ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ನವೆಂಬರ್ 26ರ ಸಂವಿಧಾನ ದಿನವನ್ನು ‘‘ಸಂವಿಧಾನ ಸಮರ್ಪಣಾ ದಿನ”ವೆಂದು ಕರೆದಿದ್ದು, ಈ ವರ್ಷದ ಆಚರಣೆಯನ್ನು “ಭಾರತ – ಪ್ರಜಾತಂತ್ರದ ಜನನಿ” ಎಂಬ ಹೆಸರಿನಲ್ಲಿ ಆಚರಿಸುವಂತೆ ಸೂಚಿಸಿದೆ. ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದ್ದ ದಿನದಂದು ಒಕ್ಕೂಟ ಸರ್ಕಾರವು ಸುಳ್ಳು ನಿರೂಪಣೆ ಮೂಲಕ “ಭಾರತದ ಜಾತಿ ಪದ್ದತಿಯ ಸಮರ್ಥನೆ ಮತ್ತು ವೈಭವೀಕರಣ’’ ನಡೆಸುತ್ತಿದೆ ಎಂಬ ಅರೋಪ ವ್ಯಕ್ತವಾಗಿದೆ.
ನವಂಬರ್ 9ರಂದು ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲಾ ಕಚೇರಿ ಹಾಗೂ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು, ಈ ಬಾರಿಯ ನವೆಂಬರ್ 26ರ ಸಂವಿಧಾನ ಸಮರ್ಪಣಾ ದಿನವನ್ನು “ಭಾರತ – ಪ್ರಜಾತಂತ್ರದ ಜನನಿ” ಎಂಬ ಹೆಸರಿನಲ್ಲಿ “ಜಗತ್ತಿನಲ್ಲಿರುವ ಪ್ರಜಾಪ್ರಭುತ್ವ ಹುಟ್ಟಿದ್ದು ಭಾರತದಲ್ಲಾಗಿದೆ” ಎಂಬ ವಿಷಯವನ್ನು ಸಮರ್ಥಿಸಿಕೊಂಡು ದೇಶಾದ್ಯಂತ ಆಚರಿಸಬೇಕೆಂದು ಸೂಚಿಸಿದೆ. ಇಷ್ಟೆ ಅಲ್ಲದೆ ಈ ಆಚರಣೆಯನ್ನು ಹೇಗೆ ಆಚರಿಸಬೇಕು ಎಂದು ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (ICHR) ತಯಾರಿಸಿರುವ ಟಿಪ್ಪಣಿಯನ್ನು ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ICHR ತಯಾರಿಸಿರುವ ಈ ಟಿಪ್ಪಣಿಯೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ದೇಶವು ಶತಮಾನಗಳ ಕಾಲದಿಂದಲೂ ನರಳುತ್ತಿರುವ ಜಾತಿ ಪದ್ದತಿಯನ್ನು ಇತಿಹಾಸದ ಸುಳ್ಳು ನಿರೂಪಣೆಯೊಂದಿಗೆ ಇದರಲ್ಲಿ ಹೇಳಲಾಗಿದೆ.
ICHR ಟಿಪ್ಪಣಿಯಲ್ಲಿ ಏನಿದೆ?
ವೇದ, ಪುರಾಣ, ಉಪನಿಷತ್, ಭಗವದ್ಗೀತೆ ಕಾಲದಲ್ಲೆ ಭಾರತದಲ್ಲಿ ಪ್ರಜಾಪ್ರಭುತ್ವ ಇತ್ತು. 2 ಸಾವಿರ ವರ್ಷಗಳಿಂದ ನಡೆಯುತ್ತಿರುವ ವಿದೇಶಿ ದಾಳಿಗಳ ನಡುವೆಯು ಪಂಚಾಯತಿ ಕಟ್ಟೆ, ಖಾಪ್ ಪಂಚಾಯತ್ ಈ ಪ್ರಜಾಪ್ರಭುತ್ವನ್ನು ಹಿಂದೂ ಸಂಸ್ಕೃತಿ ಉಳಿಸಿಕೊಂಡು ಬಂದಿದೆ ಎಂದು ICHR ಟಿಪ್ಪಣಿಯಲ್ಲಿ ಹೇಳಿದೆ.
ಅದಾಗ್ಯೂ, ಖಾಪ್ ಪಂಚಾಯತ್‌ಗಳು ಜಾತಿ ಶ್ರೇಣೀಕೃತ ವ್ಯವಸ್ಥೆಯ ಭಾಗವಾಗಿದ್ದು ಇಂದಿಗೂ ಅವು ಭಾರತದಲ್ಲಿ ಜಾತಿ ಪದ್ದತಿಯನ್ನು ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಲೆ, ಜಾತಿ ದೌರ್ಜನ್ಯ ಎಸಗುತ್ತಲೆ ಇವೆ ಸಾಬೀತಾಗಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಕೂಡಾ ಇವುಗಳು ಹೆಣ್ಣು ಮಕ್ಕಳನ್ನು ಮತ್ತು ಮಹಿಳೆಯವನ್ನು ಹಣಕ್ಕಾಗಿ ಮಾರಾಟ ಮಾಡಿರುವ ಬಗ್ಗೆ ಕೂಡಾ ವರದಿಯಾಗಿತ್ತು. ಇದನ್ನೂ ಓದಿ: ರಾಜಸ್ಥಾನ: ಸಾಲ ತೀರಿಸಲು ಹುಡುಗಿಯರ ಮಾರಾಟ; ನಿರಾಕರಿಸಿದರೆ ಜಾತಿ ಮಂಡಳಿಗಳ ಆದೇಶದ ಮೇರೆಗೆ ಅವರ ತಾಯಿಯ ಮೇಲೆ ಅತ್ಯಾಚಾರ!
ಚಿಂತಕ ಶಿವಸುಂದರ್ ಅವರು, “ಇದು ಆರೆಸ್ಸೆಸ್ ಸರಸಂಘಚಾಲಕ ಗೋಲ್ವಾಲ್ಕರ್ ಪ್ರತಿಪಾದನೆಯಾಗಿದೆ. ಅವರು, ‘ಜಾತಿ ವ್ಯವಸ್ಥೆಯೇ ಈ ದೇಶದ ಅಸ್ಮಿತೆ. ಅದು ಸಡಿಲವಾಗಿದ್ದರಿಂದಲೇ ಭಾರತದ ಈಶಾನ್ಯ ಮತ್ತು ವಾಯುವ್ಯ ಪ್ರಾಂತ್ಯಗಳಲ್ಲಿ ಪರದೇಸಿ ಧರ್ಮಗಳು ನೆಲಸುವಂತಾಯಿತು’ ಎಂದು ಅವರ ಬಂಚ್ ಆಫ್ ಥಾಟ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಯಥಾವತ್ ಅದೇ ಮಾತನ್ನು ಸಂವಿಧಾನ ದಿನದಂದು ಪ್ರಚಾರ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೆ ಅಲ್ಲದೆ, ಇತಿಹಾಸದ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆಯಾಗಿರುವ ICHR ಬಿಹಾರದ ರಾಖಿಗರಿಯಲ್ಲಿ ಇತ್ತೀಚೆಗೆ ನಡೆದ ಸಂಶೋಧನೆಯ ಬಗ್ಗೆ ತನ್ನ ಟಿಪ್ಪಣಿಯಲ್ಲಿ ಸುಳ್ಳು ಬರೆದುಕೊಂಡಿದೆ. ICHR ತನ್ನ ಟಿಪ್ಪಣಿಯಲ್ಲಿ, “ಇತ್ತೀಚಿಗೆ ರಾಖಿಗರಿ ಸಂಶೋಧನೆಯಲ್ಲೂ ಭಾರತದ ವೈದಿಕ ನಾಗರೀಕತೆ 5 ಸಾವಿರ ವರ್ಷಗಳಷ್ಟು ಹಿಂದಿನದ್ದೆಂದೂ, ಆ ಕಾಲದಲ್ಲೂ ಪ್ರಜಾತಾಂತ್ರಿಕ ವ್ಯವಸ್ಥೆ ಇತ್ತೆಂದು ಸಾಬೀತಾಗಿದೆ” ಎಂದು ಉಲ್ಲೇಖಿಸಿದೆ.
