ವಿಶ್ವವಿಖ್ಯಾತ ತಾಜ್‌ಮಹಲ್‌ನ 22 ಬೀಗ ಹಾಕಿದ ಕೊಠಡಿಗಳ ಒಳಗೆ ಹಿಂದೂ ವಿಗ್ರಹಗಳು ಅಥವಾ ಧರ್ಮಗ್ರಂಥಗಳ ಇದೆ ಎಂದು ಆರೋಪಿಸಿ ಅದನ್ನು ಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ಮೂರು ದಿನಗಳ ಮೊದಲು, ಮೇ 9 ರಂದು ತಾಜ್ ಮಹಲ್‌ನಲ್ಲಿನ ಭೂಗತ ಕೊಠಡಿಯಲ್ಲಿನ ಚಿತ್ರಗಳನ್ನು ಭಾರತೀಯ ಪುರಾತತ್ವ ಇಲಾಖೆ ಬಿಡುಗಡೆ ಮಾಡಿತ್ತು.
ಮೇ 12 ರಂದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಅಯೋಧ್ಯೆಯಲ್ಲಿನ ಬಿಜೆಪಿಯ ಮಾಧ್ಯಮ ಘಟಕದ ಉಸ್ತುವಾರಿ ರಜನೀಶ್ ಸಿಂಗ್ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿತ್ತು. ತಾಜ್ ಮಹಲ್ ಶಿವನ ಹಳೆಯ ದೇವಾಲಯವಾಗಿದ್ದು, ಅದನ್ನು ತೇಜೋ ಮಹಾಲಯ ಎಂದು ಕರೆಯಲಾಗುತ್ತದೆ ಎಂದು ಸಿಂಗ್ ವಾದಿಸಿದ್ದರು. ಸ್ಮಾರಕದ “ನೈಜ ಇತಿಹಾಸ”ವನ್ನು ಅಧ್ಯಯನ ಮಾಡಲು ಕೊಠಡಿಗಳನ್ನು ತೆರೆದು ಸತ್ಯಶೋಧನಾ ಸಮಿತಿಯನ್ನು ರಚಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣೆಗೆ ನಿರ್ದೇಶನಗಳನ್ನು ನೀಡಬೇಕು ಎಂದು ಅವರು ಕೋರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆದರೆ, ನ್ಯಾಯಾಲಯವು ರಜನೀಶ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡು, ಅಂತಹ ವಿಷಯಗಳನ್ನು ಇತಿಹಾಸಕಾರರು, ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು ಚರ್ಚಿಸಬೇಕು ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನೂ ಓದಿ: ತಾಜ್‌ಮಹಲ್‌ನ 22 ಬಾಗಿಲುಗಳನ್ನು ತೆರೆಯಬೇಕೆಂಬ ಬಿಜೆಪಿ ಮುಖಂಡನ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್
ಆದರೆ ಈ ವಿಚಾರಣೆಗೂ ಮೊದಲು ಮೇ 9 ರಂದು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಟ್ವಿಟರ್‌ನಲ್ಲಿ ಜನವರಿ 2022 ರ ತನ್ನ ವರದಿಯನ್ನು ಹಂಚಿಕೊಂಡಿದೆ. ಕೊಠಡಿಗಳ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಸಂಸ್ಥೆಯು ಈ ಚಿತ್ರಗಳನ್ನು ಟ್ವೀಟ್ ಮಾಡಿದೆ ಎಂದು ಪ್ರವಾಸೋದ್ಯಮ ಉದ್ಯಮದ ಅಧಿಕಾರಿಗಳು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
Click on the link to download/view the January issue of @ASIGoI's Newsletter.https://t.co/tIJmE46UR4 pic.twitter.com/UKWsTA2nPZ
— Archaeological Survey of India (@ASIGoI) May 9, 2022
“ನದಿ ಭಾಗದ ಭೂಗತ ಕೋಣೆಗಳ ನಿರ್ವಹಣೆಯ ಕೆಲಸವನ್ನು ಮಾಡಲಾಗಿದೆ” ಎಂದು ಈ ವರದಿಯು ಎರಡು ಚಿತ್ರಗಳನ್ನು ಪ್ರಕಟಿಸಿದೆ. ಜೊತೆಗೆ ನಿರ್ವಹಣೆಗೆ ಮೊದಲು ಮತ್ತು ನಂತರ ಹೇಗಿದೆ ಎಂದು ಕೂಡಾ ಅದು ಚಿತ್ರದಲ್ಲಿ ಪ್ರಕಟಿಸಿದೆ.
