‘ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ಯ್ರ’ ಎಂಬ ವಿಷಯದ ಬಗ್ಗೆ ನಡೆದ ವಿಚಾರದ ಸಂಕಿರಣದಲ್ಲಿ ಮಾತನಾಡುತ್ತಾ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ‘ಕೇಂದ್ರದಲ್ಲಿ ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದೆ’ ಎಂದು ಕೇಂದ್ರದ ಬಿಜೆಪಿ ಸರ್ಕಾರ ವಿರುದ್ದ ಹರಿಹಾಯ್ದಿರುವ ಘಟನೆ ಮೈಸೂರಿನಲ್ಲಿ ಶನಿವಾರ ನಡೆದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಕೆಲವು ನೀತಿಗಳಿಂದಾಗಿ ಪ್ರಾದೇಶಿಕತೆಗೆ ಧಕ್ಕೆ ಬರುತ್ತಿದೆ. ರಾಜ್ಯ ಪಟ್ಟಿಯಲ್ಲಿರುವ ಇಲಾಖೆಗಳು ಕೇಂದ್ರದ ಕೈಸೇರುತ್ತಿದೆ. ವಿಕೇಂದ್ರೀಕರಣ ಆಗುವ ಬದಲು ಕೇಂದ್ರೀಕರಣ ಆಗುತ್ತಿದೆ” ಎಂದು ಮಾಧುಸ್ವಾಮಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಖಾತೆ ಬದಲಾವಣೆ: ಯಡಿಯೂರಪ್ಪಗೆ ಸೆಡ್ಡು ಹೊಡೆದು ಶೆಟ್ಟರ್ ಪಾಳಯಕ್ಕೆ ಜಿಗಿದರೆ ಮಾಧುಸ್ವಾಮಿ?
“ಕೇಂದ್ರ ಸರ್ಕಾರದಲ್ಲಿ ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದ್ದು, ಒಕ್ಕೂಟಕ್ಕೆ ಬಹಳ ದೊಡ್ಡ ಆತಂಕ ಎದುರಾಗಿದೆ. ಬೆಳೆದಂತೆ ಉದಾರವಾದಿಗಳಾಗಬೇಕಾಗಿದ್ದ ನಾವು ಪ್ರಸ್ತುತ ಕೇಂದ್ರೀಕರಣ ಆಗುತ್ತಿದ್ದೇವೆ. ನೀಟ್ ಪರೀಕ್ಷಗೂ, ಕರ್ನಾಟಕಕ್ಕೂ ಏನ್ ಸಂಬಂಧವಿದೆ?” ಎಂದು ಹೇಳಿದ ಅವರು, ಪಕ್ಕದಲ್ಲೇ ಕೂತಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ನೀವಿದನ್ನು ಸಂಸತ್ತಿನಲ್ಲಿ ಕೇಳಬೇಕು ಎಂದು ಎಚ್ಚರಿಸಿದ್ದಾರೆ.
Karnataka Minister @JCMBJP Madhuswamy complains against intervention of central govt in state subjects, says it has put the state in disadvantage, asks @Tejasvi_Surya to raise the matter in parliament, says authoritarian policies by centr fuelling regionalism @XpressBengaluru pic.twitter.com/3snOZky96H
— Ajith M S (@ajithms) March 27, 2021
“ಕರ್ನಾಟಕದಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಅವಕಾಶ ಇಲ್ಲ. ತುಮಕೂರಿನಲ್ಲಿ ಪ್ರಧಾನಿ ಉದ್ಘಾಟನೆ ಮಾಡಿದ ಫುಡ್ ಪಾರ್ಕ್, ಬೆಂಗಳೂರಿನಲ್ಲಿರುವ ಕಂಪನಿಗಳು.. ಹೀಗೆ ಎಲ್ಲಿಯೂ ಕನ್ನಡಿಗರಿಗೆ ಆದ್ಯತೆ ಇಲ್ಲ. ಜಾಗ, ಸೌಲಭ್ಯ ಎಲ್ಲವೂ ನಮ್ಮದಾದರೂ ಉದ್ಯೋಗ ಮಾತ್ರ ಬೇರೆಯವರಿಗೆ ಸೇರಿದೆ” ಎಂದು ಅವರು ಹೇಳಿದ್ದಾಗಿ ಆಂದೋಲನ ಪತ್ರಿಕೆ ವರದಿ ಮಾಡಿದೆ.
“ಈ ಅನ್ಯಾಯದ ವಿರುದ್ಧ ತಮಿಳುನಾಡಿನಂತಹ ರಾಜ್ಯಗಳು ಹೋರಾಟ ಮಾಡಿ ತಮ್ಮ ರಾಜ್ಯದವರಿಗೆ ಅನುಕೂಲವಾಗುವಂತೆ ಮಾಡಿವೆ. ಆದರೆ ಕರ್ನಾಟಕದ ಜನರು ಹೋರಾಟ ಮಾಡುವುದಿಲ್ಲ, ಯಾಕೆಂದರೆ ನಾವು ರಾಷ್ಟ್ರೀಯವಾದಿಗಳು” ಎಂದು ಮಾಧುಸ್ವಾಮಿ ವ್ಯಂಗ್ಯವಾಡಿದ್ದಾಗಿ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ



Tejas surya oba gandu avanige savidhanada bagge arivilla avanoba jathii vadii