Homeಮುಖಪುಟಮುಕ್ತ ಸಂವಾದಕ್ಕೆ 'ಕ್ಲಬ್ ಹೌಸ್‌' ವೇದಿಕೆ ಸೂಕ್ತ: ವ್ಯಸನವಾಗಬಾರದು ಅಷ್ಟೇ

ಮುಕ್ತ ಸಂವಾದಕ್ಕೆ ‘ಕ್ಲಬ್ ಹೌಸ್‌’ ವೇದಿಕೆ ಸೂಕ್ತ: ವ್ಯಸನವಾಗಬಾರದು ಅಷ್ಟೇ

- Advertisement -
- Advertisement -

ನಮ್ಮೆಲ್ಲರ ದುಃಖ, ಖುಷಿ, ನಗು, ಮಾತು, ಮಂಥನ, ಚಿಂತನೆ, ಪೋಟೋ, ವಿಡಿಯೋ ಸೇರಿದಂತೆ ಬದುಕಿನ ಪ್ರತಿಕ್ಷಣದ ಆಗುಹೋಗುಗಳನ್ನು ನಾವು ಸಾಮಾಜಿಕವಾಗಿ ಹಂಚಿಕೊಳ್ಳುವ ತುಡಿತಕ್ಕೆ ಒಳಗಾಗಿದ್ದೇವೆ.

ಅಷ್ಟೇ ಅಲ್ಲದೆ ಕಥೆ, ಕವನ, ಲೇಖನ, ಹಾಸ್ಯ, ಚಿತ್ರಕಲೆ, ಸಂಗೀತ ಸೇರಿ ನಮ್ಮ ಹವ್ಯಾಸಗಳು ಇತರರಿಗೆ ತಲುಪಿಸುವ ಪ್ರಯತ್ನ, ತುಡಿತ, ಕಾತುರ ನಮ್ಮನ್ನು ಕಾಡುತ್ತಿದೆ. ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ತಿಳಿದುಕೊಳ್ಳುವ ಕುತೂಹಲವನ್ನು ಕೂಡ ಸಾಮಾಜಿಕ ಜಾಲತಾಣ ವೇಗವಾಗಿ ಪೂರೈಸಿದೆ. ಹೀಗಾಗಿ ಎಲ್ಲದಕ್ಕೂ ಸಾಮಾಜಿಕ ಜಾಲತಾಣಗಳು ನಮಗೆ ಸೂಕ್ತ ವೇದಿಕೆಯಾಗಿವೆ. ಸಾಮಾಜಿಕ ಜೀವನಕ್ಕೆ ಸಾಮಾಜಿಕ ಜಾಲತಾಣಗಳು ಅದೆಷ್ಟು ಉಪಯುಕ್ತವಾಗಿಯೋ ಅಷ್ಟೇ ಅಪಾಯಕಾರಿ ಕೂಡ ಆಗಿವೆ. ಆದರೆ ದೈಹಿಕವಾಗಿ ಅದೆಷ್ಟೇ ದೂರವಿದ್ದವರೂ ಬೌದ್ಧಿಕವಾಗಿ ಹತ್ತಿರವಾಗಿ ಗಾಢವಾದ ಪ್ರೀತಿ ತೋರುತ್ತಾರೆ, ಆಪ್ತರಾಗಿ, ಸ್ನೇಹ, ಸಂಬಂಧ ಮತ್ತಷ್ಟು ಗಟ್ಟಿಯಾಗಿ ಕಾಪಿಟ್ಟುಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣಗಳು ನಮ್ಮ ದೈನಂದಿನ ಬದುಕಿನಲ್ಲಿ ಹೊಸ ಚೈತನ್ಯ ತುಂಬುತ್ತಿವೆ, ಭರವಸೆ ಮೂಡಿಸುತ್ತಿವೆ, ಸ್ಫೂರ್ತಿ ನೀಡುವ ಗೈಡ್ ಎಂದು ಹೇಳಿದರೂ ತಪ್ಪಾಗಲಾರದು. ಇಂಥ ಸೋಶಿಯಲ್ ಮೀಡಿಯಾ  ಪಟ್ಟಿಯಲ್ಲಿ ಈಗ ಇನ್ನೊಂದು ‘ಆಡಿಯೋ ತಾಣ’ ಸೇರ್ಪಡೆಯಾಗಿದೆ. ಈಗಾಗಲೇ ಇದರ ಬಗ್ಗೆ ನಿಮಗೆ ತಿಳಿದಿರಬಹುದು. ಇನ್ನುಳಿದ ಅಪ್ಲಿಕೇಶನ್ ಗಿಂತ ಹೆಚ್ಚು  ಜನಪ್ರಿಯವಾಗುತ್ತಿರುವ ಕ್ಲಬ್ ಹೌಸ್ ಆ್ಯಪ್ ಈಗಿರುವ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಜಗತ್ತಿನಾದ್ಯಂತ ಹೆಚ್ಚು ಸುದ್ದಿಯಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಜನ್ಮತಾಳಿದ ‘ಕ್ಲಬ್ ಹೌಸ್’ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಇದು ದಿನದಿಂದ ದಿನಕ್ಕೆ ತನ್ನ ಬಳಕೆದಾರರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಮೊದ ಮೊದಲಿಗೆ ‘ಕ್ಲಬ್ ಹೌಸ್’ ಎಂದರೆ ಬಹಳಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. ಕ್ಲಬ್ ಹೌಸ್ ಎಂದರೆ ಯಾವುದಾದರೂ ಒಂದು ವಿಷಯದ ಕುರಿತು ಚರ್ಚಿಸುವ ಪ್ರತ್ಯೇಕ ಸ್ಥಳವಾಗಿರಬಹುದು, ಬಾರ್, ರೆಸ್ಟೋರೆಂಟ್ ಅಥವಾ ಮೋಜು ಮಸ್ತಿ ಮಾಡುವ ಪಾರ್ಕ್ ತಾಣವಾಗಿರಬಹುದು ಎಂದೇ ತಿಳಿದಿದ್ದು ನಿಜ. ಮೊದಲಿಗೆ ಈ ರೀತಿಯ ಗೊಂದಲ ಆಗುವುದು ಸಹಜ. ಆದರೆ ನಾವು ಅರ್ಥೈಸಿಕೊಂಡಷ್ಟು ಮಾಮೂಲಿ ‘ಆ್ಯಪ್’ ಇದಲ್ಲ, ಎಲ್ಲಾ ಸಾಮಾಜಿಕ ಜಾಲತಾಣಗಳಿಗಿಂದ ಇದು ಒಂದು ತುಸು ವಿಭಿನ್ನ ರೀತಿಯ ಜಾಲ-ತಾಣವಾಗಿದೆ ಎಂದು ತಿಳಿಯಬೇಕಾದರೆ ನೀವೂ ‘ಕ್ಲಬ್ ಹೌಸ್‌’ಗೆ ಬರಬೇಕು.

