Homeಕರ್ನಾಟಕಸಂವಿಧಾನ ಉಳಿಸುವ ತೀರ್ಮಾನ ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ: ಜಿಗ್ನೇಶ್ ಮೇವಾನಿ

ಸಂವಿಧಾನ ಉಳಿಸುವ ತೀರ್ಮಾನ ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ: ಜಿಗ್ನೇಶ್ ಮೇವಾನಿ

- Advertisement -
- Advertisement -

“ಬಾಬಾಸಾಹೇಬರ ಸಮಾನತೆಯ, ಸಾಮಾಜಿಕ ನ್ಯಾಯದ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ ಮುಗಿಸಲು ಕೆಲವರು ತೀರ್ಮಾನ ಮಾಡಿದ್ದಾರೆ. ಅದರ ವಿರುದ್ಧ ಸಂವಿಧಾನವನ್ನು ಉಳಿಸುವ ತೀರ್ಮಾನ ಮಾಡಿರುವ ನಿಮ್ಮ ಪ್ರಯತ್ನ ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ” ಎಂದು ಗುಜರಾತ್ ರಾಜ್ಯದ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಸಂವಿಧಾನ ಸಂರಕ್ಷಣಾ ಸಮಾವೇಶ ಆಯೋಜಕರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

“ಈ ಭಾರತ ಭೂಮಿ ಮೋದಿ, ಆರೆಸ್ಸೆಸ್, ಮೋಹನ್ ಭಾಗವತ್ ಅವರುಗಳ ದೇಶವ. ಇದು ಬಸವಣ್ಣ ಅವರ ದೇಶ, ಬಾಬಾಸಾಹೇಬರ ದೇಶ, ರವಿದಾಸ್ ಅವರ ದೇಶ, ಪೆರಿಯಾರ್ ಅವರ ದೇಶ, ಇಲ್ಲಿ ಭಗತ್ ಸಿಂಗ್, ಸುಖದೇವ್, ರಾಜಗುರು, ನಾರಾಯಣಗುರು, ಅಶ್ವಾಕುಲ್ಲ ಅವರುಗಳ ನೆಲ ಇದು. ಈ ದೇಶವನ್ನು ಉಳಿಸಲು ಯಾರೆಲ್ಲ ತ್ಯಾಗ ಮಾಡಿ ತಪಸ್ಸು ಮಾಡಿದರೋ, ಯಾವ ದೇಶದಲ್ಲಿ 23 ವರ್ಷದಲ್ಲಿ ಭಗತ್ ಸಿಂಗ್ ಪ್ರಾಣ ನೀಡಿದರೋ ಅಂತಹ ದೇಶವನ್ನು ಈಗ ಕೆಲವು ದಿನಗಳಿಂದ ಆಳುತ್ತಿರುವ ಇವರುಗಳ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ಇಲ್ಲಿ ವೇದಿಕೆಯ ಮೇಲಿರುವವರು 50 ವರ್ಷಗಳಿಂದ ರೈತರು ಮತ್ತು ಕಾರ್ಮಿಕರಿಗಾಗಿ ಹೋರಾಟ ನಡೆಸುತ್ತಿರುವ ಜನರಿದ್ದಾರೆ, ಈಗ ಅದನ್ನು ಮುಂದಕ್ಕೆ ಒಯ್ಯುವ ಹೊಣೆ ನಮ್ಮ ಯುವತಲೆಮಾರಿನ ಹೆಗಲ ಮೇಲಿದೆ” ಎಂದರು ಹೇಳಿದರು.

“ಗುಜರಾತ್ ಗಲಭೆ ನಡೆಸುವ ಮೂಲಕ ಅಲ್ಪಸಂಖ್ಯಾತರ ಮಾರಣಹೋಮ ಸರ್ಕಾರದ ಮೂಗಿನ ಕೆಳಗೆ ನಡೆದು, ಇಡೀ ಪ್ರಪಂಚದ ಪ್ರಜ್ಞಾವಂತರು ಮೋದಿಯನ್ನು ಟೀಕಿಸಿದಾಗ, ಮೋದಿಯವರ ಸಲಹೆಗಾರರು ಹೇಳಿದರು, ‘ವೈಬ್ರಂಟ್ ಗುಜರಾತ್ ಸಮ್ಮಿಟ್’ ಸಂಘಟಿಸಿ ಎಲ್ಲ ಬಂಡವಾಳಿಗರನ್ನು ಕರೆದು ಅಭಿವೃದ್ಧಿಯ ಹರಿಕಾರನ ಥರ ಪೋಸ್ ಕೊಡಿ ಎಂದು. ಅವರುಗಳನ್ನು ಕರೆದು, ನಿಮಗೆ ಭೂಮಿ, ಕರೆಂಟ್, ಬಂಡವಾಳ ಎಲ್ಲವನ್ನೂ ಒದಗಿಸುತ್ತೇವೆ ಎಂದು ಹೇಳಿದರು. ಇದನ್ನೇ ಅವರ ತಂತ್ರವಾಗಿಸಿಕೊಂಡು ಇಂದು ತಮ್ಮ ಎಲ್ಲ ಸಂಪನ್ಮೂಲಗಳನ್ನು ಈ ಬಂಡವಾಳಿಗರಿಂದ ಪಡೆದುಕೊಂಡು, ಅವರ ಜೇಬು ತುಂಬಿಸುವ ಎಲ್ಲ ಕೆಲಸಗಳನ್ನೂ ಅವರುಗಳನ್ನು ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

“ಇಡೀ ದೇಶದ ಬಂಡವಾಳಿಗರಿಂದು ಅದಾನಿ-ಅಂಬಾನಿಗಳಂತೆ ಮೋದಿ ಪಡೆಯ ಜೊತೆಗೆ ನಿಂತಿದ್ದಾರೆ. ಶ್ರಮಜೀವಿಗಳು, ಬಡವರು, ದಲಿತರು ಇವರ ದಾಳಿಗಳ ಗುರಿಯಾಗುತ್ತಿದ್ದಾರೆ. ಮುಂದಿರುವ ದಾರಿ ಒಂದೇ, ನಾವೆಲ್ಲ ಸಂವಿಧಾನ ಪ್ರೇಮಿಗಳು. ನಮ್ಮ ನಮ್ಮ ಊರುಗಳಲ್ಲಿ, ಕೇರಿಗಳಲ್ಲಿ, ಜಿಲ್ಲೆಗಳಲ್ಲಿ ಆರೆಸ್ಸೆಸ್ ಶಾಖೆಗಳ ವಿರುದ್ಧ ಸಂವಿಧಾನದ ಪಡೆಗಳನ್ನು ಕಟ್ಟೋಣ, ಸಂವಿಧಾನದ ಆಶಯಗಳನ್ನು ನಿಜವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ” ಎಂದು ಕರೆ ನೀಡಿದರು.

“ಪಕ್ಷಗಳ ಮೇಲೆ, ರಾಜಕಾರಣಿಗಳ ಮೇಲೆ ನಂಬಿಕೆಯಿಡಬೇಡಿ ಎಂದು ಪರಕಾಲ ಪ್ರಭಾಕರ್ ಹೇಳಿದರು. ನನಗೂ ನಾಯಕರಿಗಿಂತ, ಯಾರು ಬೀದಿಗಳಿದು ರೈತರಿಗಾಗಿ, ಕಾರ್ಮಿಕರಿಗಾಗಿ, ಮಹಿಳೆಯರಿಗಾಗಿ, ದಲಿತರಿಗಾಗಿ ಯುವಜನರಿಗಾಗಿ ಕ್ರಾಂತಿಗಾಗಿ ಚಳವಳಿ ಮಾಡುತ್ತಾರೋ ಅವರ ಮೇಲೆಯೇ ಹೆಚ್ಚು ನಂಬಿಕೆ” ಎಂದರು.

“ನಾವು ಚುನಾವಣೆಯಲ್ಲಿ ಆರೆಸ್ಸೆಸ್-ಬಿಜೆಪಿಯನ್ನು ಸೋಲಿಸಬೇಕು. ಆದರೆ, ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಬಾಬಾಸಾಹೇಬರು, ಶಿಕ್ಷಿತರಾಗಿ, ಸಂಘಟಿತರಾಗಿ, ಸಂಘರ್ಷ ನಡೆಸಿ ಎಂದು ಹೇಳೀದ್ದರು. ನಿಜವಾದ ಸ್ವಾತಂತ್ರ್ಯಕ್ಕಾಗಿ ಸಂಘರ್ಷ ನಡೆಸಿ ಎಂದು ಭಗತ್ ಸಿಂಗ್ ಕೂಡಾ ಹೇಳಿದ್ದರು; ಇಂದು ನಮ್ಮೆಲ್ಲರ ಗುರಿ ಅದೇ, ಈ ಬೀದಿ ಸಂಘರ್ಷದಲ್ಲಿ ನಾನು ನಿಮ್ಮೊಂದಿಗಿದ್ದೀನಿ. ಮತ್ತೆ ಮತ್ತೆ ಕರ್ನಾಟಕಕ್ಕೆ ಕರೆಯಿರಿ, ನಾನು ಮತ್ತೆ ಮತ್ತೆ ಗುಜರಾತ್ ನಿಂದ ಬಂದು ಕರ್ನಾಟಕದಲ್ಲಿ ನಿಮ್ಮೊಂದಿಗೆ ಸೇರುತ್ತೇನೆ” ಎಂದು ಮೇವಾನಿ ಭರವಸೆ ನೀಡಿದರು.

ದೊಡ್ಡಮಟ್ಟದ ಸೈನ್ಯ ಸಂವಿಧಾನ ರಕ್ಷಣೆಗೆ ನಿಂತಿರುವುದನ್ನು ಇಂದು ಕಾಣುತ್ತಿದ್ದೇನೆ: ಪರಕಾಲ ಪ್ರಭಾಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -