Homeಮುಖಪುಟಆಪ್‌ನ ‘ಮೃದು ಹಿಂದುತ್ವ’: ‘ದೇಶಭಕ್ತಿ ಪಠ್ಯಕ್ರಮ’ ಉದ್ಘಾಟಿಸಿದ ದೆಹಲಿ ಸರ್ಕಾರ

ಆಪ್‌ನ ‘ಮೃದು ಹಿಂದುತ್ವ’: ‘ದೇಶಭಕ್ತಿ ಪಠ್ಯಕ್ರಮ’ ಉದ್ಘಾಟಿಸಿದ ದೆಹಲಿ ಸರ್ಕಾರ

- Advertisement -
- Advertisement -

ಬಿಜೆಪಿಯ ಹಾದಿಯಲ್ಲೇ ಆಮ್‌ ಆದ್ಮಿ ಪಾರ್ಟಿ ಹೆಜ್ಜೆ ಇಡುತ್ತಿದ್ದು, ಮೃದು ಹಿಂದುತ್ವವನ್ನು ಎಎಪಿ ಪ್ರತಿಪಾದಿಸುತ್ತಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಇದಕ್ಕೆ ಇಂಬು ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ‘ದೇಶಭಕ್ತಿ ಪಠ್ಯಕ್ರಮ’ಕ್ಕೆ ಮಂಗಳವಾರ ಚಾಲನೆ ನೀಡಿದ್ದಾರೆ.

‘ದೇಶಭಕ್ತಿ’ ಪಠ್ಯಕ್ರಮದ ಮೂಲಕ ತನ್ನ ಮಹತ್ವಕಾಂಕ್ಷೆಯನ್ನು ಎಎಪಿ ಹೊರ ಹಾಕಿದೆ ಎಂದಿರುವ ‘ದಿ ವೈರ್‌’ ಸುದ್ದಿ ಜಾಲತಾಣ, ಛಾತ್ರಾಸಲ್ ಸ್ಟೇಡಿಯಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್‌ ಅವರ ಜನ್ಮದಿನದಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಒಂದೇ ಮಾತರಂ’, ‘ಭಾರತ್‌ ಮಾತಾಕೀ ಜೈ’, ‘ಇನ್‌ಕ್ವಿಲಾಬ್‌ ಜಿಂದಾಬಾದ್‌’ ಘೋಷಣೆ ಮೊಳಗಿವೆ ಎಂದು ವರದಿ ಮಾಡಿದೆ.

2019ರ ಸ್ವಾತಂತ್ರ್ಯ ದಿನಾಚರಣೆಯಂದು ಅರವಿಂದ್ ಕೇಜ್ರೀವಾಲ್ ಈ ಯೋಜನೆಯನ್ನು ಘೋಷಣೆ ಮಾಡಿದ್ದರು.  2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ನೀಡಿದ 28 ಭರವಸೆಗಳಲ್ಲಿ ಈ ಯೋಜನೆಯೂ ಒಂದಾಗಿತ್ತು.

ಹೊಸ ಯೋಜನೆಯ ಉದ್ಘಾಟನೆಯಲ್ಲಿ ಭಗತ್‌ಸಿಂಗ್‌ ಅವರ ತ್ಯಾಗ, ಬಲಿದಾನವನ್ನು ನೆನೆದು ಮಾತನಾಡಿರುವ ಕೇಜ್ರೀವಾಲ್‌, “ಭಗತ್‌ಸಿಂಗ್‌ ಅವರ ಜೀವನ ಚರಿತ್ರೆಯನ್ನು ಆಳವಾಗಿ ಓದಿದ್ದೇನೆ. ಅವರ ಜೀವನ ಚರಿತ್ರೆಯನ್ನು ಓದುತ್ತಾ ಹೋದರೆ ನೀವು ರೋಮಾಂಚಿತರಾಗುತ್ತೀರಿ. ವಿಭಿನ್ನ ಉತ್ಸಾಹ ಹಾಗೂ ಪ್ರೇರಣೆ ನಿಮ್ಮದಾಗುತ್ತದೆ. ಇದನ್ನೇ ದೇಶಭಕ್ತಿ ಎನ್ನುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ದೆಹಲಿ ಕೋರ್ಟ್ ಆವರಣದಲ್ಲಿಯೇ ಗುಂಡಿನ ಕಾಳಗ: ಗ್ಯಾಂಗ್‌ಸ್ಟರ್ ಸೇರಿ ಮೂವರ ಕೊಲೆ