ಹಾಗಾದರೆ ‘ಕ್ಲಬ್ ಹೌಸ್‌’ ಅಪ್ಲಿಕೇಶನ್ ವೈಶಿಷ್ಟ್ಯತೆ ಏನು? ಎಂದರೆ ಇನ್ನಿತರೆ ಸಾಮಾಜಿಕ ಜಾಲತಾಣಗಳಂತೆ ಇಲ್ಲಿ ಫೋಟೋ, ವಿಡಿಯೋ ಪೋಸ್ಟ್ ಹಾಗೂ ಟೈಪ್ ಮಾಡಲು ಯಾವುದೇ ಆಯ್ಕೆಗಳಿಲ್ಲ, ಕಾಲ್ ಮಾಡುವ ಹಾಗಿಲ್ಲ. ಬದಲಾಗಿ ‘ವಾಯ್ಸ್ ಚಾಟ್’ ಮುಖಾಂತರ ಸಂಭಾಷಣೆ ಮಾಡಬಹುದು. ಒಬ್ಬರು ‘ಆಡಿಯೋ ಸಂಭಾಷಣೆ’ ಮಾಡುವಾಗ ಉಳಿದವರು ಕಿವಿಯಾಗಿ ಕೇಳಬೇಕು. ನಂತರ ಅನ್‌ಮ್ಯೂಟ್ ಮಾಡಿ ನಾವು ಮಾತಾಡಬಹುದು. ಜಗತ್ತಿನ ಯಾವುದೇ ಸ್ಥಳದಲ್ಲಿದ್ದರೂ ‘ಕ್ಲಬ್ ಹೌಸ್‌’ ಬಳಸಬಹುದು, ಅಲ್ಲಿಯ ಎಲ್ಲಾ ಚರ್ಚೆಯಲ್ಲಿ ಭಾಗವಹಿಸಬಹುದು.