ಆದರೆ ವಾಸ್ತವದಲ್ಲಿ, ರಾಖಿಗರಿ ಸಂಶೋಧನೆಯು ಹರಪ್ಪಾ ನಾಗರಿಕತೆಗೂ ವೇದ ನಾಗರಿಕತೆಯ ಆರ್ಯರಿಗೂ ಸಂಬಂಧವಿಲ್ಲ ಎಂದು ಸಾಬೀತಾಗಿದೆ. ರಾಖಿಗರಿ ನಾಗರಿಕರೆ ದ್ರಾವಿಡ ನಾಗರೀಕತೆಯೆ ಹೊರತು ವೇದ ನಾಗರಿಕತೆಯಲ್ಲ ಎಂದು ಸಂಶೋಧನೆ ಸಾಬೀತು ಮಾಡಿದೆ. ರಾಖಿಗರಿಯಲ್ಲಿ ಪತ್ತೆಯಾದ ಅಸ್ಥಿಪಂಜರದ DNA ಇದನ್ನ ಪುಷ್ಠಿಕರಿಸಿದ್ದು, ಸಿಂಧೂ ಕಣಿವೆ ನಾಗರಿಕತೆಯನ್ನು ಕಟ್ಟಿರುವವರು ‘ಋಗ್ವೇದ ಕಾಲದ ಆರ್ಯ’ರಲ್ಲ ಎಂಬುದನ್ನು ಈ ಸಂಶೋಧನೆ ಹೇಳಿದೆ. ಇದನ್ನೂ ಓದಿ: ಸಿಂಧೂ ನದಿ ನಾಗರಿಕತೆ ನಿರ್ಮಾಣದಲ್ಲಿ ಸ್ಟೆಪ್ ಮೂಲದ ಆರ್ಯ ವೈದಿಕರ ಪಾತ್ರವಿಲ್ಲ: ಅದನ್ನು ಕಟ್ಟಿದವರು ದಕ್ಷಿಣ ಏಷಿಯನ್ನರು
ಇಷ್ಟೆ ಅಲ್ಲದೆ ICHR ತನ್ನ ಟಿಪ್ಪಣಿಯಲ್ಲಿ ಭಗವದ್ಗೀತೆಯನ್ನು ತಪ್ಪಾಗಿ ವೈಭವೀಕರಿಸಿದ್ದು, “ಭಗವದ್ಗೀತೆ ವೇದದ ಪ್ರಜಾತಾಂತ್ರಿಕತೆಯ ಭಾಗವಾಗಿ ಮಾನವನ ನಡತೆಯಲ್ಲಿ ಜ್ಞಾನ, ಶ್ರದ್ಧೆ , ಕ್ರಿಯೆ ಮತ್ತು ಗುಣಗಳು ವ್ಯಕ್ತವಾಗಬೇಕು ಎಂದು ಪ್ರತಿಪಾದಿಸುತ್ತದೆ” ಎಂದು ಬರೆದಿದೆ.
ಇದನ್ನು ವಿರೋಧಿಸಿರುವ ಶಿವಸುಂದರ್ ಅವರು, “ಅಂಬೇಡ್ಕರ್ ಅವರು ಸ್ಪಷ್ಟಪಡಿಸುವಂತೆ , ಭಗವದ್ಗೀತೆಯು ಜಾತಿ ಆಧಾರಿತ ಶ್ರೇಣೀಕರಣವನ್ನು ಪ್ರತಿಪಾದಿಸುವ ಮನುಸ್ಮೃತಿಯ ತಾತ್ವಿಕ ಸಮರ್ಥನೆಯಾಗಿದೆ. ಅದರಲ್ಲಿ ಭೋಧಿಸಲಾಗಿರುವ ಜ್ಞಾನ, ಗುಣ ಮತ್ತು ಕ್ರಿಯೆಗಳೆಲ್ಲವೂ ಹುಟ್ಟಿನಿಂದಲೇ ತೀರ್ಮಾನವಾಗಿರುತ್ತದೆ ಎಂಬ ಜಾತಿ ಶ್ರೇಣೀಕರಣದ ತಾರತಮ್ಯ ತತ್ವವನ್ನೇ ಹೇಳುತ್ತದೆ” ಎಂದು ಹೇಳಿದ್ದಾರೆ. ಮೋದಿ ಸರ್ಕಾರ ಇದನ್ನು ಭಾರತದ ಸನಾತನ ಪ್ರಜಾತಂತ್ರ ಎಂದು ಆಚರಿಸಲು ಆದೇಶಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಷ್ಟೆ ಅಲ್ಲದೆ, ಭಾರತದಲ್ಲಿ ಹುಟ್ಟಿನ ಆಧಾರದಲ್ಲಿ ಸಂಪತ್ತು, ಜ್ಞಾನ ಮತ್ತು ರಾಜ್ಯಅಧಿಕಾರಗಳು ಒಂದೆಡೆ ಕೇಂದ್ರೀಕರಣಗೊಂಡಿಲ್ಲ ಎಂದು ICHR ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದು, “ಇದು ಜಗತ್ತಿನ ಇತರ ಪ್ರಾಚೀನ ಪ್ರಜಾತಂತ್ರಗಳಾದ ಗ್ರೀಸ್ ಮತ್ತು ರೋಮನ್ ಪ್ರಜಾತಂತ್ರಕ್ಕೂ ಭಾರತದ ವೈದಿಕ ಪ್ರಜಾತಂತ್ರಕ್ಕೂ ಇದ್ದ ದೊಡ್ಡ ವ್ಯತ್ಯಾಸವಾಗಿದೆ” ಎಂದು ಹೇಳಿದೆ.
ಇದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಶಿವಸುಂದರ್ ಅವರು, “ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದು ಇರಬಹುದೇ? ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ಹುಟ್ಟಿನ ಆಧಾರದ ಜಾತಿ ವ್ಯವಸ್ಥೆ, ಜಾತಿ ತಾರತಮ್ಯ ಇರುವುದು ಭಾರತದ ಬ್ರಾಹ್ಮಣಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಾತ್ರ. ಸಂಪತ್ತು, ಅಧಿಕಾರ ಮತ್ತು ಜ್ಞಾನವನ್ನು ದಲಿತರಿಂದ ಮತ್ತು ಶೂದ್ರರಿಂದ, ಮಹಿಳೆಯರಿಂದ ಕಸಿದು ಕೇವಲ ಬ್ರಾಹ್ಮಣಿಯ ಮೇಲ್ಜಾತಿಗಳ ಖಾಸಗಿ ಆಸ್ತಿಯನ್ನಾಗಿ ಮಾಡಿದ್ದು ಭಾರತದ ವೇದ-ಪುರಾಣ-ಶಾಸ್ತ್ರ-ಸ್ಮೃತಿ-ಶ್ರುತಿ ಗಳನ್ನಾಧರಿಸಿದ ಈ ದೇಶದ ಹಿಂದೂ ಬ್ರಾಹ್ಮಣಿಯ ಜಾತಿ ವ್ಯವಸ್ಥೆಯಾಗಿದೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಧೂ ನಾಗರಿಕತೆ ಕುರಿತ ವಿಜ್ಞಾನದ ಹೊಸ ಸಂಶೋಧನೆಗಳೂ… ಸತ್ಯ ತಿರುಚುವ ಪತ್ರಿಕೆಗಳೂ… ಸುಳ್ಳು ಹೇಳಿತೇಕೆ ವಿಜಯ ಕರ್ನಾಟಕ
ಚಿಂತಕ ಶಿವಸುಂದರ್ ಅವರು ವೈರಲ್ ಬರಹವನ್ನು ಓದಿ



ಭಾರತ ಪ್ರಜಾತಂತ್ರದ ಜನನಿ ನವಂಬರ್ 26 ಆಚರಣೆಗಳು ಇವೆಲ್ಲವೂ ಮುಂದಿನ ಚುನಾವಣೆಯನ್ನ ಎದುರಿಟ್ಟುಕೊಂಡು ಮಾಡುವ ಆಚರಣೆಗಳ ವಿನಹ ಭಾರತದಲ್ಲಿ ನರಳಾಡುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನ ಮೇಲೆತ್ತುವ ಕೆಲಸವಾಗಲಿ ಇತರ ಅಭಿವೃದ್ಧಿ ಕೆಲಸವಾಗಲಿ, ನಗಣ್ಯ ಈ ಸರಕಾರಕ್ಕೆ ಎಲ್ಲವೂ ನಾವೆಲ್ಲ ನೋಡುವಾಗ ಇದು ಪ್ರಜಾಪ್ರಭುತ್ವ ರಾಷ್ಟ್ರವಾಗದೆ ಏಕಪ್ರಭುತ್ವ ರಾಷ್ಟ್ರವಾಗಿದೆ ಅಂತ ನನಗನಿಸುತ್ತದೆ