Homeಮುಖಪುಟ‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’

‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’

ಕೋಯಮುತ್ತೂರಿನ ಖ್ಯಾತ ರೆಸ್ಟೋರೆಂಟ್ ನೀಡಿದ‌‌ ಹೇಳಿಕೆಯಿಂದ ಮುಜುಗರಕ್ಕೊಳಗಾದ ಸಂಸದ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್‌ಗೆ ಒಳಗಾಗಿದ್ದಾರೆ

- Advertisement -
- Advertisement -

ಪಂಚರಾಜ್ಯ ಚುನಾವಣೆ ಪ್ರಾರಂಭವಾಗಿದ್ದು ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಭರವಸೆ ನೀಡುತ್ತಾ, ತಂತ್ರಗಳನ್ನು ಹೆಣೆಯುತ್ತಾ ಮತದಾರರನ್ನು ಸೆಳೆಯುತ್ತಿದೆ. ಆದರೆ ತಮಿಳುನಾಡಿಗೆ ತೆರಳಿದ್ದ ಬೆಂಗಳೂರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಪಕ್ಷಗಳನ್ನು ದೂರಲು ಹೋಗಿ ತಾವೇ ಮುಜುಗರಕ್ಕೊಳಗಾಗಿದ್ದಾರೆ.

ಶುಕ್ರವಾರ ತಮಿಳುನಾಡಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಸಂಸದ ತೇಜಸ್ವಿ ಸೂರ್ಯ ಕೊಯಮತ್ತೂರಿನ ಖ್ಯಾತ ರೆಸ್ಟೋರೆಂಟ್‌ ‘‘ಶ್ರೀ ಅನ್ನಪೂರ್ಣ” ಕ್ಕೆ ತೆರಳಿ ಉಪಹಾರ ಸೇವಿಸಿದ್ದರು. ಇದನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಅವರು ಅದರ ಜೊತೆಗೆ ಹೇಳಿಕೆಯೊಂದನ್ನು ಬರೆದಿದ್ದರು. ಆದರೆ ಆ ನಂತರ ಅದಕ್ಕೆ ಅನ್ನಪೂರ್ಣ ರೆಸ್ಟೋರೆಂಟ್ ನೀಡಿದ ಪ್ರತಿಕ್ರಿಯೆಗೆ ಸಂಸದ ಮುಜುಗರಕ್ಕೊಳಗಾಗುವಂತಾಗಿದೆ.

ಇದನ್ನೂ ಓದಿ: ಅಸ್ಸಾಂ: ಬಿಜೆಪಿ ಮುಖಂಡನ ಮೇಲಿನ ಪ್ರಚಾರ ನಿಷೇಧ ಅರ್ಧ ತೆರವುಗೊಳಿಸಿದ ಚುನಾವಣಾ ಆಯೋಗ!

ಉಪಹಾರ ಸೇವಿಸಿದ ಬಗ್ಗೆ ಅವರು ತಮ್ಮ ಟ್ವೀಟ್‌ನಲ್ಲಿ, “ಇಂದು ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಾಹಾರದ ನಂತರ, ನಾನು ಸಹಜವಾಗಿ ಬಿಲ್ ಪಾವತಿಸಲು ಹೋದೆ. ಕ್ಯಾಷಿಯರ್ ಹಣವನ್ನು ಸ್ವೀಕರಿಸಲು ಹಿಂಜರಿದರು. ಒತ್ತಾಯದ ನಂತರ ಬಹಳ ಹಿಂಜರಿಕೆಯಿಂದಲೇ ಹಣ ಸ್ವೀಕರಿಸಲು ಒಪ್ಪಿಕೊಂಡರು. ಆಗ ನಾನು ಅವರಿಗೆ “ನಾವು ಬಿಜೆಪಿಯವರು. ನಮ್ಮದು ಎಲ್ಲರನ್ನು ಗೌರವಿಸುವ ಮತ್ತು ಎಲ್ಲರನ್ನೂ ರಕ್ಷಿಸುವ ಪಕ್ಷ. ಸಣ್ಣ ವ್ಯಾಪಾರಿಗಳಿಂದಲೂ ರೋಲ್-ಕಾಲ್ ಮಾಡಲು ಡಿಎಂಕೆಯಂತೆ ನಾವಲ್ಲ” ಎಂದು ಬರೆದಿದ್ದರು.

