Homeಮುಖಪುಟಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಇದು ಮಾನವೀಯತೆ ಮೆರೆದ ಮನುಷ್ಯರ ಕತೆ

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ: ಇದು ಮಾನವೀಯತೆ ಮೆರೆದ ಮನುಷ್ಯರ ಕತೆ

ಕೊರೊನಾ ಭಯಕ್ಕೆ ಸ್ವತಃ ಸಂಬಂಧಿಕರು ಕೂಡಾ ಮೃತದೇಹದ ಹತ್ತಿರ ಸುಳಿಯಲು ಭಯಪಡುತ್ತಿದ್ದರೆ ಅವೆಲ್ಲವನ್ನೂ ಮೀರಿ, ಮೃತಪಟ್ಟವರ ಸಂಪ್ರಾದಾಯಕ್ಕೆ ತಕ್ಕಂತೆ, ಘನತಯಿಂದ, ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ನಿಸ್ವಾರ್ಥ ಮನುಷ್ಯರಿದ್ದಾರೆ ಇಲ್ಲಿ.

- Advertisement -
- Advertisement -

ರಾಜ್ಯದಲ್ಲಿ ಎರಡು ತಿಂಗಳ ಹಿಂದೆ ಕೊರೊನಾ ಸೋಂಕು ಪೀಡಿತ ವೃದ್ದ ಮಹಿಳೆಯ ಶವ ಸಂಸ್ಕಾರ ಮಾಡದಂತೆ ತಡೆದ ಮಂಗಳೂರಿನ ಶಾಸಕರ ನಡೆಗೆ ಇಡೀ ರಾಜ್ಯವೇ ಬೆಚ್ಚಿಬಿದ್ದು ಪಕ್ಷಾತೀತವಾಗಿ ಖಂಡಿಸಿತು. ಆದರೆ ಈಗ ಅಂತಹ ಘಟನೆಗಳು ಸಾಮಾನ್ಯವಾಗಿವೆ. ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಜನರು ಮೃತ ಶವಗಳಿಂದಲೂ ಕೊರೊನಾ ಹರಡಬಹುದು ಎಂಬ ಮೂಢನಂಬಿಕೆಗೆ ಒಳಗಾಗಿ ತಮ್ಮ ಪ್ರದೇಶದ ಬಳಿ ಅಂತ್ಯ ಸಂಸ್ಕಾರಕ್ಕೆ  ಅವಕಾಶ ಕೊಡದ ಘಟನೆಗಳು ಜರುಗುತ್ತಿವೆ. ಮೃತ ವ್ಯಕ್ತಿಯ ಕುಟುಂಬಸ್ಥರೇ ಶವ ಸಂಸ್ಕಾರಕ್ಕೆ ಹೆದರುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಕೊರೊನಾ ಸೋಂಕಿತ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರೂ ಮೃತದೇಹದೊಂದಿಗೆ ನಡೆಯುತ್ತಿರುವ ಅಮಾನವೀಯ ರೀತಿ ಇನ್ನೂ ಕಡಿಮೆಯಾಗಿಲ್ಲ. ಮಾನವನೊಬ್ಬ ತನ್ನ ಸಾವಿನಲ್ಲೂ ಘನತೆಯನ್ನು ಪಡೆಯದಿದ್ದರೆ ನಮ್ಮ ವ್ಯವಸ್ಥೆ ನಮ್ಮನ್ನು ಎಂತಹ ಅಧಃಪತನಕ್ಕೆ ತಲುಪಿಸಿದೆ ನೋಡಿ. ಜನ ಹೀಗೆ ಮಾಡುವುದಕ್ಕೆ ಹೆಚ್ಚಿನ ಕಾರಣ ಮಾಧ್ಯಮಗಳು ಸೃಷ್ಟಿಸಿರುವ ಆರ್ಭಟ ಎಂದರೂ ತಪ್ಪಿಲ್ಲ.

ಕೇವಲ ಕೊರೊನಾದಿಂದ ಮೃತಪಟ್ಟವರು ಮಾತ್ರವಲ್ಲ, ಸಾಮಾನ್ಯವಾಗಿ ಸತ್ತಾಗಲೂ ಜನರು ಮೃತದೇಹದತ್ತ ಸುಳಿಯುತ್ತಿಲ್ಲ. ಹಾಸನದಲ್ಲಿ ತನ್ನ ಪತಿಯ ಶವದ ಮುಂದೆ ನಿಂತು ವೃದ್ದೆ ಪತ್ನಿ ಕಣ್ಣೀರು ಹಾಕಿದಾಗಲೂ ಸ್ವತಃ ಮೃತಪಟ್ಟವರ ಸಂಬಂಧಿಕರೂ ಮುಟ್ಟಲು ತಯಾರಿರಲಿಲ್ಲ. ಹಾವೇರಿಯಲ್ಲಿ ಕೂಡಾ ಇಂತಹದ್ದೆ ಘಟನೆ ನಡೆಯಿತು, ಅಧಿಕಾರಿಗಳು ಪಿಪಿಇ ಕಿಟ್ ಕೊಡುತ್ತೇವೆ ಬಂದು ಶವಸಂಸ್ಕಾರ ನಡೆಸಿಯೆಂದರೂ ಶವದ ಅಂತಿಮ ದರ್ಶನಕ್ಕೂ ಸಂಬಂಧಪಟ್ಟವರು ಬಂದಿಲ್ಲ.

