ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ತಮ್ಮ ಪಕ್ಷದ ದಲಿತ ಶಾಸಕರೊಬ್ಬರಿಗೆ ಅಶ್ಲೀಲ ಪದದಿಂದ ನಿಂದಿಸಿದ್ದಲ್ಲದೆ, ಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿರುವ ಆಡಿಯೊ ವೈರಲಾಗಿದೆ. ಆಡಿಯೊ ಮಾಧ್ಯಮಗಳಲ್ಲಿ ವರದಿಯಾಗಿದ್ದು, ವ್ಯಾಪಕ ಆಕ್ರೋಶ ಹುಟ್ಟು ಹಾಕಿದೆ.
ಕರ್ನಾಟಕ ಬೇಡ ಜಂಗಮ ಸಮಾಜ ಸಂಘಟನಾ ಕಾರ್ಯದರ್ಶಿ ರವಿ ಹಿರೆಮಠ ಎಂಬವರ ಜೊತೆ ಪೋನಿನಲ್ಲಿ ಮಾತನಾಡಿರುವ ಶಾಸಕ ವೀರಣ್ಣ ಚರಂತಿಮಠ ಅವರು ಕಲ್ಯಾಣಸಮಿತಿ ಅಧ್ಯಕ್ಷ ಹಾಗೂ ಮೂಡಿಗೆರೆ ಬಿಜೆಪಿ ಶಾಸಕರಾಗಿರುವ ಎಂ.ಪಿ. ಕುಮಾರಸ್ವಾಮಿ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. “ಆ ಲೋಪರ್ ಸೂ* ಮಗ ನನ್ನ ಭೇಟಿಯೇ ಆಗಿಲ್ಲ. ಸುಮ್ಮನೆ ನಾನು ಏನೋ ಹೇಳಿದ್ದೀನಿ ಎಂದು ಹೇಳಿದ್ದಾನೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಶಾಸಕ ಚರಂತಿಮಠ ಅವರು ಲಿಂಗಾಯತ ಜಂಗಮ ಸಮುದಾಯಕ್ಕೆ ‘ಬೇಡ ಜಂಗಮ’ ಜಾತಿ ಪ್ರಮಾಣಪತ್ರ ನೀಡುವ ವಿಚಾರವಾಗಿ ಪೋನಿನಲ್ಲಿ ಮಾತನಾಡಿದ್ದು, ಈ ವಿಚಾರದಲ್ಲಿ ನಿಮ್ಮ ಪರವಾಗಿ ನಾವು ಇದ್ದೇವೆ. ಆದರೆ ಅದನ್ನ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಹೇಳಿದರೆ ದಲಿತ ಸಮುದಾಯ ನಮ್ಮ ಮೈಮೇಲೆ ಬೀಳುತ್ತವೆ ಎಂದು ಕೂಡಾ ಅವರು ದಲಿತ ಸಮುದಾಯದ ಬಗ್ಗೆ ಕೂಡಾ ಹಗುರವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಮತ್ತು ಬಿಜೆಪಿಯ ಎರಡು ನಾಲಗೆ
ಫೋನಿನಲ್ಲಿ ಮಾತನಾಡುತ್ತಾ ಶಾಕಸ ಚರಂತಿಮಠ,“ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಬೇಕು ಅಂತ ನಾವು ರಾಜಕಾರಣಿಗಳು ಬಹಿರಂಗವಾಗಿ ಮಾತಾಡಿದ್ರೆ. ಈ ದಲಿತರು ಮೈ ಮೇಲೆ ಬೀಳ್ತಾವೆ” ಎಂದು ಹೇಳಿದ್ದಾರೆ.
ತಮ್ಮನ್ನು ಬೇಡ ಜಂಗಮದ ಪಟ್ಟಿಗೆ ಹಾಕಬೇಕು ಎಂದು ರಾಜ್ಯದ ಜಂಗಮ ಸಮುದಾಯದವರು ಹೋರಾಟ ನಡೆಸುತ್ತಿದ್ದಾರೆ. ಆದರೆ ಇದನ್ನು ಎಸ್‌ಟಿ ದಲಿತ ಸಮುದಾಯ ವಿರೋಧಿಸುತ್ತಿದ್ದು, ಬಲಿಷ್ಠ ಸಮುದಾಯವಾದ ಜಂಗಮ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಹಾಕಿದರೆ ನಿಜವಾಗಿಯು ಹಿಂದುಳಿದ ಎಸ್‌ಟಿ ದಲಿತರಿಗೆ ಅನ್ಯಾಯವಾಗುತ್ತದೆ ಅವರು ಪ್ರತಿಪಾದಿಸುತ್ತಿದ್ದಾರೆ.
ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರು ವಿರುದ್ಧ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. “ಆಡಳಿತ ಪಕ್ಷದ ಶಾಸಕರಾಗಿ, ದಲಿತ ಶಾಸಕರೊಬ್ಬರ ಮೇಲೆ ಅದರಲ್ಲೂ ಸ್ವಪಕ್ಷೀಯ ನಾಯಕರೊಬ್ಬರ ಬಗ್ಗೆ ಈ ರೀತಿಯಾಗಿ ನಾಲಗೆ ಹರಿಬಿಟ್ಟಿದ್ದಾರೆ. ಅಷ್ಟೆ ಅಲ್ಲದೆ ದಲಿತ ಸಮುದಾಯದ ಮೇಲೆ ಅವರಿಗೆ ಇರುವ ಅಸಮಾಧಾನ ಕೂಡಾ ಇದೀಗ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿಗೆ ದಲಿತರ ಬಗ್ಗೆ ಯಾವುದೆ ಕಾಳಜಿ ಇಲ್ಲ ಎಂಬುವುದು ಈ ಆಡಿಯೊ ಮೂಲಕ ಬಹಿರಂಗವಾಗಿದೆ. ಎಲ್ಲವೂ ಬೂಟಾಟಿಕೆ” ಎಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಜೆ. ಹೇಳಿದ್ದಾರೆ.
ಇದನ್ನೂ ಓದಿ: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯವನ್ನು ತಪ್ಪುದಾರಿಗೆಳೆಯುತ್ತಿದೆ: ಸಿದ್ದರಾಮಯ್ಯ



ಇವನ ಹೆಸರು ವೀರಣ್ಣ ಚರಂಡಿ ಮಠನಾ,ಇವನ ನಾಲಿಗೆ ,ಬಾಷೆ ನೋಡಿದರೆ ಅಗೆ ಅನ್ನಿಸತ್ತೆ.