ಪೂರ್ವ ದೆಹಲಿಯ ಶಕರ್‌ಪುರ ಪ್ರದೇಶದಲ್ಲಿ ತನ್ನ ಬಾಡಿಗೆದಾರ ಯುವತಿಯ ಮನೆಯ ಮಲಗುವ ಕೋಣೆ ಮತ್ತು ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಂತ್ರಸ್ತೆ ಯುವತಿ ನಾಗರಿಕ ಸೇವಾ ಆಕಾಂಕ್ಷಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಗರದಿಂದ ಹೊರಗೆ ಹೋಗುವ ಮೊದಲು ಕೀಗಳನ್ನು ತನ್ನ ಮನೆಯ ಓನರ್‌ನ ಮಗ ಕರಣ್‌ಗೆ ಹಸ್ತಾಂತರಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಇದರ ನಂತರ ಯುವತಿಯ ವಾಟ್ಸಾಪ್‌ನಲ್ಲಿ ಕೆಲವು ಅಸಾಮಾನ್ಯ ಚಟುವಟಿಕೆ ಗಮನಿಸಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
“ಯುವತಿಯು ತನ್ನ ವಾಟ್ಸಪ್ ಲಿಂಕ್ ಆಗಿರುವ ಡಿವೈಸ್‌ಗಳನ್ನು ಪರಿಶೀಲಿಸಿದಾಗ, ತನ್ನ ವಾಟ್ಸಾಪ್ ಖಾತೆಯು ಅಪರಿಚಿತ ಲ್ಯಾಪ್‌ಟಾಪ್‌ಗೆ ಲಾಗ್ ಇನ್ ಆಗಿರುವುದು ಕಂಡುಬಂದಿತ್ತು. ತಕ್ಷಣವೇ ಅದರಿಂದ ಲಾಗ್ ಔಟ್ ಮಾಡಿದೆ” ಎಂದು ಅವರು ಹೇಳಿದ್ದಾಗಿ ಪೊಲೀಸ್ ಉಪ ಕಮಿಷನರ್ (ಪೂರ್ವ) ಅಪೂರ್ವ ಗುಪ್ತಾ ಅವರು ಹೇಳಿದ್ದಾರೆ.
ಇದನ್ನೂಓದಿ: ಅತ್ಯಾಚಾರ ಪ್ರಕರಣ | CPI(M) ಶಾಸಕ, ನಟ ಮುಖೇಶ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ
ಇದರ ನಂತರ ಯುವತಿಯು ಅನುಮಾನಾಸ್ಪದಳಾಗಿ ರಹಸ್ಯ ಕ್ಯಾಮೆರಾಗಳು ಅಥವಾ ಕಣ್ಗಾವಲು ಸಾಧನಗಳಿಗಾಗಿ ತನ್ನ ಅಪಾರ್ಟ್ಮೆಂಟ್ ಅನ್ನು ಹುಡುಕಲು ಪ್ರಾರಂಭಿಸಿದ್ದು, ಈ ವೇಳೆ ಅವರ ಬಾತ್ರೂಮ್‌ನ ಬಲ್ಬ್ ಹೋಲ್ಡರ್ನಲ್ಲಿ ಕ್ಯಾಮೆರಾ ಇರುವುದು ಕಂಡುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಇದರ ಬೆನ್ನಲ್ಲೇ ಸೋಮವಾರ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ದೂರಿನ ನಂತರ ಪೊಲೀಸ್ ತಂಡವು ಸಂಪೂರ್ಣ ಹುಡುಕಾಟ ನಡೆಸಿದ್ದು, ಅವರ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಅಳವಡಿಸಲಾದ ಮತ್ತೊಂದು ಕ್ಯಾಮೆರಾವನ್ನು ಪತ್ತೆ ಮಾಡಿದೆ ಎಂದು ಅಧಿಕಾರಿ ಹೇಳಿದ್ದಾರೆ. ತಾನು ಊರಿಂದ ಹೊರಗೆ ಹೋದಲ್ಲೆಲ್ಲಾ ಅದೇ ಕಟ್ಟಡದ ಬೇರೆ ಮಹಡಿಯಲ್ಲಿ ವಾಸಿಸುವ ಕರಣ್‌ಗೆ ತನ್ನ ಮನೆಯ ಕೀಲಿಗಳನ್ನು ಕೊಟ್ಟಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ವಿಚಾರಣೆ ವೇಳೆ ಕರಣ್ ಮೂರು ತಿಂಗಳ ಹಿಂದೆ ಮಹಿಳೆಯು ಉತ್ತರ ಪ್ರದೇಶದ ತನ್ನ ಊರಿಗೆ ತೆರಳಿದಾಗ ಮನೆಯ ಕೀಲಿಗಳನ್ನು ಆತನಿಗೆ ಹಸ್ತಾಂತರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಇದನ್ನು ಬಳಸಿಕೊಂಡ ಕರಣ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಮೂರು ಸ್ಪೈ ಕ್ಯಾಮೆರಾಗಳನ್ನು ಖರೀದಿಸಿದ್ದನು. ಅವುಗಳಲ್ಲಿ ಒಂದನ್ನು ಯುವತಿಯ ಮಲಗುವ ಕೋಣೆಯಲ್ಲಿ ಮತ್ತು ಇನ್ನೊಂದನ್ನು ತನ್ನ ಬಾತ್ರೂಮ್‌ನಲ್ಲಿ ಸ್ಥಾಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂಓದಿ: ಮುಡಾ ಪ್ರಕರಣ: ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಅನುಮತಿಸಿದ ‘ಬಿಎನ್‌ಎಸ್‌ಎಸ್’ ಕಾಯ್ದೆ ಹೇಳುವುದೇನು..?
ಈ ಕ್ಯಾಮೆರಾಗಳನ್ನು ಆನ್‌ಲೈನ್‌ನಲ್ಲಿ ಆಪರೇಟ್ ಮಾಡಲು ಸಾಧ್ಯವಾಗದ ಕಾರಣ ಮತ್ತು ವೀಡಿಯೊಗಳನ್ನು ಸಂಗ್ರಹಿಸಲು ಮೆಮೊರಿ ಕಾರ್ಡ್ ಅನ್ನು ಬಳಸಿದ್ದನು. ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಮೆಮೊರಿ ಕಾರ್ಡ್‌ನಿಂದ ಲ್ಯಾಪ್‌ಟಾಪ್‌ಗೆ ವರ್ಗಾಯಿಸಲು ಬಯಸಿದ್ದ ಕರಣ್ ಫ್ಯಾನ್ ರಿಪೇರಿ ಮಾಡುವ ನೆಪದಲ್ಲಿ ಮನೆಯ ಕೀಲಿಗಳನ್ನು ನೀಡುವಂತೆ ಮಹಿಳೆಗೆ ನಿರಂತರವಾಗಿ ವಿನಂತಿಸಿದ್ದನು ಎಂದು ಯುವತಿ ಹೇಳಿದ್ದಾರೆ.
ಪೊಲೀಸರು ನಡೆಸಿದ ತನಿಖೆಯ ಸಮಯದಲ್ಲಿ, ಕರಣ್ ಕೈಯಲ್ಲಿದ್ದ ಮತ್ತೊಂದು ಸ್ಪೈ ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದ್ದು, ಜೊತೆಗೆ ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಸಂಗ್ರಹಿಸಲು ಬಳಸಿದ ಎರಡು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎನ್‌ಎಸ್‌ನ ಸೆಕ್ಷನ್ 77 ಅಡಿಯಲ್ಲಿ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರಣ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರಣ್ ಪದವೀಧರರಾಗಿದ್ದು, ಕಳೆದ ಏಳು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಬಾಡಿಗೆದಾರ ಯುವತಿ
ವಿಡಿಯೊ ನೋಡಿ: ಸಿದ್ದರಾಮಯ್ಯ ವರ್ಸಸ್ ಸೋಮಣ್ಣ: ವರುಣಾ ಕ್ಷೇತ್ರದ ಮತದಾರರ ಮನದ ಮಾತು.


