Homeಮುಖಪುಟಆಂಧ್ರಪ್ರದೇಶ ಟೋಲ್‌ಗೇಟ್‌ನಲ್ಲಿ ತಮಿಳುನಾಡು ವಿದ್ಯಾರ್ಥಿಗಳ ಘರ್ಷಣೆ

ಆಂಧ್ರಪ್ರದೇಶ ಟೋಲ್‌ಗೇಟ್‌ನಲ್ಲಿ ತಮಿಳುನಾಡು ವಿದ್ಯಾರ್ಥಿಗಳ ಘರ್ಷಣೆ

- Advertisement -
- Advertisement -

ಆಂಧ್ರಪ್ರದೇಶದ ತಿರುಪತಿಯ ಟೋಲ್ ಪ್ಲಾಜಾದಲ್ಲಿ ಪಾವತಿ ವಿಚಾರವಾಗಿ ತಮಿಳುನಾಡಿನ ಕಾನೂನು ವಿದ್ಯಾರ್ಥಿಗಳು ಮತ್ತು ಟೋಲ್‌ ಪ್ಲಾಜಾ ಸಿಬ್ಬಂದಿ ನಡುವೆ ಭಾನುವಾರ ಘರ್ಷಣೆ ನಡೆದಿದೆ. ವಿದ್ಯಾರ್ಥಿಗಳು ಸಿಬ್ಬಿಂದಿಗೆ ಹೆಲ್ಮೆಟ್‌ಗಳಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಅಲ್ಲಿರುವ ಕೆಲವು ವಾಹನಗಳನ್ನು ಸಹ ಹಾನಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಹಿನ್ನಲೆಯಲ್ಲಿ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಕಾನೂನು ವಿದ್ಯಾರ್ಥಿಗಳನ್ನು ತೆಡೆದಿದ್ದು, ಟೋಲ್ ಪ್ಲಾಜಾದಲ್ಲಿರುವ ಉಳಿದ ವಾಹನಗಳ ಸಮಯ ಹಾಳು ಮಾಡದಂತೆ ಎಚ್ಚರಿಕೆ ನೀಡಿದರೂ ಘರ್ಷಣೆ ಸ್ವಲ್ಪ ಸಮಯದವರೆಗೆ ಮುಂದುವರೆದಿದೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾನೂನು ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಚೆನ್ನೈಗೆ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ. ಟೋಲ್ ಪ್ಲಾಜಾದಲ್ಲಿ ತಮ್ಮ ವಾಹನಗಳಲ್ಲಿನ ಫಾಸ್ಟ್‌‌ಟ್ಯಾಗ್‌ಗಳು ಕೆಲಸ ಮಾಡದ ಕಾರಣ ಟೋಲ್ ಪಾವತಿಗಳಲ್ಲಿ ವಿಳಂಬವಾಯಿತು. ಇದರ ಪರಿಣಾಮವಾಗಿ ದೊಡ್ಡ ಟ್ರಾಫಿಕ್ ಜಾಮ್ ಉಂಟಾಗಿದೆ.

ಈ ವೇಳೆ ವಿದ್ಯಾರ್ಥಿಯ ಕಾರನ್ನು ಹಿಂದಕ್ಕೆ ಸರಿಸಲು ಮತ್ತು ಇತರ ವಾಹನಗಳಿಗೆ ಅವಕಾಶ ಮಾಡುವಂತೆ ಕೇಳಲಾಗಿತ್ತು. ಇದರಿಂದ ಕೆರಳಿದ ವಿದ್ಯಾರ್ಥಿಗಳು ಹೆಲ್ಮೆಟ್‌ಗಳಿಂದ ಸಿಬ್ಬಂದಿಯ ಮೇಲೆ ದಾಳಿ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಹೇಳಿದೆ.

ಇದನ್ನೂ ಓದಿ: ಟೋಲ್‌ಗೇಟ್‌‌‌‌‌‌ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಬಿಲ್ಲವ ನಾಯಕಿಗೆ ಅಶ್ಲೀಲ ನಿಂದನೆ

ಪೊಲೀಸರು ಸ್ಥಳಕ್ಕೆ ಧಾವಿಸಿ ಇತರ ವಾಹನಗಳ ಸಮಯ ಹಾಳು ಮಾಡಬೇಡಿ ಎಂದು ಕೇಳಿಕೊಂಡರೂ ವಿದ್ಯಾರ್ಥಿಗಳು ಅದನ್ನು ಒಪ್ಪಿಕೊಳ್ಳಲಿಲ್ಲ ಎಂದು ವರದಿ ಉಲ್ಲೇಖಿಸಿದೆ. ಈ ನಡುವೆ ವಿದ್ಯಾರ್ಥಿಗಳು ತಮಿಳುನಾಡು ನೋಂದಣಿ ಹೊಂದಿರುವ ವಾಹನಗಳಿಗೆ ಮಾತ್ರ ದಾರಿ ಮಾಡಿಕೊಟ್ಟು, ಆಂಧ್ರಪ್ರದೇಶದ ವಾಹನಗಳನ್ನು ತಡೆದ ಪರಿಣಾಮವಾಗಿ ಸ್ಥಳೀಯ ನಿವಾಸಿಗಳ ನಡುವೆ ಭಾರಿ ಹೊಡೆದಾಟ ನಡೆದಿದೆ.

ಇಡೀ ಘಟನೆಯ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಘರ್ಷಣೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...