ತೆಲಂಗಾಣ ಸಶಸ್ತ್ರ ಹೋರಾಟದಲ್ಲಿ ಭಾಗವಹಿಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕಿ ಮಲ್ಲು ಸ್ವರಾಜ್ಯಂ ಅವರು ಮಾರ್ಚ್ 19ರ ಶನಿವಾರದಂದು ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿದೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ. ಆಂಧ್ರ ಪ್ರದೇಶ ವಿಧಾನಸಭೆಯ ಮಾಜಿ ಸದಸ್ಯೆಯೂ ಆಗಿರುವ ಅವರು ನ್ಯುಮೋನಿಯಾ ಚಿಕಿತ್ಸೆಗಾಗಿ ಮಾರ್ಚ್ 1 ರಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಮಲ್ಲು ಸ್ವರಾಜ್ಯಂ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕೇಂದ್ರ ಸಮಿತಿಯ ಸದಸ್ಯರಾಗಿದ್ದರು. ಕೊನೆಯವರೆಗೂ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದರು. 1931ರಲ್ಲಿ ಅವಿಭಜಿತ ನಲ್ಗೊಂಡ ಜಿಲ್ಲೆಯ ತುಂಗತಾರ್ತಿಯ ಕರಿವಿರಾಲ ಕೊತಗುಡೆಂ ಗ್ರಾಮದಲ್ಲಿ ಭೂಮಾಲಿಕ ಕುಟುಂಬದಲ್ಲಿ ಜನಿಸಿದ್ದ ಅವರು ತನ್ನ ಹದಿಹರೆಯದಲ್ಲಿ ಕಮ್ಯುನಿಸ್ಟ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರ ಸಹೋದರ ಭೀಮರೆಡ್ಡಿ ನರಸಿಂಹ ರೆಡ್ಡಿಯವರಿಂದ ಪ್ರೇರಿತರಾಗಿ ಸ್ವರಾಜ್ಯಂ ಅವರು 1946 ರಿಂದ 1951 ರವರೆಗೆ ತೆಲಂಗಾಣ ಜನರ ಸಶಸ್ತ್ರ ಹೋರಾಟದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಕ್ಯೂಬಾ ಕಮ್ಯುನಿಷ್ಟ್ ಪಕ್ಷದ ನಾಯಕತ್ವ ಬದಲಾವಣೆಗೆ ರೌಲ್ ಕ್ಯಾಸ್ಟ್ರೊ ಒಲವು
ಅವರು ಕ್ರಾಂತಿಕಾರಿ ಗೀತೆಗಳನ್ನು ಹಾಡುವ ಮೂಲಕ ಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿಸುತ್ತಿದ್ದರು. ಶಸ್ತ್ರಾಸ್ತ್ರಗಳನ್ನು ಎತ್ತಿದ್ದ ಅವರು ಹೋರಾಟಗಳಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸಶಸ್ತ್ರ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಮತ್ತೊಬ್ಬ ಪ್ರಸಿದ್ಧ ಕಾಂಗ್ರೆಸ್ ನಾಯಕ ಮಲ್ಲು ವೆಂಕಟ ನರಸಿಂಹ ರೆಡ್ಡಿ ಅವರನ್ನು ಸ್ವರಾಜ್ಯ ವಿವಾಹವಾಗಿದ್ದರು. ಸಿಪಿಐ(ಎಂ) ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ತುಂಗತುರ್ಥಿ ವಿಧಾನಸಭಾ ಕ್ಷೇತ್ರದಿಂದ ಸಂಯುಕ್ತ ಆಂಧ್ರಪ್ರದೇಶದ ವಿಧಾನಸಭೆಗೆ ಎರಡು 1978 ಮತ್ತು 1983ರಲ್ಲಿ ಚುನಾಯಿತರಾಗಿದ್ದರು.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕೂಡ ಸ್ವರಾಜ್ಯಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಅವರು ಅಸಾಧಾರಣ ಕಮ್ಯುನಿಸ್ಟ್ ಕ್ರಾಂತಿಕಾರಿಯಾಗಿದ್ದಾರೆ. 1946 ರಿಂದ 1951 ರವರೆಗಿನ ತೆಲಂಗಾಣದ ಸಶಸ್ತ್ರ ಹೋರಾಟದಲ್ಲಿ ಹೈದರಾಬಾದಿನ ನಿಜಾಮನ ‘ರಜಾಕರ’, ನಿರ್ದಯ ಜಮೀನ್ದಾರರ ಕೂಲಿ ಸೈನಿಕರ ಖಾಸಗಿ ಸೈನ್ಯವನ್ನು ನಿರ್ಭಯವಾಗಿ ಎದುರಿಸಿ, ಅವರಿಗೆ ಸವಾಲು ಹಾಕುತ್ತಿದ್ದರು” ಅವರು ಹೇಳಿದ್ದಾರೆ.
ಸ್ವರಾಜ್ಯಂ ಅವರು ತಮ್ಮ ವೈಯಕ್ತಿಕ ಉದಾಹರಣೆ ಮತ್ತು ರೋಮಾಂಚನಕಾರಿ ಭಾಷಣಗಳ ಮೂಲಕ ಹೋರಾಟದಲ್ಲಿ ಭಾಗವಹಿಸಲು ಅನೇಕ ಮಹಿಳೆಯರಿಗೆ ಸ್ಫೂರ್ತಿ ನೀಡಿದರು. “ನಾವು ಸ್ಪೂರ್ತಿದಾಯಕ ಕ್ರಾಂತಿಕಾರಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಅವರು ಕ್ರಾಂತಿಕಾರಿ ಉದ್ದೇಶವನ್ನು ಮುನ್ನಡೆಸುತ್ತಾ ಜನರ ಸೇವೆಯಲ್ಲಿ 75 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದರು” ಎಂದು ಯೆಚೂರಿ ಹೇಳಿದ್ದಾರೆ.
Red Salute Com. Mallu Swarajyam ✊🏾
A legendary revolutionary Communist who with a rifle in hand challenged the might of the landlords & Hyderabad Nizam, remains an eternal inspiration urging us to hasten the revolutionary struggle for human liberation.https://t.co/OKEirXm3TB pic.twitter.com/xWBE7rPR4M— Sitaram Yechury (@SitaramYechury) March 19, 2022
ಇದನ್ನೂ ಓದಿ: UDF ತೊರೆದು ಕಮ್ಯುನಿಷ್ಟ್ ಒಕ್ಕೂಟ ಸೇರಿದ ಕೇರಳ ಕಾಂಗ್ರೆಸ್ (ಎಂ)!
ಹೋರಾಟಗಾರ್ತಿಯ ಸಾವಿಗೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಸಂತಾಪ ಸೂಚಿಸಿದ್ದು, ಅವರು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಎಂದು ಹೇಳಿದ್ದಾರೆ.
“ಸ್ವರಾಜ್ಯಂ ತನ್ನ ಜೀವನದುದ್ದಕ್ಕೂ ಜನರಿಗಾಗಿ ಅವಿಶ್ರಾಂತವಾಗಿ ದುಡಿದಿದ್ದು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ. ಸ್ವರಾಜ್ಯಂನಂತಹ ಮಹಿಳಾ ನಾಯಕಿಯನ್ನು ಕಳೆದುಕೊಂಡಿರುವುದು ತೆಲಂಗಾಣಕ್ಕೆ ದೊಡ್ಡ ನಷ್ಟವಾಗಿದೆ” ಎಂದು ಹೇಳಿರುವ ಸಿಎಂ ದುಃಖತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಒಕ್ಕೂಟ ಸರ್ಕಾರದ ಸಚಿವ ಜಿ. ಕಿಶನ್ ರೆಡ್ಡಿ ಕೂಡ ಸಂತಾಪ ಸೂಚಿಸಿದ್ದಾರೆ. “ಇಂದು ಮಲ್ಲು ಸ್ವರಾಜ್ಯಂ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ‘ತೆಲಂಗಾಣದ ಉಕ್ಕಿನ ಮಹಿಳೆ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು, ರಜಾಕರ ವಿರುದ್ಧ ತೆಲಂಗಾಣದ ಜನರಿಗಾಗಿ ಅವರು ಮಾಡಿದ ಹೋರಾಟವು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ” ಎಂದು ಅವರು ಹೇಳಿದ್ದಾರೆ.
Deeply saddened to hear about the passing away of Mallu Swarajyam garu today.
Popularly known as the "Iron Lady of Telangana", her fight for the people of Telangana against the Razakars will always be remembered.
Om Shanti 🙏 pic.twitter.com/Rx2CsXZFsW
— G Kishan Reddy (@kishanreddybjp) March 19, 2022
ಇದನ್ನೂ ಓದಿ: ‘ಆಂದೋಲನ ಜೀವಿ’ಗಳ ಮುಂದೆ ಸೋಲೊಪ್ಪಿದ ಮೋದಿ: ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಏನಂದರು?


