ನವದೆಹಲಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಿಂದ ಮಹಿಳೆಯರನ್ನು ಹೊರಗಿಟ್ಟಿರುವುದು ಉದ್ದೇಶಪೂರ್ವಕವಾಗಿರಲಿಲ್ಲ, ಅದು ತಾಂತ್ರಿಕ ಸಮಸ್ಯೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಹೇಳಿದ್ದಾರೆ.
ಭಾನುವಾರ (ಅ.12) ಎರಡನೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತಕಿ, “ಶುಕ್ರವಾರದ ಪತ್ರಿಕಾಗೋಷ್ಠಿಯನ್ನು ಕಡಿಮೆ ಅವಧಿಯಲ್ಲಿ ಆಯೋಜಿಸಲಾಗಿತ್ತು. ಭಾಗವಹಿಸುವವರ ಪಟ್ಟಿಯನ್ನೂ ನಿರ್ದಿಷ್ಟ ಪತ್ರಕರ್ತರೊಂದಿಗೆ ಸೇರಿ ಸಿದ್ಧಪಡಿಸಲಾಗಿತ್ತು. ಹಾಗಾಗಿ, ಇದು ಹೆಚ್ಚಾಗಿ ತಾಂತ್ರಿಕ ಸಮಸ್ಯೆಯಾಗಿದೆ. ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಹೊರಗಿಟ್ಟಿಲ್ಲ ಎಂದಿದ್ದಾರೆ. ಎರಡನೇ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಭಾಗವಹಿಸಿದ್ದರು.
ಮುತ್ತಕಿ ಆರು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಅಕ್ಟೋಬರ್ 10 (ಶುಕ್ರವಾರ) ರಂದು ನವದೆಹಲಿಯಲ್ಲಿ ನಡೆದ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಭಾಗವಹಿಸಲು ಅವಕಾಶವಿರಲಿಲ್ಲ.
ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಮಹಿಳೆಯರು ಶಿಕ್ಷಣ ಮತ್ತು ಹೆಚ್ಚಿನ ಕೆಲಸದ ಸ್ಥಳಗಳನ್ನು ಪ್ರವೇಶಿಸುವುದನ್ನು ತಡೆಯುವುದರಲ್ಲಿ ಕುಖ್ಯಾತಿ ಪಡೆದಿರುವ ತಾಲಿಬಾನ್‌ನ ಸ್ತ್ರೀದ್ವೇಷದ ಪ್ರತಿಬಿಂಬ ಎಂದು ಹಲವರು ಟೀಕಿಸಿದ್ದರು. ಭಾರತದಲ್ಲಿ ಇಂತದಕ್ಕೆ ಅವಕಾಶ ನೀಡಿದ ಪತ್ರಕರ್ತರು ಮತ್ತು ಕೇಂದ್ರ ಸರ್ಕಾರವನ್ನು ಜನರು ತರಾಟೆಗೆ ತೆಗೆದುಕೊಂಡಿದ್ದರು.
ಪಾಕಿಸ್ತಾನದೊಂದಿಗಿನ ಅಫ್ಘಾನಿಸ್ತಾನದ ಸಂಘರ್ಷದ ಕುರಿತು ಮಾತನಾಡಿದ ಮುತ್ತಕಿ, “ನಾವು ಪರಿಸ್ಥಿತಿಗೆ ಶಾಂತಿಯುತ ಪರಿಹಾರವನ್ನು ಬಯಸುತ್ತೇವೆ. ಆದರೆ ಶಾಂತಿ ಪ್ರಯತ್ನಗಳು ಯಶಸ್ವಿಯಾಗದಿದ್ದರೆ ನಮಗೆ ಇತರ ಆಯ್ಕೆಗಳಿವೆ” ಎಂದಿದ್ದಾರೆ.
ಗುರುವಾರ ಪಾಕಿಸ್ತಾನ ಕಾಬೂಲ್‌ನಲ್ಲಿ ವಾಯುದಾಳಿ ನಡೆಸಿದ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ಭಾರತದಲ್ಲಿ ಕುಳಿತು ಮುತ್ತಕಿ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
“ನಾವು ಪಾಕಿಸ್ತಾನದ ಜನರು ಮತ್ತು ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಆದರೆ ಆ ದೇಶದ ಕೆಲವು ಅಂಶಗಳನ್ನು ಮುಂದಿಟ್ಟು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಮುತ್ತಕಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.
ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ಆರ್‌ಎಸ್‌ಎಸ್ ಶಿಬಿರಗಳಲ್ಲಿ ಲೈಂಗಿಕ ದೌರ್ಜನ್ಯ ಆರೋಪ