ಡಿಸೆಂಬರ್ 2024 ರಲ್ಲಿ ₹89,086 ಕೋಟಿ ರೂಪಾಯಿಗಳಿಗೆ ಬದಲಾಗಿ, ಕೇಂದ್ರ ಸರ್ಕಾರವು ಇಂದು ರಾಜ್ಯ ಸರ್ಕಾರಗಳಿಗೆ ₹1,73,030 ಕೋಟಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ.
ರಾಜ್ಯಗಳು ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅವುಗಳ ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಈ ತಿಂಗಳು ಹೆಚ್ಚಿನ ಮೊತ್ತವನ್ನು ಹಂಚಿಕೆ ಮಾಡಲಾಗುತ್ತಿದೆ.
ತೆರಿಗೆ ಹಂಚಿಕೆ ಎಂದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತೆರಿಗೆ ಆದಾಯದ ವಿತರಣೆ. ಕೆಲವು ತೆರಿಗೆಗಳ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ನ್ಯಾಯಯುತ, ಸಮಾನ ರೀತಿಯಲ್ಲಿ ಹಂಚುವುದು ಸಾಂವಿಧಾನಿಕ ಕಾರ್ಯವಿಧಾನವಾಗಿದೆ. ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆಗಳ ನಿವ್ವಳ ಆದಾಯದ ವಿಭಜನೆಯನ್ನು ಶಿಫಾರಸು ಮಾಡುತ್ತದೆ.
ಉತ್ತರ ಪ್ರದೇಶವು ಅತಿ ಹೆಚ್ಚು ₹31,039.84 ಕೋಟಿಯನ್ನು ಪಡೆದುಕೊಂಡಿದೆ. ನಂತರ ₹17,403.36 ಕೋಟಿ ರೂಪಾಯಿಗಳನ್ನು ಮತ್ತು ಪಶ್ಚಿಮ ಬಂಗಾಳಕ್ಕೆ ₹13017.06 ಕೋಟಿಗಳನ್ನು ಪಡೆದುಕೊಂಡಿದೆ. ಮಹಾರಾಷ್ಟ್ರಕ್ಕೆ ₹10.930.31 ಕೋಟಿ ನೀಡಲಾಗಿದ್ದರೆ, ರಾಜಸ್ಥಾನಕ್ಕೆ ₹10,426.78 ಕೋಟಿ ನೀಡಲಾಗಿದೆ. ಗೋವಾ ಮತ್ತು ಸಿಕ್ಕಿಂ ಕ್ರಮವಾಗಿ ₹667.91 ಕೋಟಿ ಮತ್ತು ₹671.35 ಕೋಟಿಯಷ್ಟು ಕಡಿಮೆ ಮೊತ್ತವನ್ನು ಪಡೆದಿವೆ.
2021 ರಿಂದ 2026 ರ ಅವಧಿಗೆ ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳ ಪಾಲು ಶೇ.41 ರಷ್ಟು ಇರಬೇಕೆಂದು ಶಿಫಾರಸು ಮಾಡಲಾಗಿದೆ. ಇದು 2020-21 ರಂತೆಯೇ ಇದೆ. ಇದು 2015-20 ರ ಅವಧಿಗೆ 14 ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ ಶೇ.42 ರಷ್ಟು ಪಾಲುಗಿಂತ ಕಡಿಮೆಯಾಗಿದೆ. ಕೇಂದ್ರದ ಸಂಪನ್ಮೂಲಗಳಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲು ಶೇ.1 ರಷ್ಟು ಹೊಂದಾಣಿಕೆ ಮಾಡಲಾಗಿದೆ.
ಪ್ರತ್ಯೇಕ ರಾಜ್ಯಗಳಿಗೆ ವಿಕೇಂದ್ರೀಕರಣ ಮೊತ್ತಕ್ಕಾಗಿ, ಜನಸಂಖ್ಯಾ ಕಾರ್ಯಕ್ಷಮತೆಗೆ ಶೇ.12.5 ರಷ್ಟು, ಆದಾಯಕ್ಕೆ ಶೇ.45 ರಷ್ಟು, ಜನಸಂಖ್ಯೆ ಮತ್ತು ಪ್ರದೇಶಕ್ಕೆ ಶೇ.15 ರಷ್ಟು, ಅರಣ್ಯ ಮತ್ತು ಪರಿಸರ ವಿಜ್ಞಾನಕ್ಕೆ ಶೇ.10 ರಷ್ಟು ಮತ್ತು ತೆರಿಗೆ ಮತ್ತು ಹಣಕಾಸಿನ ಪ್ರಯತ್ನಗಳಿಗೆ ಶೇ.2.5 ರಷ್ಟು ಮಹತ್ವವನ್ನು ನೀಡಲಾಗಿದೆ.
ಇದನ್ನೂ ಓದಿ; ಕೇಜ್ರಿವಾಲ್ ನಿವಾಸದ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ


