Homeಮುಖಪುಟಹೀಗೊಬ್ಬ ಬಡವರ ವೈದ್ಯ : ಒಂದು ರೂ ಸಹ ಪಡೆಯದೆ ಸೇವೆ ನೀಡುತ್ತಿರುವ ಡಾ.ಬಿ.ಸಂಜೀವ ರೈ

ಹೀಗೊಬ್ಬ ಬಡವರ ವೈದ್ಯ : ಒಂದು ರೂ ಸಹ ಪಡೆಯದೆ ಸೇವೆ ನೀಡುತ್ತಿರುವ ಡಾ.ಬಿ.ಸಂಜೀವ ರೈ

- Advertisement -
- Advertisement -

ನಾವು ಅಪರೂಪದಲ್ಲಿ ಅಪರೂಪವಾಗಿರುವ ಎರಡು ರೂಪಾಯಿ ವೈದ್ಯರು, ಐದು ರೂಪಾಯಿ ವೈದ್ಯರ ಬಗ್ಗೆಯೆಲ್ಲಾ ಕೇಳಿದ್ದೇವೆ. ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ಮಂಗಳೂರು ತಾಲೂಕಿನ ಉಚ್ಚಿಲ- ಕೆ.ಸಿ.ರೋಡ್ ಎಂಬಲ್ಲಿ ಎರಡು ರೂಪಾಯಿ ವೈದ್ಯರೆಂದೇ ಖ್ಯಾತರಾಗಿದ್ದ ಶೆಟ್ಟಿ ಡಾಕ್ಟರ್‌ರ ಬಗ್ಗೆ ವಾರ್ತಾಭಾರತಿ ಪತ್ರಿಕೆಯಲ್ಲಿ ಬರೆದಿದ್ದೆ. ಇಂತವರಿಗಿಂತಲೂ ವಿಶಿಷ್ಟ ಉಚಿತ ಡಾಕ್ಟರ್ ಒಬ್ಬರು ಮಂಗಳೂರು ನಗರದಲ್ಲೇ ಇದ್ದಾರೆ.‌ ಅವರೇ ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ.ಬಿ.ಸಂಜೀವ ರೈ..

ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದು, ಅಕಾಡೆಮಿಕ್ ವಲಯದಲ್ಲಿ ಇವರ ಅತ್ಯುನ್ನತ ಸಾಧನೆಗಳಿಂದ ಮತ್ತು ಒಳ್ಳೆಯ ಮಕ್ಕಳ ತಜ್ಞರೆಂದು ಇವರು ಪ್ರಸಿದ್ಧರಾಗಿದ್ದರೂ ಇವರ ಮಾನವೀಯ ಸೇವೆಗಳು ಎಲ್ಲೂ ಪ್ರಚಾರಕ್ಕೆ ಬಂದಿಲ್ಲ. ಅವರು ತಾನು ನೀಡುತ್ತಿರುವ ಮಾನವೀಯ ಸೇವೆಯನ್ನು ಈ ವರೆಗೆ ಪ್ರಚಾರ ಮಾಡಿದ್ದೂ ಇಲ್ಲ.. ಅವರದಕ್ಕೆ ಪ್ರಚಾರವನ್ನು ಬಯಸಿಯೂ ಇಲ್ಲ.

ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿರುವ ಮೆಡಿಕೇರ್ ಎಂಬ ಕಟ್ಟಡದ ಮಾಲಕರೂ ಆಗಿರುವ ಡಾ.ಬಿ.ಸಂಜೀವ ರೈ ಅದೇ ಕಟ್ಟಡದಲ್ಲಿ ತನ್ನದೊಂದು ಮಕ್ಕಳ ಚಿಕಿತ್ಸಾಲಯವನ್ನಿಟ್ಟು ವೃತ್ತಿ ನಿರತರಾಗಿದ್ದಾರೆ. ಅವರು ವೃತ್ತಿ ನಿರತರಾಗಿದ್ದಾರೆ ಎನ್ನುವುದಕ್ಕಿಂತಲೂ ಅಲ್ಲಿ ಅವರು ಸೇವೆ ನೀಡುತ್ತಿದ್ದಾರೆ ಎನ್ನುವುದು ಹೆಚ್ಚು ಸೂಕ್ತ. ಅವರು ತನ್ನ ಕ್ಲಿನಿಕಿಗೆ ಚಿಕಿತ್ಸೆಗೆಂದು ಬರುವ ಮಕ್ಕಳ ಹೆತ್ತವರಿಂದ ನಯಾ ಪೈಸೆಯ ಶುಲ್ಕ ಪಡೆಯುವುದಿಲ್ಲ. ಔಷಧಿಗಳನ್ನು ಫಾರ್ಮಸಿಗಳಿಗೆ ಬರೆದು ಕೊಡುತ್ತಾರೆ. ತನ್ನ ಬಳಿ ಸ್ಯಾಂಪಲ್‌ಗಳಿದ್ದರೆ ಅದನ್ನೂ ಉಚಿತವಾಗಿ ನೀಡುತ್ತಾರೆ. ಅಗತ್ಯ ಬಿದ್ದರೆ ಮಾತ್ರ ಔಷಧಿ ಬರೆಯುತ್ತಾರೆ. ಎಷ್ಟೋ ಮಕ್ಕಳಿಗೆ ಔಷಧಿಯೇ ಬೇಡ ಎನ್ನುತ್ತಾರೆ. ಆದರೆ ಈ ಡಾಕ್ಟರ್ ಔಷಧಿ ನೀಡುವುದಿಲ್ಲ ಎಂದು ಕೆಲವರಿಗೆ ಅಸಮಾಧಾನವಾಗುವುದೂ ಇದೆ. ವೃತ್ತಿಯನ್ನು ವಾಣಿಜ್ಯೀಕರಿಸದ್ದರಿಂದ ಅಗತ್ಯವಿರುವವರಿಗೆ ಮಾತ್ರ ಔಷಧಿ ಬರೆಯುತ್ತಾರೆ.