“ನಮ್ಮ ಮಕ್ಕಳು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ದೇಶಭಕ್ತಿಯ ಅನುಭವವಾಗುವ ವಾತಾವರಣವನ್ನು ನಾವು ಸೃಷ್ಟಿಸಬೇಕು” ಎಂದಿರುವ ಅವರು, “ದೇಶಭಕ್ತಿ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುತ್ತದೆ. ಇದು ಹುಟ್ಟಿನೊಂದಿಗೆ ಬರುವ ವಿಷಯ. ಆದರೆ ಇದು ಎಚ್ಚರಗೊಳ್ಳಲು ಮೇಲೆತ್ತುವ ಕಾರ್ಯಕ್ರಮ (push) ಅಗತ್ಯವಿದೆ” ಎಂದು ತಿಳಿಸಿದ್ದಾರೆ.

“74 ವರ್ಷಗಳಲ್ಲಿ ನಾವು ಬೌತವಿಜ್ಞಾನ, ರಾಸಾಯನ ವಿಜ್ಞಾನ, ಗಣಿತವನ್ನು ಎಲ್ಲ ಶಾಲೆಗಳಲ್ಲಿ ಕಲಿತೆವು. ನಮ್ಮ ಮಕ್ಕಳಿಗೆ ದೇಶಭಕ್ತಿಯನ್ನು ಶಾಲೆಯಲ್ಲಿ ಹೇಳಿಕೊಡಲಿಲ್ಲ. ಎಲ್ಲರೊಳಗೂ ದೇಶಭಕ್ತಿ ಇರುತ್ತದೆ, ಅದನ್ನು ಜಾಗೃತಗೊಳಿಸಲು ಮೇಲೆತ್ತುವ ಕಾರ್ಯಕ್ರಮ (push) ಅಗತ್ಯ” ಎಂದು ಕೇಜ್ರೀವಾಲ್ ಹೇಳಿದ್ದಾರೆ.

“ನಾವು ಎಲ್ಲಾ ರೀತಿಯ ವೃತ್ತಿಪರರನ್ನು ತಯಾರಿಸಿದ್ದೇವೆ, ಆದರೆ ನಾವು ದೇಶಭಕ್ತ ವೃತ್ತಿಪರರನ್ನು ಬೆಳೆಸಿಲ್ಲ. ನಾವು ಇತರ ವೃತ್ತಿಗಳನ್ನು ಉತ್ತೇಜಿಸುವುದಿಲ್ಲ ಎಂದು ಹೇಳುತ್ತಿಲ್ಲ. ನಾವು ಎಲ್ಲಾ ರೀತಿಯ ಶಿಕ್ಷಣವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ. ಆದರೆ, ನಾವು ಅವರಿಗೆ ದೇಶಭಕ್ತ ಮೌಲ್ಯಗಳ ಸ್ಪರ್ಶವನ್ನು ನೀಡುತ್ತೇವೆ. ನಾವು ದೇಶಭಕ್ತ ವೈದ್ಯರು, ವಕೀಲರು, ಎಂಜಿನಿಯರ್‌ಗಳು, ನಟರು, ಗಾಯಕರು, ಕಲಾವಿದರು, ಪತ್ರಕರ್ತರು ಹೀಗೆ ಎಲ್ಲರನ್ನೂ ಬೆಳೆಸುತ್ತೇವೆ” ಎಂದಿದ್ದಾರೆ.

“ಈ ಪಠ್ಯಕ್ರಮ ನರ್ಸರಿಯಿಂದ 12ನೇ ತರಗತಿಯವರೆಗೆ ಇರಲಿದೆ. ಪಠ್ಯಪುಸ್ತಕ ರೀತಿಯಲ್ಲಿ ಪಠ್ಯಕ್ರಮ ಇರುವುದಿಲ್ಲ, ಕೈಪಿಡಿ ಮಾದರಿಯಲ್ಲಿ ನೀಡುತ್ತಿದ್ದೇವೆ. ಮೂರು ಕೆಟಗರಿಯಲ್ಲಿ (ನರ್ಸರಿಯಿಂದ 5ನೇ ತರಗತಿಯವರೆಗೆ, 6ರಿಂದ 8ನೇ ತರಗತಿಯವರೆಗೆ ಹಾಗೂ 9ರಿಂದ 12ನೇ ತರಗತಿಯವರೆಗೆ) ಸ್ವಾತಂತ್ರ್ಯ ಹೋರಾಟಗಾರರ ಕಥನಗಳನ್ನು ಕಲಿಯಲಿದ್ದಾರೆ” ಎಂದು ತಿಳಿಸಿದರು.

