Homeಕರ್ನಾಟಕ‘ನೇಣುಗಂಬ ಏರಬೇಕಾಗಿದ್ದ ಭಯೋತ್ಪಾದಕಿಯನ್ನು ಸಂಸದೆ ಮಾಡಿದ ಬಿಜೆಪಿಯದ್ದು ತಾಲಿಬಾನಿಯದ್ದೇ ರಕ್ತ’- ಕಾಂಗ್ರೆಸ್

‘ನೇಣುಗಂಬ ಏರಬೇಕಾಗಿದ್ದ ಭಯೋತ್ಪಾದಕಿಯನ್ನು ಸಂಸದೆ ಮಾಡಿದ ಬಿಜೆಪಿಯದ್ದು ತಾಲಿಬಾನಿಯದ್ದೇ ರಕ್ತ’- ಕಾಂಗ್ರೆಸ್

- Advertisement -
- Advertisement -

ನೇಣುಗಂಬಕ್ಕೆ ಏರಬೇಕಾದಾಕೆಯನ್ನು ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು ತಾಲಿಬಾನಿ ಬಿಜೆಪಿಯಾಗಿದ್ದು, ಮಾಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನು ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನು ಜಾಹೀರುಪಡಿಸಿದೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ದ ಶುಕ್ರವಾರ ಕಿಡಿಕಾರಿದೆ.

ತನ್ನ ಅಧೀಕೃತ ಟ್ವಿಟರ್‌ ಖಾತೆಯಲ್ಲಿ, “ಆರೆಸ್ಸೆಸ್‌,ಬಿಜೆಪಿ ಮತ್ತು ತಾಲಿಬಾನಿಗೆ ಬಹಳ ನೆಂಟಸ್ತಿಕೆಯಿದೆ. ಕಠ್ಮಂಡು ವಿಮಾನ ಅಪಹರಣ ಪ್ರಕರಣದಲ್ಲಿ, ಅಮೃತಸರದಲ್ಲಿ ಲ್ಯಾಂಡ್ ಆಗಿದ್ದ ವಿಮಾನವನ್ನು ತಾಲಿಬಾನಿಗಳಿಗೆ ಅನುಕೂಲವಾಗಲೆಂದು ಕಂದಹಾರ್‌ಗೆ ಕಳಿಸಿಕೊಟ್ಟು, ಮೂವರು ತಾಲಿಬಾನ್ ಉಗ್ರರನ್ನು ರಾಜಮರ್ಯಾದೆಯಲ್ಲಿ ಬಿಟ್ಟು ಕಳಿಸಿದ್ದು ತಾಲಿಬಾನಿ ಬಿಜೆಪಿಯಾಗಿದೆ” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: ನಿರ್ಮಾಣ ಹಂತದಲ್ಲೆ ಕುಸಿದ ‘ನಮೋ’ ಕಾಲೇಜ್; ‘ಬ್ರಾಂಡ್‌ನೇಮ್‌ ಎಫೆಕ್ಟ್‌‌? – ಮಾಜಿ ಐಎಎಸ್‌ ಪ್ರಶ್ನೆ!

“ತಾಲಿಬಾನ್‌ ಮತ್ತು ಬಿಜೆಪಿ ಒಂದೇ ದಾರಿಯ ಪಯಣಿಗರಲ್ಲವೇ. ಹಾಗಾಗಿ, ಮಾಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನು ಸಂಸದೆ ಮಾಡಿದೆ. ಈ ಮೂಲಕ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ” ಎಂದು ಕಾಂಗ್ರೆಸ್ ಹೇಳಿದೆ.

“ನೇಣುಗಂಬಕ್ಕೆ ಏರಬೇಕಾದಾಕೆಯನ್ನು ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ ಇಟ್ಟಿದ್ದು ತಾಲಿಬಾನಿ ಬಿಜೆಪಿಯಾಗಿದೆ. ಈ ಎರೆಡೂ ಬಗೆಯ ಮೂಲಭೂತವಾದಿಗಳದ್ದು ಒಂದೇ ರಕ್ತ!” ಎಂದು ಕಾಂಗ್ರೆಸ್ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಹತ್ಯೆ

0
ಗದಗದ ಬೆಟಗೇರಿ ನಗರಸಭೆ ಅಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿದಂತೆ ನಾಲ್ವರನ್ನು ಹತ್ಯೆಗೈದಿರುವ ಘಟನೆ ನಗರದಲ್ಲಿ ಗುರುವಾರ (ಏ.18) ಮಧ್ಯರಾತ್ರಿ ನಡೆದಿದೆ. ನಗರದ ಚನ್ನಮ್ಮ ವೃತ್ತದ ಸಮೀಪವಿರುವ ದಾಸರ ಓಣಿಯಲ್ಲಿ ಈ ಘಟನೆ...