Homeಮುಖಪುಟಕೊರೊನಾ ವೈರಾಣುವಿನ ಬಗ್ಗೆ ಜಾಗತಿಕ ಪ್ರತಿಕ್ರಿಯೆ ಅತಿಯಾದದ್ದೇ, ಅಲ್ಲವೇ?

ಕೊರೊನಾ ವೈರಾಣುವಿನ ಬಗ್ಗೆ ಜಾಗತಿಕ ಪ್ರತಿಕ್ರಿಯೆ ಅತಿಯಾದದ್ದೇ, ಅಲ್ಲವೇ?

- Advertisement -
- Advertisement -

ಈ ಟಿಪ್ಪಣಿಯಲ್ಲಿ ಧೃವೀಕರಣಗೊಂಡಿರುವ ಜಗತ್ತಿನಲ್ಲಿ ಸೃಷ್ಟಿಯಾಗಿರುವ ಕೊರೊನಾ ವೈರಾಣುವಿನ ಬಗ್ಗೆ ಜಾಗತಿಕ ಪ್ರತಿಕ್ರಿಯೆ ಅತೀಯಾದದ್ದೇ, ಅಲ್ಲವೇ ಎಂಬುದನ್ನು ಪರೀಕ್ಷಿಸುವ ಪ್ರಯತ್ನ ಮಾಡಲಾಗಿದೆ.

ಮೂಲ : ಜೈದೀಪ ವರ್ಮಾ
ಕನ್ನಡಕ್ಕೆ : ಸುಪ್ರಜ್ ಕೌಲಗಿ

ಪರ್ಯಾಯ ಅಭಿಪ್ರಾಯಗಳನ್ನು ಸಹಿಸುವ ಮನಸ್ಥಿತಿಯವರು ನೀವಲ್ಲದಿದ್ದರೆ ದಯಮಾಡಿ ಇದನ್ನು ಓದಿ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಇದೇ ಅಂತಿಮ ಎಂಬ ನಿಲುವಿಲ್ಲದ ಮತ್ತು ತಾಜಾ ದೃಷ್ಟಿಕೋನವನ್ನು ಸಹಿಸಿಕೊಳ್ಳುವ ಮನಸ್ಥಿತಿ ನಿಮಗಿದ್ದರೆ ಮಾತ್ರ ಈ ಮುಂದಿನ ಟಿಪ್ಪಣಿಯನ್ನು ಓದಿ. ಆಗಷ್ಟೇ ಸಮಯ ದಂಡವಲ್ಲ ಎಂದು ನಿಮಗನಿಸಬಹುದು.

ಗ್ರಹಿಸಲು ಸಾಧ್ಯವಾಗುವಂತೆ ಮಾಹಿತಿಗಳನ್ನು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಸರಳೀಕರಿಸಿದ್ದೇನೆ.

1. ಈ ಮುಂದಿನದು ಕರೋನಾ ವೈರಾಣು ಬಲಿ ತೆಗೆದುಕೊಂಡ ವಿವಿಧ ವಯೋಮಾನದ ವಿವರ:

1–9 ವರ್ಷ 0% ; 10 ರಿಂದ 19 ವರ್ಷ 0.2% ; 20 ರಿಂದ 29 ವರ್ಷ0.2% ; 30 ರಿಂದ 39 ವರ್ಷ 0.2% ; 40 ರಿಂದ 49 ವರ್ಷ 0.4% ; 50 ರಿಂದ 59 ವರ್ಷ 1.4% ; 60 ರಿಂದ 69 ವರ್ಷ 1.8% ; 70 ರಿಂದ 79 ವರ್ಷ 8% ; 80 ವರ್ಷ ಮೇಲ್ಪಟ್ಟು 15%.

ಮೇಲಿನ ಲೆಕ್ಕಾಚಾರದ ಪ್ರಕಾರ 80 ವರ್ಷ ಮೇಲ್ಪಟ್ಟ ಸೋಂಕಿತ ವ್ಯಕ್ತಿ ಕೂಡ ಬದುಕುಳಿಯುವ ಸಾಧ್ಯತೆ ಶೇ 85 ಎಂದು ಆಯಿತು. ಅರಿಯಬೇಕಾದ ಮತ್ತೊಂದು ಸಂಗತಿ ಎಂದರೆ ಕೊರೊನಾ ವೈರಾಣು ದಾಳಿ ಮಾಡುವ ದೇಹ ಮೊದಲೇ ಅದಕ್ಕೆ ಅಗತ್ಯವಾದ ಭೂಮಿಕೆಯನ್ನು ಹೊಂದಿದ್ದರೆ ಮಾತ್ರ ಅದು ಅಲ್ಲಿ ದಾಳಿ ಮಾಡುತ್ತದೆ. ಹಾಗಾಗಿಯೇ ಸಾಯುವವರಲ್ಲಿ 50 ವರ್ಷದ ಮೇಲಿನವರೇ ಇದ್ದಾರೆ. (ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸಾಯುತ್ತಾರೆ ಎಂಬ ಗಾಳಿಸುದ್ದಿಯೂ ಕೂಡ ಸತ್ಯವೇ. ಪುರುಷ ಮತ್ತು ಮಹಿಳೆಯರ ಸಾವಿನ ಪ್ರಮಾಣ 70ಕ್ಕೆ 30 ಇದೆ. ಇದು ಉಸಿರಾಟಕ್ಕೆ ಸಂಬಂಧಿಸಿದ ರೋಗವಾಗಿದ್ದು ಪುರುಷರ ಸಾವಿಗೆ ಕಾರಣವನ್ನು ಧೂಮಪಾನದ ದುಶ್ಚಟದೊಂದಿಗೆ ತಳುಹಾಕಲಾಗಿದೆಯೇ ಹೊರತು ವೈರಾಣುವಿನೊಂದಿಗೆ ಅಲ್ಲ.)