“ಹಾಳಾಗಿರುವ ಸುಣ್ಣದ ಮೇಲ್ಪದರವನ್ನು ತೆಗೆದು, ಅದಕ್ಕೆ ಮತ್ತೆ ಸಾಂಪ್ರದಾಯಿಕ ಸುಣ್ಣದ ಸಂಸ್ಕರಣೆಯನ್ನು ಹಾಕುವ ಮೂಲಕ ಸುಣ್ಣವನ್ನು ಬಳಿಯಲಾಯಿತು” ಎಂದು ಅದು ಹೇಳಿದೆ.

ಮೊಘಲ್ ರಾಜ ಷಹಜಹಾನ್ 1632 ರಲ್ಲಿ ತಾಜ್ ಮಹಲ್ ನಿರ್ಮಾಣವನ್ನು ನಿಯೋಜಿಸಿದನು. ಯೋಜನೆಯು 1653 ರಲ್ಲಿ ಪೂರ್ಣಗೊಂಡಿತು. ಆದರೆ ಕೆಲವು ಹಿಂದುತ್ವದ ಹುಸಿ ಇತಿಹಾಸಕಾರರು ಸ್ಮಾರಕವು ಷಹಜಹಾನ್‌ಗಿಂತ ಮೊದಲೇ ಅದರಲ್ಲೂ ಭಾರತದಲ್ಲಿ ಮುಸ್ಲಿಂ ಆಳ್ವಿಕೆಯು ಪ್ರಾರಂಭವಾಗುವ ಮೊದಲೇ ನಿರ್ಮಿಸಲಾಗಿತ್ತು ಎಂದು ಸುಳ್ಳೇ ಸುಳ್ಳು ಪ್ರತಿಪಾದಿಸುತ್ತಿದ್ದಾರೆ.
ಇದನ್ನೂ ಓದಿ: ತಾಜ್‌ಮಹಲ್ ಆವರಣದಲ್ಲಿ ಶಿವಪೂಜೆ: ಹಿಂದೂ ಮಹಾಸಭಾ ಕಾರ್ಯಕರ್ತರ ಬಂಧನ
ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಆಗ್ರಾ ಸರ್ಕಲ್ ಘಟಕದ ಅಧಿಕಾರಿಯೊಬ್ಬರು, “ವರದಿಯಲ್ಲಿ ಪ್ರಕಟವಾದ ಚಿತ್ರಗಳು ಕಳೆದ ಡಿಸೆಂಬರ್ ತಿಂಗಳದ್ದಾಗಿದೆ. ಅದರ ನಂತರವೂ ಅಲ್ಲಿ ಕೆಲಸಗಳು ನಡೆದಿದೆ. ಮತ್ತು ಅದರ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ. ಅದರೆ ಸಂಸ್ಥೆಯು ತನ್ನ ಮುಂದಿನ ವರದಿಯಲ್ಲಿ ಅದನ್ನು ಪ್ರಕಟಿಸುತ್ತಾರೆಯೆ ಎಂದು ಸಂಪಾದಕೀಯ ನಿರ್ಧಾರಿಸುತ್ತದೆ ಎಂದು ಅವರು ಹೇಳಿದ್ದಾರೆ.