ಇದನ್ನೂ ಓದಿ: ಈ ಸಂಘಿ ಪಿತೂರಿಗೆ ನಾವು ಹೆದರುವುದಿಲ್ಲ: ದಾಳಿ ಕುರಿತು ರಾಕೇಶ್ ಟಿಕಾಯತ್ ಪ್ರತಿಕ್ರಿಯೆ

ಆದರೆ ಇದಕ್ಕೆ ಶನಿವಾರ ಸಂಜೆ ಪ್ರತಿಕ್ರಿಯಿಸಿರುವ ಶ್ರೀ ಅನ್ನಪೂರ್ಣ ರೆಸ್ಟೋರೆಂಟ್, “ಆತ್ಮೀಯ ತೇಜಸ್ವಿ ಸೂರ್ಯ ನಮ್ಮ ರೆಸ್ಟೋರೆಂಟ್‌ನಲ್ಲಿ ನಿಮಗೆ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ. ವಾಸ್ತವವಾಗಿ ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಯಾರೂ ನಮ್ಮನ್ನು ಉಚಿತವಾಗಿ ನೀಡುವಂತೆ ಒತ್ತಾಯಿಸಲಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಅಷ್ಟೇ” ಎಂದು ರೆಸ್ಟೋರೆಂಟ್ ತಮ್ಮ ಫೇಸ್‌ಬುಕ್ ‌ಪೇಜ್‌ ಮೂಲಕ ತಿಳಿಸಿದೆ.

ಇದನ್ನೂ ಓದಿ: ಹಿಂದೂ ಮುಸ್ಲಿಮರನ್ನು ವಿಭಜಿಸಲು AIMIM ಪಕ್ಷಕ್ಕೆ ಬಿಜೆಪಿ ಹಣ ನೀಡಿದೆ: ಮಮತಾ ಬ್ಯಾನರ್ಜಿ

ರೆಸ್ಟೋರೆಂಟ್ ತನ್ನ ಫೇಸ್‌ಬುಕ್ ಮೂಲಕ ನೀಡಿರುವ ಹೇಳಿಕೆಯ ನಂತರ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್‌ಗೆ ಒಳಗಾಗಿದ್ದಾರೆ.

ಲಕ್ಷ್ಮಿ ರಾಮಚಂದ್ರನ್ ಅವರು, “ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು. ನಿಮ್ಮ ನಾಟಕಗಳನ್ನು ಬೆಂಗಳೂರಲ್ಲೇ ಬಿಟ್ಟು ಬನ್ನಿ” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಹಿಂದೂ ಮುಸ್ಲಿಮರನ್ನು ವಿಭಜಿಸಲು AIMIM ಪಕ್ಷಕ್ಕೆ ಬಿಜೆಪಿ ಹಣ ನೀಡಿದೆ: ಮಮತಾ ಬ್ಯಾನರ್ಜಿ

ಸರಣ್ ಆರ್‌. ಕೆ. ಅವರು, “ಈ ರೀತಿಯ ಬಿಗಿಯಾದ ಹೊಡೆತ ಪಡೆದ ನಂತರ ತೇಜಸ್ವಿ ಸೂರ್ಯ ನೋವು ಅನುಭವಿಸುತ್ತಿದ್ದಾರೆ’’ ಎಂದು ಹೇಳಿದ್ದಾರೆ.

ಮಣಿ ಅವರು, “ಕೆಲವು ಏಟು ತುಂಬಾ ಸದ್ದು ಮಾಡುವುದಿಲ್ಲ. ಆದರೆ ಅವು ವ್ಯಕ್ತಿಯ ಮೇಲೆ ಶಾಶ್ವತವಾದ ಮುದ್ರೆಯನ್ನು ಬಿಟ್ಟು ಬಿಡುತ್ತವೆ. ಇದು ಅಂತಹ ಅದ್ಭುತ ಮತ್ತು ವಿನಮ್ರ ಕಪಾಳಮೋಕ್ಷ ಆಗಿದೆ. ಏನಂತೀರಿ ತೇಜಸ್ವಿ ಸೂರ್ಯ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಕಾರಲ್ಲಿ ಇವಿಎಂ: ಅಸ್ಸಾಂ ಕಾಂಗ್ರೆಸ್‌ನಿಂದ ಪ್ರತಿಭಟನೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...