2. ಸೋಂಕಿತರಿಗೆ ಸಂಬಂಧಿಸಿದಂತೆ ಈ ಕೆಳಗಿನ ಸಂಖ್ಯೆಗಳನ್ನು ಗಮನಿಸಿ:

95% ಸೋಂಕಿತರು ಯಾವುದೇ ಔಷಧ ಇಲ್ಲದೆ ಎರಡು ವಾರಗಳಲ್ಲಿ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ.
5 % ಸೋಂಕಿತರಿಗೆ ಆಸ್ಪತ್ರೆಯ ನೆರವು ಬೇಕಾಗುತ್ತದೆ.
2% ಸೋಂಕಿತರಿಗೆ ತೀವ್ರ ನಿಗಾ ಘಟಕದ ಅಗತ್ಯ ಬೇಕಾಗುತ್ತದೆ.
1% ಸೋಂಕಿತರಿಗೆ ಕೃತಕ ಉಸಿರಾಟದ ಸಹಾಯ ಬೇಕಾಗುತ್ತದೆ.

ಅಂದರೆ ಸೋಂಕಿತರಲ್ಲಿ ಹೆಚ್ಚಿನವರು ಯಾವುದೇ ಔಷಧ ಇಲ್ಲದೆ ಮನೆಯಲ್ಲಿ ಉಳಿಯುವುದರಿಂದ ಗುಣಮುಖರಾಗುತ್ತಾರೆ. ಯಾರು ವಿದ್ಯಾವಂತರು ಎನಿಸಿಕೊಂಡಿದ್ದಾರೋ ಅವರೂ ಸಹ ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ದಯಮಾಡಿ ಈ ವಾಸ್ತವವನ್ನು ನಂಬಿ.

ಸರ್ಕಾರಕ್ಕೆ ಇರುವ ಬಹುದೊಡ್ಡ ಯೋಚನೆ ಎಂದರೆ 5% ಸೋಂಕಿತರದು. ಆಸ್ಪತ್ರೆ ವ್ಯವಸ್ಥೆ ಕಡಿಮೆ ಇದ್ದು ಅದರಲ್ಲೂ ಮುಖ್ಯವಾಗಿ 1% ರಷ್ಟು ಸೋಂಕಿತರಿಗೆ ಬೇಕಾಗುವ ಕೃತಕ ಉಸಿರಾಟದ ವ್ಯವಸ್ಥೆಯನ್ನು ಕಲ್ಪಿಸುವುದು.

3. ಇನ್ನೂ ಖಚಿತವಾಗಿ ಗೊತ್ತಾಗದಿದ್ದರೂ ಉಷ್ಣ ದೇಶಗಳಲ್ಲಿ ಈ ಕಾಯಿಲೆಯಿಂದ ಸಾಯುತ್ತಿರುವವರ ಸಂಖ್ಯೆಯು ಕಡಿಮೆಯೇ ಇದೆ, ಒಟ್ಟಾರೆ ಸಾವಿನ ಪ್ರಮಾಣ 4.5% ಇದೆ.

ಬ್ರೆಜಿಲ್ 2.7%; ಮಲೇಶಿಯಾ 1.2%; ಥೈಲ್ಯಾಂಡ್ 0.4%; ಸೌದಿ ಅರೇಬಿಯಾ 0.3% ; ಭಾರತ 2.3% (ಇಂಡೋನೇಶಿಯಾ ಮತ್ತು ಫಿಲಿಪಿನ್ಸ್ ಕ್ರಮವಾಗಿ 8.4% ಮತ್ತು 6.7%. ಆದರೆ ಪರಿಣಿತರು ಭಾವಿಸಿರುವಂತೆ ಈ ಸಂಖ್ಯೆಗಳು ಏಕಿಷ್ಟು ಹೆಚ್ಚಿದೆ ಎಂದರೆ ಪರೀಕ್ಷೆಗೆ ಒಳಗಾದ ರೋಗಿಗಳ ಸಂಖ್ಯೆಯೇ ಕಡಿಮೆ. ಹೆಚ್ಚು ಜನರನ್ನು ಪರೀಕ್ಷಿಸಿದ್ದರೆ ಸಾವಿಗೀಡಾದವರ ಪ್ರಮಾಣ ಕಡಿಮೆಯಾಗುತ್ತಿತ್ತು.)

ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸುವುದು ಭಾತರದಲ್ಲಿ ಕೂಡ ದೊಡ್ಡ ಸಮಸ್ಯೆಯೇ ಆಗಿದೆ. ಇತರ ದೇಶಗಳೊಂದಿಗೆ ಹೋಲಿಸಿದಾಗ ಸೋಂಕು ಲಕ್ಷಣಗಳುಳ್ಳ ಜನರು ಆಸ್ಪತ್ರೆಯ ಮುಂದೆ ಗುಂಪಾಗಿ ಬರುತ್ತಿರುವುದು ಇಲ್ಲಿ ಕಡಿಮೆಯೇ ಇದೆ.

