ಕೊರೊನಾ ಕಾರಣಕ್ಕೆ ಈ ಬಾರಿಯ ಸಂಸತ್ತಿನ ಚಳಿಗಾಳದ ಅಧಿವೇಶನ ನಡೆಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಒಲವು ತೋರಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ರೈತ ವಿರೋಧಿ ಕಾನೂನುಗಳನ್ನು ತಂದಿದೆ ಎಂದು ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ಮುಂದುವರೆಸಿರುವ ಹಿನ್ನಲೆಯಲ್ಲಿ, ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬೇಡಿಕೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಸಿರುವ ಪ್ರಲ್ಹಾದ್ ಜೋಶಿ ಅಧಿವೇಶನ ಇಲ್ಲ ಎಂದು ದೃಡಪಡಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 15 ರಂದು ಮತ್ತೇ ವಿಧಾನ ಪರಿಷತ್ ಅಧಿವೇಶನ: ’ಗೋಹತ್ಯೆ’ ಮಸೂದೆ ಅಂಗೀಕಾರಕ್ಕೆ ತಯಾರಿ?
’ಕೊರೊನಾ ಕಾರಣಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶನ ರದ್ದು’
ವಿವಾದಾತ್ಮಕ ಹೊಸ ಕೃಷಿ ಕಾನೂನುಗಳನ್ನು ಚರ್ಚಿಸಲು ಅಧಿವೇಶನ ನಡೆಸಬೇಕೆಂದು ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ನೀಡಿದ ಪ್ರತಿಕ್ರಿಯೆ ಇಲ್ಲಿದೆ>>https://t.co/J8KjYxXxZE pic.twitter.com/pNDU7UqI3M
— Naanu Gauri (@naanugauri) December 15, 2020
ಅಧೀರ್ ರಂಜನ್ ಅವರ ಬೇಡಿಕೆಗೆ ಪ್ರತಿಕ್ರಿಯಿಸಿರುವ ಪ್ರಹ್ಲಾದ್ ಜೋಶಿ, “ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದೇನೆ. ಕೊರೊನಾ ಕಾರಣಕ್ಕೆ ಅಧಿವೇಶನವನ್ನು ಕರೆಯದಿರಲು ಎಲ್ಲರೂ ಒಮ್ಮತ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆದ ಮಾನ್ಸೂನ್ ಅಧಿವೇಶನವು ಕೊರೊನಾ ಕಾರಣ್ಕಕೆ ತುಂಬಾ ವಿಳಂಬವಾದರೂ ನಿರಂತರ 10 ಸಭೆಗಳಲ್ಲಿ 27 ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಅವುಗಳಲ್ಲಿ ಮೂರು ಕೃಷಿ ಕಾನೂನುಗಳು ಪ್ರಸ್ತುತ ರೈತ ಪ್ರತಿಭಟನೆಗೆ ನಾಂದಿ ಹಾಡಿದೆ.
ಇದನ್ನೂ ಓದಿ: ಕೇಂದ್ರದೊಂದಿಗೆ ರೈತ ಮುಖಂಡರ ಸಭೆ: ಸಂಸತ್ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ರೈತರ ತಾಕೀತು
“ಪ್ರಸ್ತುತ, ನಾವು ಡಿಸೆಂಬರ್ ಮಧ್ಯದಲ್ಲಿದ್ದು, ಶೀಘ್ರದಲ್ಲೇ ಕೊರೊನಾ ಲಸಿಕೆಯನ್ನು ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ, ನಾನು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಅನೌಪಚಾರಿಕವಾಗಿ ಸಂಪರ್ಕಿಸಿದ್ದೇನೆ. ಅವರು ಸಾಂಕ್ರಾಮಿಕ ರೋಗದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿ ಚಳಿಗಾಲದ ಅಧಿವೇಶನದಿಂದ ದೂರವಿರಲು ನಿರ್ಧರಿಸಿದ್ದಾರೆ. ಸಂಸತ್ತಿನ ಮುಂದಿನ ಅಧಿವೇಶನವನ್ನು ಶೀಘ್ರವಾಗಿ ನಡೆಸಲು ಸರ್ಕಾರ ಸಿದ್ಧವಾಗಿದೆ” ಎಂದು ಅವರು ಅಧೀರ್ ರಂಜನ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಸಂವಿಧಾನವು ಪತ್ರಿ ಆರು ತಿಂಗಳಿಗೆ ಸಂಸತ್ತು ಸಭೆ ಸೇರಬೇಕು ಎಂದು ಹೇಳುತ್ತದೆ. ಫೆಬ್ರವರಿ 1 ರಂದು ಬಜೆಟ್ ಘೋಷಣೆಗೂ ಮುಂಚಿತವಾಗಿ ಜನವರಿ ಕೊನೆಯ ವಾರದಲ್ಲಿ ಬಜೆಟ್ ಅಧಿವೇಶನ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಸೆಪ್ಟೆಂಬರ್‌ನಲ್ಲಿ ಅನೇಕ ಸಂಸದರು ಕರೊನಾ ಸೋಂಕಿಗೆ ಒಳಗಾದ್ದರಿಂದ ಮಾನ್ಸೂನ್ ಅಧಿವೇಶನವನ್ನು ಮೊಟಕುಗೊಳಿಸಲಾಗಿತ್ತು. ಅಧಿವೇಶನ ಪ್ರಾರಂಭವಾಗುವ ಮೊದಲು ನಡೆಸಿದ ಪರೀಕ್ಷೆಗಳಲ್ಲಿ ಲೋಕಸಭೆಯ ಹದಿನೇಳು ಸದಸ್ಯರು ಮತ್ತು ರಾಜ್ಯಸಭೆಯ ಎಂಟು ಮಂದಿ ಕೊರೊನಾ ಪಾಸಿಟಿವ್ ಆಗಿದ್ದರು.
ಇದನ್ನೂ ಓದಿ: ಐಕ್ಯ ಹೋರಾಟ: 3ನೇ ದಿನದ ಪರ್ಯಾಯ ಅಧಿವೇಶನದ ನಿರ್ಣಯಗಳ ವಿವರ ಇಲ್ಲಿದೆ