ಕ್ಲಬ್ ಹೌಸ್‌ ಸಂವಾದದಲ್ಲಿ ಭಾಗಿಯಾಗಲು ನೀವು ಯಾರಿಗೂ ನಿಮ್ಮ ಮೊಬೈಲ್ ನಂಬರ್ ಕೊಡುವ ಅಗತ್ಯವಿಲ್ಲ. ಯಾವುದೇ ಗ್ರೂಪ್ ಸೇರುವ ಜರೂರಿ ಇಲ್ಲ, ಒಮ್ಮೆ ಪ್ಲೇ ಸ್ಟೋರ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್ ನಂಬರ್ ಸೇರಿಸಿ ಕ್ಲಬ್ ಹೌಸ್‌ ಸೇರಿದರೆ ಸಾಕು. ಅಲ್ಲಿರುವ ಯಾವುದೇ ಗ್ರೂಪ್ ಗೆ ನೀವೇ ಸೇರಬಹುದು. ಕ್ಲಬ್ ಹೌಸ್ ನ ಇನ್ನೊಂದು ವಿಶೇಷವೆಂದರೆ ಅಲ್ಲಿ ನಡೆಯುವ ಯಾವುದೇ ಸಂವಾದದಲ್ಲಿ ನೀವು ಸೇರಲು ಮುಕ್ತ ಅವಕಾಶವಿದೆ. ಬಹುಶಃ ನಿಮಗೆ ಅದು ಇಷ್ಟ ಆಗಲಿಲ್ಲ ಎಂದರೆ ಗ್ರೂಪ್ ದಿಂದ ಹೊರಬರಲು ಅವಕಾಶವಿದೆ. ಬೇರೆ ವಿಷಯಗಳ ಚರ್ಚೆಯಲ್ಲಿ ಮತ್ತೆ ಸೇರಬಹುದು. ಇದು ನಮಗಿಷ್ಟದಂತೆ ಬಳಸುವ ಅಪರೂಪದ ತಾಣವಾಗಿದೆ.

ಫೋಟೊ, ವಿಡಿಯೋ, ಮೆಸೇಜ್ ಗಳ ಮೂಲಕ ಸಂಪರ್ಕಿಸಲು ನಮಗೆ ಹಲವು ಸಾಮಾಜಿಕ ಜಾಲತಾಣಗಳಿವೆ, ಆದರೆ ವಾಯ್ಸ್ ಚಾಟ್ ಮೂಲಕ ಚರ್ಚೆ ನಡೆಸಲು ಯಾವುದೇ ಆ್ಯಪ್ ಗಳಿರಲಿಲ್ಲ. ಕೆಲವು ಇದ್ದರೂ ಅಷ್ಟು ಮುನ್ನೆಲೆಗೆ ಬಂದಿರಲಿಲ್ಲ. ಹೀಗಾಗಿ ಕ್ಲಬ್ ಹೌಸ್ ಆ್ಯಪ್ ಎಲ್ಲಕಿಂತ ಹೆಚ್ಚು ವಿಶಿಷ್ಟವಾಗಿ ಕಾಣುತ್ತದೆ. ಕ್ಲಬ್ ಹೌಸ್ ನಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಕ್ಲಬ್ ಹೌಸ್ ಚರ್ಚೆ ಕೇವಲ ಲೈವ್ ನಲ್ಲೇ ಮಾತ್ರ ನಡೆಸಬಹುದು. ಅಲ್ಲಿ ರೆಕಾರ್ಡ್ ಮಾಡಬಾರದೆಂಬ ನಿಯಮವಿದೆ. ಇದು ಇನ್ನೊಂದು ವಿಭಿನ್ನ. ಕ್ಲಬ್ ಹೌಸ್ ಚರ್ಚೆಯಲ್ಲಿ ನಮಗೆ ಭಾಗಿಯಾಗಲು ಸಾಧ್ಯವಾಗದೇ ಆಮೇಲೆ ಅದರ ರೆಕಾರ್ಡ್ ಕೇಳಬೇಕೆಂದರೆ ಸಾಧ್ಯವಿಲ್ಲ. ಲೈವ್ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ಮಾತ್ರ ಇದೆ. ಆದರೆ ನಮಗೆ ಅಗತ್ಯವಾದ ಸಮಯಕ್ಕೆ ಚರ್ಚೆ ಸಂವಾದ, ಗೋಷ್ಠಿ ನಡೆಸುವ ಬಗ್ಗೆ ಮೊದಲೇ ನಿಗದಿಪಡಿಸಬೇಕು. ಇದರಿಂದ ಹೆಚ್ಚಿನ ಜನರು ಚರ್ಚೆಯಲ್ಲಿ ಭಾಗಯಾಗಲು ಸಾಧ್ಯ. ಚರ್ಚೆಯ ವಿಷಯ, ಸಮಯ, ದಿನಾಂಕ ಕುರಿತು ಇತರೇ ತಾಣಗಳಲ್ಲಿ ಲಿಂಕ್ ಶೇರ್ ಮಾಡಬಹುದು.