4. ಮನುಷ್ಯ ಚರಿತ್ರೆಯನ್ನು ಗಮನಿಸಿದರೆ, ಚಿಕಿತ್ಸೆ ನೀಡದ ಮತ್ತು ಲಸಿಕೆ ಹಾಕಿಲ್ಲದ ವೈರಾಣುಗಳು ಅವನನ್ನು ಬಲಿ ತೆಗೆದು ಕೊಂಡ ಲೆಕ್ಕ ಹೀಗಿದೆ :

ರೇಬಿಸ್ 99% ; ಏಡ್ಸ್ 80-90% ; ಎಬೋಲಾ 87% ; ಸಿಡುಬು (ಸ್ಮಾಲ್ ಪಾಕ್ಸ್) – 95%; ಬ್ಯುಬೋನಿಕ್/
ನ್ಯುಮೋನಿಕ್ ಪ್ಲೇಗ್- 52% ; ಟಿಟೇನಸ್ – 50% ; ಕಾಲರಾ – 47% ; ಕ್ಷಯ (ಟಿ.ಬಿ)- 43% ; ಸೀತಾಳ ಸಿಡುಬು(ಚಿಕನ್ ಪಾಕ್ಸ್)- 30% ; ಟೈಫಾಯ್ಡ್ – 15% ; ಎಸ್.ಎ.ಆರ್.ಎಸ್ (ಸಾರ್ಸ್) – 11% ; ಸ್ಪ್ಯಾನಿಶ್ ಫ್ಲೂ-10% ; ಜ಼ೀಕ ವೈರಸ್- 8% ; ಹಳದಿ ಜ್ವರ – 7.5% ; ಡಿಫ್ತೆರಿಯಾ- 7.5% ; ಕೊರೊನ ವೈರಸ್ – 4.5%; ದಡಾರ – 2.5% ; ಹಂದಿ ಜ್ವರ –2.1%.

ಆದ್ದರಿಂದ ಕೊರೊನಾ ವೈರಸ್, ಚರಿತ್ರೆಯಲ್ಲಿ ಕಂಡ ಬಹಳಷ್ಟು ಕಾಯಿಲೆಗಳಿಗಿಂತ ಕಡಿಮೆ ಬಲಿಯನ್ನು ಈವರಗೆ ತೆಗೆದು ಕೊಂಡಿದೆ.

ಆಧುನಿಕ ಜಗತ್ತಿನಲ್ಲಿ, ಇಷ್ಟೊಂದು ಪಸರಿಸಿದ (199 ದೇಶಗಳು) ಹಾಗೂ ಆಧುನಿಕ ಸಂವಹನ ತಂತ್ರಜ್ಞಾನಗಳ ಮೂಲಕ ಮಾನವ ಚರಿತ್ರೆಯಲ್ಲೇ ಅತಿ ಹೆಚ್ಚು ಧ್ರುವೀಕರಣಗೊಂಡ ಮೊಟ್ಟಮೊದಲ ವೈರಾಣು ಇದಾಗಿದೆ. ವೇಗವಾಗಿ ಜಾಗತೀಕರಣಗೊಳ್ಳುತ್ತಿರುವ ಈ ಪ್ರಪಂಚದಲ್ಲಿ ಮತ್ತು ಜನರು ಹೆಚ್ಚು, ಹೆಚ್ಚು ಸಂಚರಿಸುವ ಇಂದಿನ ಕಾಲಘಟ್ಟದಲ್ಲಿ ಒಂದು ವೈರಾಣು ಚೀನಾದಲ್ಲಿ ಕಾಣಿಸಿಕೊಂಡು ಅಂತರಾಷ್ಟ್ರೀಯವಾಗಿ ಹರಡುತ್ತಿರುವುದನ್ನು ನೋಡಿ ಅತಿಯಾಗಿ ಪ್ರತಿಕ್ರಿಯಿಸಬೇಕಿಲ್ಲ. ಈ ಹಿಂದೆ ಬಲಿ ತೆಗೆದು ಕೊಂಡ ವೈರಾಣುಗಳಿಗೆ ಹೋಲಿಸಿದರೆ ಈ ವೈರಾಣು ಸ್ವತಃ ಸಾಂಕ್ರಾಮಿಕವಾಗಿ ಹರಡುವ ಶಕ್ತಿಯನ್ನು ಹೆಚ್ಚಾಗಿ ಹೊಂದಿದೆ. ಆದರೆ ಈ ವ್ಯತ್ಯಾಸ ಬಹಳ ದೊಡ್ಡದೇನೂ ಇಲ್ಲ.

ಮಾನವ ತನ್ನ ಇತಿಹಾಸದಲ್ಲಿ ಇದಕ್ಕಿಂತಲೂ ಭೀಕರವಾದ ಅನೇಕ ಸಾಂಕ್ರಾಮಿಕ ರೋಗಗಳನ್ನು ಕಂಡಿದ್ದಾನೆ (ಮರಣ ಪ್ರಮಾಣದಲ್ಲಿ). ಆದರೆ ಕೋರೋನಾ ಸೋಂಕಿಗೆ ಖಚಿತವಾದ ಔಷಧಿಯನ್ನು ಕಂಡು ಹಿಡಿದಿಲ್ಲವೆಂಬ ಹೆದರಿಕೆಯಿಂದಾಗಿ ಇಂದು ಆತ ಆತಂಕ ಭರಿತನಾಗಿದ್ದಾನೆ.

ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಆಧುನಿಕ ಜಗತ್ತಿನ ಜನರಿಗೆ (ಸಾಮಾಜಿಕ ಮಾಧ್ಯಮಗಳ ಒಡನಾಟದ ಜಗತ್ತು) ಅನಿಶ್ಚತತೆ ಎಂಬುದು ಒಂದು ಅನಿವಾರ್ಯವಾಗಿದೆ. ಈ ಮಾನವ ಸ್ಥಿತಿಯನ್ನು ಇತ್ತೀಚಿನ ವರ್ಷಗಳಲ್ಲಿ ವಿಷದವಾಗಿ ಚರ್ಚಿಸಿ, ವ್ಯವಸ್ಥಿತವಾಗಿ ದಾಖಲೆಯನ್ನೂ ಮಾಡಲಾಗುತ್ತಿದೆ.

5. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿಸಿದಂತೆ ಸಾಮಾನ್ಯ ಫ್ಲೂ ಜ್ವರದಿಂದಾಗಿ ಪ್ರತಿ ವರ್ಷ 2,90,000 ದಿಂದ 6,50,000 ಜನರು ಮರಣ ಹೊಂದುತ್ತಾರೆ.

ಇತ್ತೀಚಿನ ಎರಡು ವರದಿಗಳ ಪ್ರಕಾರ ಇಟಲಿಯಲ್ಲಿ ಮರಣ ಹೊಂದಿದ ಒಟ್ಟಾರೆ ಜನರಲ್ಲಿ ಕೇವಲ 1% ರಷ್ಟು ಜನರು ಮಾತ್ರ ಸಂಪೂರ್ಣವಾಗಿ ಆರೋಗ್ಯವಾಗಿದ್ದವರು. ಇವರು ಯಾವುದೇ ಪೂರ್ವಾಸ್ತಿತ್ವ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ. ಕರೋನಾ ವೈರಾಣುವಿನಿಂದ ಮರಣ ಹೊಂದಿದ ಬಹಳಷ್ಟು ಜನರು ಯಾವುದಾದರೊಂದು ಕಾಯಿಲೆಗಳಿಂದ ನರಳುತ್ತಿದ್ದರು. ಹಾಗಾಗಿ “ಯಾರು ಈ ವೈರಾಣುವಿನಿಂದ ಸತ್ತರು ಹಾಗು ಯಾರು ಈ ವೈರಾಣುವಿನೊಡನೆ ಸತ್ತರು!” ಎಂದು ಸರಿಯಾಗಿ ತಿಳಿದು ಬಂದಿಲ್ಲ.

ಇಟಲಿಯ ಕಳೆದ ಐದು ಚಳಿಗಾಲದ ಅಂಕಿ ಅಂಶಗಳನ್ನು ಕಂಡಾಗ ಅಂದರೆ 2013 ರಿಂದ 2017 ರವರೆಗೆ ಸಾಧಾರಣ ಜ್ವರದಿಂದ ಸರಿ ಸುಮಾರು 68,000 ಜನರು ಮರಣ ಹೊಂದಿದ್ದಾರೆ. ಅಂದರೆ ಚಳಿಗಾಲದ ಪ್ರತಿ ತಿಂಗಳು ಸುಮಾರು 4,500 ಜನ ಸತ್ತಿದ್ದಾರೆ. ಅದರಲ್ಲೂ ಫೆಬ್ರವರಿ ಮಾಹೆಯಲ್ಲೇ ಅತಿ ಹೆಚ್ಚು ಮರಣದ ಪ್ರಮಾಣ ಕಂಡು ಬರುತ್ತದೆ. ಹೇಳಬೇಕೆಂದರೆ ಕಳೆದ ದಶಕದಿಂದ ಇಟಲಿಯಲ್ಲಿ ಚಳಿಗಾಲದ ಸಾಧಾರಣ ಜ್ವರದಿಂದಾಗಿ ಬಹಳಷ್ಟು ವಯಸ್ಸಾದ ಜನರು ಮರಣಹೊಂದುವುದು ಸಾಮಾನ್ಯವಾಗಿಬಿಟ್ಟಿದೆ. ಈಗ ಇಟಲಿಯಲ್ಲಿ ಕೊರೋನ ವೈರಾಣುವಿನಿಂದಾಗಿ ಕಳೆದ 3 ತಿಂಗಳಲ್ಲಿ ಸರಿಸುಮಾರು 25000 ಜನರು ಮರಣ ಹೊಂದಿದ್ದು, ಇದನ್ನು ಪ್ರತಿವರ್ಷದ ಸಾವಿನೊಂದಿಗೆ ಹೋಲಿಸಿದಾಗ ಈ ಪ್ರಮಾಣ ಹೆಚ್ಚೇನು ಅಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಜನರು ಮರಣ ಹೊಂದುತ್ತಿರುವುದು ಕೊರೋನ ವೈರಾಣುವಿನಿಂದಲೇ ಎಂಬುದರ ಬಗ್ಗೆ ಖಚಿತವಾಗಿ ಇಟಲಿಯವರೇ ಸ್ವತಃ ಸರಿಯಾಗಿ ತಿಳಿಯರು.