ಇವರು ಓರ್ವ ಮಕ್ಕಳ ತಜ್ಞನಾಗಿ ಮಕ್ಕಳೊಂದಿಗೆ ಮಕ್ಕಳಂತೆ ಅತ್ಯಂತ ಪ್ರೀತಿಯಿಂದ ವರ್ತಿಸುತ್ತಾರೆ. ಮಕ್ಕಳಿಗೆ ಔಷಧಿ ಕುಡಿಸುವ ಹೆತ್ತವರ ಕಷ್ಟವನ್ನು ಚೆನ್ನಾಗಿ ಅರಿತಿರುವ ಇವರು ಯಾವತ್ತೂ ಪುಟಗಟ್ಟಲೆ ಪ್ರಿಸ್ಕ್ರಿಪ್ಷನ್ ಬರೆಯುವುದಿಲ್ಲ.‌ ಅನಗತ್ಯ ಆಂಟಿ ಬಯೋಟಿಕ್‌ಗಳನ್ನೂ ಹಾಕುವುದಿಲ್ಲ ಎಂದು ಇವರ ಬಳಿ ಚಿಕಿತ್ಸೆ ಪಡೆಯುವ ಮಕ್ಕಳ ಹೆತ್ತವರು ಹೇಳುತ್ತಾರೆ.

ಅವರು ಶುಲ್ಕ ಪಡೆಯುವುದಿಲ್ಲ ಎಂದು ನನಗೆ ಗೊತ್ತಾಗಿದ್ದೇ ನನ್ನ ತಂಗಿಯಿಂದ. ಅವಳು ನನ್ನ ಸೋದರಳಿಯನನ್ನು ಸುಮಾರು ಮೂರು ವರ್ಷಗಳ ಹಿಂದೆ ಎರಡು ಬಾರಿ ಅವರ ಬಳಿ ಚಿಕಿತ್ಸೆಗೆಂದು ಕರೆದೊಯ್ದು ಫೀಸ್ ಎಷ್ಟು ಸರ್ ಎಂದು ಕೇಳಿದಾಗ.. ಬೇಡ.. ಹೋಗಮ್ಮಾ ಎಂದರಂತೆ.. ಈಕೆಗೆ ಆಶ್ಚರ್ಯವಾಗಿತ್ತು. ನನ್ನ ತಂಗಿ ಈ ಕತೆ ಹೇಳಿದಾಗ ನನಗಿದನ್ನು ನಂಬಲು ಸಾಧ್ಯವಾಗಿರಲಿಲ್ಲ. ಆ ಬಳಿಕ ಅವರ ಬಳಿ ಚಿಕಿತ್ಸೆಗೆಂದು ಹೋಗುವ ಮೂರ್ನಾಲ್ಕು ಮಂದಿ ಹೆತ್ತವರ ಬಳಿ ವಿಚಾರಿಸಿದಾಗ “ನಿಮಗಿದು ಗೊತ್ತೇ ಇಲ್ವಾ…?” ಎಂದು ಮರುಪ್ರಶ್ನೆ ಹಾಕಿದರು. ಶ್ರೀಮಂತರಿಗೆ ಮತ್ತಷ್ಟು ಶ್ರೀಮಂತಿಕೆ ಗಳಿಸುವ ಆಶೆಯಿರುವುದೇ ಹೆಚ್ಚು. ಆದರೆ ಡಾ.ಬಿ.ಸಂಜೀವ ರೈ ಅವರಿಗೆ ವೈದ್ಯಕೀಯ ವೃತ್ತಿ ಒಂದು ಅಪ್ಪಟ ಮಾನವೀಯ ಸೇವೆ.

