ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಬುಧವಾರ ತೀಕ್ಷ್ಣವಾದ ರಾಜತಾಂತ್ರಿಕ ಮತ್ತು ಮಿಲಿಟರಿ ದಾಳಿಯನ್ನು ನಡೆಸಿದೆ. ಈ ದಾಳಿಯನ್ನು ದೃಢಪಡಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ನೆರಳುಗಳಿದ್ದು, ಅದು ಜಮ್ಮು ಕಾಶ್ಮೀರದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಕೋಮು ಸಾಮರಸ್ಯವನ್ನು ಭಂಗಗೊಳಿಸುವ ಉದ್ದೇಶವನ್ನು ಹೊಂದಿತ್ತು ಎಂದು ಹೇಳಿದ್ದಾರೆ. ಭಯೋತ್ಪಾದನಾ ಕೇಂದ್ರ
ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ಕೆಲವು ಗಂಟೆಗಳ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಿಸ್ರಿ, ಪಹಲ್ಗಾಮ್ ಹತ್ಯಾಕಾಂಡವನ್ನು “ತೀವ್ರ ಅನಾಗರಿಕ ದಾಳಿ” ಎಂದು ಬಣ್ಣಿಸಿದ್ದಾರೆ.
“ದಾಳಿಯ ವೇಳೆ ಸಂತ್ರಸ್ತರನ್ನು ಅವರ ಕುಟುಂಬ ಸದಸ್ಯರ ಮುಂದೆಯೇ ಹತ್ತಿರದಿಂದ ತಲೆಗೆ ಗುಂಡು ಹಾರಿಸಲಾಯಿತು. ಉದ್ದೇಶಪೂರ್ವಕವಾಗಿ ಅವರನ್ನು ಆಘಾತಗೊಳಿಸಲಾಯಿತು. ಕೋಮು ವೈಷಮ್ಯವನ್ನು ಪ್ರಚೋದಿಸುವ ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಮರಳುವುದನ್ನು ಹಳಿತಪ್ಪಿಸುವ ಗುರಿಯನ್ನು ಈ ದಾಳಿಯ ವಿಧಾನ ಹೊಂದಿತ್ತು” ಎಂದು ಅವರು ಹೇಳಿದ್ದಾರೆ.
“ಇದು ಕೇವಲ ಜನರ ಮೇಲಿನ ದಾಳಿಯಲ್ಲ, ದಾಳಿಯಿಂದ ಬದುಕಿ ಹಿಂತಿರುಗಿ ಹೋಗುವ ಸಂತ್ರಸ್ತರಿಗೆ ಸಂದೇಶ ರವಾನಿಸುವುದು ಕೂಡಾ ಈ ದಾಳಿಯ ಉದ್ದೇಶವಾಗಿತ್ತು. ಆದರೆ ಭಾರತವು ಸ್ಪಷ್ಟ ಮತ್ತು ದೃಢನಿಶ್ಚಯದಿಂದ ಪ್ರತಿಕ್ರಿಯಿಸಿದೆ” ಎಂದು ಮಿಸ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ಮುಂಜಾನೆ ನಡೆಸಿದ ನಿಖರ ದಾಳಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.