ಕೊರೋನ ವೈರಾಣುವಿನಿಂದ ಸೋಂಕುಪೀಡಿತರಾದ ಜನಸಂಖ್ಯೆಯಲ್ಲಿ ಇಟಲಿಯನ್ನು ಹಿಮ್ಮೆಟ್ಟಿ ಇತ್ತೀಚಿಗೆ ಮುಂಚೂಣಿಗೆ ಬಂದಿರುವ ಅಮೇರಿಕಾ ಕೂಡ ಸಾಧಾರಣ ಜ್ವರದ ಬಗ್ಗೆ ಖಚಿತ ದಾಖಲೆಗಳನ್ನು ಹೊಂದಿದೆ. 2017-18 ರ ಫ್ಲೂ ಜ್ವರದ ಕಾಲದಲ್ಲಿ ಅಮೇರಿಕಾದಲ್ಲಿ 61,000 ಸಾವುಗಳು ದಾಖಲಾಗಿವೆ. ಅಂದರೆ ಸರಿಸುಮಾರು ತಿಂಗಳಿಗೆ 10,000 ಸಾವುಗಳು ದಾಖಲಾಗಿದ್ದವು. 2018-19 ರ ಫ್ಲೂಜ್ವರದ ಕಾಲದಲ್ಲಿ 34,200 ಸಾವುಗಳು ಅಂದರೆ ತಿಂಗಳಿಗೆ 5,700 ಸಾವುಗಳು ದಾಖಲಾಗಿವೆ. ಈ ಋತುಮಾನದಲ್ಲಿ ಕೊರೋನ ವೈರಾಣುವಿನಿಂದಾಗಿ ಅಮೇರಿಕಾ ಇಲ್ಲಿಯವರೆಗೆ ತಿಂಗಳಿಗೆ ಸುಮಾರು 47,000 ಸಾವುಗಳು ಆಗಿವೆ ಎನ್ನಲಾಗಿದೆ.

ಮತ್ತೊಮ್ಮೆ ಹೇಳಬೇಕೆಂದರೆ ಕೊರೋನ ವೈರಾಣು ನಾಲ್ಕು ತಿಂಗಳಲ್ಲಿ ಜಾಗತಿಕವಾಗಿ ಸುಮಾರು 1,40,000 ಜನರನ್ನು ಬಲಿ ತೆಗೆದುಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶದ ಪ್ರಕಾರ ಕೊರೋನಾ ಇಲ್ಲದಿದ್ದಾಗಲೂ ಪ್ರತಿ ತಿಂಗಳು ಸಾಧಾರಣ ಜ್ವರದಿಂದಾಗಿ 39,000 ಸಾವುಗಳಾಗುತ್ತವೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಇಟಲಿಯಲ್ಲಾದ ಸಾವುಗಳು ಸಂಪೂರ್ಣವಾಗಿ ಕೊರೋನಾದಿಂದಲೇ ಆದದ್ದು ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ.

ಮುಂಬರುವ ದಿನಗಳಲ್ಲಿ ನಮ್ಮ ವೈದ್ಯಕೀಯ ಕ್ಷೇತ್ರದ ಮಂದಿ ಈ ಬಗ್ಗೆ ಆಳವಾದ ಅಧ್ಯಯನವನ್ನು ಮಾಡುವುದು ಒಳ್ಳೆಯದು. ಈಗ ಮಾಡುತ್ತಿರುವಂತೆ ನಮ್ಮ ಮಾಧ್ಯಮಗಳು ದಿನದ 24 ಗಂಟೆಯೂ ಸಾಮಾನ್ಯ ಫ್ಲೂನಿಂದ ಸಾಯುತ್ತಿರುವ ಮಾಸಿಕ 39,000 ಸಾವುಗಳ ಬಗ್ಗೆ ಬೊಬ್ಬೆ ಹೊಡೆದಿದ್ದರೆ ಏನಾಗುತ್ತಿತ್ತು ಎಂಬುದನ್ನು ಒಮ್ಮೆ ಯೋಚಿಸಿ. ಆಗ ನಮ್ಮ ಮನಸ್ಥಿತಿ ಹೇಗಿರುತ್ತಿತ್ತು ಊಹಿಸಿ. ಸಾಧಾರಣ ಜ್ವರಕ್ಕೆ ನಿಶ್ಚಿತವಾದ ಔಷಧವಿದೆ ಎಂದು ಆತಂಕವಿಲ್ಲದೆ ಸಮಾಜ ಇದೆ. ಒಮ್ಮೆ ಹಾಗಿಲ್ಲದಿದ್ದಲ್ಲಿ ಇಂತಹದೇ ಆತಂಕದ ಪರಿಸ್ಥಿತಿ ಅದಕ್ಕೂ ನಿರ್ಮಾಣವಾಗುತ್ತಿರಲಿಲ್ಲವೇ ಅನಗತ್ಯ ಆತಂಕ ಹೇಗಿರುತ್ತದೆಂದರೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೇರಿಕೆಯ ಶಸ್ತ್ರಚಿಕಿತ್ಸ ಮುಖ್ಯಸ್ಥರು ಖಚಿತವಾದ ರೋಗ ಲಕ್ಷಣವಿಲ್ಲದ್ದಿದ್ದರೆ ಮುಖ ಗವುಚುಗಳು ಅಗತ್ಯವಿಲ್ಲ ಎಂದು ಸಾರಿ, ಸಾರಿ ಹೇಳಿದರೂ ಮುಖಗವುಚುಗಳಿಗೆ ಜನ ಮುಗಿಬಿದ್ದು ಅದನ್ನು ಧರಿಸುವುದನ್ನು ನೋಡಿದರೆ ಜನರಲ್ಲಿನ ಆತಂಕದ ಮನೋಭಾವ ಎಷ್ಟಿರುತ್ತದೆ ಎಂಬುದು ತಿಳಿಯುತ್ತದೆ.