ಈ ಆ್ಯಪ್ ಎಲ್ಲಾ ಅಂಡ್ರಾಯ್ಡ್ ನಲ್ಲೂ ದೊರೆಯುತ್ತದೆ. ಇದರ ಫೀಚರ್ ಗಳು ಹೆಚ್ಚು ವಿಶೇಷವಾಗಿದ್ದು ಡೌನ್ ಲೋಡ್ ಸಂಖ್ಯೆಯೂ ಅತ್ಯಧಿಕವಾಗಿದೆ. ಕ್ಲಬ್ ಹೌಸ್ ನಲ್ಲಿ ಯಾವುದೇ ಒಂದು ಟಾಪಿಕ್ ನಲ್ಲಿ ಗ್ರೂಪ್ ರಚಿಸಬಹುದು. ಅದರ ಕೆಳಗೆ ಹಾಡು, ಹರಟೆ, ಸಂವಾದ, ಸಂಗೀತ, ಕಥೆ ಸೇರಿದಂತೆ ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಿಷಯಗಳ ಕುರಿತು ಚರ್ಚಿಸಬಹುದು. ಚರ್ಚೆಯಲ್ಲಿ ವಿಷಯ ಮಂಡಿಸಲು ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಬಹುದು. ಚರ್ಚೆಯಲ್ಲಿ ಆಗುವ ವಿಷಯಗಳಿಗೆ ನಾವು ಕಿವಿಯಾಗಬಹುದು. ಗ್ರೂಪ್ ಮಾಡರೇಟರ್ ಅವಕಾಶ ನೀಡಿದರೆ ನಮಗೆ ಮಾತನಾಡಲು ಅವಕಾಶ ಸಿಗುತ್ತದೆ.
ಅಪರಿಚಿತ, ಪರಿಚಿತರಾದ ಹೆಸರಾಂತ ವ್ಯಕ್ತಿಗಳ ಜೊತೆಗೆ ನಮ್ಮ ಸಂವಾದ ನಡೆಸಲು ಕ್ಲಬ್ ಹೌಸ್ ಸೂಕ್ತ ವೇದಿಕೆ ಒದಗಿಸಿದೆ.

ಕ್ಲಬ್ ಹೌಸ್‌ ನಲ್ಲಿ ಚಾಟ್ ರೂಮ್ ಮೂಲಕ ಬಳಕೆದಾರರು ಮಾತನಾಡಬಹುದು. ಒಂದೇ ಸಮಯಕ್ಕೆ ಸಾವಿರಾರು ಜನರು ಒಟ್ಟಿಗೆ ಸೇರಿ ಗುಂಪಿನಲ್ಲಿ ವಾಯ್ಸ್ ಚಾಟಿಂಗ್ ಮೂಲಕ ಚರ್ಚಿಸುವ ಸೌಲಭ್ಯವಿದೆ. ಆ ಗ್ರೂಪ್ ಚರ್ಚೆ ಇಷ್ಟವಾಗದಿದ್ದರೆ ಗ್ರೂಪ್‌ನಿಂದ ಲೀವ್ ಆಗಬಹುದು.

