ಜಮೀನು ವಿವಾದದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ಗಳ ಗುಂಪೊಂದು ದಲಿತ ಕುಟುಂಬವನ್ನು ಶವಸಂಸ್ಕಾರ ಮಾಡದಂತೆ ತಡೆದಿರುವ ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಗುರುವಾರ ಬೆಳಕಿಗೆ ಬಂದಿದೆ.
ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮಂದಮರ್ರಿ ಮಂಡಲದಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿದು ಮಂದಮರ್ರಿ ತಹಶೀಲ್ದಾರ್ ಹಾಗೂ ವೃತ್ತ ನಿರೀಕ್ಷಕರು ಸ್ಥಳಕ್ಕೆ ತೆರಳಿ ಅಂತಿಮ ಸಂಸ್ಕಾರಕ್ಕೆ ನೆರವಾಗಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಪ್ರಕಾರ, ಬುರ್ದಗುಡೆಂ ಗ್ರಾಮದ ನಿವಾಸಿಗಳಾದ ನೇತಕಣಿ ಕುಟುಂಬದ ಸದಸ್ಯರು ಅಂತ್ಯಕ್ರಿಯೆಗಾಗಿ ಸಂಬಂಧಿಕರ ಶವವನ್ನು ತಂದರು. ಸುಮಾರು 80 ವರ್ಷಗಳ ಹಿಂದೆ ಕಲ್ವಕುಂತಲ ಮಾಧವ್ ರಾವ್ ಎಂಬುವವರು ದಲಿತ ಸಮುದಾಯಕ್ಕೆ ಸ್ಮಶಾನ ಸ್ಥಾಪಿಸಲು ಭೂಮಿಯನ್ನು ದಾನ ಮಾಡಿದ್ದರು. ಆದರೆ, ಎನ್ ಉಪೇಂದರ್ ಗೌಡ್ ಮತ್ತು ವೆಂಕಟೇಶ್ ಗೌಡ್ ಅವರು ತಮ್ಮ ಸಹಚರರೊಂದಿಗೆ ಸೇರಿ ಜಮೀನು ಖರೀದಿಸಿರುವುದಾಗಿ ಆರೋಪಿಸಿ ದುರ್ಗಂ ಶಂಕರ್ ಮತ್ತು ಅವರ ಪುತ್ರ ಶ್ರೀನಿವಾಸ್ ಅಂತ್ಯಸಂಸ್ಕಾರ ನೆರವೇರಿಸಲು ಅಡ್ಡಿಪಡಿಸಿದ್ದಾರೆ. ನಂತರ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಶವ ಸಂಸ್ಕಾರದ ಮೇಲ್ವಿಚಾರಣೆ ನಡೆಸಿದರು ಎಂದು ವಿವರಿಸಿದ್ದಾರೆ.
ನಮ್ಮ ಪೂರ್ವಜರ ಅಂತ್ಯಸಂಸ್ಕಾರ ಮಾಡಿದ ಭೂಮಿಯನ್ನು ಏಜೆಂಟರು ಅಗೆದಿದ್ದಾರೆ ಎಂದು ದಲಿತ ಕುಟುಂಬ
ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯದವರು, ಹಿಂದುಳಿದ ವರ್ಗಗಳ (ಬಿಸಿ) ಸದಸ್ಯರು ತಮ್ಮ ಪೂರ್ವಜರನ್ನು ಸಂಸ್ಕಾರ ಮಾಡಿದ ಭೂಮಿಯನ್ನು ರಿಯಲ್ ಎಸ್ಟೇಟ್ ಮಾಫಿಯಾ ನಾಶಪಡಿಸಿ ನಿವೇಶನಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಪ್ರದೇಶವು ಮಂದಮರ್ರಿಯು ಪ್ರದೇಶದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿದ ಅವರು, ಎಲ್‌ಟಿಆರ್ 1/70 ಎಂದೂ ಕರೆಯಲ್ಪಡುವ 1970 ರ ಭೂ ವರ್ಗಾವಣೆ ನಿಯಂತ್ರಣ ಕಾಯಿದೆ 1, ಯಾವುದೇ ಬುಡಕಟ್ಟು ಜನಾಂಗದವರಲ್ಲದವರು ಈ ಪ್ರದೇಶದಲ್ಲಿ ಭೂಮಿಯನ್ನು ಹೊಂದುವುದನ್ನು ತಡೆಯುತ್ತದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗದವರಲ್ಲದವರಿಗೆ ನೀಡಲಾದ ಯಾವುದೇ ಭೂಮಿ ಶೂನ್ಯ ಮತ್ತು ಅನೂರ್ಜಿತವಾಗಿದೆ ಎಂದು ಅವರು ಹೇಳಿದರು. ಸ್ಮಶಾನ ಭೂಮಿಯನ್ನು ಮರಳಿ ಪಡೆಯುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.
ಇದನ್ನೂ ಓದಿ; ಅತ್ಯಾಚಾರ ಪ್ರಕರಣ: ಹೈಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ನಟ ಸಿದ್ದಿಕ್ ವಿರುದ್ಧ ಲುಕ್ ಔಟ್ ನೋಟಿಸ್