ನಿಸ್ಸಂಶಯವಾಗಿ ಈ ಸಾಂಕ್ರಾಮಿಕ ರೋಗವನ್ನು ಸುಲಭವಾಗಿ ಕಡೆಗಾಣಿಸಬಾರದು. ಇದರ ವಿರುದ್ಧ ಹೋರಾಡುವುದು ಅವಶ್ಯಕ. ಅದರ ವಿರುದ್ಧವಾಗಿ ಹೋರಾಡುವ ಮಾರ್ಗವನ್ನು ನಾವು ಈಗಾಗಲೇ ಕಂಡುಕೊಂಡಿದ್ದೇವೆ. ಸಾಮಾಜಿಕ ಅಂತರವನ್ನು ಕಾಪಾಡುವುದು, ಸಮಯಕ್ಕನುಗುಣವಾಗಿ ಕೈ ಸ್ವಚ್ಛ ಮಾಡಿಕೊಳ್ಳುವುದು, ಸೋಂಕಿತರನ್ನು ಪ್ರತ್ಯೇಕವಾಗಿಡುವುದು, ಸಂಚಾರವನ್ನು ನಿರ್ಬಂಧಿಸುವುದು. ಒಂದೆಡೆ ಬಹಳ ಜನ ಸೇರದಂತೆ ನೋಡಿಕೊಳ್ಳುವುದು ಕೆಲವು ಅವಧಿಯ ತನಕ ಪರಿಣಾಮಕಾರಿ.

ಭಾರತದಲ್ಲಿ ಮೂರುವರ್ಷಗಳ ಹಿಂದಷ್ಟೇ ಬಲವಂತದ ಡಿಮಾನಿಟೈಸೇಶನ್ ಹೇರಲ್ಪಟ್ಟಿತ್ತು. ಅದರೆ ಹಿಂದೆಯೇ ಈಗ ತಿಂಗಳುಗಳ ಕಾಲ ಇಡೀ ದೇಶಕ್ಕೆ ಬೀಗ ಹಾಕಲಾಗಿದೆ. ‘ಸತ್ಯದ ಜಗತ್ತಿ’ನ ಉತ್ತರಾರ್ಧವನ್ನು ಗಂಭೀರವಾಗಿ ಸ್ವೀಕರಿಸುವಂತಹ ಕೀಳಾದ ನಾಟಕೀಯವಾದ ಪ್ರಸಂಗಗಳು ಭಾರತದಲ್ಲಿ ಇತ್ತೀಚಿಗೆ ಹೆಚ್ಚಿವೆ. ಇದೀಗ ವೇಗವಾಗಿ ಕುಸಿದು ಬೀಳುತ್ತಿರುವ ಆರ್ಥಿಕತೆಗೆ ಪರಿಹಾರವನ್ನು ಹುಡುಕಲಾಗದ ಸ್ಥಿತಿಯಲ್ಲಿ ಈ ಹಬ್ಬುತ್ತಿರುವ ಸೋಂಕು ಒಂದು ಸಿದ್ಧ ಕಾರಣವಾಗಿ ಬಂದೊದಗಿದೆ. ಈ ಪರಿಸ್ಥಿಯಲ್ಲಿ ಹೇಗೂ ಆರ್ಥಿಕತೆಯು ಇನ್ನಷ್ಟು ತಳ ಕಚ್ಚಲಿದೆ. ಈ ತಿಂಗಳಿಗೂ ಹೆಚ್ಚು ಬೀಗ ಮುದ್ರೆಯ ತಲೇ ನೋವನ್ನು ಅನುಭವಿಸುವವರು ರಾಜ್ಯಗಳ ಮುಖ್ಯಮಂತ್ರಿಗಳೆ ಹೊರತು ಪ್ರಧಾನ ಮಂತ್ರಿಗಳಲ್ಲ. ಪ್ರಧಾನ ಮಂತ್ರಿಗಳು ಮನ್ನಣೆಯನ್ನು ಮಾತ್ರ ತ್ವರಿತವಾಗಿ ಪಡೆಯುತ್ತಾರೆ. ವೈರಾಣುವಿನೊಂದಿಗಿನ ಈ ಹೋರಾಟದಲ್ಲಿ ಅಗತ್ಯವಾಗಿ ಬೇಕಾಗಿರುವುದು ‘ಸೋಂಕು ಪರೀಕ್ಷಾ ಉಪಕರಣಗಳು’(ಟೆಸ್ಟಿಂಗ್ ಕಿಟ್). ಆದರೆ ಇದೂ ಕೂಡ ಬಂಡವಾಳಶಾಹಿಗಳ ಕೈಗೆ ಸಿಲುಕಿದೆ. ಸೋಂಕು ಹರಡಲು ಪ್ರಾರಂಭವಾದ ಕೂಡಲೆ ಅತ್ಯಂತ ಮಹತ್ವವಾದ ಪ್ರಾರಂಭದ ಕೆಲ ದಿನಗಳನ್ನು ಗುಜರಾತ್ ಮೂಲದ ಸಂಸ್ಥೆಯೊಂದಕ್ಕೆ ಕೋವಿಡ್-19 ಟೆಸ್ಟಿಂಗ್ ಕಿಟ್ ತಯಾರಿಸಲು ಅವಕಾಶ ಕೊಟ್ಟು ವ್ಯರ್ಥಗೊಳಿಸಲಾಗಿದೆ. ಈ ಪರೀಕ್ಷಾ ಕಿಟ್‌ಗೆ 4500 ರೂ ಎಂದು ನಿಗದಿ ಪಡಿಸಲಾಗಿದೆ. ಇದು ಈ ದೇಶದ ದೈನಂದಿನ ಕನಿಷ್ಟ ವೇತನದ 20 ಪಟ್ಟು ಹೆಚ್ಚಿದೆ.