ಅವರಿಗೆ ತನ್ನ ಕಟ್ಟಡದಿಂದ ಬಾಡಿಗೆ ಬರುತ್ತದೆ, ಇನ್ನೊಂದೆಡೆ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಡೀನ್ ಆಗಿದ್ದುದರಿಂದ ಒಳ್ಳೆಯ ಸಂಬಳ ಬರುತ್ತದೆ. ಈ ನೆಲೆಯಲ್ಲಿ ತನ್ನಿಂದ ಸಮಾಜಕ್ಕೆ ಒಂದಿಷ್ಟು ಸೇವೆಯಿರಲಿ ಎಂದು ಅವರು ಶುಲ್ಕವನ್ನೇ ಪಡೆಯದೆ ಸೇವೆ ನೀಡುತ್ತಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಬೂಡಿಯಾರ್ ಎಂಬ ಹಳ್ಳಿಯವರಾದ ಇವರದ್ದು ಪ್ರತಿಷ್ಟಿತ ಬಂಟ ಮನೆತನ. ಆದರೆ ಬಂಟರ ಗುತ್ತಿನ ಗತ್ತಾಗಲಿ, ಪ್ರತಿಷ್ಟಿತ ವೈದ್ಯಕೀಯ ಕಾಲೇಜೊಂದರ ಶೈಕ್ಷಣಿಕ ಮುಖ್ಯಸ್ಥನೆಂಬ ಅಹಂ ಆಗಲೀ ಡಾ.ಬಿ.ಸಂಜೀವ ರೈಯವರ ಮಾತಿನಲ್ಲೋ, ವರ್ತನೆಯಲ್ಲೋ ಕಾಣಲು ಸಾಧ್ಯವಿಲ್ಲ. ನಾನು ವಿದ್ಯಾರ್ಥಿಯಾಗಿದ್ದ ಕಾಲದಲ್ಲೊಮ್ಮೆ ಇವರನ್ನು ಫಾದರ್ ಮುಲ್ಲರ್ಸ್ ಕಾಲೇಜಿನಲ್ಲಿ ಭೇಟಿಯಾಗಿದ್ದೆ. ಅಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ನನ್ನೊಂದಿಗೆ ಅತ್ಯಂತ ಸಜ್ಜನಿಕೆಯಿಂದ ತುಳುವಿನಲ್ಲಿ ಮಾತನಾಡಿದ್ದರು. ಅವರು ಫಾದರ್ ಮುಲ್ಲರ್ಸ್ ಕಾಲೇಜಿನ ಡೀನ್ ಆಗಿದ್ದ ಕಾಲದಲ್ಲಿ ಅದೆಷ್ಟೋ ಬಡವರಿಗೆ ಆಸ್ಪತ್ರೆಯಲ್ಲಿ ಸಹಾಯ ಮಾಡುತ್ತಿದ್ದರೆನ್ನುವುದನ್ನು ಹಲವರಿಂದ ಕೇಳಿ ಬಲ್ಲೆ.

ಫಾದರ್ ಮುಲ್ಲರ್ಸ್ ಕಾಲೇಜಿನಲ್ಲಿ, ಆಸ್ಪತ್ರೆಯಲ್ಲಿ ಚಿಕ್ಕ ಪುಟ್ಟ ಗುಮಾಸ್ತ, ಜವಾನ, ಹೌಸ್ ಕೀಪಿಂಗ್ ಹುದ್ದೆಗಳಿಗಾಗಿ ಅರ್ಜಿ ಹಾಕುವವರಿಗೆ ಸ್ವಯಂ ಆಸಕ್ತಿಯಿಂದ ಉದ್ಯೋಗವನ್ನೂ ಕೊಡಿಸುತ್ತಿದ್ದರು. ಅಲ್ಲಿನ ಹೌಸ್ ಕೀಪಿಂಗ್ ಸಿಬ್ಬಂದಿಗಳೊಂದಿಗೂ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದು ಅವರ ಒಡನಾಟವಿದ್ದ ಕಸ ಗುಡಿಸುವ ಮಹಿಳೆಯರಿಂದ ಅರಿತು ಬಲ್ಲೆ. ಆದರೆ ಅವರು ಯಾವತ್ತೂ ತಾನು ಮಾಡಿದ ಉಪಕಾರಗಳನ್ನು ಹೇಳಿಕೊಂಡು ನಡೆದವರಲ್ಲ.

ಕೆಲವು ವೈದ್ಯರ ಧನದಾಹದಿಂದ ವೈದ್ಯರೆಂದರೆ ಹಾಗೆಯೇ… ಜನರನ್ನು ಸುಲಿಯಲೆಂದೇ ಇರುವವರು ಎಂಬ ಆರೋಪವಿರುವ ಈ ಕಾಲದಲ್ಲೂ ಮಂಗಳೂರಿನಂತಹ ವಾಣಿಜ್ಯ ನಗರದಲ್ಲಿ ಇಂತಹ ಮಾನವೀಯ ಮುಖದ ವೈದ್ಯರಿದ್ದಾರೆ ಎಂದರೆ ಎಂತವರಿಗೂ ಆಶ್ಚರ್ಯವಾಗದಿರದು. ಡಾ.ಬಿ.ಸಂಜೀವ ರೈಯವರಂತಹವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ.. ವೈದ್ಯರ ದಿನದ ಶುಭಾಶಯಗಳು ಸಂಜೀವ್ ಸರ್…

  • ಇಸ್ಮತ್ ಪಜೀರ್

ಇದನ್ನೂ ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...