ಆಪ್ ಡೌನ್‌ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿ, ಜಗತ್ತಿನ ಪ್ರಸಿದ್ಧ ವ್ಯಕ್ತಿಗಳಿಗೆ, ನಿಮ್ಮ ಒಡನಾಟದ ದೂರದ ಸ್ನೇಹಿತರನ್ನು ಫಾಲೋ ಮಾಡಬಹುದು. ಕ್ಲಬ್ ಹೌಸ್ ಚರ್ಚೆಯಲ್ಲಿ ಸೇರಿ ಅದನ್ನು ಕೇಳುತ್ತಲೇ ಸೌಂಡ್ ಇಲ್ಲದ ವ್ಯಾಟ್ಸಪ್, ಫೇಸ್ ಬುಕ್ ಸೇರಿದಂತೆ ಇತರೆ ಆಪ್ ಗಳು ಬಳಸಬಹುದು. ಕಿವಿಗೆ ಹೆಡ್ ಫೋನ್ ಹಾಕೊಂಡು ಬೇರೆ ಕೆಲಸ ಮಾಡುತ್ತಲೇ ಕ್ಲಬ್ ಹೌಸ್‌ ಅಲಿಸಬಹುದು. ಇದೀಗ ಕೋಟ್ಯಾಂತರ ಜನರು ಕ್ಲಬ್ ಹೌಸ್‌ ಬಳಸುತ್ತಿದ್ದಾರೆ. ಸ್ಟಾರ್ ನಟ-ನಟಿಯರು, ಉದ್ಯಮಿಗಳು, ವಿದ್ಯಾರ್ಥಿಗಳು, ಲೇಖಕರು, ರಾಜಕೀಯ ನಾಯಕರು ಈ ಆ್ಯಪ್ ಬಳಸುತ್ತಿದ್ದಾರೆ.

ಈ ಕ್ಲಬ್ ಹೌಸ್‌ ಜಗತ್ತಿನ ಹೊಸ ಹೊಸ ವಿಚಾರಗಳನ್ನು ತಿಳಿಸಲು ಉಪಯುಕ್ತವಾಗಿದೆ. ಈ ಹಿಂದೆ ರೇಡಿಯೋ ಮೂಲಕ ನಾವೆಲ್ಲಾ ಸಂಗೀತ ಸಂಭಾಷಣೆ ಕಾರ್ಯಕ್ರಮಗಳು ಕೇಳಿದ್ದೇವೆ. ಆದರೆ ನಮ್ಮ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಲು ಅವಕಾಶ ಇರಲಿಲ್ಲ. ಆದರೆ ಈ ಕ್ಲಬ್ ಹೌಸ್ ಎರಡೂ ಅವಕಾಶ ಒದಗಿಸಿದೆ. ತಡಮಾಡದೇ ಈಗಲೇ ಡೌನ್‌ಲೋಡ್ ಮಾಡಿಕೊಂಡು ಹೆಚ್ಚಿನ ವಿಚಾರಗಳನ್ನು ತಿಳಿಯಲು ಪ್ರಯತ್ನಿಸಿ. ಆದರೆ ಕ್ಲಬ್ ಹೌಸ್‌ ವ್ಯಸನಿಗಳಾಗದೇ ಮಿತವಾಗಿ ಬಳಸುವ ರೂಢಿ ಮಾಡಿಕೊಳ್ಳಿ. ಹೆಚ್ಚಿನ ಜ್ಞಾನ ಸಂಪಾದನೆ ಜೊತೆಗೆ ಸಾಮಾಜಿಕ ಬದಲಾವಣೆಗೆ ಕ್ಲಬ್ ಹೌಸ್‌ ಬಳಕೆಯಾಗಲಿ ಅಷ್ಟೇ. ಏನಂತೀರಿ?

ಬಾಲಾಜಿ ಕುಂಬಾರ ಚಟ್ನಾಳ 

(ಬೀದರ್‌ನಲ್ಲಿ ವಾಸವಿರುವ ಬಾಲಾಜಿ ಕುಂಬಾರ ಚಟ್ನಾಳರವರು ಶಿಕ್ಷಕರು ಮತ್ತು ಯುವಬರಹಗಾರರು.)


ಇದನ್ನೂ ಓದಿ: ಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....