Homeಕರ್ನಾಟಕಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

ಯಾವನಾದ್ರು *** ಮಗ ನನ್ನ ಕೇಳಿದ್ದೀರಾ: ರೈತರ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ

- Advertisement -
- Advertisement -

ಅಧಿಕಾರಿಯೊಬ್ಬರನ್ನು ಕೀಳುಭಾಷೆಯಲ್ಲಿ ನಿಂದಿಸಿದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಇದೀಗ ರೈತರ ವಿರುದ್ಧ ದರ್ಪದ ಮಾತುಗಳನ್ನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವನಾದ್ರು ಬೋಸುಡಿಕೆ ಮಗ ಬಂದು ನನ್ನ ಕೇಳಿದ್ದೀರಾ ? ಎಂದು ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಿದ್ದ ಗ್ರಾಮಸ್ಥರ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವರೆಂಬುದನ್ನು ಮರೆತು ಅತ್ಯಂತ ಲಘು ಮತ್ತು ಬೇಜವಾಬ್ದಾರಿಯಿಂದ ಮಾತನಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಿರಾ ತಾಲೂಕು ಗೋಪಾಲದೇವರಹಳ್ಳಿಯ ಗ್ರಾಮಸ್ಥರು ಹೇಮಾವತಿ ನಾಲೆಯಿಂದ ಕುಡಿಯುವ ನೀರು ಹರಿಸಲು ಕೇಳಿರುವುದಕ್ಕೆ ಸಚಿವರು ಗ್ರಾಮಸ್ಥರ ಎದುರೆ ತಾನೊಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಎಂಬುದನ್ನು ಮರೆತು ವರ್ತಿಸಿದ್ದಕ್ಕೆ ಜನರು ಅಲ್ಲಿಂದ ಹೊರಟು ಹೋಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಗೋಪಾಲದೇವರಹಳ್ಳಿ ಗ್ರಾಮಸ್ಥರು ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾರೂ ಗಮನಕ್ಕೆ ಹಾಕಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಿದ್ದರು.

ಇದನ್ನೂ ಓದಿ: ಕೆಲಸ ಮಾಡದೇ ಹೆಂಡ್ತಿಗೆ ಸೀರೆ ತರೋಕೆ ಹೋಗಿದ್ದ?: ಮತ್ತೆ ನಾಲಿಗೆ ಹರಿಯಬಿಟ್ಟ ಸಚಿವ ಮಾಧುಸ್ವಾಮಿ

ಚುನಾವಣೆ ಬಳಿಕ ಸಚಿವ ಜೆ.ಸಿ.ಮಾಧುಸ್ವಾಮಿ ಗೋಪಾಲದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಚುನಾವಣೆ ಬಹಿಷ್ಕರಿಸಿದ್ದಕ್ಕೆ ಸಿಟ್ಟಿಗೆದ್ದ ಮಾಧುಸ್ವಾಮಿ ಜನರ ಸಮ್ಮುಖದಲ್ಲೇ, ”ಯಾವನಾದ್ರೂ ಬೋಸುಡಿಕೆ ನನ್ನ ಕೇಳಿದ್ದೀರಾ, ನೋಡೋಣ ಯಾರ್ ಕೈಯಲ್ಲಿ ನೀರು ಬಿಡುಸ್ತ್ಯೋ” ಎಂದು ಪ್ರಶ್ನಿಸಿದ್ದಾರೆ. ಈ ಮಾತು ಕೇಳಿದ ಗ್ರಾಮದ ಕೆಲವರು, “ಈಯಪ್ಪನತ್ರ ಬೋಸುಡಿಕೆ ಅನ್ನಿಸಿಕೊಳ್ಳಬೇಕಾ” ಎಂದು ಬೈದುಕೊಂಡು ಜಾಗ ಖಾಲಿ ಮಾಡಿದರೆಂದು ಹೇಳಲಾಗಿದೆ.

ಹೇಮಾವತಿ ನೀರು ಬೇಕೆಂದು ಕೇಳಿದ್ದಕ್ಕೆ ಸಚಿವರಿಂದ ಬೈಗುಳ ಕೇಳಬೇಕಾಗಿ ಬಂತಲ್ಲ ಎಂದು ಗ್ರಾಮಸ್ಥರು ಅಸಮಾಧಾನ ತೋಡಿಕೊಂಡಿದ್ದಾರೆ. ಶೇಷನಹಳ್ಳಿ ಕೆರೆ ದೊಡ್ಡ ಅಗ್ರಹಾರ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಅಂತಾ ರೈತರು ಒತ್ತಾಯಿಸಿದ್ದರು.

ಉಪಚುನಾವಣೆಯ ಸಂದರ್ಭದಲ್ಲಿ ಶಿರಾ ಮದಲೂರು ಕೆರೆಗೆ ನೀರು ಹರಿಸುತ್ತೇವೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ಶಿರಾ ಜನರು ಇನ್ನೆಂದು ಕುಡಿಯುವ ನೀರಿಗೆ ಪರದಾಡುವಂತೆ ಆಗಬಾರದು ಎಂದೆಲ್ಲಾ ಭರವಸೆಗಳ ಮಹಾಪೂರವನ್ನೇ ಹರಿಸಿದ್ದ ಯಡಿಯೂರಪ್ಪ ನೇತೃತ್ವದ  ಬಿಜೆಪಿ ಸರ್ಕಾರ ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾರದೆ ಅದೇ ಸರ್ಕಾರದ ಸಚಿವರೊಬ್ಬರು ರೈತರನ್ನು ಹೀನಾಮಾನ ಬೈದಿರುವುದು ಜಿಲ್ಲೆಯಾದ್ಯಂತ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಇಂಥವರನ್ನು ಮುಂದೆ ಆಯ್ಕೆ ಮಾಡಬಾರದು ಎಂದು ರೈತರು ಹೇಳಿದ್ದಾರೆ.

ಇದನ್ನೂ ಓದಿ: ಕುಣಿಗಲ್‌ ಶಾಸಕರನ್ನು ’ಫ್ರಾಡ್’ ಎಂದು ಕರೆದ ಸಚಿವ ಜೆ. ಸಿ. ಮಾಧುಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ವಿರುದ್ಧದ ದೂರುಗಳ ಪರಿಶೀಲನೆ ಆರಂಭಿಸಿದ ಚುನಾವಣಾ ಆಯೋಗ

0
ಪ್ರತಿಪಕ್ಷಗಳು ಮತ್ತು ದೇಶದ ಜನರ ಒತ್ತಡದ ಹೆಚ್ಚಾದ ನಂತರ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಮಾಡಿದ ದ್ವೇಷ ಭಾಷಣದ...