ಜನರ ಆಸ್ತಿಯನ್ನು ಆಕ್ರಮಿಸಿಕೊಂಡು ಭೂ ದಲ್ಲಾಳಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ಈಟೆಲಾ ರಾಜೇಂದರ್ ಅವರು ಜನರ ಮುಂದೆಯೆ ವ್ಯಕ್ತಿಯೊಬ್ಬರಿಗೆ ಥಳಿಸಿರುವ ಘಟನೆ ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಪೋಚಾರಂನಲ್ಲಿ ನಡೆದಿದೆ. ಘಟನೆಯನ್ನು ಸಮರ್ಥಿಸಿಕೊಂಡಿರುವ ಸಂಸದ, ತಾನು ಸಂತ್ರಸ್ತ ಜನರ ಪರವಾಗಿ ನಿಂತಿದ್ದಾಗಿ ಹೇಳಿಕೊಂಡಿದ್ದಾರೆ. ತೆಲಂಗಾಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಭೂ ಒತ್ತುವರಿ ಕುರಿತು ದೂರುಗಳ ಹಿನ್ನಲೆ ಬಿಜೆಪಿ ಸಂಸದ ರಾಜೇಂದರ್ ಮೇಡ್ಚಲ್ ಜಿಲ್ಲೆಯ ಪೋಚಾರಂ ಪುರಸಭೆಯ ಏಕಶಿಲಾ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಸಂಸದರ ಬಳಿ ತಮಗಾದ ಸಂಕಷ್ಟವನ್ನು ವಿವರಿಸಿದ್ದು, ಈ ವೇಳೆ ಸಂಸದ ವ್ಯಕ್ತಿಯ ಕಪಾಳಕ್ಕೆ ಥಳಿಸಿದ್ದಾರೆ. ತೆಲಂಗಾಣ
ಬಡವರ ಜಮೀನನ್ನು ರಿಯಲ್ ಎಸ್ಟೇಟ್ ದಲ್ಲಾಳಿಗಳು ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯು ಭೂ ಸಮಸ್ಯೆಯಲ್ಲಿ ಜನರನ್ನು “ಕಿರುಕುಳ” ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯ ಸಹಾಯಕರಲ್ಲಿ ಒಬ್ಬರು ಎಂದು ಸಂಸದ ರಾಜೇಂದರ್ ಆರೋಪಿಸಿದ್ದಾರೆ.
#BJP MP #EatalaRajendar Slaps Real Estate Broker in #Medchal–#Malkajgiri District
In Ekashila Nagar under Pocharam Municipality, BJP leader and MP Eatala Rajendar physically confronted a real estate broker during a heated argument. The incident unfolded as Eatala expressed his… pic.twitter.com/hXPRJOWgOG— BNN Channel (@Bavazir_network) January 21, 2025
ಇದೇ ವೇಳೆ, ಪೊಲೀಸರು ಮತ್ತು ಕಂದಾಯ ಅಧಿಕಾರಿಗಳ ನಿಷ್ಕ್ರಿಯತೆಯನ್ನು ಆರೋಪಿಸಿದ ರಾಜೇಂದರ್, ಮುಖ್ಯಮಂತ್ರಿ ರೇವಂತ್ ರೆಡ್ಡಿ ಭೂ ಸಮಸ್ಯೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು ಮತ್ತು ಅಸಹಾಯಕ ಭೂ ಮಾಲೀಕರಿಗೆ ಅವರ ನಿವೇಶನಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸದ ಈಟಲ ರಾಜೇಂದರ್ ವ್ಯಕ್ತಿಯ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಪ್ರದೇಶದಲ್ಲಿ ಬಡವರ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂಸದ ವ್ಯಕ್ತಿಗೆ ಥಳಿಸಿದ ನಂತರ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕೂಡ ವ್ಯಕ್ತಿಗೆ ಥಳಿಸಿದ್ದಾರೆ.
ಇದನ್ನೂಓದಿ: ವಿಜಯಪುರ | ಮೂವರು ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ : ಐವರ ಬಂಧನ