ಈಗ ಹೇರಿರುವ ನಿರ್ಬಂಧವನ್ನು ಒಂದು ವಾರದ ಮಟ್ಟಿಗೆ ಮಾಡಿ, ನಂತರ ಹೊಸ ಪ್ರಕರಣಗಳಿಗನುಗುಣವಾಗಿ ನಿರ್ಬಂಧನೆಯನ್ನು ವಿಸ್ತರಿಸಬಹುದಿತ್ತು. ಮೇಲಾಗಿ ವಿಶ್ವಸಂಸ್ಥೆ ಇತ್ತೀಚಿಗೆ ಹೇಳಿರುವ ಪ್ರಕಾರ ನಿರ್ಬಂಧನೆ ಹೇರುವುದರಿಂದ ಸೋಂಕನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ. ಆದರೆ ಅದು ಹರಡುವ ವೇಗವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದು. ಆದರೆ ನಂತರ ಆಸ್ಪತ್ರೆಗಳಲ್ಲಾಗುವ ನೂಕು ನುಗ್ಗಲು ಅಲ್ಲಿಗಲ್ಲಿಗೆ ಸರಿಹೋಗಬಹುದು. ಈ ಹಿನ್ನೆಲೆಯಲ್ಲಿ ಈ ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ನಿರ್ಬಂಧವನ್ನು ಹೇರಿ ಆಡಳಿತಗಾರರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಬದುಕನ್ನು ಮೂರಾಬಟ್ಟೆ ಮಾಡುವ ತೀರ್ಮಾನ ತೆಗೆದು ಕೊಂಡಂತಿದೆ. ಈ ತೀರ್ಮಾನಕ್ಕೆ ಮಧ್ಯಮ ಮತ್ತು ಮೇಲ್ವರ್ಗ ಹೃದಯಪೂರ್ವಕವಾಗಿ ಸಮ್ಮತಿ ನೀಡಿದೆ. ಇದರಿಂದ ಭಾರತ ಯಾವ ದಿಕ್ಕಿನತ್ತ ಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ದೇಶಕ್ಕೆ ಈಗ ಬಿದ್ದಿರುವ ಬೀಗ ಮುದ್ರೆಯಿಂದಾಗಿ ಅತ್ಯಂತ ಹೆಚ್ಚು ದಿನಗೂಲಿ ಕೆಲಸಗಾರರಿರುವ ಈ ದೇಶ ಬಹುದೊಡ್ಡ ಮಾನವೀಯ ಬೆಲೆಯನ್ನು ತೆರುತ್ತಿದೆ. ಈ ಬೆಲೆ ಇಷ್ಟೊಂದು ಭಯಂಕರವಾಗಿದೆ ಎಂದರೆ ಹಲವೆಡೆ ಸ್ಥಳೀಯ ಆಡಳಿತ ಇದನ್ನು ಕರ್ಫ್ಯೂ ಎಂದೇ ಪರಿಗಣಿಸಿವೆ. ಜನರು ಆಹಾರ ಮತ್ತು ದಿನಸಿ ಇಲ್ಲದೆ ಪರದಾಡುತ್ತಿದ್ದರೆ ಅಧಿಕಾರಶಾಹಿ ಅಹಂಕಾರದಿಂದ ವರ್ತಿಸಿ ಅಸಹಾಯಕ ಜನರ ಬದುಕನ್ನು ಮತ್ತಷ್ಟು ಕಷ್ಟಕ್ಕೆ ದೂಡುತ್ತಿದೆ. ಇನ್ನು ಕೆಲವರು ಕಂಡಲ್ಲಿ ಗುಂಡು ಹಾರಿಸಿ ಎಂದು ಆಜ್ಙೆಕೊಡಲು ಮುಂದಾಗುತ್ತಾರೆ. ವಲಸೆ ಹೋದ ಕಾರ್ಮಿಕರು ಈಗಾಗಲೇ ಸುಡು ಬೇಸಿಗೆಯಲ್ಲಿ ನೂರಾರು ಕಿಮಿ ನಡೆದು ತಮ್ಮ ಮನೆಗೆ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವ ನೂರಾರು ಕತೆಗಳು ಬಂದಿವೆ. ಲಾಕ್‌ಡೌನ್‌ ಅಂತ್ಯದಲ್ಲಿ ಕೊರೋನಾ ಸಾವು ಮತ್ತು ದಿಗ್ಭಂಧನದ ಸಾವು ಹೋಲಿಕೆಗೆ ಬರಬಹುದು.