ತರಗತಿಗೂ ಮುನ್ನ ‘ಧ್ಯಾನ’

ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮಾತನಾಡಿ, “ನರ್ಸರಿಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಕನಿಷ್ಠ 700-800 ಕಥೆಗಳನ್ನು ತಿಳಿಯುವರು, ಕನಿಷ್ಠ 500-600 ದೇಶಭಕ್ತಿ ಗೀತೆಗಳನ್ನು ಕಲಿಯುವರು. ಪ್ರತಿಯೊಂದು ತರಗತಿಯೂ ‘ದೇಶಭಕ್ತಿ ಧ್ಯಾನ’ (ಏಕಗ್ರತಾ ವ್ಯಾಯಾಮ) ಮಾಡುವ ಮೂಲಕ ಆರಂಭವಾಗಲಿವೆ. ಇದು ಐದು ನಿಮಿಷ ಇರಲಿದೆ. ಐವರು ದೇಶಪ್ರೇಮಿಗಳನ್ನು ನೆನೆಯುವುದು ಈ ಧ್ಯಾನದ ಉದ್ದೇಶ” ಎಂದಿದ್ದಾರೆ.

ಹಲವು ಯೋಜನೆಗಳ ಮೂಲಕ ಬಹುಸಂಖ್ಯಾತರನ್ನು ಓಲೈಕೆ ಮಾಡಲು ಎಎಪಿ ಮುಂದಾಗಿದೆ. ಕಳೆದೆರಡು ಚುನಾವಣೆಗಳಲ್ಲಿ ಆಮ್‌ ಆದ್ಮಿ ಪಕ್ಷವು ದಲಿತರು ಮತ್ತು ಮುಸ್ಲಿಮರ ಮತಗಳಿಂದ ಗೆದ್ದಿದೆ. ಜೊತೆಗೆ ಇತರ ವರ್ಗಗಳನ್ನು ಸೆಳೆಯಲು ಮೃದು ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ. ಚುನಾವಣಾ ವೇಳೆ ಕೇಜ್ರಿವಾಲ್‌ ಹನುಮಾನ್ ಚಾಲೀಸ್‌ ಪಠಿಸಿದ್ದರು. ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಬಹುಸಂಖ್ಯಾತ ಹಿಂದೂಗಳ ಮತಗಳನ್ನು ಸೆಳೆದಿದ್ದರು.

ಅಯೋಧ್ಯೆ ಹಾಗೂ ಉತ್ತರ ಪ್ರದೇಶದ ಇತರ ಪ್ರದೇಶಗಳಲ್ಲಿ ‘ತಿರಂಗಯಾತ್ರೆ’ಯನ್ನು ಎಎಪಿ ಹಮ್ಮಿಕೊಂಡಿದ್ದನ್ನು ಗಮನಿಸಬಹುದು. ಉತ್ತರಖಾಂಡ್‌ ರಾಜ್ಯದಲ್ಲಿ ಕೇಜ್ರಿವಾಲ್ ಮಾತನಾಡುತ್ತಾ, ” ನಮ್ಮ ಪಕ್ಷಕ್ಕೆ ಮತ ಚಲಾಯಿಸಿದರೆ, ಉತ್ತರಖಾಂಡ್ ರಾಜ್ಯವನ್ನು ಹಿಂದೂಗಳ ಜಾಗತಿಕ ರಾಜಧಾನಿಯನ್ನಾಗಿ ಮಾಡುತ್ತೇವೆ” ಎಂದಿದ್ದರು. ಎರಡು ವರ್ಷಗಳ ಕಾಲ ದೇವಾಲಯಗಳ ಪುರೋಹಿತರು ನಡೆಸಿದ, ಚಾರ್‌ ಧಮ್‌ ಟ್ರಸ್ಟ್‌ ವಿಸರ್ಜನಾ ಹೋರಾಟಕ್ಕೂ ಎಎಪಿ ಬೆಂಬಲಿಸಿರುವುದನ್ನು ಕಾಣಬಹುದು.

ಕೃಪೆ: ದಿ ವೈರ್‌


ಇದನ್ನೂ ಓದಿರಿ: ದಲಿತ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ದೆಹಲಿ ಪೊಲೀಸರ ಚಾರ್ಜ್‌ಶೀಟ್‌‌ ಹೇಳುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...