Homeಅಂತರಾಷ್ಟ್ರೀಯಕ್ಯೂಬಾ ಕಮ್ಯುನಿಷ್ಟ್‌ ಪಕ್ಷದ ನಾಯಕತ್ವ ಬದಲಾವಣೆಗೆ ರೌಲ್‌ ಕ್ಯಾಸ್ಟ್ರೊ ಒಲವು

ಕ್ಯೂಬಾ ಕಮ್ಯುನಿಷ್ಟ್‌ ಪಕ್ಷದ ನಾಯಕತ್ವ ಬದಲಾವಣೆಗೆ ರೌಲ್‌ ಕ್ಯಾಸ್ಟ್ರೊ ಒಲವು

- Advertisement -
- Advertisement -

ಕ್ಯೂಬಾ ಕಮ್ಯುನಿಸ್ಟ್ ಪಕ್ಷದ ನಾಯಕತ್ವವನ್ನು ಉತ್ಸಾಹಭರಿತ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ಮನೋಭಾವ ತುಂಬಿದ ಯುವ ಪೀಳಿಗೆಗೆ ವಹಿಸುವ ಇಂಗಿತವನ್ನು ಪಕ್ಷದ ಅಧ್ಯಕ್ಷ ರೌಲ್‌ ಕ್ಯಾಸ್ಟ್ರೊ ಶುಕ್ರವಾರ ವ್ಯಕ್ತಪಡಿಸಿದ್ದಾರೆ. ಜೂನ್‌ನಲ್ಲಿ 90 ನೇ ವರ್ಷಕ್ಕೆ ಕಾಲಿಡುತ್ತಿರುವ ರೌಲ್‌ ಕ್ಯಾಸ್ಟ್ರೊ, ಶುಕ್ರವಾರ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ತಾನು ನಾಯಕತ್ವನ್ನು ತೊರೆಯುತ್ತಿರುವುದಾಗಿ ಹೇಳಿದ್ದಾರೆ.

ಸೋಮವಾರ ಸಮಾವೇಶ ಮುಗಿಯುವ ಮೊದಲು ಅವರು ಔಪಚಾರಿಕವಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದು ಮತ್ತು ಅವರ ಬದಲಿಯನ್ನು ಘೋಷಿಸುವ ನಿರೀಕ್ಷೆಯಿದೆ.

ರೌಲ್‌ ಕ್ಟ್ಯಾಸ್ಟ್ರೊ

ಕ್ಯೂಬಾದ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದ ರೌಲ್‌ ಕ್ಯಾಸ್ಟ್ರೋ 2018 ರಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಅವರ ಉತ್ತರಾಧಿಕಾರಿಯಾಗಿ ಮಿಗುಯೆಲ್ ಡಿಯಾಜ್-ಕ್ಯಾನೆಲ್ ಬರ್ಮಡೆಜ್ ಅವರನ್ನು ನೇಮಿಸಲಾಗಿತ್ತು.

ಇದನ್ನೂ ಓದಿ: ಕ್ಯೂಬಾದ ವೈದ್ಯರು ಜಗತ್ತಿನ ಅತ್ಯುತ್ತಮ ವೈದ್ಯರಾಗಿದ್ದು ಹೇಗೆ?

ಯುವ ಪೀಳಿಗೆಗೆ ಅಧಿಕಾರವನ್ನು ಹಸ್ತಾಂತರಿಸುವ ಸಲುವಾಗಿ, ಈ ವರ್ಷ ನಡೆಯುವ ಪಕ್ಷದ ಸಮಾವೇಶದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತ್ಯಜಿಸುವುದಾಗಿ ರೌಲ್‌ ಕ್ಯಾಸ್ಟ್ರೊ 2016 ರಲ್ಲಿ ಘೋಷಿಸಿದ್ದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನವು ಕ್ಯೂಬಾದ ಅತ್ಯಂತ ದೊಡ್ಡ ಸ್ಥಾನವಾಗಿದ್ದು, ಇದು ಅಧ್ಯಕ್ಷ ಸ್ಥಾನಕ್ಕಿಂತ ಹೆಚ್ಚು ಅಧಿಕಾರವಿರುವ ಸ್ಥಾನವಾಗಿದೆ. ಅಧ್ಯಕ್ಷ ಸ್ಥಾನವು ಪ್ರಧಾನ ಕಾರ್ಯದರ್ಶಿಗಿಂತ ನಂತರದ ಸ್ಥಾನವಾಗಿದೆ.

ವಾರಾಂತ್ಯದಲ್ಲಿ ಕಮ್ಯುನಿಸ್ಟ್ ಪಕ್ಷದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಡಿಯಾಜ್-ಕ್ಯಾನೆಲ್ ಆಯ್ಕೆಯಾಗುತ್ತಾರೆ ಎನ್ನಲಾಗಿದೆ. ದೇಶದ ಅಧ್ಯಕ್ಷರಾಗಿ ಮತ್ತು ಪಕ್ಷದ ಕಾರ್ಯದರ್ಶಿಯಾಗಿ ಎರಡೂ ಹುದ್ದೆಗಳನ್ನು ಅವರು ನಿರ್ವಹಿಸಲಿದ್ದಾರೆ. ಕ್ರಾಂತಿಕಾರಿ ಹೋರಾಟಗಾರ ಫಿಡೆಲ್ ಕ್ಯಾಸ್ಟ್ರೊ ಕೂಡಾ ಸುಮಾರು 30 ವರ್ಷಗಳ ಕಾಲ ಎರಡೂ ಹುದ್ದೆಗಳನ್ನು ನಿರ್ವಹಿಸಿದ್ದರು.

ಇದನ್ನೂ ಓದಿ: ಕ್ಯೂಬಾದ ವೈದ್ಯಕೀಯ ತಂಡಕ್ಕೆ ’ನೋಬೆಲ್ ಶಾಂತಿ’ ಪ್ರಶಸ್ತಿ ನೀಡುವಂತೆ ಪ್ರತಿಪಾದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...