ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು ಎಪ್ರಿಲ್ 1ರ ಶುಕ್ರವಾರ (ಇಂದು)ದಿಂದ ಮತ್ತೆ ದುಬಾರಿಯಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 19 ಕಿಲೋಗ್ರಾಂ ಸಿಲಿಂಡರ್‌ಗೆ 250 ರೂ. ಹೆಚ್ಚಿಸಿದೆ. ಇಂದಿನ ಪರಿಷ್ಕರಣೆ ನಂತರ, ಬೆಂಗಳೂರಿನಲ್ಲಿ 19 ಕೆಜಿ ಸಿಲಿಂಡರ್‌ನ ಬೆಲೆ 2317.00 ರೂ.ಗೆ ಏರಿಕೆಯಾಗಿದೆ.
ದೆಹಲಿಯಲ್ಲಿ 2,253 ರೂ. ತಲುಪಿದ್ದು, ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 2,351 ರೂ. ಗೆ ಏರಿದೆ. ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ ರೂ. 2,205 ಮತ್ತು 2,406 ರೂ. ಗೆ ಬೆಲೆ ಏರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ರೆಸ್ಟೋರೆಂಟ್‌ಗಳು, ತಿನಿಸುಗಳು, ಟೀ ಸ್ಟಾಲ್‌ಗಳು ಮತ್ತು ಇತರ ವಾಣಿಜ್ಯ ಉದ್ದೇಶಕ್ಕಾಗಿ 19 ಕೆಜಿ ಸಿಲಿಂಡರ್ ಅನ್ನು ಬಳಸಲಾಗುತ್ತದೆ. ಅತಿದೊಡ್ಡ ಬಳಕೆದಾರರ ವಿಭಾಗವಾಗಿದೆ.
ನಿನ್ನೆಯಷ್ಟೆ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಪ್ರತಿಭಟನೆಯನ್ನು ಮಾಡಿತ್ತು. ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಒಕ್ಕೂಟ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಆದಾಗ್ಯೂ, ಸಬ್ಸಿಡಿ ರಹಿತ 14.2 ಕಿಲೋಗ್ರಾಂ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆ ಇಂದು ಏರಿಕೆಯಾಗಿಲ್ಲ. ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 949.50 ರೂ. ಇದ್ದು, ಕೆಲವೆಡೆ ಒಂದು 1000 ರೂ. ಇದೆ.
ಐದು ರಾಜ್ಯಗಳಲ್ಲಿ ಚುನಾವಣೆ ಇದ್ದ ಕಾರಣಕ್ಕೆ ಮಾರ್ಚ್ 22 ರ ವರೆಗೆ ಯಾವುದೆ ದರವನ್ನು ರಾಜ್ಯ ತೈಲ ಸಂಸ್ಥೆಗಳು ದರ ಪರಿಷ್ಕರಣೆ ಮಾಡಿರಲಿಲ್ಲ. ನಾಲ್ಕೂವರೆ ತಿಂಗಳ ನಂತರ ಪ್ರತಿ ಸಿಲಿಂಡರ್‌ಗೆ ಗೃಹಬಳಕೆಯ ಅಡುಗೆ ಅನಿಲ LPG ದರವನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲು, LPG ದರಗಳನ್ನು ಕೊನೆಯದಾಗಿ ಅಕ್ಟೋಬರ್ 6, 2021 ರಂದು ಪರಿಷ್ಕರಿಸಲಾಗಿತ್ತು.
ಈ ಮಧ್ಯೆ ಕಳೆದ ಹತ್ತು ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಕ್ಕೂಟ ಸರ್ಕಾರ ಇಂದು ಏರಿಕೆ ಮಾಡಿಲ್ಲ. ಅದಾಗ್ಯೂ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ, 2 ಮತ್ತು ಮೂರು ಪೈಸೆ ಏರಿಕೆಯಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ: ನಾನು ಹಿಂದೂ ಅಲ್ಲ, ಲಿಂಗಾಯತ; ನಮ್ಮ ದೇಶದಲ್ಲಿ 12,000 ವಿಭಿನ್ನ ಸಂಸ್ಕೃತಿಗಳಿವೆ: ಕುಂವೀ


