ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ನೂತಂಕಲ್ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬನಿಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಥಳಿಸಿದ್ದಾರೆ.
ಡಿಸೆಂಬರ್ 31 ರ ರಾತ್ರಿ ಈ ಘಟನೆ ಸಂಭವಿಸಿದೆ. ಆದರೆ, ದಲಿತ ವ್ಯಕ್ತಿ ರಾಮು ಅವರು ಅಧಿಕಾರಿಯೊಂದಿಗೆ ಮಾತನಾಡುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರ ಕೈ ಮತ್ತು ಕಾಲುಗಳ ಸುತ್ತಲೂ ತೀವ್ರವಾದ ಗಾಯಗಳಾಗಿದ್ದು, ಸಂತ್ರಸ್ತನ ಕುಟುಂಬ ಸದಸ್ಯರು ಹಿನ್ನಲೆಯಲ್ಲಿ ಅಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ఇంటి ముందు కూర్చున్న దళితుడిని స్టేషన్కు తీసుకెళ్లి అకారణంగా చితకబాదిన పోలీసులు
సూర్యాపేట – ఇంటి ఎదుట కూర్చున్న తనను నూతనకల్ పోలీసులు అకారణంగా స్టేషన్కు తీసుకెళ్లి విచక్షణరహితంగా కొట్టారని ఆరోపించిన రాము అనే వ్యక్తి
ఇద్దరు కానిస్టేబుళ్లు వచ్చి ఇక్కడ ఎందుకు నిల్చున్నావు అని… pic.twitter.com/0N7NUhXMN5
— Telugu Scribe (@TeluguScribe) January 1, 2025
ಘಟನೆ ಬಗ್ಗೆ ಮಾತನಾಡಿರುವ ರಾಮು, ಇಬ್ಬರು ಪೊಲೀಸ್ ಅಧಿಕಾರಿಗಳು ಅವರ ಬಳಿಗೆ ಬಂದಾಗ ತನ್ನ ಮನೆಯ ಮುಂದೆ ನಿಂತಿದ್ದರು. ಅವರು ಯಾಕೆ ನಿಂತಿದ್ದೀರಿ ಎಂದು ಪ್ರಶ್ನಿಸಿದ್ದು, ಇದು ನನ್ನ ಮನೆ ಎಂದು ಅವರು ಉತ್ತರಿಸಿದರು.
ನಂತರ, ಮಾತಿನ ಚಕಮಕಿ ನಡೆದು ಪೊಲೀಸ್ ಅಧಿಕಾರಿಗಳು ಠಾಣೆಗೆ ಕರೆದೊಯ್ದು ಥಳಿಸಿದ್ದಾರೆ ಎಂದು ರಾಮು ಆರೋಪಿಸಿದ್ದಾರೆ.
ಇದನ್ನೂ ಓದಿ; ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಖಾಸಗಿ ಕಾಲೇಜು ಮಾಲೀಕನ ಮಗನನ್ನು ಬಂಧಿಸಿದ ಪೊಲೀಸರು


