ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರ ಪುತ್ರ ಬಂಡಿ ಭಗೀರಥ, ವಿದ್ಯಾರ್ಥಿಯೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಇದಾಗಿ ಒಂದೇ ದಿನದಲ್ಲಿ ಭಗೀರಥ ಮತ್ತು ಆತನ ಗೆಳೆಯರ ಗುಂಪು ಮತ್ತೊಬ್ಬ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಮತ್ತೊಂದು ವಿಡಿಯೋ ಕೂಡಾ ವೈರಲ್ ಆಗಿದೆ.
“ಸಂತ್ರಸ್ತ ಬೇರೆಯೆ ಮತ್ತೊಬ್ಬ ವಿದ್ಯಾರ್ಥಿ ಎಂದು ತೋರುತ್ತಿದೆ. ತನಿಖೆ ನಡೆಯುತ್ತಿದೆ. ನಾವು ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಬಾಲನಗರ ವಲಯದ ಉಪ ಪೊಲೀಸ್ ಆಯುಕ್ತ ಜಿ. ಸಂದೀಪ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪೊಲೀಸರಿಂದ ಘಟನೆಯ ವೀಡಿಯೊವನ್ನು ಪಡೆದಿದ್ದೇವೆ. ಆದರೆ ಸಂತ್ರಸ್ತ ವಿದ್ಯಾರ್ಥಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಮಹೀಂದ್ರಾ ವಿಶ್ವವಿದ್ಯಾಲಯದ ಪ್ರೊಫೆಸರ್ ಸುರೇಶ್ ರಕ್ಷಿತ್ ಅವರು ಹೇಳಿದ್ದಾರೆ.
“ಪ್ರಸ್ತುತ ರಜೆ ಇರುವುದರಿಂದ ಕಾಲೇಜು ನಡೆಯುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಯ ವಿವರಗಳನ್ನು ಗುರುತಿಸಲು ಮತ್ತು ಪರಿಶೀಲಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಆದಾಗ್ಯೂ ನಾವು ಹೊಸ ವೀಡಿಯೊದ ಬಗ್ಗೆ ಗಮನ ಹರಿಸಿದ್ದು, ಭಗೀರಥ ವಿರುದ್ಧ ಅಗತ್ಯ ಕ್ರಮಕ್ಕಾಗಿ ಶಿಸ್ತು ಸಮಿತಿಯೊಂದಿಗೆ ಮಾತನಾಡಿದ್ದೇವೆ” ಎಂದು ಪ್ರೊಫೆಸರ್ ಸುರೇಶ್ ಹೇಳಿದ್ದಾರೆ.
ಹೊಸದಾಗಿ ವೈರಲ್ ಆಗುತ್ತಿರುವ ವೀಡಿಯೋಗೆ ಪ್ರತಿಕ್ರಿಯಿಸಿರುವ ಬಿಎಸ್‌ಪಿ ತೆಲಂಗಾಣ ಮುಖ್ಯಸ್ಥ ಆರ್.ಎಸ್. ಪ್ರವೀಣ್‌ಕುಮಾರ್, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಬಿಜೆಪಿ ಜೊತೆ ‘ನೆರಳಿನ ಯುದ್ದ’ ಮಾಡುವ ಬದಲು ಭಗೀರಥನನ್ನು ಬಂಧಿಸುವಂತೆ ಸವಾಲು ಹಾಕಿದ್ದಾರೆ.
ఇది @BJP4Telangana అధ్యక్షుడి కుమారుడి దురాగతాల వీడియో part-2 అంట.అసలు ఇక్కడ శాంతి భద్రతలున్నయా, #KCR ji? ఎవరిష్టమొచ్చినట్లు వాళ్లు చట్టాన్ని చేతుల్లోకి తీసుకుంటుంటే మీరు #BJP తో #ShadowBoxing చేస్తున్నరు😊మీకు ధమ్ముంటే ఈ విద్యార్థుల ముసుగులో ఉన్న గూండాలను అరెస్టు చేయండి. pic.twitter.com/H0MNZnAT5r
— Dr.RS Praveen Kumar (@RSPraveenSwaero) January 18, 2023
ಶ್ರೀರಾಮ್ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆದ ನಂತರ, ಮಂಗಳವಾರ ಕಾಲೇಜು ಆಡಳಿತ ಮಂಡಳಿಯ ದೂರಿನ ಮೇರೆಗೆ ದುಂಡಿಗಲ್ ಪೊಲೀಸರು ಬಂಡಿ ಸಂಜಯ್ ಅವರ ಮಗ ಬಂಡಿ ಭಗೀರಥ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು.
ಪೊಲೀಸರು ಭಾರತೀಯ ದಂಡ ಸಂಹಿತೆಯ 341, 323, 504 ಮತ್ತು ತೆಲಂಗಾಣ ರಾಜ್ಯ ರ್‍ಯಾಗಿಂಗ್ ನಿಷೇಧ ಕಾಯಿದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಹಲ್ಲೆಯ ವಿಡಿಯೋ ವೈರಲ್ ಆದ ನಂತರ, ಸಂತ್ರಸ್ತ ಶ್ರೀರಾಮ್, ತನಗೆ ಥಳಿಸಿದ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದು, ಅದಕ್ಕಾಗಿ ಹಲ್ಲೆ ನಡೆಸಲಾಗಿದೆ ಎಂದು ಹೇಳಿ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
Minutes after this video came to light, victim Sriram released a video saying that #BandiSanjaySon attacked him because he troubled a girl. Quite a confession from the victim himself. BUT how is it right to hit anyone? How is the BJP president’s son judge, jury & executioner? pic.twitter.com/0AoxDYPiEl
— Revathi (@revathitweets) January 17, 2023
“ನಾನು ಭಗೀರಥನ ಸ್ನೇಹಿತನ ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸಿದೆ. ನಾನು ಅವಳಿಗೆ ಕರೆ ಮಾಡಿ, ಪ್ರೇಮ ನಿವೇದನೆಯ ಸಂದೇಶ ಕಳುಹಿಸಿದೆ. ವಿಷಯ ತಿಳಿದ ಭಗೀರಥ ನನ್ನನ್ನು ನೋಡಲು ಬಂದಿದ್ದು ನಮ್ಮಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ವಾದದ ನಂತರ, ಅವರು ನನಗೆ ಕಪಾಳಮೋಕ್ಷ ಮಾಡಿದರು” ಎಂದು ಹೇಳಿದ್ದಾರೆ.
