ದೇಶದ ಹಲವಾರು ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದ್ದು, ಜೊತೆಗೆ ವೈದ್ಯಕೀಯ ಆಮ್ಲಜನಕದ ಕೊರತೆಯೂ ಹೆಚ್ಚುತ್ತಿದೆ. ಈ ಮಧ್ಯೆ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ದೆಹಲಿ ಸರ್ಕಾರವು ಮಂಗಳವಾರ ಫರಿದಾಬಾದ್ ಆಸ್ಪತ್ರೆಗಳಿಗೆ ತೆರಳುತ್ತಿದ್ದ ಟ್ಯಾಂಕರ್‌ನಿಂದ ಆಮ್ಲಜನಕವನ್ನು ಕದಿಯುತ್ತಿದೆ ಎಂದು ಬುಧವಾರ ಆರೋಪಿಸಿದ್ದಾರೆ.
ಇಂತಹ ಘಟನೆಗಳಿಂದ ತಪ್ಪಿಸಲು, ಎಲ್ಲಾ ಆಮ್ಲಜನಕ ಟ್ಯಾಂಕರ್‌ಗಳಿಗೆ ರಾಜ್ಯ ಪೊಲೀಸ್ ಪಡೆಯಿಂದ ಬೆಂಗಾವಲು ನೀಡಲಾಗುವುದು ಎಂದು ವಿಜ್ ಹೇಳಿದ್ದಾರೆ.
ಇದನ್ನೂ ಓದಿ: ದೇಶದೆಲ್ಲೆಡೆ ಆಮ್ಲಜನಕ ಕೊರತೆ: ಒಂದು ವರ್ಷದಲ್ಲಿ ಭಾರತದ ಆಮ್ಲಜನಕ ರಫ್ತು 700% ಕ್ಕಿಂತ ಹೆಚ್ಚಾಗಿದೆ!
ಫರಿದಾಬಾದ್‌ನ ಆಸ್ಪತ್ರೆಗಳಿಗೆ ಆಮ್ಲಜನಕ ಸರಬರಾಜು ಮಾಡುವ ಟ್ಯಾಂಕರ್ ಅನ್ನು ದೆಹಲಿಯಲ್ಲಿ ನಿಲ್ಲಿಸಲಾಗಿದೆ ಮತ್ತು ಅದರಿಂದ ಅನಿಲವನ್ನು ಹೊರತೆಗೆಯಲಾಗಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ವಿಜ್ ಆರೋಪಿಸಿದ್ದಾರೆ.
"दिल्ली सरकार ने हमारा ऑक्सिजन टैंकर लूट लिया" : हरियाणा के गृहमंत्री अनिल विज ने दिल्ली सरकार पर लगाया गंभीर आरोप @anilvijminister @angrishvishal #OxygenCylinders #DelhiNeedsOxygen pic.twitter.com/P6zodEiKY0
— News24 (@news24tvchannel) April 21, 2021
ತಮ್ಮ ಟ್ವೀಟ್‌ಗಳಲ್ಲಿ ಮತ್ತು ಬುಧವಾರ ಬಿಡುಗಡೆ ಮಾಡಿರುವ ವೀಡಿಯೊ ಅವರು, “ಆಸ್ಪತ್ರೆಗಳಿಗೆ ಆಮ್ಲಜನಕವನ್ನು ವಿತರಿಸಲು ಫರೀದಾಬಾದ್‌ಗೆ ತೆರಳುತ್ತಿದ್ದ ಟ್ಯಾಂಕರ್‌ಗಳನ್ನು ನಿನ್ನೆ ದೆಹಲಿಯಲ್ಲಿ ಕೆಲವರು ತಡೆದಿದ್ದಾರೆಂದು ತಿಳಿದುಬಂದಿದೆ. ಸರ್ಕಾರಗಳು ಬಲವಂತವಾಗಿ ಈ ರೀತಿಯ ಆಮ್ಲಜನಕವನ್ನು ಕದಿಯಲು ಪ್ರಾರಂಭಿಸಿದರೆ, ಅದು ಅವ್ಯವಸ್ಥೆಗೆ ಕಾರಣವಾಗುತ್ತದೆ. ಇದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಲಸಿಕೆಯ ಬೆಲೆ ಘೋಷಿಸಿದ ಸೀರಮ್-ಕೇಂದ್ರಕ್ಕಿಂತ ರಾಜ್ಯಕ್ಕೆ ಹೆಚ್ಚು ಬೆಲೆ ನಿಗದಿ; ಕಾಂಗ್ರೆಸ್ ಆರೋಪ
ಹರಿಯಾಣದಲ್ಲಿ ಆಮ್ಲಜನಕದ ಪೂರೈಕೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡಿದ ವಿಜ್ ಅವರು “ಬೇರೆ ರಾಜ್ಯಗಳಿಂದ ಪೂರೈಕೆಯಾಗುತ್ತಿದ್ದ ಆಮ್ಲಜನಕ ಇದೀಗ ನಿಲ್ಲಿಸಿದ್ದಾರೆ. ಆದ್ದರಿಂದ ಹರಿಯಾಣದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ರಾಜ್ಯದ ರೋಗಿಗಳಿಗೆ ನೀಡಿ ಅವರನ್ನು ಸುರಕ್ಷಿತಗೊಳಿಸುತ್ತೇವೆ. ನಂತರ ಉಳಿದವುಗಳನ್ನು ಬೇರೆ ರಾಜ್ಯಗಳಿಗೆ ನೀಡುತ್ತೇವೆ” ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಆಮ್ಲಜನಕ ಉತ್ಪಾದನಾ ಘಟಕದ ಮೇಲ್ವಿಚಾರಣೆ ಮಾಡಲು ಹರಿಯಾಣದಾದ್ಯಂತ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಈ ಮೊದಲ ರಾಜ್ಯ ಮಟ್ಟದ ಮಾನಿಟರಿಂಗ್ ಕಮಿಟಿಯ ಸಭೆಯಲ್ಲಿ ವಿಜ್ ಆದೇಶಿಸಿದ್ದರು.
ಜೊತೆಗೆ ಕಳ್ಳತನ ಮತ್ತು ಕಾಳ ಸಂತೆಯ ಬಗ್ಗೆ ಪರಿಶೀಲಿಸಲು ಎಲ್ಲಾ ಆಮ್ಲಜನಕ ಉತ್ಪಾದನಾ ಸ್ಥಾವರಗಳಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿತ್ತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಜನರ ಆಕ್ರೋಶಕ್ಕೆ ಮಣಿದ ಸರ್ಕಾರ: ಆರೋಗ್ಯ ಕಾರ್ಯಕರ್ತರ ವಿಮಾ ಯೋಜನೆ ಮುಂದುವರಿಕೆ


