ರದೇಶದ ಜನಸಮುದಾಯ ತಮ್ಮದೇ ಪ್ರಾದೇಶಿಕ ಮನೋಭಾವ ಹೊಂದುವ ಜೊತೆಜೊತೆಗೇ ಸಮಗ್ರ ದೇಶದ ಪ್ರಗತಿಯ ಬಗೆಗೂ ಚಿಂತನೆ ಹರಿಸುವಿಕೆ ಅತ್ಯಗತ್ಯ.

ಆಯಾ ಪ್ರದೇಶಗಳ ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಕಟ್ಟುಪಾಡುಗಳು, ಆರ್ಥಿಕ ವಿಚಾರಗಳು, ಸಾಂಸ್ಕೃತಿಕ ವಿಭಿನ್ನತೆಗಳು ಹಾಗೂ ಭೌಗೋಳಿಕ ಪರಿಸರ-ಅಲ್ಲಿನ ಜನಸಮುದಾಯದಲ್ಲಿ ಪ್ರಾದೇಶಿಕವಾದವನ್ನು ಸಹಜವಾಗಿ ಬೆಳೆಸುತ್ತದೆ. ಅತಿಯಾದ ಭಾಷಾಭಿಮಾನವೂ ರಾಷ್ಟ್ರೀಯವಾದದ ವಿರುದ್ಧ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ. ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ. ಇತ್ತೀಚೆಗೆ ಆಂಧ್ರಪ್ರದೇಶದಲ್ಲಿನ ತೆಲಂಗಾಣದ ಭಾಗದ ಪ್ರಾದೇಶಿಕವಾದ ಹೋರಾಟವನ್ನು ಗಮನಿಸಬಹುದು. ದೇಶದ ಇನ್ನಿತರ ಭಾಗಗಳಲ್ಲಿ ನಡೆಯುತ್ತಿರುವ ಪ್ರಾದೇಶಿಕವಾದದ ಹೋರಾಟಗಳು ಕೂಡಾ ದೇಶದ ಅಭಿವೃದ್ಧಿ(ಗೆ) ತೊಡಕಾಗುವ ಸಾಧ್ಯತೆಗಳಿವೆ.’

ಮೇಲ್ನೋಟಕ್ಕೆ ’ಅತಿಯಾದ’ ಪ್ರಾದೇಶಿಕ ಮನೋಭಾವದ ಕುರಿತು ಹೇಳುತ್ತಿದ್ದಾರೆ ಎನಿಸಿದರೂ, ಅಂತಹ ಅತಿಯ ಅಪಾಯವನ್ನು ವಿವರಿಸಲು ಅವರು ಮುಂದಿಡುತ್ತಿರುವ ಉದಾಹರಣೆ ತೆಲಂಗಾಣದ್ದಾಗಿದೆ. ಅದನ್ನು ಪ್ರಸ್ತಾಪಿಸುವ ಹಿಂದಿನ ವಾಕ್ಯದಲ್ಲಿ ’ಪ್ರಾದೇಶಿಕವಾದವನ್ನು ವೈಭವೀಕರಿಸುವುದರಿಂದ ದೇಶದ ಏಕತೆಗೆ ಧಕ್ಕೆ ಉಂಟಾಗುತ್ತದೆ’ ಎಂದು ಹೇಳಲಾಗಿದೆ. ಒಂದು ವೇಳೆ ವಾದಕ್ಕಾಗಿ ತೆಲಂಗಾಣ ಹೋರಾಟದಲ್ಲಿ ಅತಿ ಇತ್ತು ಎಂದು ಒಪ್ಪಿಕೊಂಡರೂ, ಅದರಲ್ಲಿ ’ದೇಶದ ಏಕತೆಗೆ ಧಕ್ಕೆ ಉಂಟಾಗುವ’ ಯಾವ ಅಂಶವಿತ್ತು? ಅವರು ಕೇಳುತ್ತಿದ್ದದ್ದು ಮತ್ತು ಪಡೆದುಕೊಂಡಿದ್ದು ಪ್ರತ್ಯೇಕ ರಾಜ್ಯವನ್ನು ಮಾತ್ರ.

ಅಷ್ಟೇ ಅಲ್ಲದೇ, ಈ ದೇಶದಲ್ಲಿ ಇರುವ ವಿಭಿನ್ನತೆಗಳು ’ಸಹಜವಾಗಿ’ ಪ್ರಾದೇಶಿಕವಾದವನ್ನು ಬೆಳೆಸುತ್ತವೆ ಎಂದು ಈ ಪಠ್ಯದಲ್ಲಿ ಹೇಳಲಾಗುತ್ತದೆ. ಒಂದೆಡೆ ಪ್ರಾದೇಶಿಕವಾದವು ಈ ದೇಶವು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಎಂದು ಪಾಠದ ಆರಂಭದಲ್ಲೇ ಹೇಳಲಾಗಿದೆ; ನಂತರ ಅದನ್ನು ದೇಶದ ಏಕತೆಗೆ ಧಕ್ಕೆ ಎನ್ನಲಾಗುತ್ತದೆ; ಜೊತೆಜೊತೆಗೇ ವಿಭಿನ್ನತೆಗಳು ’ಸಹಜವಾಗಿ’ ಇಂತಹ ಒಂದು ಸವಾಲನ್ನು ದೇಶದ ಮುಂದೊಡ್ಡುತ್ತವೆ ಎಂದು ಬಿಂಬಿಸಲಾಗಿದೆ.

ರಾಷ್ಟ್ರೀಯವಾದದ ಕುರಿತು, ಇಡೀ ದೇಶದ ಸಮಗ್ರ ಅಭಿವೃದ್ಧಿಯ ಕುರಿತು ಯಾರಿಗೆ ಪಾಠ ಹೇಳಲಾಗುತ್ತದೆ? ಯಾರು ದೊಡ್ಡ ಪ್ರಮಾಣದ ಸಂಪನ್ಮೂಲ ಸೃಷ್ಟಿಸಿ, ಒಕ್ಕೂಟ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಕೊಡುಗೆ ನೀಡುತ್ತಾ ಇಡೀ ದೇಶದ ಅಭಿವೃದ್ಧಿಗೂ ಕಾರಣರಾಗುತ್ತಿದ್ದಾರೋ ಅವರಿಗೆ. ಅಂದರೆ ತಮಿಳುನಾಡು, ಕರ್ನಾಟಕದಂತಹ ರಾಜ್ಯಗಳಿಗೆ. ಇದನ್ನು ಕರ್ನಾಟಕದ ಶಾಲಾ ಪಠ್ಯಗಳಲ್ಲೇ ತುರುಕುವ ಧಾರ್ಷ್ಟ್ಯವನ್ನು ಪ್ರದರ್ಶಿಸಲು ಸಾಧ್ಯವಾಗಿರುವುದು ಈ ನಾಡಿನ ದುರಂತ.

ಅಂದರೆ ಪಠ್ಯಪುಸ್ತಕ ಪರಿಷ್ಕರಣೆಯೆಂಬುದು ಒಂದು ಬಹುಮುಖಿ ದಾಳಿಯಾಗಿದೆ. ಇದನ್ನು ಹಿಮ್ಮೆಟ್ಟಿಸಲು ಪಣ ತೊಟ್ಟಿರುವವರೂ ಈ ಬಹುಮುಖಿ ಆಯಾಮವನ್ನು ಅರಿತುಕೊಂಡು ತಿರುಗೇಟು ನೀಡುವುದು ಅತ್ಯಗತ್ಯವಾದುದಾಗಿದೆ.


ಇದನ್ನೂ ಓದಿ: ಪಠ್ಯಪುಸ್ತಕ ಮತ್ತು ಮತೀಯವಾದ; ಬ್ರಾಹ್ಮಣವಾದಿ ಮೌಲ್ಯಗಳನ್ನು ಹೇರುವ, ಉಳಿದವರನ್ನು ದಮನಕ್ಕೆ ಗುರಿಮಾಡುವ ಹಾದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...