ಇದರಾಚೆಗೂ ಹಲವಾರು ಅಪ್ಪಟ ಮನುಷ್ಯರ, ಮಾನವೀಯತೆಯ ಕತೆಗಳೂ ಹೇಳಲಿಕ್ಕಿದೆ. ಕೊರೊನಾ ಭಯಕ್ಕೆ ಸ್ವತಃ ಸಂಬಂಧಿಕರು ಕೂಡಾ ಮೃತದೇಹದ ಹತ್ತಿರ ಸುಳಿಯಲು ಭಯಪಡುತ್ತಿದ್ದರೆ ಅವೆಲ್ಲವನ್ನೂ ಮೀರಿ ಇಲ್ಲಿ ಮೃತಪಟ್ಟವರ ಸಂಪ್ರಾದಾಯಕ್ಕೆ ತಕ್ಕಂತೆ, ಘನತಯಿಂದ, ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುವ ನಿಸ್ವಾರ್ಥ ಮನುಷ್ಯರಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಜನ ಹೆದರುತ್ತಿರುವುದನ್ನು ಅರಿತ ಬೀದರ್‌ನ ಮಹ್ಮದ್ ಮಜೀದ್ ಬಿಲಾಲ್ ಹಾಗೂ ಸ್ನೇಹಿತರು ಆರೋಗ್ಯ ಇಲಾಖೆ ಮತ್ತು ನಗರಸಭೆಯ ಪರವಾನಿಗೆ ಪಡೆದು ಇದುವರೆಗೂ ಕೋವಿಡ್‌ನಿಂದ ಮೃತಪಟ್ಟ ಮೂವರ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ಮೊದಲು ಸಹ ಅವರು ಹತ್ತಾರು ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿ ಸಾಮಾಜಿಕ ಸೇವೆಯಲ್ಲಿ ತೊಡಿಗಿಸಿಕೊಂಡಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ತಮ್ಮ ಫೋನ್ ನಂಬರ್‌ ಅನ್ನು ಸಾರ್ವಜನಿಕವಾಗಿ ಪ್ರಕಟಿಸಿ ಅಂತ್ಯ ಸಂಸ್ಕಾರಕ್ಕೆ ಸಹಾಯ ಬೇಕಿದ್ದರೆ ತಿಳಿಸಿ ಎಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಅಪರಿಚಿತರಾಗಿರುವ ಜೀವಂತ ಮನುಷ್ಯರನ್ನೇ ಮುಟ್ಟಲು ಭಯಪಡುವ ಈ ಸಂಧರ್ಭದಲ್ಲಿ ಅನಾಥ ಶವವನ್ನು ಕೂಡಾ ಅಂತ್ಯಸಂಸ್ಕಾರ ಮಾಡುವ ಚೆನ್ನಪಟ್ಟಣದ ಮಹಿಳೆ ಆಶಾರಂತವರೂ ನಮ್ಮ ನಡುವೆಯಿದ್ದಾರೆ. ಕಳೆದ ಮೂರು ವರ್ಷದಿಂದ ಈ ಸೇವೆಯನ್ನು ಮಾಡುತ್ತಾ ಬರುತ್ತಿರುವ ಇವರು ಕೊರೊನಾ ಕಾಲದಲ್ಲಿಯೂ ಇನ್ನೂ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

ಕೃಪೆ: ಪ್ರಜಾವಾಣಿ

ಮೈಸೂರಿನ ಆರೋಗ್ಯ ಇಲಾಖೆಯ ಚಾಲಕರಾದ ನಾಗರಾಜ್ ಕೂಡಾ ಕೊರೊನಾದಿಂದ ಮೃತಪಟ್ಟವನ್ನು ಘನತೆಯಿಂದ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಸಾವಿರಾರು ಶವ ಸಾಗಿಸಿರುವ ಅವರು ಮೃತಪಟ್ಟವರನ್ನು ಮುಟ್ಟಲಾಗದ ಇಂದಿನ ಸ್ಥಿತಿಗೆ ಮರುಗುತ್ತಾರೆ.