ರಾಜಕೀಯ ಮೀರಿ ಮತ್ತು ಅದರ ಹೊರತಾಗಿ ಪ್ರಮುಖ ಸುದ್ದಿ ಮಾಧ್ಯಮಗಳು ಗಾಬರಿಯಿಂದ ಉನ್ಮಾದಿತರಾಗಿ ತಮ್ಮ ಕ್ಯಾಮರಾಗಳನ್ನು ಸದಾ ಕಾಲ ಅತ್ಯಂತ ಶೋಚನೀಯ ಮತ್ತು ಗಾಬರಿ ಹುಟ್ಟಿಸುವ ಘಟನೆಗಳ ಕಡೆಯೇ ಇಟ್ಟಿರುತ್ತಾರೆ. ಅದನ್ನು ನೋಡುವ ಕೇಳುವ ಬಹಳ ಮಂದಿಗೆ ಇದು ಅತ್ಯಂತ ಸಾಮಾನ್ಯವಾದ ಘಟನೆ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಈ ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಭಾಗವಹಿಸುವ ‘ಪರಿಣಿತರು” ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಒಪ್ಪುತ್ತಿರುವುದಿಲ್ಲ ಎಂಬುದನ್ನು ಗಮನಿಸುವುದಿಲ್ಲ. ಸಾಮಾನ್ಯವಾದ ದೃಷ್ಟಿಕೋನವನ್ನು ಪ್ರಶ್ನಿಸಿದರೆ ಜನರು ಹೇಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಮ್ಮ ಕಾಲಮಾನ ನಮಗೆ ಈಗಾಗಲೇ ತೋರಿದೆ. ಪರ್ಯಾಯ ದೃಷ್ಟಿ ಕೋನಗಳನ್ನು ಅಪಹಾಸ್ಯಮಾಡಿ ಅವರು ಹೇಳುತ್ತಿರುವ ಅಂಶಗಳನ್ನು ಗಮನಿಸದೆಯೇ ಪಕ್ಕಕ್ಕೆ ತಳ್ಳಲಾಗುತ್ತದೆ.

ಇಲ್ಲೊಂದು ಪ್ರಶ್ನೆಯಿದೆ. ಫ್ಲೂ ಕಾಯಿಲೆಯಿಂದ ಇದೇ ವರ್ಷಗಳಲ್ಲಿ ಜಾಗತಿಕ ವಾಗಿ ಹೀಗೆಯೇ ಸಾಯುತ್ತಿರುವುದರ ಬಗ್ಗೆ ನಮಗೇಕೆ ಗಮನವಿಲ್ಲ? ಕರೋನ ವೈರಾಣುವಿಗೇಕೆ ಇಷ್ಟೊಂದು ದೊಡ್ಡ ಮಣೆ? ಸಾಮಾನ್ಯ ಫ್ಲೂ ನ ಪರಿಣಾಮಕ್ಕೆ ಒಳಗಾಗುತ್ತಿರುವವರು ಸಾಮಾನ್ಯ ಹಣಕಾಸು ಮತ್ತು ಸಾಮಾಜಿಕ ಹಿನ್ನೆಲೆಯವರು ಆಗಿರುವುದರಿಂದ ಅದಕ್ಕೆ ಗಮನವಿಲ್ಲವೆ? ವಿಮಾನದಲ್ಲಿ ಹಾರಾಡುವವರಿಗೆ ಈ ಕರೋನಾ ಸೋಂಕು ಹತ್ತಿರುವುದರಿಂದ ಅದಕ್ಕೆ ಗಮನ ಜಾಸ್ತಿಯೇ ? ವರ್ಗ ಪ್ರಜ್ಞೆಯೊಂದಿಗೆ, ಜನ ಸಮಾನ್ಯರಿಗೆ ಭಯ ಬಿತ್ತುವ ಅವರನ್ನು ಸೋಲಿಸುವುದರಲ್ಲೆ ನಂಬಿಕೆ ಇರುವ ರಾಜಕಾರಣಿ ವರ್ಗ ಕೈ ಜೋಡಿಸಿದರೆ ಏನಾಗುತ್ತದೆ ಎಂಬುದಕ್ಕೆ ವರ್ತಮಾನ ಸಾಕ್ಷಿಯಾಗಿದೆ. ಪ್ರಪಂಚದಾದ್ಯಂತ ನಾಯಕತ್ವದ ಗುಣಮಟ್ಟ ಸಾರ್ವಕಾಲಿಕವಾಗಿ ತೀರಾ ಕೆಳಮಟ್ಟದಲ್ಲಿದೆ. ನಮ್ಮಲ್ಲಿ ಅದು ಮಾರಣಾಂತಿಕವಾಗಿದೆ.

ಹಾಗೆ ಕೊರೋನಾ ವೈರಾಣು ಜಗತ್ತನ್ನು ಬದಲಿಸಿದೆ. ಜಾಗತಿಕ ವಾಗಿ ಈ ಬದಲಾವಣೆ ಕರೋನಾ ವೈರಾಣುವಿನ ಸಾಂಕ್ರಾಮಿಕವಾಗಿ ಹರಡುವ ಗುಣದಿಂದಲೋ ಅಥವಾ ನಾವು ಅದಕ್ಕೆ ಪ್ರತಿಕ್ರಿಯಸುತ್ತಿರುವ ರೀತಿಯಿಂದಲೋ ?? ತಿಳಿಯದಾಗಿದೆ.


ಇದನ್ನೂ ಓದಿ: ಪಾದರಾಯನಪುರ-ಬೆಳೆಸಲಾಗುತ್ತಿರುವ ಬಿಕ್ಕಟ್ಟು: ಅಧಿಕಾರಿಗಳಿಗೆ ಒತ್ತಡ? ಕಾಣದ ಕೈಗಳೇಕೆ ಕೆಲಸ ಮಾಡುತ್ತಿವೆ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಟ್ಟಾರೆಯಾಗಿ ಯಾರದೋ ತಪ್ಪಿಗೆ ಕೋಟ್ಯಾಂತರ ಬಡವರು ಕಶ್ಟ ಅನುಬವಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...