Homeಅಂತರಾಷ್ಟ್ರೀಯಅಫ್ಘಾನ್ ಪತನ: ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು; ಟೇಕಾಫ್‌ ಆದ ವಿಮಾನದಿಂದ ಬಿದ್ದ ಜನರು!

ಅಫ್ಘಾನ್ ಪತನ: ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು; ಟೇಕಾಫ್‌ ಆದ ವಿಮಾನದಿಂದ ಬಿದ್ದ ಜನರು!

- Advertisement -
- Advertisement -

ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡಿದ್ದು, ಸ್ವತಃ ಅಫ್ಘಾನ್ ಅಧ್ಯಕ್ಷ ಅಶ್ರಫ್‌ ಗನಿ ದೇಶವನ್ನು ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ರಕ್ತಪಾತವನ್ನು ತಪ್ಪಿಸಲು ಬೇಕಾಗಿ ತಾನು ದೇಶ ತೊರೆಯುವುದಾಗಿ ಅವರು ತನ್ನ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ. ಇದರ ಜೊತೆಗೇ ದೇಶವನ್ನು ತೊರೆಯಲು ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾಬೂಲ್‌ ನಗರವನ್ನು ತಾಲಿಬಾನಿಗಳು ಸುತ್ತುವರೆಯುತ್ತಿದ್ದಂತೆ ಅಫ್ಘಾನ್ ಅಧ್ಯಕ್ಷ ಅಶ್ರಫ್‌ ಗನಿ ದೇಶವನ್ನು ತೊರೆದ್ದಾರೆ. ಅವರು ತನ್ನ ಫೇಸ್‌ಬುಕ್‌ನಲ್ಲಿ, “ರಕ್ತಪಾತವನ್ನು ತಪ್ಪಿಸಲು ಬೇಕಾಗಿ ತಾನು ಅಫ್ಘಾನ್‌ ತೊರೆಯುವ ನಿರ್ಧಾರ ಮಾಡಿದ್ದೇನೆ. ತಾಲಿಬಾನ್‌ಗಳನ್ನು ಎದುರಿಸಿದರೆ ಹಲವಾರು ದೇಶಭಕ್ತರು ಹುತಾತ್ಮರಾಗುವುದರ ಜೊತೆಗೆ, ಕಾಬೂಲ್ ನಗರ ನಾಶವಾಗುತ್ತದೆ. ಇದರ ಪರಿಣಾಮ 60 ಲಕ್ಷ ಜನಸಂಖ್ಯೆಯಿರುವ ನಗರದಲ್ಲಿ ದೊಡ್ಡ ದುರಂತ ಸಂಭವಿಸುತ್ತದೆ. ಕಾಬೂಲ್ ಮತ್ತು ಕಾಬೂಲ್ ಷರೀಫ್ ಜನರ ಮೇಲೆ ರಕ್ತಸಿಕ್ತ ದಾಳಿ ನಡೆಸಲು ತಾವು ಸಿದ್ಧ ಎಂದು ತಾಲಿಬಾನ್ ಹೇಳಿದೆ. ಹೀಗಾಗಿ ರಕ್ತಪಾತವನ್ನು ತಡೆಗಟ್ಟಲು, ನಾನು ಹೊರಡಲು ನಿರ್ಧರಿಸಿದೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ 200 ಸಿಖ್ಖರನ್ನು ರಕ್ಷಿಸುವಂತೆ ಕೇಂದ್ರಕ್ಕೆ ಅಮರಿಂದರ್ ಸಿಂಗ್ ಮನವಿ

ಇದರ ನಂತರ ತಾಲಿಬಾನಿಗಳು ಅಫ್ಘಾನ್ ಅಧ್ಯಕ್ಷರ ಅರಮನೆಯಲ್ಲಿ ಇರುವ ಫೋಟೋಗಳು ಮಾಧ್ಯಮದಲ್ಲಿ ಬಿಡುಗಡೆಗೊಂಡಿದೆ. ಪಾಕಿಸ್ಥಾನ ಈಗಾಗಲೆ ಕಾಬೂಲ್‌ಗೆ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಆಫ್ಘಾನ್‌ನಿಂದ ಭಾರತಕ್ಕೆ ಪ್ರಯಾಣಿಸಲು ಎರಡು ತುರ್ತು ವಿಮಾನಗಳು ಸಿದ್ಧವಾಗಿ ಇಡುವಂತೆ ಭಾರತ ಸರ್ಕಾರವು ಏರ್ ಇಂಡಿಯಾಗೆ ಸೂಚಿಸಿದೆ ಎಂದು ವರದಿಯಾಗಿದೆ.