ಪಿಎಫ್‌ಐ ಸಂಘಟನೆ ರಾಜ್ಯಾದ್ಯಂತ ಕೊರೊನಾ ಮೃತದೇಹಗಳ ಅಂತ್ಯಸಂಸ್ಕಾರಕ್ಕೆಂದೆ ತಂಡವನ್ನೇ ಕಟ್ಟಿದೆ. ಒಂದು ಫೋನ್ ಮಾಡಿದರೆ ಸಾಕು ತಮ್ಮದೇ ಖರ್ಚಿನಲ್ಲಿ ನಿಸ್ವಾರ್ಥವಾಗಿ ಅವರವರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಇದುವರೆಗೂ ಹತ್ತಾರು ಶವಗಳ ಅಂತ್ಯಸಂಸ್ಕಾರದಲ್ಲಿ ಇವರ ಪಾಲಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಕೊರೊನಾ ಕಾರಣಕ್ಕೆ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರ ಮಾಡಲು ಯಾರು ಮುಂದೆ ಬಾರದಿದ್ದಾಗ ಮಾಗಡಿ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳು ಪಿಎಫ್‌ಐ ಪದಾಧಿಕಾರಿಗಳಿಗೆ ಪತ್ರ ಬರೆದು ಶವಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದಾರೆ.

ಯಾದಗಿರಿಯಲ್ಲಿ ಕೊರೊನಾ ಮೃತದೇಹವನ್ನು ನೆಲದ ಮೇಲೆ ಮಲಗಿಸಿ ಎಳೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿರುವಂತಹ ಘಟನೆ ನಡೆದಿರುವಾಗ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದ ಶವ ಸಂಸ್ಕಾರ ನಮಗೆ ಮಾದರಿಯಾಗಬೇಕು. ಮಂಗಳೂರಿನಲ್ಲಿ ಜಿಲ್ಲಾಡಳಿತ ಕೊರೊನಾ ಮೃತದೇಹಗಳ ಶವಸಂಸ್ಕಾರಕ್ಕೆಂದೆ ನಿಸ್ವಾರ್ಥ ಸ್ವಯಂಸೇವಕರ ತಂಡವನ್ನು ತರಬೇತಿ ನೀಡಿ ಸಜ್ಜುಗೊಳಿಸಿದೆ. ಈ ತಂಡವು ಮೃತಪಟ್ಟವರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತಿದೆ.

ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾದಿಂದ ಮೃತಪಟ್ಟವರನ್ನು ಅಂತ್ಯಸಂಸ್ಕಾರವನ್ನು ಹೇಗೆ ಮಾಡಬೇಕು ಎಂಬ ಮಾರ್ಗಸೂಚಿಗಳನ್ನು ಕೊಟ್ಟಿರುವಾಗ ಜನರು ಮೃತದೇವನ್ನು ಸಂಸ್ಕಾರ ಮಾಡಲು ಹೆದರುವುದರಲ್ಲಿ ಯಾವುದೇ ಅರ್ಥವಿಲ್ಲ.

ಮೃತದೇಹದೊಂದಿಗೆ ನಡೆಯುತ್ತಿರುವ ಈ ಅಮಾನವೀಯ ನಡೆಗೆ ಕೇವಲ ಜನರನ್ನು ದೂರಿದರೆ ಪ್ರಯೋಜನವಿಲ್ಲ. ಏಕೆಂದರೆ ಕೊರೊನಾ ಓಡಿಸಲು ತಟ್ಟೆ ದೀಪ ಇತ್ಯಾದಿಗಳನ್ನು ಬಡಿಯಲು ಭಾರೀ ಪ್ರಮಾಣದಲ್ಲಿ ಪ್ರಚಾರ ಮಾಡಿದ ಸರ್ಕಾರ ಹಾಗೂ ಮಾಧ್ಯಮಗಳು ಮೃತದೇಹದಿಂದ ಸೋಂಕು ಹರಡುವುದಿಲ್ಲ ಎಂದು ಮತ್ತು ಹೇಗೆ ಸಂಸ್ಕಾರ ಮಾಡಬೇಕು ಎಂಬುದನ್ನು ಪ್ರಚಾರ ಮಾಡಲೇ ಇಲ್ಲ.

ಒಟ್ಟಿನಲ್ಲಿ ಕುಬ್ಜನಾಗಿರುವ ಮನುಷ್ಯನನ್ನು ಕೊರೊನಾ ಸಾಂಕ್ರಮಿಕ ರೋಗ ಮತ್ತಷ್ಟು ಕುಬ್ಜನನ್ನಾಗಿಸಿದೆ. ಇದು ನಿಜವಾಗಿಯೂ ಮನುಷ್ಯರು ಮತ್ತಷ್ಟು ವಿಶಾದ ದೃಷ್ಟಿಯಿಂದ, ಮಾನವೀಯತೆಯಿಂದ ವರ್ತಿಸಲು ಕಲಿಯುವುದಕ್ಕೆ ಸದಾವಕಾಶವಾಗಿತ್ತು. ಆದರೆ ಅದನ್ನು ಹೆಚ್ಚಿನವರು ಮಾಡದಿದ್ದರೂ ಕೆಲವರಾದರೂ ನಿಸ್ವಾರ್ಥವಾಗಿ ಮಾಡುತ್ತಾ ನಮಗೆಲ್ಲ ಮಾದರಿಯಾಗಿದ್ದಾರೆ.


ಓದಿ:


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...