“ಪಹಲ್ಗಾಮ್ ದಾಳಿಯು ಪಾಕಿಸ್ತಾನ ಮತ್ತು ಭಯೋತ್ಪಾದಕರ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವವರನ್ನು ಮತ್ತು ಮಾಸ್ಟರ್ ಮೈಂಡ್‌ಗಳನ್ನು ನಮ್ಮ ಗುಪ್ತಚರ ಸಂಸ್ಥೆಗಳು ಗುರುತಿಸಿವೆ. ಜವಾಬ್ದಾರಿಯನ್ನು ಹೊತ್ತಿರುವ ಗುಂಪು, ದಿ ರೆಸಿಸ್ಟೆನ್ಸ್ ಫ್ರಂಟ್ (TRF), ಲಷ್ಕರ್-ಎ-ತೈಬಾದ ಪ್ರತಿನಿಧಿ, ಈ ಸಂಘಟನೆ ಪಾಕಿಸ್ತಾನದಿಂದ ಸಂಪೂರ್ಣವಾಗಿ ಬೆಂಬಲಿತವಾಗಿದೆ.” ಎಂದು ಮಿಶ್ರಿ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ತಂತ್ರವನ್ನು ಸೂಚಿಸಿದ ಅವರು, “ಏಪ್ರಿಲ್ 25 ರಂದು, ಪಾಕಿಸ್ತಾನವು ತನ್ನ ಹೇಳಿಕೆಯಿಂದ TRF ಉಲ್ಲೇಖವನ್ನು ತೆಗೆದುಹಾಕುವಂತೆ UNSC ಮೇಲೆ ಒತ್ತಡ ಹೇರಿತು. ಇದನ್ನು ಸಹ ನಿರ್ಲಕ್ಷಿಸಬಾರದು” ಎಂದು ಅವರು ಹೇಳಿದ್ದಾರೆ.
📡LIVE NOW📡
Press Briefing on #OperationSindoor
📍 National Media Centre, New Delhi
Watch on #PIB‘s📺
➡️Facebook: https://t.co/ykJcYlMTtL
➡️YouTube: https://t.co/Zc3Mb0UYk2https://t.co/qBxWImFQib— PIB India (@PIB_India) May 7, 2025
ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಕೆಡವಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾದ ನಂತರವೇ ಭಾರತವು ಈ ಕ್ರಮಗಳನ್ನು “ಅಳದು ತೂಗಿ” ನಡೆಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಿಶ್ರಿ ಒತ್ತಿ ಹೇಳಿದ್ದಾರೆ.
“ಭಾರತಕ್ಕೆ ಹಾನಿ ಮಾಡಲು ದೀರ್ಘಕಾಲದಿಂದ ಬಳಸಲಾಗುತ್ತಿರುವ ಭಯೋತ್ಪಾದಕ ಮೂಲಸೌಕರ್ಯವನ್ನು ಇಂದು ಬೆಳಿಗ್ಗೆ ಕೆಡವುವ ಮೂಲಕ ನಮ್ಮ ಹಕ್ಕನ್ನು ನಾವು ಚಲಾಯಿಸಿದ್ದೇವೆ” ಎಂದು ಹೇಳುವ ಮೂಲಕ ಮಿಶ್ರಿ ಭಯೋತ್ಪಾದನಾ ಬೆದರಿಕೆಗಳಿಗೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುವ ಹಕ್ಕನ್ನು ಭಾರತ ಕಾಯ್ದಿರಿಸಿದೆ ಎಂದು ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿಯೊಂದಿಗೆ ವರದಿಗಾರರಿಗೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ, “ಆಪರೇಷನ್ ಸಿಂಧೂರ್ ನಡೆಸುವ ವೇಳೆ, ದಾಳಿಯ ಗುರಿಗಳನ್ನು ಗಡಿಯಾಚೆಗೆ ಭಯೋತ್ಪಾದನೆಯಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿರುವವ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇವು ಸಕ್ರಿಯ ಭಯೋತ್ಪಾದಕ ಉಡಾವಣಾ ನೆಲೆಗಳು ಮತ್ತು ತರಬೇತಿ ಶಿಬಿರಗಳಾಗಿದ್ದವು” ಎಂದು ಹೇಳಿದ್ದಾರೆ. ಭಯೋತ್ಪಾದನಾ ಕೇಂದ್ರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ: ಜಮ್ಮು ಕಾಶ್ಮೀರದಲ್ಲಿ ಕನಿಷ್ಠ 7 ಸಾವು, 38 ಜನರಿಗೆ ಗಾಯ
ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ: ಜಮ್ಮು ಕಾಶ್ಮೀರದಲ್ಲಿ ಕನಿಷ್ಠ 7 ಸಾವು, 38 ಜನರಿಗೆ ಗಾಯ