ಈ ಮಧ್ಯೆ ಅಫ್ಘಾನ್ ಪ್ರಜೆಗಳು ಅಮೆರಿಕಾ ಅಧ್ಯಕ್ಷ ಜೊ ಬೈಡನ್‌ ವಿರುದ್ದ ವೈಟ್‌ಹೌಟ್‌ ಎದುರು ಪ್ರತಿಭಟನೆ ನಡೆಸುತ್ತಿದ್ದು, ನಮಗೆ ನೀವು ದ್ರೋಹ ಎಸಗಿದ್ದು, ಪ್ರಸ್ತುತ ನಡೆಯುತ್ತಿರುವುದಕ್ಕೆ ನೀವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇದನ್ನೂ ಓದಿ: ಹಿಂದುತ್ವವಾದಿಗಳು ವಿರೋಧಿಸಿದ್ದ ಪುಸ್ತಕ: ‘ಹಿಂದೂಗಳು – ಬೇರೊಂದು ಚರಿತ್ರೆ’

ಸಾವಿರಾರು ಜನರು ಅಫ್ಘಾನಿಸ್ತಾನದಿಂದ ಹೊರ ದೇಶಕ್ಕೆ ಹೊರಡಬಹುದಾದ ಏಕೈಕ ದಾರಿಯಾದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದು, ನೂಕು ನುಗ್ಗಲು ಉಂಟಾಗಿದೆ. ವಿಮಾನ ನಿಲ್ದಾಣವು ಅಮೆರಿಕಾ ಭದ್ರತಾ ಪಡೆಗಳ ನಿಯಂತ್ರಣದಲ್ಲಿದ್ದು, ಅಮೆರಿಕಾ ಅಲ್ಲಿ ಆರು ಸಾವಿರ ಯೋಧರನ್ನು ನೇಮಿಸಿದೆ. ನೂಕು ನುಗ್ಗಲನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಕೂಡಾ ನಡೆದಿದೆ ಎಂದು ವರದಿಯಾಗಿದೆ. ಇದರ ಮಧ್ಯೆ ಅಫ್ಘಾನ್ ವಿಮಾನ ನಿಲ್ದಾಣದಲ್ಲಿ ಐವರು ಮೃತಪಟ್ಟಿರುವುದು ಕೂಡಾ ವರದಿಯಾಗಿದೆ.

ಈ ನಡುವೆ ಅಫ್ಘಾನ್ ಗುರುದ್ವಾರದಲ್ಲಿ ಸಿಲುಕಿರುವ 200 ಸಿಖ್ಖರನ್ನು ಒಳಗೊಂಡಂತೆ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸ್ಥಳಾಂತರ ಕಾರ್ಯದಲ್ಲಿ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, “ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನ್ ದೇಶದ ಗುರುದ್ವಾರದಲ್ಲಿ ಸಿಲುಕಿರುವ ಸುಮಾರು 200 ಸಿಖ್ಖರು ಸೇರಿದಂತೆ ಎಲ್ಲಾ ಭಾರತೀಯರನ್ನು ತಕ್ಷಣವೇ ಸ್ಥಳಾಂತರಿಸಲು ವ್ಯವಸ್ಥೆ ಮಾಡಲು ನಾನು  ಸಚಿವ ಡಾ.ಎಸ್.ಜೈಶಂಕರ್ ಅವರನ್ನು ಒತ್ತಾಯಿಸುತ್ತೇನೆ. ಅವರ ಸುರಕ್ಷಿತ ಸ್ಥಳಾಂತರಕ್ಕೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ನನ್ನ ಸರ್ಕಾರ ಸಿದ್ಧವಿದೆ” ಎಂದಿದ್ದಾರೆ.

ಇದರ ಜೊತೆಗೆ ಅಫ್ಘಾನ್ ನ ಅಘಾತಕಾರಿ ದೃಶ್ಯಗಳು ಹೊರಬರುತ್ತಿವೆ. ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಹಾರುತ್ತಿರುವ ವಿಮಾನದಿಂದ ಇಬ್ಬರು ವ್ಯಕ್ತಿಗಳು ಕೆಳಗೆ ಬೀಳುತ್ತಿರುವ ವಿಡಿಯೊಗಳನ್ನು ಮಾಧ್ಯಮಗಳು ಬಿಡುಗಡೆ ಮಾಡಿವೆ

ಇದನ್ನೂ ಓದಿ: ಭಯೋತ್ಪಾದನೆಯೆಂಬ ಜಾಗತಿಕ ಸಂಕಟ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...