“ಇದು ಹಿಂದಿನ ಘಟನೆಯಾಗಿದ್ದು, ನಮ್ಮ ನಡುವೆ ಈಗ ಯಾವುದೇ ಸಮಸ್ಯೆಗಳಿಲ್ಲ. ನಾವೀಗ ಸ್ನೇಹಿತರಾಗಿದ್ದು, ಬ್ಯಾಚ್‌ಮೇಟ್‌ಗಳಾಗಿದ್ದೇವೆ. ಆ ಘಟನೆಯನ್ನು ನಾವೀಗ ಮರೆತಿದ್ದು, ವೀಡಿಯೊ ನಿಷ್ಪ್ರಯೋಜಕವಾಗಿದೆ. ಈಗ ವೀಡಿಯೊವನ್ನು ಏಕೆ ಮುಂದೆ ತರಲಾಗುತ್ತಿದೆ? ಇದು ಕೇವಲ ನಮ್ಮ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಮತ್ತು ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಬಿಟ್ಟ ವಿಡಿಯೊ” ಎಂದು ವಿಡಿಯೋದಲ್ಲಿ ಶ್ರೀರಾಮ್ ಹೇಳಿದ್ದಾರೆ.
ಕರೀಂನಗರ ಸಂಸದ ಮತ್ತು ಬಿಜೆಪಿ ತೆಲಂಗಾಣ ಮುಖ್ಯಸ್ಥ ಬಂಡಿ ಸಂಜಯ್ ಅವರು ತಮ್ಮ ಪುತ್ರನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು, ‘ಮಕ್ಕಳ ಗಲಾಟೆ’ ಎಂದು ಮಂಗಳವಾರ ಹೇಳಿದ್ದು, ಘಟನೆಯನ್ನು ತಳ್ಳಿಹಾಕಿದ್ದಾರೆ.
“ನಿಮಗೆ (ಕೆಸಿಆರ್) ಧೈರ್ಯವಿದ್ದರೆ ನನ್ನೊಂದಿಗೆ ರಾಜಕೀಯ ಮಾಡಿ. ನನ್ನನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ನನ್ನ ಮಗನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ರಾಜಕಾರಣಿಗಳಾಗದ ಹೊರತು ರಾಜಕೀಯಕ್ಕಾಗಿ ಕುಟುಂಬವನ್ನು ಗುರಿಯಾಗಿಸಿಕೊಳ್ಳಬೇಡಿ” ಎಂದು ಬಂಡಿ ಸಂಜಯ್ ಹೇಳಿದ್ದಾರೆ. ಘಟನೆಯು ಹಳೆಯದಾಗಿದ್ದು, ಕೆಲವು ದಿನಗಳ ಹಿಂದೆ ನಡೆದಿದೆ ಎಂದು ತರ್ಕಿಸಲು ಪ್ರಯತ್ನಿಸಿದ್ದಾರೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಉದ್ದೇಶಪೂರ್ವಕವಾಗಿ ತಮ್ಮ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಸಂಜಯ್, “ಮಕ್ಕಳು ಜಗಳವಾಡಿಕೊಂಡು ತಿದ್ದಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆ ಏನು? ಅವರ ವಿರುದ್ಧ ಯಾಕೆ ಕೇಸ್ ಹಾಕಿದ್ದೀರಿ? ಅದರ ಅವಶ್ಯಕತೆ ಏನು?” ಎಂದು ಪ್ರಶ್ನಿಸಿದ್ದಾರೆ.
ಘಟನೆಯಲ್ಲಿ ವಿಶ್ವವಿದ್ಯಾನಿಲಯ ಕೂಡಾ ತಪ್ಪು ಮಾಡಿದೆ ಎಂದು ಹೇಳಿಕೊಂಡಿರುವ ಬಂಡಿ ಸಂಜಯ್, ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಅದರ ಬಗ್ಗೆ ಪೋಷಕರಿಗೆ ತಿಳಿಸುವ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿದ್ದೀರಾ ಎಂದು ಕೇಳಿದ್ದಾರೆ.
ತನ್ನ ಮಗನ ವಿರುದ್ಧ ದಾಖಲಾದ ಪ್ರಕರಣವು ಇತರ ಸಮಸ್ಯೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಕೂಡಿದೆ ಎಂದು ಸಂಜಯ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಫೆಬ್ರವರಿ 17 ರಂದು ಅಂಬೇಡ್ಕರ್ ಹೆಸರಿನ ನೂತನ ಸೆಕ್ರೆಟರಿಯೇಟ್ ಉದ್ಘಾಟಿಸಲಿರುವ ತೆಲಂಗಾಣ ಸಿಎಂ


